ಬಿಮ್ ಸ್ಟೆಕ್ (BIMSTEC) ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಒಟ್ಟಾಗಿ ಭೇಟಿ ಮಾಡಿದರು.
ಸಂಪರ್ಕ, ಇಂಧನ, ವ್ಯಾಪಾರ, ಆರೋಗ್ಯ, ಕೃಷಿ, ವಿಜ್ಞಾನ, ಭದ್ರತೆ ಮತ್ತು ಜನರ ನಡುವಿನ ವಿನಿಮಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಾದೇಶಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಪ್ರಧಾನಮಂತ್ರಿ ಅವರು ಸಚಿವರ ಗುಂಪಿನೊಂದಿಗೆ ಫಲಪ್ರದ ಚರ್ಚೆ ನಡೆಸಿದರು. ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯ ಯಂತ್ರವಾಗಿ ಬಿಮ್ ಸ್ಟೆಕ್, ಪಾತ್ರ ವಹಿಸುವುದನ್ನು ಅವರು ಒತ್ತಿ ಹೇಳಿದರು.
ಶಾಂತಿಯುತ, ಸಮೃದ್ಧ, ಸ್ಥಿತಿಸ್ಥಾಪಕ ಮತ್ತು ಸುರಕ್ಷಿತ ಬಿಮ್ ಸ್ಟೆಕ್ ಪ್ರದೇಶಕ್ಕೆ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು ಮತ್ತು ಭಾರತದ ನೆರೆಹೊರೆಯವರು ಮೊದಲು ಮತ್ತು ಪೂರ್ವದತ್ತ ನೋಡು ಎಂಬ ನೀತಿಗಳಿಗೆ ಮತ್ತು ಪ್ರದೇಶದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆಗಾಗಿ ಸಾಗರ ದೃಷ್ಟಿಕೋನದಲ್ಲಿ ಅದರ ಮಹತ್ವವನ್ನು ಬಿಂಬಿಸಿದರು.
ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಮುಂಬರುವ ಬಿಮ್ ಸ್ಟೆಕ್ ಶೃಂಗಸಭೆಗೆ ಥಾಯ್ಲೆಂಡ್ ಗೆ ಭಾರತದ ಸಂಪೂರ್ಣ ಬೆಂಬಲವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.
Glad to meet BIMSTEC Foreign Ministers. Discussed ways to strengthen regional cooperation, including connectivity, energy, trade, health, agriculture, science, security and people-to-people exchanges. Conveyed full support to Thailand for a successful Summit.@BimstecInDhaka pic.twitter.com/fJ9yvtYyXE
— Narendra Modi (@narendramodi) July 12, 2024