ಲಾವೋ ಪಿಡಿಆರ್ ನ ವಿಯೆಂಟಿಯಾನ್ ನಲ್ಲಿ 2024ರ ಅಕ್ಟೋಬರ್ 10 ರಂದು ನಡೆದ 21ನೇ ಆಸಿಯಾನ್-ಭಾರತ ಶೃಂಗಸಭೆಯ ಸಂದರ್ಭದಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯಾನ್) ಮತ್ತು ಭಾರತ ಗಣರಾಜ್ಯದ ಸದಸ್ಯ ರಾಷ್ಟ್ರಗಳಾದ ನಾವು;

ಆಸಿಯಾನ್-ಭಾರತ ಸ್ಮರಣಾರ್ಥ ಶೃಂಗಸಭೆಯ ವಿಷನ್ ಸ್ಟೇಟ್ಮೆಂಟ್ (2012), ಆಸಿಯಾನ್-ಭಾರತ ಸಂವಾದ ಸಂಬಂಧಗಳ 25ನೇ ವಾರ್ಷಿಕೋತ್ಸವದ ಅಂಗವಾಗಿ ಆಸಿಯಾನ್-ಭಾರತ ಸ್ಮರಣಾರ್ಥ ಶೃಂಗಸಭೆಯ ದಿಲ್ಲಿ ಘೋಷಣೆ (2018), ಸೇರಿದಂತೆ 1992 ರಲ್ಲಿ ಸ್ಥಾಪನೆಯಾದಾಗಿನಿಂದ ಆಸಿಯಾನ್-ಭಾರತ ಸಂವಾದ ಸಂಬಂಧಗಳನ್ನು ಮುನ್ನಡೆಸುತ್ತಿರುವ ಮೂಲಭೂತ ತತ್ವಗಳು, ಹಂಚಿಕೆಯ ಮೌಲ್ಯಗಳು ಮತ್ತು ಮಾನದಂಡಗಳಿಂದ ನಿರ್ದೇಶಿಸಲ್ಪಟ್ಟ ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಉತ್ತೇಜಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.  ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಇಂಡೋ-ಪೆಸಿಫಿಕ್ ಕುರಿತ ಆಸಿಯಾನ್ ದೃಷ್ಟಿಕೋನದ ಸಹಕಾರ ಕುರಿತ ಆಸಿಯಾನ್-ಭಾರತ ಜಂಟಿ ಹೇಳಿಕೆ (2021), ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಜಂಟಿ ಹೇಳಿಕೆ (2022), ಕಡಲ ಸಹಕಾರದ ಆಸಿಯಾನ್-ಭಾರತ ಜಂಟಿ ಹೇಳಿಕೆ (2023) ಮತ್ತು ಬಿಕ್ಕಟ್ಟುಗಳಿಗೆ ಪ್ರತಿಕ್ರಿಯೆಯಾಗಿ ಆಹಾರ ಭದ್ರತೆ ಹಾಗು  ಪೌಷ್ಠಿಕಾಂಶವನ್ನು ಬಲಪಡಿಸುವ ಆಸಿಯಾನ್-ಭಾರತ ಜಂಟಿ ನಾಯಕರ ಹೇಳಿಕೆ (2023)ಗೆ ಬದ್ಧತೆಯನ್ನೂ ಪುನರುಚ್ಚರಿಸುತ್ತೇವೆ.

ಡಿಜಿಟಲ್ ರೂಪಾಂತರವನ್ನು/ಪರಿವರ್ತನೆಯನ್ನು ತ್ವರಿತಗೊಳಿಸುವಲ್ಲಿ ಮತ್ತು ಸಾರ್ವಜನಿಕ ಸೇವಾ ವಿತರಣೆಯಲ್ಲಿ ಎಲ್ಲರ ಒಳಗೊಳ್ಳುವಿಕೆ, ದಕ್ಷತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ (ಡಿಪಿಐ) ಮಹತ್ವದ ಪಾತ್ರವನ್ನು ಗುರುತಿಸುತ್ತೇವೆ; ವಿವಿಧ ದೇಶೀಯ ಮತ್ತು ಅಂತರರಾಷ್ಟ್ರೀಯ ಸಂದರ್ಭಗಳನ್ನು ಗಣನೆಗೆ ತೆಗೆದುಕೊಂಡು ಭೌಗೋಳಿಕವಾಗಿ ವ್ಯಕ್ತಿಗಳು, ಸಮುದಾಯಗಳು, ಕೈಗಾರಿಕೆಗಳು, ಸಂಸ್ಥೆಗಳು ಮತ್ತು ದೇಶಗಳನ್ನು ಸಂಪರ್ಕಿಸುವುದು/ಜೋಡಿಸುವುದರ ಮಹತ್ವವನ್ನೂ ಮನಗಂಡಿದ್ದೇವೆ;

ಈ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಡಿಜಿಟಲ್ ವಿಭಜನೆಗಳನ್ನು/ಕಂದಕಗಳನ್ನು ನಿವಾರಿಸಲು ತಂತ್ರಜ್ಞಾನವು ತ್ವರಿತ ಪರಿವರ್ತನೆಯನ್ನು ಶಕ್ತಗೊಳಿಸುತ್ತದೆ ಮತ್ತು ಪ್ರದೇಶದ ಆರ್ಥಿಕ ಏಕೀಕರಣವನ್ನು ಉತ್ತೇಜಿಸುವಾಗ ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಯ ಪ್ರಗತಿಯನ್ನು ವೇಗಗೊಳಿಸುತ್ತದೆ ಎಂಬುದನ್ನು ಗುರುತಿಸುತ್ತೇವೆ;

ಆಸಿಯಾನ್ ಡಿಜಿಟಲ್ ಮಾಸ್ಟರ್ ಪ್ಲ್ಯಾನ್ (ಮಹಾಯೋಜನೆ) 2025 (ಎಡಿಎಂ, 2025) ಅನುಷ್ಠಾನಕ್ಕೆ ಭಾರತ ನೀಡಿದ ಕೊಡುಗೆ ಮತ್ತು ಜ್ಞಾನ ಹಂಚಿಕೆ ಮತ್ತು ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳು ಮತ್ತು ಸಿಎಲ್ ಎಂವಿ (ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್ ಮತ್ತು ವಿಯೆಟ್ನಾಂ) ದೇಶಗಳಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಹಾಗು ತರಬೇತಿಯಲ್ಲಿ ಶ್ರೇಷ್ಠತೆಯ ಕೇಂದ್ರಗಳ ಸ್ಥಾಪನೆ ಸೇರಿದಂತೆ ಸತತ ಆಸಿಯಾನ್-ಭಾರತ ಡಿಜಿಟಲ್ ಕಾರ್ಯ ಯೋಜನೆಗಳಲ್ಲಿ ಸಹಕಾರ ಚಟುವಟಿಕೆಗಳ ಗಮನಾರ್ಹ ಸಾಧನೆಗಳನ್ನು ಶ್ಲಾಘಿಸುತ್ತೇವೆ;

ಗಣನೀಯ ಸಾಮಾಜಿಕ ಮತ್ತು ಆರ್ಥಿಕ ಪ್ರಯೋಜನಗಳಿಗೆ ಕಾರಣವಾದ ಯಶಸ್ವಿ ಡಿಪಿಐ ಉಪಕ್ರಮಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭಾರತ ವಹಿಸಿದ ನಾಯಕತ್ವ ಮತ್ತು ಗಮನಾರ್ಹ ಪ್ರಗತಿಯನ್ನು ಗುರುತಿಸುತ್ತೇವೆ;

ಆಸಿಯಾನ್ ಸಮುದಾಯ ದೃಷ್ಟಿಕೋನ 2045 ರ ಸಾಮಾನ್ಯ ಗುರಿಗಳಿಗೆ ಅನುಗುಣವಾಗಿ 2030 ರ ವೇಳೆಗೆ ಡಿಜಿಟಲ್ ಪ್ರಗತಿಯ ಮುಂದಿನ ಹಂತಕ್ಕೆ ಅಡೆ-ತಡೆ ರಹಿತ ಪರಿವರ್ತನೆಗೆ ಅನುಕೂಲವಾಗುವಂತೆ ಆಸಿಯಾನ್ ನಾದ್ಯಂತ ಡಿಜಿಟಲ್ ರೂಪಾಂತರವನ್ನು ತ್ವರಿತಗೊಳಿಸುವ ಗುರಿಯನ್ನು ಹೊಂದಿರುವ ಎಡಿಎಂ 2025 ರ ಸಾಧನೆಗಳನ್ನು ಅವಲಂಬಿಸಿ ಆಸಿಯಾನ್ ಡಿಜಿಟಲ್ ಮಾಸ್ಟರ್ ಪ್ಲ್ಯಾನ್ 2026-2030 (ಎಡಿಎಂ 2030) ಅಭಿವೃದ್ಧಿಯನ್ನು ಅಂಗೀಕರಿಸುತ್ತೇವೆ.

ಆಸಿಯಾನ್ ರಾಷ್ಟ್ರಗಳಲ್ಲಿ ಡಿಜಿಟಲ್ ರೂಪಾಂತರದಲ್ಲಿ ಸಹಕಾರವನ್ನು ಕೇಂದ್ರೀಕರಿಸಿ ಡಿಜಿಟಲ್ ಭವಿಷ್ಯಕ್ಕಾಗಿ ಆಸಿಯಾನ್-ಭಾರತ ನಿಧಿಯನ್ನು ಸ್ಥಾಪಿಸಿದ್ದಕ್ಕಾಗಿ ಭಾರತವನ್ನು ಶ್ಲಾಘಿಸುತ್ತೇವೆ;

ಈ ಕೆಳಗಿನವುಗಳಲ್ಲಿ ಸಹಕಾರವನ್ನು ಬಲಪಡಿಸುವುದನ್ನು ಈ ಮೂಲಕ ಘೋಷಿಸುತ್ತೇವೆ:

1. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ

1.1 ಆಸಿಯಾನ್ ಸದಸ್ಯ ರಾಷ್ಟ್ರಗಳು ಮತ್ತು ಭಾರತದ ಪರಸ್ಪರ ಒಪ್ಪಿಗೆಯೊಂದಿಗೆ, ವಲಯದಾದ್ಯಂತ ಡಿಪಿಐ ಅಭಿವೃದ್ಧಿಯನ್ನು ಉತ್ತೇಜಿಸಲು ವಿವಿಧ ರೀತಿಯ ವೇದಿಕೆಗಳನ್ನು ಬಳಸುವ ಮೂಲಕ ಡಿಪಿಐ ಅಭಿವೃದ್ಧಿ, ಅನುಷ್ಠಾನ ಮತ್ತು ಆಡಳಿತದಲ್ಲಿ ಜ್ಞಾನ, ಅನುಭವಗಳು ಮತ್ತು ಉತ್ತಮ ಅಭ್ಯಾಸಗಳನ್ನು/ಪದ್ಧತಿಗಳನ್ನು ಹಂಚಿಕೊಳ್ಳಲು ಸಹಯೋಗದ ಅವಕಾಶಗಳನ್ನು ನಾವು ಅಂಗೀಕರಿಸುತ್ತೇವೆ;

1.2 ಪ್ರಾದೇಶಿಕ ಅಭಿವೃದ್ಧಿ ಮತ್ತು ಏಕೀಕರಣಕ್ಕಾಗಿ ಡಿಪಿಐ ಬಳಸಿಕೊಳ್ಳುವ ಜಂಟಿ ಉಪಕ್ರಮಗಳು ಮತ್ತು ಯೋಜನೆಗಳಿಗೆ ಸಂಭಾವ್ಯ ಅವಕಾಶಗಳನ್ನು ನಾವು ಗುರುತಿಸಿದ್ದೇವೆ;

1.3 ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಹವಾಮಾನ ಕ್ರಮದಂತಹ ವೈವಿಧ್ಯಮಯ ಸವಾಲುಗಳನ್ನು ಎದುರಿಸಲು ಆ ಕ್ಷೇತ್ರಗಳಲ್ಲಿ ಡಿಪಿಐ ಬಳಸಿಕೊಳ್ಳಲು ನಾವು ಸಹಯೋಗವನ್ನು ಅನ್ವೇಷಿಸುತ್ತೇವೆ.

2. ಹಣಕಾಸು ತಂತ್ರಜ್ಞಾನ

2.1 ಹಣಕಾಸು ತಂತ್ರಜ್ಞಾನ (ಫಿನ್ ಟೆಕ್) ಮತ್ತು ನಾವೀನ್ಯತೆಗಳು ದ್ವಿಪಕ್ಷೀಯ ಆರ್ಥಿಕ ಪಾಲುದಾರಿಕೆಗೆ ಪ್ರಮುಖ ಚಾಲಕ ಶಕ್ತಿಗಳಾಗಿವೆ ಎಂಬುದನ್ನು ನಾವು ಗುರುತಿಸಿದ್ದೇವೆ:

2.2 ನಾವು ಈ ಗುರಿಗಳನ್ನು ಹೊಂದಿದ್ದೇವೆ:

ಎ. ಭಾರತ ಮತ್ತು ಆಸಿಯಾನ್ ನಲ್ಲಿ ಲಭ್ಯವಿರುವ ಡಿಜಿಟಲ್ ಸೇವಾ ವಿತರಣೆಯನ್ನು ಸಕ್ರಿಯಗೊಳಿಸುವ ನವೀನ ಡಿಜಿಟಲ್ ಪರಿಹಾರಗಳ ಮೂಲಕ ಆಸಿಯಾನ್ ಮತ್ತು ಭಾರತದ ಪಾವತಿ ವ್ಯವಸ್ಥೆಗಳ ನಡುವಿನ ಗಡಿಯಾಚೆಗಿನ ಸಂಪರ್ಕಗಳ ಸಂಭಾವ್ಯ ಸಹಯೋಗವನ್ನು ಅನ್ವೇಷಿಸುವುದು.

ಬಿ. ಫಿನ್ಟೆಕ್ ಆವಿಷ್ಕಾರಗಳಿಗಾಗಿ ರಾಷ್ಟ್ರೀಯ ಏಜೆನ್ಸಿಗಳ ನಡುವಿನ ಸಹಭಾಗಿತ್ವದ ಅನ್ವೇಷಣೆ ಮತ್ತು ಡಿಜಿಟಲ್ ಹಣಕಾಸು ಪರಿಹಾರಗಳು ಸೇರಿದಂತೆ ಡಿಜಿಟಲ್ ಪರಿಹಾರಗಳನ್ನು ಬೆಂಬಲಿಸುವುದು.

3. ಸೈಬರ್ ಭದ್ರತೆ

3.1 ಸೈಬರ್ ಭದ್ರತೆಯಲ್ಲಿನ ಸಹಕಾರವು ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ನಿರ್ಣಾಯಕ ಭಾಗವಾಗಿದೆ ಎಂದು ನಾವು ಗುರುತಿಸಿದ್ದೇವೆ.

3.2 ಆಸಿಯಾನ್ ಇಂಡಿಯಾ ಟ್ರ್ಯಾಕ್ 1 ಸೈಬರ್ ನೀತಿ ಸಂವಾದದ ಸ್ಥಾಪನೆಯನ್ನು ನಾವು ಸ್ವಾಗತಿಸುತ್ತೇವೆ ಮತ್ತು ಈ ವರ್ಷದ ಅಕ್ಟೋಬರ್ ನಲ್ಲಿ ಅದರ ಮೊದಲ ಸಭೆಯನ್ನು ಎದುರು ನೋಡುತ್ತಿದ್ದೇವೆ;

3.3 ಡಿಜಿಟಲ್ ಆರ್ಥಿಕತೆಯನ್ನು ಬೆಂಬಲಿಸಲು ನಮ್ಮ ಸೈಬರ್ ಭದ್ರತಾ ಸಹಕಾರವನ್ನು ವಿಸ್ತರಿಸಲು ನಾವು ಉದ್ದೇಶಿಸಿದ್ದೇವೆ. ನಾವು ಕ್ರಮೇಣ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯತ್ತ ಸಾಗುತ್ತಿರುವಾಗ, ಡಿಜಿಟಲ್ ಮೂಲಸೌಕರ್ಯ ಮತ್ತು ಸೇವೆಗಳ ಸುರಕ್ಷತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ;

4. ಕೃತಕ ಬುದ್ಧಿಮತ್ತೆ (ಎಐ)

4.1 ಎಐ ಪ್ರಗತಿಯ ಸಾಮರ್ಥ್ಯವನ್ನು ಬಳಸಿಕೊಳ್ಳಲು ಎಐ ತಂತ್ರಜ್ಞಾನಗಳು ಮತ್ತು ಅನ್ವಯಿಕೆಗಳನ್ನು ಪರಿಣಾಮಕಾರಿಯಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸಿಕೊಳ್ಳಲು ಅಗತ್ಯ ಜ್ಞಾನ, ಕೌಶಲ್ಯಗಳು, ಮೂಲಸೌಕರ್ಯ, ಅಪಾಯ ನಿರ್ವಹಣಾ ಚೌಕಟ್ಟುಗಳು ಮತ್ತು ನೀತಿಗಳ ಅಭಿವೃದ್ಧಿಗೆ ಸಹಯೋಗವನ್ನು ನಾವು ಬೆಂಬಲಿಸುತ್ತೇವೆ.

4.2 ಎಐ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಕಂಪ್ಯೂಟಿಂಗ್, ಡೇಟಾ-ಸೆಟ್ ಗಳು ಮತ್ತು ಅಡಿಪಾಯ ಮಾದರಿಗಳು ಸೇರಿದಂತೆ ಎಐ ತಂತ್ರಜ್ಞಾನಗಳಿಗೆ ಪ್ರವೇಶವು ಪ್ರಮುಖವಾಗಿದೆ ಎಂದು ನಾವು ಗುರುತಿಸುತ್ತೇವೆ. ಆದ್ದರಿಂದ, ಆಯಾ ರಾಷ್ಟ್ರೀಯ ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಸಾಮಾಜಿಕ ಒಳಿತಿಗಾಗಿ ಎಐ ಸಂಪನ್ಮೂಲಗಳು ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ  (ಪ್ರಜಾಪ್ರಭುತ್ವೀಕರಣ) ಮಾಡಲು ನಾವು ಸಹಕರಿಸುತ್ತೇವೆ.

4.3 ಎಐ ಉದ್ಯೋಗ ಭೂದೃಶ್ಯಗಳನ್ನು ವೇಗವಾಗಿ ಬದಲಾಯಿಸುತ್ತಿದೆ ಮತ್ತು ಕೆಲಸಗಾರರ ಕೌಶಲ್ಯಗಳನ್ನು ಮೇಲ್ದರ್ಜೆಗೇರಿಸುವ ಹಾಗು  ಅವರಿಗೆ ಹೊಸ ಕೌಶಲ್ಯಗಳನ್ನು  ಒದಗಿಸುವ  ಅವಶ್ಯಕತೆಯಿದೆ ಎಂದು ನಾವು ಗುರುತಿಸುತ್ತೇವೆ. ಎಐ ಶಿಕ್ಷಣ ಉಪಕ್ರಮಗಳಲ್ಲಿ ಸಾಮರ್ಥ್ಯ ವರ್ಧನೆಯಲ್ಲಿ ಸಹಯೋಗವನ್ನು ನಾವು ಬೆಂಬಲಿಸುತ್ತೇವೆ, ಎ.ಐ.-ಕೇಂದ್ರಿತ ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುತ್ತೇವೆ ಮತ್ತು ಭವಿಷ್ಯದ ಉದ್ಯೋಗ ಮಾರುಕಟ್ಟೆಗೆ ಕಾರ್ಮಿಕ ಪಡೆಯನ್ನು ಸಿದ್ಧಪಡಿಸಲು ಜ್ಞಾನ ವಿನಿಮಯಕ್ಕಾಗಿ ವೇದಿಕೆಗಳನ್ನು ರಚಿಸುತ್ತೇವೆ.

4.4 ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳಲ್ಲಿ ವಿಶ್ವಾಸಾರ್ಹತೆಯನ್ನು ಉತ್ತೇಜಿಸಲು ನ್ಯಾಯಸಮ್ಮತತೆ, ದೃಢತೆ, ಸಮಾನ ಪ್ರವೇಶ ಮತ್ತು ಜವಾಬ್ದಾರಿಯುತ ಎಐನ ಇತರ ಪರಸ್ಪರ ಒಪ್ಪಿತ ತತ್ವಗಳ ಸಾಧನೆಯನ್ನು ಬೆಂಬಲಿಸಲು ಮತ್ತು ನಿರ್ಣಯಿಸಲು ಆಡಳಿತ, ಮಾನದಂಡಗಳು ಮತ್ತು ಸಾಧನಗಳ ಬಗ್ಗೆ ಅಧ್ಯಯನಗಳನ್ನು ಅಭಿವೃದ್ಧಿಪಡಿಸಲು ಸಹಯೋಗವನ್ನು ನಾವು ಸ್ವಾಗತಿಸುತ್ತೇವೆ.

5. ಸಾಮರ್ಥ್ಯ ವರ್ಧನೆ ಮತ್ತು ಜ್ಞಾನ ಹಂಚಿಕೆ

5.1. ಆಸಿಯಾನ್ ಇಂಡಿಯಾ ಡಿಜಿಟಲ್ ಸಚಿವರ ಸಭೆ ಸೇರಿದಂತೆ ಅಸ್ತಿತ್ವದಲ್ಲಿರುವ ಚೌಕಟ್ಟುಗಳನ್ನು ನಿಯಮಿತ ವಿನಿಮಯಗಳು, ಕಾರ್ಯಾಗಾರಗಳು, ಸೆಮಿನಾರ್ ಗಳು, ತರಬೇತಿ ಕಾರ್ಯಕ್ರಮಗಳು ಮತ್ತು ಡಿಜಿಟಲ್ ರೂಪಾಂತರವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿರುವ ಸಂಬಂಧಿತ ಸೂಕ್ತ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುವ ಇತರ ಸಾಮರ್ಥ್ಯ ವರ್ಧನೆ ಕಾರ್ಯಗಳಿಗಾಗಿ  ನಾವು ಬಳಸುತ್ತೇವೆ;

5.2. ಪರಸ್ಪರ ಅಧ್ಯಯನ ಮತ್ತು ನಮ್ಮ ಅಗತ್ಯಗಳಿಗೆ ತಕ್ಕಂತೆ ಹೊಂದಿಕೊಳ್ಳಲು ಡಿಪಿಐ ಸೇರಿದಂತೆ ನಮ್ಮ ಆಯಾ ಡಿಜಿಟಲ್ ಪರಿಹಾರಗಳ ಬಗ್ಗೆ ಜ್ಞಾನವನ್ನು ಹಂಚಿಕೊಳ್ಳುವುದನ್ನು ನಾವು ಬೆಂಬಲಿಸುತ್ತೇವೆ.

6. ಸುಸ್ಥಿರ ಹಣಕಾಸು ಮತ್ತು ಹೂಡಿಕೆ

6.1. ಆರಂಭದಲ್ಲಿ ಈ ಚಟುವಟಿಕೆಗಳಿಗೆ ಈ ವರ್ಷ ಪ್ರಾರಂಭಿಸಲಾಗುತ್ತಿರುವ ಆಸಿಯಾನ್ ಇಂಡಿಯಾ ಫಂಡ್ ಫಾರ್ ಡಿಜಿಟಲ್ ಫ್ಯೂಚರ್ ಅಡಿಯಲ್ಲಿ ಹಣಕಾಸು ಒದಗಿಸಲಾಗುವುದಾದರೂ , ಸಾರ್ವಜನಿಕ-ಖಾಸಗಿ ಸಹಭಾಗಿತ್ವ, ಅಂತರರಾಷ್ಟ್ರೀಯ ಧನಸಹಾಯ ಮತ್ತು ನವೀನ ಹಣಕಾಸು ಮಾದರಿಗಳು ಸೇರಿದಂತೆ ಡಿಜಿಟಲ್ ಉಪಕ್ರಮಗಳಿಗೆ ಹಣಕಾಸು ಒದಗಿಸುವ ಕಾರ್ಯವಿಧಾನಗಳನ್ನು ನಾವು ಅನ್ವೇಷಿಸುತ್ತೇವೆ.

7. ಅನುಷ್ಠಾನ ಕಾರ್ಯವಿಧಾನ

7.1. ಡಿಜಿಟಲ್ ರೂಪಾಂತರದ/ಪರಿವರ್ತನೆಯ  ಪ್ರಗತಿಗಾಗಿ ಆಸಿಯಾನ್ ಮತ್ತು ಭಾರತದ ನಡುವೆ ಸಹಕಾರವನ್ನು ಖಚಿತಪಡಿಸಿಕೊಳ್ಳಲು, ಈ ಜಂಟಿ ಹೇಳಿಕೆಯನ್ನು ಅನುಸರಿಸಲು ಮತ್ತು ಕಾರ್ಯಗತಗೊಳಿಸಲು ಆಸಿಯಾನ್-ಭಾರತದ ಸಂಬಂಧಿತ ಸಂಸ್ಥೆಗಳಿಗೆ ಕಾರ್ಯ ಹಂಚಿಕೆ.

 

  • Mohan Singh Rawat Miyala December 19, 2024

    जय श्री राम
  • Vivek Kumar Gupta December 18, 2024

    नमो ..🙏🙏🙏🙏🙏
  • Vivek Kumar Gupta December 18, 2024

    नमो .........................🙏🙏🙏🙏🙏
  • JYOTI KUMAR SINGH December 09, 2024

    🙏
  • Chandrabhushan Mishra Sonbhadra November 15, 2024

    2
  • Avdhesh Saraswat November 04, 2024

    HAR BAAR MODI SARKAR
  • Ratna Gupta November 02, 2024

    जय श्री राम
  • Chandrabhushan Mishra Sonbhadra November 01, 2024

    k
  • Chandrabhushan Mishra Sonbhadra November 01, 2024

    j
  • ram Sagar pandey October 30, 2024

    🌹🌹🙏🙏🌹🌹जय श्रीकृष्णा राधे राधे 🌹🙏🏻🌹जय श्रीराम 🙏💐🌹जय माँ विन्ध्यवासिनी👏🌹💐🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹जय माता दी 🚩🙏🙏
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves $2.7 billion outlay to locally make electronics components

Media Coverage

Cabinet approves $2.7 billion outlay to locally make electronics components
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಮಾರ್ಚ್ 2025
March 29, 2025

Citizens Appreciate Promises Kept: PM Modi’s Blueprint for Progress