ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರ ಅಧ್ಯಕ್ಷತೆಯ ಏಕಕಾಲಿಕ ಚುನಾವಣೆಯ ಉನ್ನತ ಮಟ್ಟದ ಸಮಿತಿಯು ಮಾಡಿದ ಶಿಫಾರಸುಗಳನ್ನು ಅಂಗೀಕರಿಸಿದೆ.
ಏಕಕಾಲಿಕ ಚುನಾವಣೆ: ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳು
- 1951 ಮತ್ತು 1967 ರ ನಡುವೆ ಏಕಕಾಲದಲ್ಲಿ ಚುನಾವಣೆಗಳು ನಡೆದಿವೆ.
- ಕಾನೂನು ಆಯೋಗ: 170ನೇ ವರದಿ (1999): ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳಿಗೆ ಐದು ವರ್ಷಗಳಲ್ಲಿ ಒಂದು ಚುನಾವಣೆ.
- ಸಂಸದೀಯ ಸಮಿತಿ 79ನೇ ವರದಿ (2015): ಎರಡು ಹಂತಗಳಲ್ಲಿ ಏಕಕಾಲಿಕ ಚುನಾವಣೆಗೆ ವಿಧಾನಗಳನ್ನು ಸೂಚಿಸುವುದು.
- ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ರಾಜಕೀಯ ಪಕ್ಷಗಳು ಮತ್ತು ತಜ್ಞರು ಸೇರಿದಂತೆ ವಿಶಾಲ ವ್ಯಾಪ್ತಿಯ ಎಲ್ಲಾ ಮಧ್ಯಸ್ಥಗಾರರ ಜೊತೆಗೆ ವ್ಯಾಪಕವಾಗಿ ಸಮಾಲೋಚನೆ ನಡೆಸಿತು.
- ವರದಿಯು ಈ ಜಾಲತಾಣದಲ್ಲಿ ಲಭ್ಯವಿದೆ: https://onoe.gov.in
- ದೊರಕಿದ ವ್ಯಾಪಕವಾದ ಪ್ರತಿಕ್ರಿಯೆಯು ದೇಶದಲ್ಲಿ ಏಕಕಾಲಿಕ ಚುನಾವಣೆಗಳಿಗೆ ವ್ಯಾಪಕ ಬೆಂಬಲವಿದೆ ಎಂದು ತೋರಿಸಿದೆ.
ಶಿಫಾರಸುಗಳು ಮತ್ತು ಮುಂದಿನ ದಾರಿ:
- ಎರಡು ಹಂತಗಳಲ್ಲಿ ಅಳವಡಿಸಬೇಕು.
- ಮೊದಲ ಹಂತದಲ್ಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದು.
- ಎರಡನೇ ಹಂತದಲ್ಲಿ: ಸಾರ್ವತ್ರಿಕ ಚುನಾವಣೆಯ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು (ಪಂಚಾಯತ್ ಮತ್ತು ಪುರಸಭೆಗಳು) ನಡೆಸುವುದು.
- ಎಲ್ಲಾ ಚುನಾವಣೆಗಳಿಗೆ ಸಾಮಾನ್ಯ ಮತದಾರರ ಒಂದು ಪಟ್ಟಿ ಮಾತ್ರ ಇರುತ್ತದೆ.
- ಈ ಪರಿಕಲ್ಪನೆಯು ದೇಶಾದ್ಯಂತ ವಿವರವಾದ ಚರ್ಚೆಗಳನ್ನು ಪ್ರಾರಂಭಿಸುತ್ತದೆ.
- ಅನುಷ್ಠಾನ ಗುಂಪನ್ನು ರಚಿಸಬೇಕು.
The Cabinet has accepted the recommendations of the High-Level Committee on Simultaneous Elections. I compliment our former President, Shri Ram Nath Kovind Ji for spearheading this effort and consulting a wide range of stakeholders.
— Narendra Modi (@narendramodi) September 18, 2024
This is an important step towards making our…