ಬ್ರಿಟಿಷ್ ಪ್ರಧಾನಮಂತ್ರಿ ರೈಟ್ ಗೌರವಾನ್ವಿತ ಥೆರೆಸಾ ಮೇ ಅವರು, ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದರು.
ಇತ್ತೀಚೆಗೆ ನಡೆದ ದೀಪಾವಳಿ ಹಬ್ಬದ ಆಚರಣೆಯ ಶುಭಾಶಯಗಳನ್ನು ಇಬ್ಬರೂ ಪ್ರಧಾನಮಂತ್ರಿಗಳು ವಿನಿಮಯ ಮಾಡಿಕೊಂಡರು.
ವಿಜ್ಞಾನ ಮತ್ತು ತಂತ್ರಜ್ಞಾನ, ಹಣಕಾಸು, ವ್ಯಾಪಾರ ಮತ್ತು ಹೂಡಿಕೆ ಹಾಗೂ ರಕ್ಷಣೆ ಮತ್ತು ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಇನ್ನೂ ಬಲಪಡಿಸಲು ಗಣನೀಯ ಪ್ರಮಾಣದ ಅವಕಾಶಗಳು ಇವೆ ಎಂಬುದನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು.
ಪ್ರಧಾನಮಂತ್ರಿಯವರು, ತಾವು ಮುಂದಿನ ವಾರ ಭಾರತದಲ್ಲಿ ಬ್ರಿಟನ್ ಪ್ರಧಾನಮಂತ್ರಿ ಮೇ ಅವರನ್ನು ಸ್ವಾಗತಿಸಲು ಎದಿರುನೋಡುತ್ತಿರುವುದಾಗಿ ತಿಳಿಸಿದರು, ಇದು ಯುರೋಪ್ ನ ಹೊರಗೆ ಅವರ ಪ್ರಥಮ ಮಹತ್ವದ ಭೇಟಿಯಾಗಿದೆ.