21 ವರ್ಷ ವಯಸ್ಸಿನ ಸಂಜಯ್ ವರ್ಗೇಮ್ ಅವರನ್ನು 14/02/2019 ರಂದು ಎದೆ ನೋವು, ತೀವ್ರ ಹೃದಯ ಬಡಿತ, ವರ್ಟಿಗೊ, ಕೆಮ್ಮು ಮತ್ತು 1-2 ವರ್ಷಗಳ ಉಸಿರಾಟದ ತೊಂದರೆಗಳಿಂದ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಸಂಪೂರ್ಣ ತನಿಖೆಯ ನಂತರ ಅವನ ಹೃದಯದಲ್ಲಿ ಡಬಲ್ ವಾಲ್ವ್ ಬದಲಿಸುವ ಅಗತ್ಯವಿದೆ ಎನ್ನುವುದನ್ನು ಕಂಡುಹಿಡಿಯಲಾಯಿತು.
ಅವನು ತುಂಬಾ ಬಡ ಕುಟುಂಬಕ್ಕೆ ಸೇರಿದವನಾಗಿದ್ದರಿಂದ, ವೈದ್ಯರು ಸೂಚಿಸಿದ ಚಿಕಿತ್ಸೆಯ ಖರ್ಚು ಅವನಿಗೆ ಭರಿಸಲಾಗಲಿಲ್ಲ. ಪರಿಣಾಮವಾಗಿ, ಅವನು ಮತ್ತು ಅವನ ಕುಟುಂಬವು ತಮ್ಮ ಹಳ್ಳಿಗೆ ಮರಳಿದರು ಮತ್ತು ಭರವಸೆಯನ್ನು ಕಳೆದುಕೊಂಡರು. ಆದರೆ ಹಿಂದಿರುಗಿದ ಕೂಡಲೇ, ಸಂಜಯ್ ಮತ್ತು ಅವರ ಕುಟುಂಬಕ್ಕೆ ವರದಾನವಾಗಿ ಬಂದ ಆಯುಷ್ಮಾನ್ ಭಾರತ – ಪಿಎಂಜೆಎವೈ (ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ) ಬಗ್ಗೆ ತಿಳಿದುಕೊಂಡರು. 2 ಲಕ್ಷ ರೂಪಾಯಿಯಷ್ಟು ಖರ್ಚಾಗುವ ಶಸ್ತ್ರಚಿಕಿತ್ಸೆಯನ್ನು 2019 ರ ಫೆಬ್ರವರಿ 18 ರಂದು ಪಿಎಂ-ಜೆಎವೈ ಅಡಿಯಲ್ಲಿ ಉಚಿತವಾಗಿ ನಡೆಸಲಾಯಿತು.
ಈಗ ಅವನ ನೋವು ನಿವಾರಣೆಯಾಗಿದೆ ಮತ್ತು ಸಂತೋಷದಾಯಕ ಮತ್ತು ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದಾನೆ.
ಇಂದು ಅವರು ಒಬ್ಬ ಆರೋಗ್ಯವಂತ ವ್ಯಕ್ತಿಯಾಗಿದ್ದಾರೆ ಮತ್ತು ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆಯ ಯಶಸ್ಸನ್ನು ವಿವರಿಸಲು ಪ್ರಧಾನ ಮಂತ್ರಿಯವರನ್ನು ಭೇಟಿಯಾದ 31 ಫಲಾನುಭವಿಗಳಲ್ಲಿ ಒಬ್ಬರಾಗಿದ್ದರು.
ಸರಿಯಾಗಿ ಒಂದು ವರ್ಷದ ಹಿಂದೆ 2018 ರಲ್ಲಿ ಪ್ರಾರಂಭವಾದ ಆಯುಷ್ಮಾನ್ ಭಾರತ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿದ್ದು, ಇದು ದೇಶದ 10.74 ಕೋಟಿ ಬಡ ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಸುಲಭವಾಗಿ ಒದಗಿಸುವ ಗುರಿಯನ್ನು ಹೊಂದಿದೆ.
ಕಳೆದ ಒಂದು ವರ್ಷದಲ್ಲಿ ಆಯುಷ್ಮಾನ್ ಭಾರತದ ಕಾರ್ಯಕ್ರಮದ ಕಾರಣದಿಂದಾಗಿ ಸಂಜಯ್ ವರ್ಗೇಮ್ ಅವರಂತಹ 50,000 ಕ್ಕೂ ಹೆಚ್ಚು ರೋಗಿಗಳು ತಮ್ಮ ರಾಜ್ಯದ ಹೊರಗೆ ಸಿಗುವ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಬಹುದು.
ಕಳೆದ ಒಂದು ವರ್ಷದಲ್ಲಿ ಆಯುಷ್ಮಾನ್ ಭಾರತದ ಕಾರ್ಯಕ್ರಮದ ಕಾರಣದಿಂದಾಗಿ ಸಂಜಯ್ ವರ್ಗೇಮ್ ಅವರಂತಹ 50,000 ಕ್ಕೂ ಹೆಚ್ಚು ರೋಗಿಗಳು ತಮ್ಮ ರಾಜ್ಯದ ಹೊರಗೆ ಸಿಗುವ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಬಹುದು.
ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ (ಪಿಎಂ-ಜಯ್) ಯೋಜನೆಯಲ್ಲಿ 16,085 ಆಸ್ಪತ್ರೆಗಳನ್ನು ಸೇರಿಸಲಾಗಿದೆ, 41 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ ಮತ್ತು 10 ಕೋಟಿಗೂ ಹೆಚ್ಚು ಇ-ಕಾರ್ಡ್‌ಗಳನ್ನು ನೀಡಲಾಗಿದೆ.
ಆಯುಷ್ಮಾನ್ ಭಾರತದ ಅಡಿಯಲ್ಲಿ ದೇಶಾದ್ಯಂತ 20,700 ಕ್ಕೂ ಹೆಚ್ಚು ಆರೋಗ್ಯ ಮತ್ತು ಸ್ವಾಸ್ಥ್ಯ ಸೇವಾ ಕೇಂದ್ರಗಳು ಕಾರ್ಯರೂಪಕ್ಕೆ ಬಂದಿವೆ.