ನನ್ನ ಪ್ರಿಯ ದೇಶವಾಸಿಗಳೇ! ನಮಸ್ಕಾರ. ಇಂದು ಸಂಪೂರ್ಣ ದೇಶ ರಕ್ಷಾಬಂಧನದ ಹಬ್ಬವನ್ನು ಆಚರಿಸುತ್ತಿದೆ. ಎಲ್ಲ ದೇಶಬಾಂಧವರಿಗೆ ಈ ಪವಿತ್ರಆಚರಣೆಯ ಅನಂತ ಅನಂತ ಶುಭಾಶಯಗಳು. ರಕ್ಷಾಬಂಧನವನ್ನು ಸೋದರ ಸೋದರಿಯರ ಪರಸ್ಪರ ಸ್ನೇಹ ಮತ್ತು ವಿಶ್ವಾಸದ ಪ್ರತೀಕವೆಂದುಪರಿಗಣಿಸಲಾಗುತ್ತದೆ. ಈ ಹಬ್ಬ ಶತಮಾನಗಳಿಂದಲೂ ಸಾಮಾಜಿಕ ಸೌಹಾರ್ದತೆಯ ಒಂದು ದೊಡ್ಡ ಉದಾಹರಣೆಯಾಗಿದೆ.ಒಂದು ರಕ್ಷಾ ಸೂತ್ರ ಬೇರೆಬೇರೆ ರಾಜ್ಯಗಳ ಅಥವಾ ಧರ್ಮದ ಜನರನ್ನು ವಿಶ್ವಾಸದ ಎಳೆಯೊಂದಿಗೆ ಬೆಸೆದಂತಹ ಬಹಳಷ್ಟು ಕಥೆಗಳನ್ನು ದೇಶದ ಇತಿಹಾಸದಲ್ಲಿ ಕಾಣಬಹುದಾಗಿದೆ.ಇನ್ನು ಕೆಲವೇ ದಿನಗಳ ನಂತರ ಜನ್ಮಾಷ್ಟಮಿ ಆಚರಣೆಯೂ ಬರಲಿದೆ.ಪರಿಸರದ ತುಂಬೆಲ್ಲ ಹಾಥಿ, ಘೋಡಾ, ಪಾಲ್ಕಿ – ಜಯ್ ಕನ್ಹಯ್ಯಾಲಾಲ್ ಕಿ,ಗೋವಿಂದ ಗೋವಿಂದ ಎಂಬ ಜಯಘೋಷ ಪ್ರತಿಧ್ವನಿಸಲಿದೆ. ಭಗವಂತ ಕೃಷ್ಣನಲ್ಲಿ ತನ್ಮಯರಾಗಿ ತೇಲಾಡುವ ಆನಂದವೇ ವಿಶಿಷ್ಟವಾದದ್ದು. ದೇಶದ ವಿವಿಧಭಾಗಗಳಲ್ಲಿ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಮೊಸರು ಕುಡಿಕೆಯ ತಯಾರಿಯಲ್ಲಿ ನಮ್ಮ ಯುವಕರು ತೊಡಗಿರಬಹುದು. ಎಲ್ಲ ದೇಶಬಾಂಧವರಿಗೆರಕ್ಷಾಬಂಧನ ಮತ್ತು ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
‘प्रधानमन्त्रि-महोदय! नमस्कारः | अहं चिन्मयी, बेंगलुरु-नगरे विजयभारती-विद्यालये दशम-कक्ष्यायां पठामि | महोदय अद्य संस्कृत-दिनमस्ति | संस्कृतंभाषां सरला इति सर्वे वदन्ति | संस्कृतं भाषा वयमत्र वह:वह:अत्र: सम्भाषणमअपि कुर्मः | अतः संस्कृतस्य महत्व: -विषये भवतः गह: अभिप्रायः इति रुपयावदतु |’
ಪ್ರಧಾನಮಂತ್ರಿಗಳೇ ನಮಸ್ಕಾರ, ನಾನು ಚಿನ್ಮಯಿ, ಬೆಂಗಳೂರು ನಗರದ ವಿಜಯಭಾರತಿ ವಿದ್ಯಾಲಯದಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಸರ್,ಇಂದು ಸಂಸ್ಕೃತ ದಿನ. ಸಂಸ್ಕೃತ ಭಾಷೆ ಸರಳವಾದದ್ದು ಎಂದು ಎಲ್ಲರೂ ಹೇಳುತ್ತಾರೆ. ನಾವು ಎಲ್ಲೆಲ್ಲಿ ಇರುತ್ತೇವೆಯೋ ಅಲ್ಲಿ ಸಂಸ್ಕೃತದಲ್ಲಿಸಂಭಾಷಿಸೋಣ. ಆದ್ದರಿಂದ ಸಂಸ್ಕೃತದ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ.
भगिनी ! चिन्मयि !!
भवती संस्कृत – प्रश्नं पृष्टवती |
बहूत्तमम् ! बहूत्तमम् !!
अहं भवत्या: अभिनन्दनं करोमि |
संस्कृत –सप्ताह – निमित्तं देशवासिनां
सर्वेषां कृते मम हार्दिक-शुभकामना:
ಸೋದರಿ ಚಿನ್ಮಯಿ!!
ಸಂಸ್ಕೃತದಲ್ಲಿ ಪ್ರಶ್ನೆ ಕೇಳಿದ್ದು ಅತ್ಯುತ್ತಮವಾಗಿದೆ. ನಾನು ನಿಮಗೆ ಅದಕ್ಕಾಗಿ ಅಭಿನಂದಿಸುತ್ತೇನೆ. ಸಂಸ್ಕೃತ – ಸಪ್ತಾಹದ ನಿಮಿತ್ತ ಎಲ್ಲ ದೇಶವಾಸಿಗಳಿಗೂನನ್ನ ಹಾರ್ದಿಕ ಶುಭಾಷಯಗಳು.
ಈ ವಿಷಯ ಪ್ರಸ್ತಾಪಿಸಿದ್ದಕ್ಕೆ ಚಿನ್ಮಯಿಗೆ ನಾನು ಬಹಳ ಕೃತಜ್ಞನಾಗಿದ್ದೇನೆ. ಸ್ನೇಹಿತರೇ, ರಕ್ಷಾಬಂಧನವಷ್ಟೇ ಅಲ್ಲ ಶ್ರಾವಣ ಪೌರ್ಣಮಿಯಂದುಸಂಸ್ಕೃತ ದಿನವನ್ನೂ ಆಚರಿಸಲಾಗುತ್ತದೆ. ಈ ಉದಾತ್ತ ಪರಂಪರೆಯನ್ನು ಉಳಿಸಿ ಬೆಳೆಸುವ ಮತ್ತು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸದಲ್ಲಿತೊಡಗಿರುವ ಎಲ್ಲ ಜನರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ. ತಮಿಳು ಭಾಷೆ ವಿಶ್ವದ ಅತ್ಯಂತಪುರಾತನ ಭಾಷೆ ಎಂಬ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ. ಅಲ್ಲದೆ ಸಂಸ್ಕೃತ ಭಾಷೆ ವೇದಕಾಲದಿಂದಲೂ ಜ್ಞಾನವೃದ್ಧಿಗೆ ಮತ್ತು ಪ್ರಚಾರ ಮಾಡುವಲ್ಲಿ ಬಹು ದೊಡ್ಡಪಾತ್ರವಹಿಸಿದೆ ಎಂಬುದಕ್ಕೂ ಕೂಡಾ ಭಾರತೀಯರಾದ ನಮಗೆ ಹೆಮ್ಮೆಯಿದೆ.
ಜೀವನದ ಪ್ರತಿ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನದ ಭಂಡಾರದಂತೆ ಸಂಸ್ಕೃತ ಭಾಷೆ ಮತ್ತು ಅದರ ಸಾಹಿತ್ಯವಿದೆ. ಅದು ವಿಜ್ಞಾನವಾಗಿರಲಿ ಅಥವಾತಂತ್ರಜ್ಞಾನವಾಗಿರಲಿ, ಕೃಷಿ ಇರಲಿ ಇಲ್ಲವೆ ಆರೋಗ್ಯವಾಗಿರಲಿ, ಖಗೋಳ ಶಾಸ್ತ್ರವಾಗಿರಲಿ, ವಾಸ್ತುಶಿಲ್ಪವಾಗಿರಲಿ, ಗಣಿತವಾಗಲಿ ಅಥವಾಆಡಳಿತವಾಗಿರಲಿ, ಅರ್ಥಶಾಸ್ತ್ರ್ರದ ಮಾತಾಗಲಿ ಇಲ್ಲವೆ ಪರಿಸರದ ಬಗ್ಗೆಯಾಗಲಿ, ಜಾಗತಿಕ ತಾಪಮಾನ ಹೆಚ್ಚಳದ ಸವಾಲುಗಳನ್ನು ಎದುರಿಸುವಉಪಾಯವೂ ನಮ್ಮ ವೇದಗಳಲ್ಲಿ ವಿಸ್ತಾರವಾಗಿ ಉಲ್ಲೇಖಿಸಲಾಗಿದೆ ಎಂದು ಹೇಳುತ್ತಾರೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹೊಸಳ್ಳಿ ಮತ್ತೂರು ಗ್ರಾಮಸ್ಥರುಇಂದಿಗೂ ಮಾತಾಡಲು ಸಂಸ್ಕೃತ ಭಾಷೆಯನ್ನೇ ಬಳಸುತ್ತಾರೆ ಎಂದು ಕೇಳಿ ನಿಮಗೆ ಹರ್ಷವೆನಿಸಬಹುದು. ನಿಮಗೆ ಒಂದು ವಿಷಯ ಕೇಳಿಆಶ್ಚರ್ಯವೆನಿಸಬಹುದು, ಸಂಸ್ಕೃತ ಭಾಷೆ ಎಂಥದ್ದು ಎಂದರೆ ಇದರಲ್ಲಿ ಅಸಂಖ್ಯ ಶಬ್ದಗಳ ನಿರ್ಮಾಣಮಾಡಬಹುದಾಗಿದೆ. 2 ಸಾವಿರ ಧಾತುಗಳು, 200ಪ್ರತ್ಯಯ ಅಂದರೆ ಸಫಿಕ್ಸ್, 22 ಉಪಸರ್ಗ ಅಂದರೆ ಪ್ರಿಫಿಕ್ಸ್ ಗಳಿರುವುದರಿಂದ ಸಮಾಜದ ಬಳಕೆಯ ಅಸಂಖ್ಯ ಶಬ್ದಗಳ ನಿರ್ಮಾಣ ಸಾಧ್ಯ. ಆದ್ದರಿಂದಲೇಯಾವುದೇ ಅತಿ ಸೂಕ್ಷ್ಮ ಭಾವನೆ ಅಥವಾ ವಿಷಯವನ್ನು ನಿಖರವಾಗಿ ವರ್ಣಿಸಬಹುದಾದದ್ದು. ಸಂಸ್ಕೃತ ಭಾಷೆಯ ಇನ್ನೊಂದು ವಿಶೇಷತೆಯಿದೆ. ಇಂದಿಗೂನಾವು ನಮ್ಮ ಮಾತಿಗೆ ಹೆಚ್ಚಿನ ಶಕ್ತಿ ತುಂಬಲು ಇಂಗ್ಲಿಷ್ ನಾಣ್ಣುಡಿಗಳನ್ನು ಬಳಸುತ್ತೇವೆ, ಕೆಲವೊಮ್ಮೆ ಹಿಂದಿ ಶಾಯರಿಗಳನ್ನು ಉಪಯೋಗಿಸುತ್ತೇವೆ. ಆದರೆಯಾರಿಗೆ ಸಂಸ್ಕೃತ ಸುಭಾಷಿತಗಳ ಬಗ್ಗೆ ತಿಳಿದಿದೆಯೋ ಅವರಿಗೆ ಬಹಳ ಕಡಿಮೆ ಶಬ್ದಗಳಲ್ಲಿ ಅತ್ಯಂತ ಸೂಕ್ತವಾದ ಹೇಳಿಕೆಯನ್ನು ಸಂಸ್ಕೃತ ಸುಭಾಷಿತಗಳಮೂಲಕ ನೀಡಬಹುದಾಗಿದೆ ಎಂಬುದು ಗೊತ್ತು. ಅಲ್ಲದೆ ಅದು ನಮ್ಮ ನೆಲ ಮತ್ತು ಸಂಪ್ರದಾಯದೊಂದಿಗೆ ಮಿಳಿತವಾಗಿರುವುದರಿಂದ ತಿಳಿದುಕೊಳ್ಳುವುದುಬಹಳ ಸರಳ.
ಜೀವನದಲ್ಲಿ ಗುರುವಿನ ಮಹತ್ವ ಅರಿಯಲು ಹೀಗೆ ಹೇಳಿದ್ದಾರೆ –
“ಏಕಮಪಿ ಅಕ್ಷರಮಸ್ತು, ಗುರುಃ ಶಿಷ್ಯಂ ಪ್ರಭೋದಯೇತ್.
ಪೃಥವ್ಯಾಂ ನಾಸ್ತಿ ತತ್ ದ್ರವ್ಯಂ, ಯತ್ ದತ್ವಾ ಹಯನೃಣೀ ಭವೇತ್”
ಇದರರ್ಥ ಯಾವುದೇ ಗುರು ತನ್ನ ಶಿಷ್ಯನಿಗೆ ಒಂದೇ ಅಕ್ಷರವನ್ನು ಕಲಿಸಿದರೂ ಶಿಷ್ಯನಿಗೆ ಗುರುವಿನ ಆ ಋಣ ತೀರಿಸಬಹುದಾದಂಥ ವಸ್ತು ಅಥವಾ ಹಣಸಂಪೂರ್ಣ ಭೂಮಂಡಲದಲ್ಲೇ ಇಲ್ಲ ಎಂದು. ಮುಂಬರುವ ಶಿಕ್ಷಕರ ದಿನಾಚರಣೆಯನ್ನು ನಾವೆಲ್ಲ ಇದೇ ಭಾವನೆಯೊಂದಿಗೆ ಆಚರಿಸೋಣ. ಜ್ಞಾನ ಮತ್ತು ಗುರುಅಪ್ರತಿಮ, ಅಮೂಲ್ಯ ಮತ್ತು ಅಪೂರ್ವವಾದವು. ತಾಯಿಯನ್ನು ಹೊರತುಪಡಿಸಿದರೆಶಿಕ್ಷಕರೇ ಮಗುವಿನ ವಿಚಾರಗಳಿಗೆ ಸರಿಯಾದ ಮಾರ್ಗದರ್ಶನ ನೀಡುವಜವಾಬ್ದಾರಿಯನ್ನು ಹೊರುತ್ತಾರೆ ಮತ್ತು ಜೀವನದುದ್ದಕ್ಕೂ ಅದರ ಅತ್ಯಧಿಕ ಪ್ರಭಾವ ಕಂಡುಬರುತ್ತದೆ. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಮಹಾನ್ಚಿಂತಕರೂ ಮತ್ತು ದೇಶದ ಅಂದಿನ ರಾಷ್ಟ್ರ್ರಪತಿಗಳೂ ಆದ ಭಾರತ ರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರನ್ನು ನಾವು ಸ್ಮರಿಸುತ್ತೇವೆ.ಅವರಜಯಂತಿಯನ್ನೇ ಸಂಪೂರ್ಣ ರಾಷ್ಟ್ರ ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತದೆ. ದೇಶದ ಎಲ್ಲ ಶಿಕ್ಷಕರಿಗೂ ಮುಂಬರುವ ಶಿಕ್ಷಕರ ದಿನಾಚರಣೆಶುಭಾಷಯಗಳನ್ನು ಕೋರುತ್ತೇನೆ. ಜೊತೆಗೆ ವಿಜ್ಞಾನ, ಶಿಕ್ಷಣ ಮತ್ತು ವಿದ್ಯಾರ್ಥಿಗಳ ಬಗ್ಗೆ ಅವರ ಸಮರ್ಪಣಾ ಭಾವವನ್ನು ಅಭಿನಂದಿಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ!ಕಠಿಣ ಪರಿಶ್ರಮಿಗಳಾದ ನಮ್ಮ ರೈತರಿಗೆ ಮುಂಗಾರು ಹಲವು ನಿರೀಕ್ಷೆಗಳನ್ನು ಹೊತ್ತು ತರುತ್ತದೆ. ಭಯಂಕರ ಬಿಸಿಲಿನೊಂದಿಗೆಕಾದಾಡುತ್ತಿರುವ ಗಿಡಮರಗಳು, ಒಣಗಿದ ಜಲಾಶಯಗಳಿಗೆ ನೆಮ್ಮದಿಯನ್ನು ನೀಡುತ್ತದೆ ಆದರೆ ಕೆಲವೊಮ್ಮೆ ಇದು ಅತೀವೃಷ್ಟಿ ಮತ್ತು ವಿನಾಶಕಾರಿಪ್ರವಾಹವನ್ನೂ ತರುತ್ತದೆ. ಕೆಲವೆಡೆ ಹೆಚ್ಚು ಮಳೆಯಿಂದಾಗಿ ಪ್ರಕೃತಿಯ ರುದ್ರ ನರ್ತನ ಕಂಡುಬರುತ್ತಿದೆ. ನಾವೆಲ್ಲರೂ ನೋಡಿದ್ದೇವೆ. ಕೇರಳದಲ್ಲಿ ಭಯಂಕರಪ್ರವಾಹ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇಂದು ಇಂಥ ಕಠಿಣ ಪರಿಸ್ಥಿತಿಯಲ್ಲಿ ಸಂಪೂರ್ಣ ರಾಷ್ಟ್ರ ಕೇರಳದ ಜೊತೆ ನಿಂತಿದೆ. ತಮ್ಮವರನ್ನುಕಳೆದುಕೊಂಡ ಕುಟುಂಬಗಳಿಗೆ ನಮ್ಮ ಸಹಾನುಭೂತಿಯಿದೆ. ಕಳೆದುಕೊಂಡಿರುವುದನ್ನು ತುಂಬಿಕೊಡಲಾಗುವುದಿಲ್ಲ ಆದರೆ 125 ಕೋಟಿ ಭಾರತೀಯರುದುಖಃದ ಈ ಘಳಿಗೆಯಲ್ಲಿ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ ಎಂದು ಶೋಕದಲ್ಲಿರುವ ಕುಟುಂಬಗಳಿಗೆ ಭರವಸೆ ನೀಡುತ್ತೇನೆ. ಈ ಪ್ರಕೃತಿವಿಕೋಪದಲ್ಲಿ ಗಾಯಾಳುಗಳಾದವರು ಬೇಗ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ರಾಜ್ಯದ ಜನತೆಯ ಭಾವನೆಗಳಿಂದ ಮತ್ತು ಅದಮ್ಯಸಾಹಸದಿಂದಾಗಿ ಕೇರಳ ಬಹುಬೇಗ ಮತ್ತೆ ಪುನರ್ ನಿರ್ಮಾಣಗೊಳ್ಳುವುದು ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.
ವಿಕೋಪಗಳು ತಮ್ಮ ಹಿಂದೆ ಭಯಂಕರ ವಿನಾಶವನ್ನು ಬಿಟ್ಟುಹೋಗುತ್ತವೆ ಎಂಬುದು ದೌರ್ಭಾಗ್ಯವೇ ಸರಿ, ಆದರೆ ಇಂಥ ಸಂದರ್ಭದಲ್ಲಿ ಮಾನವೀಯತೆಯದರ್ಶನವೂ ನಮಗಾಗುತ್ತದೆ ಎಂಬುದು ಗಮನಾರ್ಹ ಸಂಗತಿ. ಅದು ಕೇರಳವೇ ಆಗಿರಲಿ ಅಥವಾ ಭಾರತದ ಇನ್ನಾವುದೇ ಜಿಲ್ಲೆಯಾಗಿರಲಿ ಅಥವಾಯಾವುದೇ ಪ್ರದೇಶವಾಗಿರಲಿ ಎಲ್ಲೇ ವಿಪತ್ತು ಎದುರಾದರೂ ಜನಜೀವನ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲಿ ಎಂಬ ಉದ್ದೇಶದಿಂದ,ಕಛ್ದಿಂದ ಕಾಮ್ರೂಪ್ವರೆಗೆ ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲರೂ ತಮ್ಮದೇ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.ಎಲ್ಲ ವಯೋಮಾನದ ಮತ್ತು ಎಲ್ಲ ಕ್ಷೇತ್ರದ ಜನರುತಂತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಕೇರಳದ ಜನತೆಯ ಸಂಕಷ್ಟಗಳನ್ನು, ಅವರ ದುಖಃವನ್ನುಹಂಚಿಕೊಳ್ಳಲು ಪ್ರತಿಯೊಬ್ಬರೂ ನಿಶ್ಚಯಿಸಿದ್ದಾರೆ.ಸೇನಾಪಡೆಯ ಯೋಧರು ಕೇರಳದಲ್ಲಿ ನಡೆಯುತ್ತಿರುವ ರಕ್ಷಣೆ ಮತ್ತು ಪರಿಹಾರ ಕಾರ್ಯದ ನಾಯಕತ್ವ ವಹಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರುಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆಗೆ ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ವಾಯುಪಡೆ, ನೌಕಾಪಡೆ, ಭೂಸೇನೆ, ಬಿಎಸ್ಎಫ್, ಸಿಐಎಸ್ಎಫ್, ಆರ್ಎಎಫ್ಹೀಗೆ ಪ್ರತಿಯೊಬ್ಬರೂ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ನಾನು ಎನ್ಡಿಆರ್ಎಫ್ ಯೋಧರ ಕಠಿಣ ಪರಿಶ್ರಮದ ಬಗ್ಗೆಕೂಡಾ ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಇಂಥ ಸಂಕಷ್ಟ ಸ್ಥಿತಿಯಲ್ಲಿ ಅವರು ಬಹಳ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಎನ್ಡಿಆರ್ಎಫ್ಅವರಸಾಮಥ್ರ್ಯ ಹಾಗೂ ಬದ್ಧತೆ ಮತ್ತು ಶೀಘ್ರ ನಿರ್ಣಯ ಕೈಗೊಂಡು ತ್ವರಿತ ಗತಿಯಲ್ಲಿ ಪರಿಸ್ಥಿತಿಗಳನ್ನು ನಿಭಾಯಿಸುವ ಕ್ಷಮತೆ, ಪ್ರತಿಯೊಬ್ಬ ಭಾರತೀಯನಿಗೂಹೊಸ ಶೃದ್ಧೆಯನ್ನು ನೀಡುವಂಥದ್ದಾಗಿದೆ. ನಿನ್ನೆ ಓಣಂ ಆಚರಣೆಯಿತ್ತು, ಓಣಂ ಉತ್ಸವ ದೇಶಕ್ಕೆ ಅದರಲ್ಲೂ ವಿಶೇಷವಾಗಿ ಕೇರಳ ರಾಜ್ಯಕ್ಕೆ ಹೆಚ್ಚಿನ ಶಕ್ತಿನೀಡಲಿ, ಈ ವಿಪತ್ತಿನಿಂದ ಆದಷ್ಟು ಬೇಗ ಕೇರಳ ರಾಜ್ಯ ಪುನರ್ ನಿರ್ಮಾಣವಾಗಲಿ ಹಾಗೂ ಅದರ ಅಭಿವೃದ್ಧಿ ಮಾರ್ಗಕ್ಕೆ ಹೆಚ್ಚಿನ ವೇಗ ದೊರೆಯಲಿ ಎಂದುನಾವೆಲ್ಲ ಪ್ರಾರ್ಥಿಸೋಣ. ಇನ್ನೊಮ್ಮೆ ದೇಶದ ಜನತೆಯ ಪರವಾಗಿ ಕೇರಳದವರಿಗೆ ಹಾಗೂ ದೇಶದ ಯಾವ ಭಾಗಗಳಲ್ಲಿ ವಿಪತ್ತು ಬಂದೆರಗಿದೆಯೋಅವರೆಲ್ಲರಿಗೆ ಸಂಪೂರ್ಣ ದೇಶ ಆ ವಿಪತ್ತಿನ ಸಂದರ್ಭದಲ್ಲಿ ನಿಮ್ಮೊಂದಿಗಿದೆ ಎಂಬುದನ್ನು ಖಚಿತಪಡಿಸಬಯಸುತ್ತೇನೆ.
ನನ್ನ ಪ್ರಿಯ ದೇಶಬಾಂಧವರೇ, ಈ ಬಾರಿ ಮನದ ಮಾತಿಗೆ ಬಂದ ಸಲಹೆಗಳನ್ನು ನೋಡುತ್ತಿದ್ದೆ. ಆಗ ದೇಶಾದ್ಯಂತದ ಜನತೆ ನಮ್ಮೆಲ್ಲರ ನೆಚ್ಚಿನ ಶ್ರೀಯುತಅಟಲ್ ಬಿಹಾರಿ ವಾಜಪೇಯಿಯವರ ಬಗ್ಗೆಯೇ ಹೆಚ್ಚಿಗೆ ಪ್ರಸ್ತಾಪಿಸಿರುವುದು ಕಂಡುಬಂತು. ಗಾಜಿಯಾಬಾದ್ನಿಂದ ಕೀರ್ತಿ, ಸೋನಿಪತ್ನಿಂದ ಸ್ವಾತಿ ವತ್ಸ್,ಕೇರಳದಿಂದ ಸೋದರ ಪ್ರವೀಣ್, ಪಶ್ಚಿಮ ಬಂಗಾಳದಿಂದ ಡಾ. ಸ್ವಪ್ನ ಬ್ಯಾನರ್ಜಿ, ಬಿಹಾರದ ಕಟಿಹಾರದಿಂದ ಅಖಿಲೇಶ್ ಪಾಂಡೆ ಹೀಗೆ ದೇಶದ ನಾನಾಭಾಗಗಳಿಂದ ಜನರು ನರೇಂದ್ರ ಮೋದಿ ಮೊಬೈಲ್ ಆಪ್ಗೆ ಮತ್ತು ಮೈ ಗೌ ಗೆ ಬರೆದು ಅಟಲ್ಜಿಯವರ ಜೀವನದ ವಿವಿಧ ಆಯಾಮಗಳ ಬಗ್ಗೆ ಮಾತಾಡಿಎಂದು ಆಗ್ರಹಿಸಿದ್ದಾರೆ. ನಮ್ಮ ದೇಶ ಮತ್ತು ವಿಶ್ವಕ್ಕೆ ಅಗಸ್ಟ್ 16 ರಂದು ಅಟಲ್ಜಿಯವರು ವಿಧಿವಶರಾದ ಸುದ್ದಿ ತಿಳಿಯುತ್ತಿದ್ದಂತೆ ಪ್ರತಿಯೊಬ್ಬರೂ ದುಖಃದಲ್ಲಿಮುಳುಗಿಹೋದರು.ಅವರು 14 ವರ್ಷಗಳ ಹಿಂದೆಯೇ ಪ್ರಧಾನಮಂತ್ರಿ ಪಟ್ಟವನ್ನು ಬಿಟ್ಟುಕೊಟ್ಟಂತಹ ಒಬ್ಬ ರಾಷ್ಟ್ರನಾಯಕರು. ಕಳೆದ 10 ವರ್ಷಗಳಿಂದಒಂದು ರೀತಿಯಲ್ಲಿ ಸಕ್ರೀಯ ರಾಜಕಾರಣದಿಂದ ತಮ್ಮನ್ನು ತಾವು ದೂರವಿರಿಸಿಕೊಂಡಿದ್ದರು. ಸುದ್ದಿ ಸಮಾಚಾರಗಳಲ್ಲಿ ಕಾಣಿಸುತ್ತಿರಲಿಲ್ಲ ಹಾಗೂಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಕಂಡುಬರುತ್ತಿರಲಿಲ್ಲ. 10 ವರ್ಷಗಳ ವಿರಾಮ ಬಹುದೊಡ್ಡದಾಗಿರುತ್ತದೆ ಆದರೆ ಭಾರತದ ಓರ್ವ ಸಾಮಾನ್ಯ ವ್ಯಕ್ತಿಯಮನಸ್ಸಿನಲ್ಲಿ ಈ 10 ವರ್ಷಗಳ ಕಾಲಘಟ್ಟ ಒಂದು ಕ್ಷಣವೂ ಅವರನ್ನು ದೂರ ಮಾಡಿರಲಿಲ್ಲ ಎಂಬುದನ್ನು ಅಗಸ್ಟ್ 16 ರಂದು ದೇಶ ಹಾಗೂ ವಿಶ್ವ ಕಂಡಿತು.ಅಟಲ್ ಜಿ ರವರ ಬಗ್ಗೆ ಇದ್ದ ಸ್ನೇಹ, ಶ್ರದ್ಧೆ ಮತ್ತು ಶೋಕದ ಭಾವನೆ ದೇಶದಾದ್ಯಂತ ಉಕ್ಕಿಹರಿಯಿತು, ಇದು ಅವರ ವಿಶಾಲ ವ್ಯಕ್ತಿತ್ವವನ್ನು ಎತ್ತಿ ತೋರುತ್ತದೆ.ಕಳೆದ ಕೆಲವು ದಿನಗಳಲ್ಲಿ ಅಟಲ್ ಜಿ ರವರ ಜೀವನದ ಪ್ರತಿಯೊಂದು ಉತ್ತಮ ಆಯಾಮಗಳು ದೇಶದ ಜನತೆಯ ಮುಂದೆ ಈಗಾಗಲೇ ಗೋಚರವಾಗಿವೆ.ಜನ ಅವರನ್ನು ಉತ್ತಮ ಸಂಸದರು, ಸಂವೇದನಾಶೀಲ ಲೇಖಕರು, ಶ್ರೇಷ್ಠ ವಾಗ್ಮಿಗಳು, ಲೋಕಪ್ರಿಯ ಪ್ರಧಾನ ಮಂತ್ರಿಗಳ ರೂಪದಲ್ಲಿ ನೆನೆಯುತ್ತಿದ್ದರುಹಾಗೂ ನೆನೆಯುತ್ತಲೂ ಇರುತ್ತಾರೆ. ಉತ್ತಮ ಆಡಳಿತ ಅಂದರೆ ಗುಡ್ ಗವರ್ನನ್ಸ್ ಅನ್ನು ಮುಖ್ಯ ವಾಹಿನಿಗೆ ತಂದಿರುವ ಬಗ್ಗೆ ದೇಶ ಎಂದಿಗೂ ಅಟಲ್ಜಿಯವರಿಗೆ ಕೃತಜ್ಞವಾಗಿರುತ್ತದೆ. ಆದರೆ, ಇಂದು ನಾನು ಅಟಲ್ ಜಿಯವರ ವಿಶಾಲ ವ್ಯಕ್ತಿತ್ವದ ಮತ್ತೊಂದು ಮಗ್ಗುಲಿನ ಬಗ್ಗೆ ಕೇವಲ ಸ್ವಲ್ಪ ಮಾತ್ರತಿಳಿಸಬಯಸುತ್ತೇನೆ. ಅದು ಏನೆಂದರೆ ಅಟಲ್ಜಿಯವರು ನೀಡಿದ ರಾಜಕೀಯ ಸಂಸ್ಕೃತಿ, ರಾಜಕೀಯ ಸಂಸ್ಕೃತಿಯಲ್ಲಿ ತಂದ ಬದಲಾವಣೆಯ ಪ್ರಯತ್ನ,ಅದನ್ನು ವ್ಯವಸ್ಥೆಯಲ್ಲಿ ಕಾರ್ಯರೂಪಕ್ಕೆ ತರುವ ಪ್ರಯತ್ನ. ಇವುಗಳಿಂದ ಭಾರತಕ್ಕೆ ಬಹಳ ಲಾಭವಾಗಿದೆ, ಮುಂಬರುವ ದಿನಗಳಲ್ಲೂ ಲಾಭವಾಗಲಿದೆ. ಇದುಸತ್ಯ. 2003 ರಲ್ಲಿ 91ನೇ ತಿದ್ದುಪಡಿಯನ್ನು ತಂದದ್ದಕ್ಕಾಗಿ ಭಾರತ ಎಂದಿಗೂ ಅಟಲ್ಜಿಯವರಿಗೆ ಕೃತಜ್ಞವಾಗಿರುತ್ತದೆ. ಈ ಬದಲಾವಣೆ ಭಾರತೀಯರಾಜಕಾರಣದಲ್ಲಿ 2 ಮಹತ್ವಪೂರ್ಣ ಪರಿವರ್ತನೆಗಳನ್ನು ತಂದಿದೆ.
ಮೊದಲನೆಯದು, ರಾಜ್ಯದ ಮಂತ್ರಿಮಂಡಲದ ಒಟ್ಟು ಸದಸ್ಯರ ಸಂಖ್ಯೆಯನ್ನು ವಿಧಾನಸಭೆಯ ಸದಸ್ಯರ ಸಂಖ್ಯೆಯ ಶೇಕಡಾ 15ಕ್ಕೆಸೀಮಿತಗೊಳಿಸಲಾಯಿತು.
ಎರಡನೆಯದು, ಪಕ್ಷಾಂತರ ವಿರೋಧಿ ಕಾನೂನಿನ ಅಡಿ ನಿರ್ಧರಿಸಲಾದ ಕನಿಷ್ಠ ಬೆಂಬಲವನ್ನು ಮೂರನೆಯ ಒಂದರಷ್ಟಿದ್ದದ್ದನ್ನು ಹೆಚ್ಚಿಸಿ, ಮೂರನೆಯಎರಡರಷ್ಟು ಮಾಡಲಾಯಿತು. ಇದರ ಜೊತೆಗೆ ಪಕ್ಷಾಂತರಿಗಳನ್ನು ಅನರ್ಹರು ಎಂದು ನಿರ್ಧರಿಸಲು ಸ್ಪಷ್ಟವಾದ ನಿರ್ದೇಶನಗಳನ್ನೂ ಕೂಡಾಸೂಚಿಸಲಾಗಿತ್ತು.
ಹಲವು ದಶಕಗಳಲ್ಲಿ ಭಾರತದಲ್ಲಿ ಬಹು ದೊಡ್ಡ ಪ್ರಮಾಣದ ಮಂತ್ರಿ ಮಂಡಲ ರಚಿಸುವ ರಾಜಕೀಯ ಸಂಸ್ಕೃತಿ ಇತ್ತು, ಇಂಥ ಅಗಾಧ ಮಂತ್ರಿ ಮಂಡಲವನ್ನುಕೆಲಸದ ಹಂಚಿಕೆಗಾಗಿ ಆಗಿರದೇ, ರಾಜಕೀಯ ನಾಯಕರನ್ನು ಸಂತೋಷಪಡಿಸಲು ಮಾತ್ರ ರಚಿಸಲಾಗುತ್ತಿತ್ತು. ಅಟಲ್ ಜೀ ಯವರು ಇದನ್ನುಬದಲಾಯಿಸಿದರು. ಅವರ ಈ ದಿಟ್ಟ ಹೆಜ್ಜೆಯಿಂದ ಹಣ ಮತ್ತು ಸಂಪನ್ಮೂಲಗಳ ಉಳಿತಾಯವಾಯಿತು. ಇದರ ಜೊತೆ ಕಾರ್ಯಕ್ಷಮತೆಯಲ್ಲೂ ಅಭಿವೃದ್ಧಿಕಂಡುಬಂತು. ಇದು ಅಟಲ್ ಜೀ ಯವರ ದೂರದೃಷ್ಟಿಯಿಂದಲೇ ಸಾಧ್ಯವಾಗಿತ್ತು, ಇವರು ಇದ್ದ ಪರಿಸ್ಥಿತಿಯನ್ನು ಬದಲಿಸಿ ರಾಜಕೀಯ ಸಂಸ್ಕೃತಿಯಲ್ಲಿಆರೋಗ್ಯಕರ ಪರಂಪರೆಯನ್ನು ಹುಟ್ಟುಹಾಕಿದರು. ಅಟಲ್ಜಿಯವರು ಒಬ್ಬ ನಿಜವಾದ ದೇಶ ಭಕ್ತನಾಗಿದ್ದರು. ಅವರ ಅಧಿಕಾರದಲ್ಲಿಯೇ ಬಜೆಟ್ ಮಂಡಿಸುವವೇಳೆಯಲ್ಲಿ ಬದಲಾವಣೆ ತರಲಾಯಿತು. ಹಿಂದೆ ಬ್ರಿಟಿಷರ ಪರಂಪರೆಯಂತೆ ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು ಏಕೆಂದರೆ ಅದು ಲಂಡನ್ನಲ್ಲಿಸಂಸತ್ ಅಧಿವೇಶನ ಆರಂಭವಾಗುವ ಸಮಯವಾಗಿತ್ತು. 2001 ನೇ ಇಸವಿಯಲ್ಲಿ ಅಟಲ್ಜಿಯವರು ಬಜೆಟ್ ಮಂಡನೆ ಸಮಯವನ್ನು ಸಂಜೆ 5 ರಿಂದ ಬೆಳಿಗ್ಗೆ11 ಕ್ಕೆ ಬದಲಾಯಿಸಿದರು. “ಮತ್ತೊಂದು ಸ್ವಾತಂತ್ರ್ಯ” ಅಟಲ್ಜಿಯವರ ಕಾರ್ಯಾವಧಿಯಲ್ಲಿ ಭಾರತೀಯ ಧ್ವಜ ಸಂಹಿತೆಯನ್ನು ರೂಪಿಸಿ, 2002 ರಲ್ಲಿಜಾರಿಗೆ ತರಲಾಯಿತು. ಈ ಸಂಹಿತೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸಾಧ್ಯವಾಗುವಂತಹ ಹಲವು ನಿಯಮಗಳನ್ನುಸೇರಿಸಲಾಗಿದೆ. ಇದರಿಂದಾಗಿ ಬಹಳಷ್ಟು ಭಾರತೀಯ ನಾಗರಿಕರಿಗೆ ತಮ್ಮ ರಾಷ್ಟ್ರ ಧ್ವಜವನ್ನು ಹಾರಿಸುವ ಅವಕಾಶ ಲಭಿಸಿತು. ಹೀಗೆ ಅವರು ನಮಗೆಅತ್ಯಂತ ಪ್ರಿಯವಾದ ತ್ರಿವರ್ಣ ಧ್ವಜವನ್ನು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡಿದರು.
ನೀವು ನೋಡಿದ್ದೀರಿ!ಅಟಲ್ಜಿಯವರು ದೇಶದಲ್ಲಿಚುನಾವಣೆ ಪ್ರಕ್ರಿಯೆಯಾಗಿರಲಿ ಅಥವಾ ಜನಪ್ರತಿನಿಧಿಗಳ ಬಗ್ಗೆ ಜನರಲ್ಲಿ ಇದ್ದ ಕೆಟ್ಟ ಭಾವನೆ ಇರಲಿ ಅದರ ವಿರುದ್ಧ ಸಾಹಸಮಯ ಕ್ರಮಗಳನ್ನು ಕೈಗೊಂಡುಮೂಲದಿಂದಲೇ ಸುಧಾರಣೆ ತಂದರು. ಹೀಗೆ ಇಂದು ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಬಾರಿ ಚುನಾವಣೆ ನಡೆಸುವ ಕುರಿತು ಚರ್ಚೆ ಮುಂದುವರಿದಿದೆ. ಈವಿಷಯದ ಪರವಾಗಿ ಮತ್ತು ವಿರೋಧವಾಗಿ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಒಂದು ಶುಭಸಂಕೇತವೂ ಆಗಿದೆ. ಆರೋಗ್ಯಕರ, ಉತ್ತಮ ಪ್ರಜಾಪ್ರಭುತ್ವಕ್ಕೆ ಉತ್ತಮ ಸಂಸ್ಕೃತಿಯನ್ನು ಬೆಳೆಸುವುದು, ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲುನಿರಂತರ ಪ್ರಯತ್ನಿಸುವುದು, ಚರ್ಚೆಗಳನ್ನು ಮುಕ್ತ ಮನಸ್ಸಿನಿಂದ ಮುಂದುವರಿಸುವುದು ಇವೆಲ್ಲವುಗಳುಅಟಲ್ಜಿಯವರಿಗೆ ಸಲ್ಲಿಸುವ ಅತ್ಯುತ್ತಮ ಶೃದ್ಧಾಂಜಲಿಆಗುತ್ತದೆ ಎಂಬುದನ್ನು ನಾನು ಹೇಳಬಯಸುತ್ತೇನೆ.ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಅವರ ಕನಸನ್ನು ಪೂರ್ಣಗೊಳಿಸುವ ಸಂಕಲ್ಪವನ್ನುಪುನರುಚ್ಛರಿಸಿ ನಾನು ಎಲ್ಲರ ಪರವಾಗಿ ಅಟಲ್ಜಿಯವರಿಗೆ ಶೃದ್ಧಾಂಜಲಿ ಅರ್ಪಿಸುತ್ತೇನೆ.
ಪ್ರಿಯ ದೇಶವಾಸಿಗಳೆ,ಇತ್ತೀಚಿನ ದಿನಗಳಲ್ಲಿ ಸಂಸತ್ತಿನಲ್ಲಿ ನಡೆಯುವ ಚರ್ಚೆಗಳೆಲ್ಲವೂ ಸಾಮಾನ್ಯವಾಗಿ ಅಡಚಣೆ, ಕೂಗಾಟಗಳ ಜೊತೆಗೆಪ್ರಗತಿಯನ್ನು ತಡೆಯುವಂತಹ ವಿಷಯಗಳ ಕುರಿತೇ ಹೆಚ್ಚು ಆಗುತ್ತವೆ. ಆದರೆ ಒಳಿತನ್ನು ಬಯಸುವ ವಿಚಾರಗಳ ಬಗ್ಗೆ ಹೆಚ್ಚಿನ ಚರ್ಚೆ ಆಗುವುದೇ ಇಲ್ಲ.ಕೆಲವೇ ದಿನಗಳ ಹಿಂದೆ ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯವಾಯಿತು. ಲೋಕಸಭಾ ಅಧಿವೇಶನದ ಗುಣಾತ್ಮಕ ಬಳಕೆ ಶೇ.118 ಮತ್ತುರಾಜ್ಯಸಭೆ ಉತ್ಪಾದಕತೆ ಶೇ.74 ಎಂಬುದನ್ನು ಕೇಳಿ ನಿಮಗೆ ಸಂತೋಷವಾಗಬಹÅದು. ಎಲ್ಲಾ ಸಂಸದರೂ ಕೂಡ, ಪಕ್ಷಾತೀತವಾಗಿ ಸಂಸತ್ತಿನಮುಂಗಾರು ಅಧಿವೇಶನವನ್ನು ಹೆಚ್ಚು ಉಪಯುಕ್ತವನ್ನಾಗಿಸಿದರು. ಹಾಗಾಗಿ ಲೋಕಸಭೆಯಲ್ಲಿ ಇಪ್ಪತ್ತೊಂದು ವಿಧೇಯಕಗಳು, ರಾಜ್ಯಸಭೆಯಲ್ಲಿ ಹದಿನಾಲ್ಕುವಿಧೇಯಕಗಳು ಅನುಮೋದಿತವಾದವು. ಸಂಸತ್ತಿನ ಈ ಮುಂಗಾರು ಅಧಿವೇಶನವು ಸಾಮಾಜಿಕ ನ್ಯಾಯ ಮತ್ತು ಯುವಜನತೆಯ ಕಲ್ಯಾಣದ ಅಧಿವೇಶನದರೂಪದಲ್ಲಿ ಎಲ್ಲಾ ಕಾಲದಲ್ಲೂ ನೆನಪಿಸಿಕೊಳ್ಳುವಂಥಾದ್ದು.ಈ ಅಧಿವೇಶನದಲ್ಲಿ ಯುವಕರಿಗೆ ಮತ್ತು ಹಿಂದುಳಿದ ಸಮುದಾಯಗಳಿಗೆ ಅನುಕೂಲಕರವಾದಹಲವು ಮಹತ್ವಪೂರ್ಣ ವಿಧೇಯಕಗಳು ಅನುಮೋದಿಸಲ್ಪಟ್ಟಿವೆ.ನಿಮಗೆಲ್ಲಾ ತಿಳಿದೇ ಇದೆ – “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ರೀತಿಯಲ್ಲೇ ಇತರಹಿಂದುಳಿದ ವರ್ಗಗಳ ಆಯೋಗದ [OBC COMMISSION] ಸ್ಥಾಪನೆಗಾಗಿ ಕಳೆದ ಹಲವು ದಶಕಗಳಿಂದಲೂ ಬೇಡಿಕೆ ಇತ್ತು. ಹಿಂದುಳಿದ ವರ್ಗಗಳಹಕ್ಕನ್ನು ನಿರ್ಧರಿಸಲು ಹಿಂದುಳಿದ ವರ್ಗಗಳ ಆಯೋಗ [OBC COMMISSION] ರಚಿಸುವ ಸಂಕಲ್ಪವನ್ನು ಪೂರ್ಣಗೊಳಿಸಿದೆ, ಅಷ್ಟೇ ಅಲ್ಲ ಅದಕ್ಕೆಸಂವಿಧಾನಬದ್ಧ ಅಧಿಕಾರವನ್ನೂ ನೀಡಲಾಗಿದೆ.ಈ ಒಂದು ಹೆಜ್ಜೆ ಸಾಮಾಜಿಕ ನ್ಯಾಯವನ್ನು ಮುಂದುವರೆಸಲು ಸಹಕಾರಿಯಾಗಿದೆ.ಅನುಸೂಚಿತ ಜಾತಿಮತ್ತು ಅನುಸೂಚಿತ ಜನಾಂಗೀಯ ಅಧಿಕಾರಗಳನ್ನು ಸುರಕ್ಷಿತವಾಗಿರಿಸಲು ತಿದ್ದುಪಡಿ ವಿಧೇಯಕಕ್ಕೂ ಅನುಮೋದನೆ ದೊರಕಿಸುವ ಕಾರ್ಯ ಸಹ ಈಅಧಿವೇಶನದಲ್ಲಿ ನಡೆದಿದೆ.ಈ ಕಾನೂನು ಎಸ್.ಸಿ.ಮತ್ತು ಎಸ್.ಟಿ. ಸಮುದಾಯದ ಹಿತವನ್ನು ಮತ್ತಷ್ಟು ಭದ್ರಗೊಳಿಸುವುದು.ಜೊತೆಯಲ್ಲೇ ಇದುಅಪರಾಧಿಗಳು ಅತ್ಯಾಚಾರ ಎಸಗುವುದನ್ನು ತಡೆಯುವುದು ಮತ್ತು ದಲಿತ ಸಮುದಾಯದಲ್ಲಿ ವಿಶ್ವಾಸವನ್ನು ತುಂಬುವುದು.
ದೇಶದ ಮಹಿಳೆಯ ವಿರುದ್ಧದ ಅನ್ಯಾಯವನ್ನು ಸಮಾಜದ ಯಾರೊಬ್ಬರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ.ದೇಶವು ಬಲಾತ್ಕಾರಿಗಳನ್ನುಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದ್ದರಿಂದಲೇ, ಅಪರಾಧೀಯ ಕಾನೂನು ಸಂಶೋಧನಾ ವಿಧೇಯಕವನ್ನು ಜಾರಿಗೆ ತಂದು ಅತ್ಯಂತ ಕಠಿಣ ಶಿಕ್ಷೆ ನೀಡಲುಅನುವುಮಾಡಿಕೊಟ್ಟಿದೆ.ಇಂತಹ ದುಷ್ಕರ್ಮಿಗಳಿಗೆ ಕನಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆಯಾಗುವುದು. ಹನ್ನೆರಡು ವರ್ಷಗಳಿಗಿಂತಲೂ ಚಿಕ್ಕ ವಯಸ್ಸಿನಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆಯಾಗುವುದು. ತಾವೆಲ್ಲಾ ಪತ್ರಿಕೆಗಳಲ್ಲಿ ಓದಿರಬಹದು. – ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದಮಂದಸೌರ್ನ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರದಒಂದು ಪ್ರಕರಣದಲ್ಲಿ ಕೇವಲ ಎರಡು ತಿಂಗಳ ಕಾಲ ವಿಚಾರಣೆ ನಡೆದು, ಇಬ್ಬರು ದೋಷಿಗಳಿಗೆಗಲ್ಲು ಶಿಕ್ಷೆಯಾಗಿದೆ. ಇದಕ್ಕೂ ಮೊದಲು ಮಧ್ಯಪ್ರದೇಶದ ಕಟ್ನೀ ನ್ಯಾಯಾಲಯವು ಒಂದು ಪ್ರಕರಣವನ್ನು ಕೇವಲ ಐದೇ ದಿನಗಳಲ್ಲಿ ಆಲಿಸಿ, ಇಂತಹುದೇರೀತಿಯ ತ್ವರಿತ ನಿರ್ಣಯವನ್ನು ಕೈಗೊಂಡಿದೆ.ರಾಜಾಸ್ಥಾನದಲ್ಲೂ ಸಹ ಅಲ್ಲಿಯ ನ್ಯಾಯಾಲಯಗಳೂ ಸಹ ಇಂತಹದೇ ಶೀಘ್ರ ತೀರ್ಮಾನಗಳನ್ನುಕೈಗೊಂಡಿವೆ. ಈ ಕಾನೂನು ಮಹಿಳೆಯರ ಮತ್ತು ಬಾಲಕಿಯರ ವಿರುದ್ಧ ಅಪರಾಧ ಎಸಗುವುದನ್ನು ತಡೆಯುವ ವಿಚಾರದಲ್ಲಿ ಮುಖ್ಯ ಭೂಮಿಕೆಯಾಗಲಿದೆ.
ಸಾಮಾಜಿಕ ಬದಲಾವಣೆ ಆಗದೆ, ಆರ್ಥಿಕ ಪ್ರಗತಿ ಪೂರ್ಣವಾಗುವುದಿಲ್ಲ.ತ್ರಿವಳಿ ತಲಾಖ್ ವಿಧೇಯಕವು ಲೋಕಸಭೆಯಲ್ಲಿಅಂಗೀಕಾರವಾಗಿದೆ.ಆದರೆ ರಾಜ್ಯಸಭೆಯ ಈ ಅಧಿವೇಶನದಲ್ಲಿ ಈ ಗೊತ್ತುವಳಿಯನ್ನು ಅಂಗೀಕರಿಸಲು ಸಾಧ್ಯವಾಗಿಲ್ಲ. ಮುಸ್ಲಿಮ್ ಸಮುದಾಯದಮಹಿಳೆಯರಿಗೆ ‘ಇಡೀ ದೇಶವೇ ಅವರಿಗೆ ನ್ಯಾಯ ಒದಗಿಸಲು ತನ್ನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಜೊತೆಗೆ ನಿಂತಿದೆ’ ಎಂಬ ಭರವಸೆ ನೀಡುತ್ತೇನೆ. ನಾವುಯಾವಾಗ ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಮುಂದೆ ಹೆಜ್ಜೆ ಇಡುತ್ತೇವೆ ಆಗ ಬಡವರ, ಹಿಂದುಳಿದವರ, ಶೋಷಿತರ ಮತ್ತು ವಂಚಿತರ ಜೀವನದಲ್ಲಿಬದಲಾವಣೆ ತರಲು ಸಾಧ್ಯವಿದೆ. ಮುಂಗಾರಿನ ಈ ಅಧಿವೇಶನದಲ್ಲಿ ಎಲ್ಲರೂ ಒಟ್ಟಾಗಿ ಒಂದು ಆದರ್ಶವನ್ನು ಪ್ರಕಟಮಾಡಿದ್ದಾರೆ.ನಾನು ನಮ್ಮ ದೇಶದ ಎಲ್ಲಾಸಂಸದರಿಗೂ ಸಾರ್ವತ್ರಿಕವಾಗಿ ಇಂದು ಹೃದಯಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೆ,
ಇತ್ತೀಚಿನ ದಿನಗಳಲ್ಲಿ ಕೋಟ್ಯಂತರ ದೇಶವಾಸಿಗಳ ಗಮನ ಜಕಾರ್ತಾದಲ್ಲಿ ನಡೆಯುತ್ತಿರುವ ‘ಏಷಿಯನ್ ಕ್ರೀಡೆ’ಗಳ ಕಡೆಗಿದೆ.ಪ್ರತಿನಿತ್ಯವೂ,ಬೆಳಗಾದ ಕೂಡಲೇ, ಜನರು ವಾರ್ತಾಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ, ಸಮಾಚಾರಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಒಂದು ದೃಷ್ಟಿ ಬೀರಿ ‘ಯಾವಭಾರತೀಯ ಆಟಗಾರ ಪದಕ ಪಡೆದಿದ್ದಾನೆ ಎಂಬುದನ್ನು ಗಮನಿಸುತ್ತಾರೆ.ಏಷಿಯನ್ ಕ್ರೀಡೆಗಳು ಇನ್ನೂ ನಡೆಯುತ್ತಿವೆ. ನಾನು ಭಾರತಕ್ಕೆ ಪದಕತಂದುಕೊಟ್ಟ ಪ್ರತಿಯೊಬ್ಬ ಕ್ರೀಡಾಪಟುವನ್ನೂ ಅಭಿನಂದಿಸುತ್ತೇನೆ. ಇನ್ನೂ ಉಳಿದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವ ಕ್ರೀಡಾಪಟುಗಳಿಗೂ ಶುಭವನ್ನುಕೋರುತ್ತೇನೆ.ಭಾರತದ ಕ್ರೀಡಾಪಟುಗಳು ವಿಶೇಷವಾಗಿ ಶೂಟಿಂಗ್ ಮತ್ತು ಕುಸ್ತಿಯಲ್ಲಿ ಉತ್ಕೃಷ್ಟ ಪ್ರದರ್ಶನವನ್ನು ನೀಡುತ್ತಿದ್ದಾರೆ.ಜೊತೆಗೆ, ಈ ಮೊದಲುಅಷ್ಟೇನೂ ಪರಿಣಾಮಕಾರಿ ಪ್ರದರ್ಶನ ನೀಡುತ್ತಾ ಇಲ್ಲದಿದ್ದ, ವುಶು ಮತ್ತು ರೋಯಿಂಗ್ನಲ್ಲೂ ಸಹ ಉನ್ನತ ಪ್ರದರ್ಶನ ನೀಡಿ ಪದಕಗಳನ್ನು ತರುತ್ತಿದ್ದಾರೆ.ಇವು ಕೇವಲ ಪದಕಗಳಲ್ಲ ಭಾರತೀಯ ಕ್ರೀಡೆ ಮತ್ತು ಕ್ರೀಡಾಪಟುಗಳ ಗಗನ ಚುಂಬಿ ಸ್ಥೈರ್ಯದ ಮತ್ತು ಗುರಿಮುಟ್ಟುವ ಕನಸಿನ ಪ್ರತೀಕವಾಗಿವೆ. ದೇಶಕ್ಕಾಗಿಪದಕಗಳನ್ನು ತರುತ್ತಿರುವವರ ಪಟ್ಟಿಯಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೂ ಅಧಿಕವಾಗಿದೆ.ಇದು ಸಕಾರಾತ್ಮಕ ಬೆಳವಣಿಗೆ.ಇಲ್ಲಿಯವರೆಗಿನ ಪದಕ ವಿಜೇತರಲ್ಲಿ 15- 16 ವರ್ಷಗಳ ಯುವಜನರೂ ಇದ್ದಾರೆ.ಇದೂ ಸಹ ಒಂದು ಒಳ್ಳೆಯ ಬೆಳವಣಿಗೆಯ ಸಂಕೇತ.ಪದಕಗಳನ್ನು ಗೆದ್ದಿರುವ ಕ್ರೀಡಾಪಟುಗಳಲ್ಲಿ ಸಣ್ಣ ಸಣ್ಣಹೋಬಳಿಗಳಲ್ಲಿ ಮತ್ತು ಹಳ್ಳಿಗಳಲ್ಲಿ ವಾಸಿಸುವವರ ಸಂಖ್ಯೆಯೂ ಅಧಿಕವಾಗಿಯೇ ಇದೆ.ಇದು ಅಲ್ಲಿನ ಜನರ ಕಠಿಣ ಪರಿಶ್ರಮಕ್ಕೆ ದಕ್ಕಿರುವ ಫಲ.
ಆಗಸ್ಟ್ 29 ರಾಷ್ಟ್ರೀಯ ಕ್ರೀಡಾ ದಿನವಾಗಿದೆ.‘ರಾಷ್ಟ್ರೀಯ ಖೇಲ್ ದಿವಸ್’ ಎಂದು ಆಚರಿಸುತ್ತೇವೆ. ಈ ಸಂದರ್ಭದಲ್ಲಿ ಕ್ರೀಡಾಪ್ರೇಮಿಗಳೆಲ್ಲರಿಗೂಶುಭಕಾಮನೆಗಳನ್ನು ತಿಳಿಸುತ್ತೇನೆ. ಜೊತೆಗೆ ಹಾಕೀ ಕ್ಷೇತ್ರದ ಮಾಂತ್ರಕ ಶ್ರೀಯುತ ಧ್ಯಾನ್ಚಂದ್ ಅವರಿಗೆ ನನ್ನ ಶ್ರದ್ಧಾಂಜಲಿ ಸಮರ್ಪಿಸುತ್ತೇನೆ.
ನಾನು ನನ್ನ ದೇಶದ ಸಮಸ್ತ ನಾಗರಿಕರಲ್ಲಿ ಮನವಿ ಮಾಡುವುದೇನೆಂದರೆ ‘ಪ್ರತಿಯೊಬ್ಬರೂ ಆಟವಾಡಿ ಆದರೆ ನಿಮ್ಮ ದೈಹಿಕ ದೃಢತೆ ಬಗ್ಗೆಗಮನವಿರಲಿ.ಸ್ವಸ್ಥ ಭಾರತ (ಭಾರತೀಯರಿಂದ) ಮಾತ್ರವೇ ಸಂಪನ್ನ ಮತ್ತು ಸಮೃದ್ಧವಾದ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ.ಯಾವಾಗ ಭಾರತಸಶಕ್ತವಾಗುತ್ತದೋ ಆಗ ಮಾತ್ರ ಭಾರತದ ಉಜ್ವಲ ಭವಿಷ್ಯದ ನಿರ್ಮಾಣವಾಗುತ್ತದೆ.ಮತ್ತೊಮ್ಮೆ ನಾನು ಏಷಿಯನ್ ಕ್ರೀಡೆಗಳಲ್ಲಿ ಪದಕ ಗೆದ್ದವರನ್ನುಅಭಿನಂದಿಸುತ್ತೇನೆ. ಮತ್ತು ಉಳಿದ ಕ್ರೀಡಾಪಟುಗಳಿಂದಲೂ ಉತ್ತಮ ಪ್ರದರ್ಶನವನ್ನು ನಿರೀಕ್ಷೆ ಮಾಡುತ್ತೇನೆ.ಎಲ್ಲರಿಗೂ ರಾಷ್ಟ್ರೀಯ ಕ್ರೀಡಾದಿನದಶುಭಾಶಯಗಳು.
“ಪ್ರಧಾನಮಂತ್ರಿಗಳೆ, ನಮಸ್ಕಾರ.ನಾನು ಕಾನ್ಪುರದ ಭಾವನಾ ತ್ರಿಪಾಠಿ ಮಾತನಾಡುತ್ತಿದ್ದೇನೆ. ಓರ್ವ ಇಂಜಿನಿಯರಿಂಗ್ವಿದ್ಯಾರ್ಥಿನಿ.ಪ್ರಧಾನಮಂತ್ರಿಗಳೆ, ತಾವು ಹಿಂದಿನ ‘ಮನ್ ಕೀ ಬಾತ್’ನಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದಿರಿ.ಅದಕ್ಕೂ ಪೂರ್ವದಲ್ಲಿ ತಾವುವೈದ್ಯರು ಮತ್ತು ಲೆಕ್ಕಪರಿಶೋಧಕರ ಜೊತೆ ಕೂಡ ಮಾತುಕತೆ ನಡೆಸಿದ್ದಿರಿ.ನನ್ನದೊಂದು ಮನವಿಯಿದೆ. ‘ಬರುವ ಸೆಪ್ಟೆಂಬರ್ ಹದಿನೈದನ್ನು ಇಂಜಿನಿಯರ್ಗಳ ದಿನ ಎಂದು ಆಚರಿಸಲಾಗುತ್ತದೆ.ಇದನ್ನು ಗಮನದಲ್ಲಿಟ್ಟುಕೊಂಡು ತಾವು ನಮ್ಮಂತಹ ಇಂಜಿನಿಯರಿಂಗ್ ವಿದ್ಯಾರ್ಥಿಗಳೊಡನೆ ಮಾತನಾಡಿ.ಇದರಿಂದನಮ್ಮ ಮನೋಸ್ಥೈರ್ಯವೂ ಸಹ ವೃದ್ಧಿಯಾಗುತ್ತದೆ.ನಮಗೆ ಸಂತೋಷವೂ ಆಗುತ್ತದೆ.ಮುಂಬರುವ ದಿನಗಳಲ್ಲಿ ನಮ್ಮ ದೇಶಕ್ಕಾಗಿ ಏನನ್ನಾದರೂ ಮಾಡಲುನಮಗೆ ಪ್ರೋತ್ಸಾಹವೂ ಸಿಗುವುದು.”
ಭಾವನಾ ಜೀ, ನಮಸ್ತೆ.ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ.ಇಟ್ಟಿಗೆ-ಕಲ್ಲುಗಳಿಂದ ಮನೆಗಳನ್ನು, ಕಟ್ಟಡಗಳ ನಿರ್ಮಾಣ ಮಾಡುವುದನ್ನುನಾವೆಲ್ಲರೂ ಗಮನಿಸಿದ್ದೇವೆ.ಸುಮಾರು 1200 ವರ್ಷಗಳ ಹಿಂದೆ ಒಂದು ಏಕಶಿಲಾ ಬೆಟ್ಟವನ್ನು ಕಟೆದು ಒಂದು ಉತ್ಕೃಷ್ಟ, ವಿಶಾಲ ಮತ್ತು ಅದ್ಭುತಮಂದಿರದ, ದೇವಸ್ಥಾನದ ರೂಪ ಕೊಡಲಾಗಿದೆ.ಬಹಶಃ ಊಹಿಸಿಕೊಳ್ಳಲೂ ಅಸಾಧ್ಯವಾದದ್ದು.ಆದರೆ ಇದನ್ನು ಸಾಕಾರಗೊಳಿಸಲಾಗಿದೆ.ಮಹಾರಾಷ್ಟ್ರದಎಲ್ಲೋರಾದಲ್ಲಿರುವ ಕೈಲಾಸನಾಥಮಂದಿರವೇ ಇದು.
ಸಾವಿರ ವರ್ಷಗಳ ಹಿಂದೆ ಗ್ರಾನೈಟ್ನ 60 ಮೀಟರ್ ಎತ್ತರದ ಒಂದು ಕಂಬ ಹಾಗೂ ಅದರ ತುದಿಯಲ್ಲಿ ಸುಮಾರು 80 ಟನ್ ತೂಕದ ಒಂದುಶಿಲಾಕೃತಿಯ ಸ್ಥಾಪನೆಯಾಗಿದೆ.ಇದನ್ನು ತಾವು ನಂಬುತ್ತೀರಾ?ಅದುವೇ ತಮಿಳುನಾಡಿನ ತಂಜಾವೂರಿನಲ್ಲಿರುವ ಬೃಹದೇಶ್ವರ ಮಂದಿರ.ಇಲ್ಲಿಯ ಸ್ಥಪತಿಯವಿಸ್ಮಯದ ಶಿಲ್ಪಕಲೆ ಮತ್ತು ಇಂಜಿನಿಯರಿಂಗ್ಕೌಶಲ್ಯ ಸಂಯೋಜನೆ ನಂಬಲು ಅಸಾಧ್ಯ ಎನಿಸುತ್ತದೆ.
ಗುಜರಾತಿನ ಪಾಟಣ್ ದಲ್ಲಿರುವ 11ನೇ ಶತಮಾನದ ರಾಣಿ ಕೀ ವಾವ್ ಅಥವಾ ಮೆಟ್ಟಿಲು ಬಾವಿ ನೋಡಿದರೆ ಯಾರೇ ಆದರೂಆಶ್ಚರ್ಯಚಕಿತರಾಗುತ್ತಾರೆ.ಇದು ಭಾರತದ ಕಟ್ಟಡ ನಿರ್ಮಾಣದ ಪ್ರಯೋಗಶಾಲೆಯಂತಿದೆ.ಕಲ್ಪನೆಗೂ ನಿಲುಕದಂತಹುದನ್ನು ಕಲ್ಪಿಸಿಕೊಳ್ಳುವಂತೆ ಮಾಡಿದಇಂತಹ ಎಷ್ಟೋ ಇಂಜಿನಿಯರ್ಗಳು ಭಾರತದಲ್ಲಿ ಇದ್ದರು.ಇಂಜಿನಿಯರಿಂಗ್ನಲ್ಲಿ ಚಮತ್ಕಾರಗಳನ್ನೇ ಸೃಷ್ಟಿಸಿದ್ದಾರೆ.ಮಹಾನ್ ಇಂಜಿನಿಯರ್ಗಳಪರಂಪರೆಯಲ್ಲಿ ಇಂತಹ ಒಂದು ರತ್ನ ನಮಗೆ ದೊರೆತಿದೆ.ಯಾರ ಕೆಲಸ ಇಂದೂ ಸಹ ಜನರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೋ, ಅಂತಹ ರತ್ನಭಾರತರತ್ನ ಡಾ.ಎಮ್.ವಿಶ್ವೇಶ್ವರಯ್ಯ.ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಕೃಷ್ಣರಾಜಸಾಗರ ಅಣೆಕಟ್ಟಿನ ಲಾಭವನ್ನು ಇಂದಿಗೂ ಸಹ ಲಕ್ಷಾಂತರರೈತರು ಮತ್ತು ಜನಸಾಮಾನ್ಯರು ಪಡೆಯುತ್ತಿದ್ದಾರೆ.ದೇಶದ ಆ ಭಾಗದವರಿಗೆ ಅವರು ಪೂಜನೀಯರೇ ಹೌದು – ಹಾಗೆಯೇ ಇತರ ಭಾಗದವರೂ ಸಹಅವರನ್ನು ಅಷ್ಟೇ ಗೌರವ ಮತ್ತು ಆತ್ಮೀಯತೆಯಿಂದ ನೆನಪಿಸಿಕೊಳ್ಳುತ್ತಾರೆ. ಅವರ ಸ್ಮರಣೆಯಲ್ಲೇ ಪ್ರತಿವರ್ಷ ಸೆಪ್ಟೆಂಬರ್ 15ರಂದು ಇಂಜಿನಿಯರ್ಸ್ ಡೇಆಚರಿಸಲಾಗುತ್ತದೆ.ಅವರ ಹೆಜ್ಜೆಯ ಹಾದಿಯಲ್ಲೇ ಸಾಗಿದ ನಮ್ಮ ದೇಶದ ಅಸಂಖ್ಯಾತ ಇಂಜಿನಿಯರ್ಗಳು ವಿಶಾಲ ಪ್ರಪಂಚದಲ್ಲಿ ತಮ್ಮದೇ ಆದ ಛಾಪನ್ನುಮೂಡಿಸಿದ್ದಾರೆ.
ಇಂಜಿನಿಯರಿಂಗ್ನ ಚಮತ್ಕಾರದ ಬಗ್ಗೆ ಮಾತನಾಡುವಾಗಲೆಲ್ಲಾ ನನಗೆ 2001ರಲ್ಲಿ ಗುಜರಾತ್ನ ಕಛ್ನಲ್ಲಿ ಭಯಂಕರ ಭೂಕಂಪ ಸಂಭವಿಸಿತ್ತಲ್ಲ, ಅದರಒಂದು ಘಟನೆಯ ನೆನೆಪು ಬರುತ್ತದೆ.ಆ ಸಮಯದಲ್ಲಿ ನಾನೊಬ್ಬ ಕಾರ್ಯಕರ್ತನಾಗಿ, ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೆ.ನನಗೆ ಒಂದು ಹಳ್ಳಿಗೆಹೋಗುವ ಅವಕಾಶ ಸಿಕ್ಕಿತು.ಅಷ್ಟೇ ಅಲ್ಲ ಆ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ವಯಸ್ಸಾಗಿದ್ದ ಒಬ್ಬ ತಾಯಿಯನ್ನು ಭೇಟಿ ಮಾಡುವ ಅವಕಾಶ ಒದಗಿತು. ಆಕೆನಮ್ಮ ಕಡೆ ನೋಡಿ ನಗುತ್ತಾ ಹೇಳಿದಳು – ‘ನೋಡಿ ಇದು ನನ್ನ ಮನೆ. ಕಛ್ನಲ್ಲಿ ಇದಕ್ಕೆ ಭೂಂಗಾ ಎನ್ನುತ್ತೇವೆ. ಈ ನನ್ನ ಮನೆ ಮೂರು-ಮೂರುಭೂಕಂಪಗಳನ್ನು ಕಂಡಿದೆ. ನಾನೂ ಸ್ವತಃ ಮೂರು ಭೂಕಂಪಗಳನ್ನು ನೋಡಿದ್ದೇನೆ. ಇದೇ ಮನೆಯಲ್ಲಿ ನೋಡಿದ್ದೇನೆ. ಆದರೆ ನಿಮಗೆ ಎಲ್ಲೂ, ಏನೂನಷ್ಟವಾಗಿರುವುದು ಕಂಡುಬರುವುದಿಲ್ಲ. ಈ ಮನೆಯನ್ನು ನನ್ನ ಪೂರ್ವಜರು, ಇಲ್ಲಿ ಪ್ರಕೃತಿಗೆ ಅನುಗುಣವಾಗಿ, ವಾತಾವರಣಕ್ಕೆ ಹೊಂದಿಕೆಯಾಗುವಂತೆನಿರ್ಮಾಣ ಮಾಡಿದ್ದಾರೆ.’ಎಂಬ ಮಾತನ್ನು ಬಹಳ ಹೆಮ್ಮೆಯಿಂದ ಹೇಳಿದಳು.ಇದನ್ನು ಕೇಳುವಾಗ, ನೋಡಿದಾಗ ನನಗೆ ಅನ್ನಿಸಿದ್ದು, ಶತಮಾನಗಳಹಿಂದೆಯೂ ಸಹ ಆ ಕಾಲದ ಇಂಜಿನಿಯರ್ಗಳೂ ಸಹ ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ, ಎಂತೆಂತೆಹ ರಚನೆಗಳನ್ನು ಮಾಡಿದ್ದಾರೆ.ಬಹಶಃ ಆಕಾರಣದಿಂದಲೇ ಜನಸಾಮಾನ್ಯರು ಸುರಕ್ಷಿತವಾಗಿ ಇರುತ್ತಿದ್ದರು ಎನ್ನಿಸಿತು.
ನಾವು ಈಗ ಇಂಜಿನಿಯರ್ಸ್ ಡೇ ಆಚರಿಸುವಾಗ ಭವಿಷ್ಯದ ಬಗ್ಗೆಯೂ ಚಿಂತಿಸಬೇಕು.ಪ್ರತಿಯೊಂದು ಸ್ಥಳಗಳಲ್ಲೂ ಕಾರ್ಯಾಗಾರಗಳುನಡೆಯಬೇಕು.ಬದಲಾಗುತ್ತಿರುವ ಕಾಲಮಾನದಲ್ಲಿ ನಾವು ಯಾವ ಯಾವ ಹೊಸ ವಿಚಾರಗಳನ್ನು ಕಲಿಯಬೇಕಿದೆ?ಯಾವ ವಿಚಾರಗಳನ್ನು ಕಲಿಸಬೇಕಿದೆ?ಯಾವುದನ್ನು ಜೋಡಿಸಬೇಕಿದೆ?ಇಂದು ಪ್ರಕೃತಿ ವಿಕೋಪ ನಿಯಂತ್ರಣವೇ ಒಂದು ದೊಡ್ಡ ಕೆಲಸವಾಗಿಬಿಟ್ಟಿದೆ.ಪ್ರಾಕೃತಿಕ ವಿಪತ್ತುಗಳಿಂದ ಪ್ರಪಂಚತತ್ತರಿಸುತ್ತಿದೆ.ಇದರಲ್ಲಿ ರಚನಾತ್ಮಕ ಇಂಜಿನಿಯರಿಂಗ್ನ ಹೊಸ ವಿನ್ಯಾಸ ಹೇಗಿರಬೇಕು? ಯಾವ ಯಾವ ಕೋರ್ಸ್ಗಳಿರಬೇಕು ? ವಿದ್ಯಾರ್ಥಿಗಳಿಗೆ ಏನನ್ನುಕಲಿಸಬೇಕು ? ಕಟ್ಟಡಗಳ ನಿರ್ಮಾಣ ಕಾರ್ಯ ಪ್ರಕೃತಿಸ್ನೇಹಿಯಾಗಿ ಹೇಗಿರಬೇಕು?ಸ್ಥಳೀಯವಾಗಿ ದೊರಕುವ ಸಾಮಗ್ರಿಗಳನ್ನೇ ಬಳಸಿಕೊಂಡುಮೌಲ್ಯಯುಕ್ತ ನಿರ್ಮಾಣವನ್ನು ಮಾಡುವುದನ್ನು ಹೇಗೆ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬಹುದು?ಒಂದು ಪದಾರ್ಥವೂ ವ್ಯರ್ಥವಾಗದಂತೆ ಹೇಗೆಉಪಯೋಗಿಸಬೇಕು ಎಂಬುದರ ಬಗ್ಗೆ ಪ್ರಾಥಮಿಕ ಚಿಂತನೆ ಆಗಬೇಕು?ಇಂತಹ ಅನೇಕ ವಿಷಯಗಳನ್ನು ಇಂಜಿನಿಯರ್ಸ್ ದಿನವನ್ನು ಆಚರಿಸುವಾಗಚಿಂತಿಸಬೇಕಾದ ಅವಶ್ಯಕತೆ ಇದೆ.
ನನ್ನ ಪ್ರಿಯ ದೇಶಬಂಧುಗಳೆ,ಉತ್ಸವಗಳ ವಾತಾವರಣವಿದೆ.ಜೊತೆಯಲ್ಲಿ ದೀಪಾವಳಿ ಹಬ್ಬದ ತಯಾರಿಯೂ ಆರಂಭವಾಗುತ್ತದೆ. ‘ಮನದ ಮಾತಿನಲ್ಲಿಭೇಟಿಯಾಗುತ್ತಲೇಇರೋಣ.‘ಮನದ ಮಾತು’ಗಳನ್ನು ಆಡುತ್ತಲೇ ಇರೋಣ.ನಾವು ದೇಶವನ್ನು ಮುನ್ನಡೆಸುವಲ್ಲಿ ಮನಸಾರೆ ಜೊತೆಯಾಗಿ ಸಾಗೋಣ.ಇದೇಭಾವನೆಗಳೊಂದಿಗೆ ತಮಗೆಲ್ಲಾ ಅನಂತ ಶುಭಕಾಮನೆಗಳನ್ನು ತಿಳಿಸುತ್ತೇನೆ.ಧನ್ಯವಾದ. ಮತ್ತೆ ಭೇಟಿಯಾಗೋಣ.
The Prime Minister conveys Raksha Bandhan greetings during #MannKiBaat. https://t.co/CbSYmu66bw pic.twitter.com/rrZWfhya14
— PMO India (@PMOIndia) August 26, 2018
PM @narendramodi also conveys Janmashtami greetings to the people of India. #MannKiBaat pic.twitter.com/okP0P1VcoU
— PMO India (@PMOIndia) August 26, 2018
Chinmayi asks PM @narendramodi to talk about Sanskrit Language, since it is Sanskrit Day today. #MannKiBaat https://t.co/CbSYmu66bw
— PMO India (@PMOIndia) August 26, 2018
Greetings to all those who are associated with the Sanskrit language.
— PMO India (@PMOIndia) August 26, 2018
This language is deeply connected with our culture. #MannKiBaat pic.twitter.com/JzO8BnZhgv
There is a strong link between knowledge and Sanskrit. #MannKiBaat pic.twitter.com/iuJzlloYWl
— PMO India (@PMOIndia) August 26, 2018
Sanskrit Subhashitas help articulating things. Here is how a Guru has been described in Sanskrit.
— PMO India (@PMOIndia) August 26, 2018
I also convey greetings on Teacher's Day: PM @narendramodi during #MannKiBaat pic.twitter.com/gPza5eIwsu
PM @narendramodi highlights the importance of teachers in our society. #MannKiBaat pic.twitter.com/f8559gi0wn
— PMO India (@PMOIndia) August 26, 2018
India stands shoulder to shoulder with the people of Kerala in this hour of grief. #MannKiBaat pic.twitter.com/ANq79PFsvz
— PMO India (@PMOIndia) August 26, 2018
People from all walks of life have come in support of the people of Kerala. #MannKiBaat pic.twitter.com/Gh1mLoqdt9
— PMO India (@PMOIndia) August 26, 2018
PM @narendramodi appreciates our forces and various teams that are working towards relief work in Kerala. #MannKiBaat pic.twitter.com/ZIRF0LHmQi
— PMO India (@PMOIndia) August 26, 2018
If there was one topic on which most people wrote, asking PM @narendramodi to speak, it was the life of the great Atal Ji. #MannKiBaat pic.twitter.com/ulls302Z1U
— PMO India (@PMOIndia) August 26, 2018
Tributes for Atal Ji have poured in from all sections of society. #MannKiBaat. pic.twitter.com/q1qO992Mj6
— PMO India (@PMOIndia) August 26, 2018
Atal Ji brought a very distinctive and positive change in India's political culture. #MannKiBaat pic.twitter.com/e82OZ76YYo
— PMO India (@PMOIndia) August 26, 2018
It was decided during the tenure of PM Vajpayee to fix the size of Council of Ministers to 15% of the size of the State Assemblies.
— PMO India (@PMOIndia) August 26, 2018
Atal Ji also made the anti-defection law stricter: PM @narendramodi #MannKiBaat
Remembering the immense contributions of Atal Ji. #MannKiBaat pic.twitter.com/dQXaZ82hvt
— PMO India (@PMOIndia) August 26, 2018
We witnessed a productive monsoon session, for which I congratulate MP colleagues.
— PMO India (@PMOIndia) August 26, 2018
This was a session devoted to social justice and youth welfare: PM @narendramodi #MannKiBaat pic.twitter.com/zQczwLtkoW
Fulfilling the aspirations of the OBC communities. #MannKiBaat pic.twitter.com/fIJaoqJpUg
— PMO India (@PMOIndia) August 26, 2018
Committed to safeguarding the rights of SC and ST communities. #MannKiBaat pic.twitter.com/FRtHyrwbGj
— PMO India (@PMOIndia) August 26, 2018
Our focus remains the empowerment of women. #MannKiBaat pic.twitter.com/uWIPAEiuoo
— PMO India (@PMOIndia) August 26, 2018
The eyes of the nation are on Jakarta.
— PMO India (@PMOIndia) August 26, 2018
We are proud of the medal winners in the 2018 Asian Games and wish those whose events are left the very best: PM @narendramodi #MannKiBaat pic.twitter.com/xnPF1umS3d
I once again urge the people of India to focus on fitness, says PM @narendramodi. #MannKiBaat pic.twitter.com/vJbfzmVRlo
— PMO India (@PMOIndia) August 26, 2018
During #MannKiBaat, PM @narendramodi greetings the community of engineers and lauds their efforts towards nation building. #MannKiBaat pic.twitter.com/NazedTZtE2
— PMO India (@PMOIndia) August 26, 2018
During #MannKiBaat, PM @narendramodi greetings the community of engineers and lauds their efforts towards nation building. #MannKiBaat pic.twitter.com/NazedTZtE2
— PMO India (@PMOIndia) August 26, 2018