ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧಿಕೃತ ಅಂತರ್ಜಾಲ ತಾಣ www.pmindia.gov.in ನ ಅಸ್ಸಾಮಿ ಮತ್ತು ಮಣಿಪುರಿ ಭಾಷೆಗಳ ಆವೃತ್ತಿಗಳನ್ನು ಇಂದು ಉದ್ಘಾಟಿಸಲಾಗಿದೆ. ಈ ಎರಡು ರಾಜ್ಯಗಳ ಜನರ ಮನವಿಯ ಮೇರೆಗೆ ಈ ಅಂತರ್ಜಾಲ ತಾಣವನ್ನು ಈಗ ಅಸ್ಸಾಮಿ ಮತ್ತು ಮಣಿಪುರಿ ಭಾಷೆಯಲ್ಲಿ ನೋಡಲು ಅವಕಾಶ ಕಲ್ಪಿಸಲಾಗಿದೆ.
ಇಂದು ಎರಡು ಭಾಷೆಗಳ ಆವೃತ್ತಿ ಉದ್ಘಾಟನೆಯೊಂದಿಗೆ PMINDIA ಅಂತರ್ಜಾಲ ತಾಣ 11 ಪ್ರಾದೇಶಿಕ ಭಾಷೆಯಲ್ಲಿ ಅಂದರೆ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲೆಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು ಮತ್ತು ತೆಲುಗಿನ ಜೊತೆಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲೂ ಲಭ್ಯವಾದಂತಾಗಿದೆ.
ಈ ಹನ್ನೊಂದು ಪ್ರಾದೇಶಿಕ ಭಾಷೆಯ ವೆಬ್ ತಾಣಗಳನ್ನು ಈ ಕೆಳಗಿನ ಲಿಂಕ್ ಮೂಲಕ ತೆರೆಯಬಹುದಾಗಿದೆ:
Assamese: https://www.pmindia.gov.in/asm/
Bengali: https://www.pmindia.gov.in/bn/
Gujarati: https://www.pmindia.gov.in/gu/
Kannada: https://www.pmindia.gov.in/kn/
Marathi: https://www.pmindia.gov.in/mr/
Malayalam: https://www.pmindia.gov.in/ml/
Manipuri: https://www.pmindia.gov.in/mni/
Odia: https://www.pmindia.gov.in/ory/
Punjabi: https://www.pmindia.gov.in/pa/
Tamil: https://www.pmindia.gov.in/ta/
Telugu: https://www.pmindia.gov.in/te/
ಈ ಉಪಕ್ರಮವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನರನ್ನು ತಲುಪುವ ಮತ್ತು ಅವರೊಂದಿಗೆ ಅವರದೇ ಭಾಷೆಯಲ್ಲಿ ಸಂಪರ್ಕ ಸಾಧಿಸುವ ಪ್ರಯತ್ನದ ಭಾಗವಾಗಿದೆ. ಇದು ದೇಶದ ಎಲ್ಲ ಭಾಗಗಳ ಜನರೊಂದಿಗೆ ಅವರ ಕಲ್ಯಾಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತಂತೆ ಪ್ರಧಾನಮಂತ್ರಿಯವರೊಂದಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ