ಬಾಂಗ್ಲಾದೇಶದ ಪ್ರಧಾನಮಂತ್ರಿಯವರಾದ ಗೌರವಾನ್ವಿತ ಶೇಖ್ ಹಸೀನಾ ಅವರು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ 18ನೇ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ ಡಿ ಎ) ವಿಜಯಕ್ಕೆ ದೂರವಾಣಿ ಕರೆಯ ಮೂಲಕ ಅಭಿನಂದನೆ ಸಲ್ಲಿಸಿದರು.
ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಪ್ರಧಾನಮಂತ್ರಿಯವರನ್ನು ಅಭಿನಂದಿಸಿದ ಮೊದಲ ವಿದೇಶಿ ನಾಯಕರಲ್ಲಿ ಒಬ್ಬರಾಗಿದ್ದರು. ಇದು ಉಭಯ ನಾಯಕರ ನಡುವಿನ ಆತ್ಮೀಯತೆ ಮತ್ತು ವೈಯಕ್ತಿಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.
ವಿಕಸಿತ ಭಾರತ - 2047 ಮತ್ತು ಸ್ಮಾರ್ಟ್ ಬಾಂಗ್ಲಾದೇಶ - 2041ರ ದೃಷ್ಟಿಕೋನದ ಸಾಧನೆಯ ನಿಟ್ಟಿನಲ್ಲಿ, ನವೀಕೃತ ಆದೇಶದ ಅಡಿಯಲ್ಲಿ ಐತಿಹಾಸಿಕ ಮತ್ತು ನಿಕಟ ಸಂಬಂಧಗಳನ್ನು ಮತ್ತಷ್ಟು ಉತ್ತಮಗೊಳಿಸಿ ಒಟ್ಟಾಗಿ ಕೆಲಸ ಮಾಡುವುದಾಗಿ ಉಭಯ ನಾಯಕರು ಪ್ರತಿಜ್ಞೆ ಮಾಡಿದರು.
ಕಳೆದ ದಶಕದಲ್ಲಿ ಎರಡೂ ದೇಶಗಳ ಜನರ ಜೀವನದಲ್ಲಿ ಸಾಧಿಸಿದ ಗಮನಾರ್ಹ ಸುಧಾರಣೆಗಳನ್ನು ಒಪ್ಪಿಕೊಂಡ ಅವರು, ಆರ್ಥಿಕ ಮತ್ತು ಅಭಿವೃದ್ಧಿ ಪಾಲುದಾರಿಕೆ, ಇಂಧನ, ಭದ್ರತೆ, ಡಿಜಿಟಲ್ ಸಂಪರ್ಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಪರಿವರ್ತಕ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸಲು ಶ್ರಮಿಸುವುದಾಗಿ ಹೇಳಿದರು.
I thank Prime Minister Sheikh Hasina for her warm wishes. India and Bangladesh share historic relations, which have seen unprecedented growth in the last decade. I look forward to working together to further strengthen our people-centric partnership. @BDMOFA
— Narendra Modi (@narendramodi) June 5, 2024