ಜಪಾನಿನ ಮಾಜಿ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಯೋಶಿಹಿಡೆ ಸುಗಾ ಅವರಿಂದ ಪ್ರಧಾನ ಮಂತ್ರಿಯವರ ಭೇಟಿ
May 24th, 01:30 pm
ಜಪಾನಿನ ಮಾಜಿ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಯೋಶಿಹಿಡೆ ಸುಗಾ ಅವರು 2022 ರ ಮೇ 24 ರಂದು ಟೋಕಿಯೋದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.ವಾಸ್ತವಾಂಶ: ಕ್ವಾಡ್ ನಾಯಕರ ಶೃಂಗಸಭೆ
September 25th, 11:53 am
ಸೆಪ್ಟೆಂಬರ್ 24ರಂದು ಅಧ್ಯಕ್ಷ ಬಿಡೆನ್ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಮಂತ್ರಿ ಯೋಶಿಹಿಡೆ ಸುಗಾ ಅವರಿಗೆ ಶ್ವೇತಭವನದಲ್ಲಿ ಕ್ವಾಡ್ ನ ನಾಯಕರು ಸ್ವಯಂ ಪಾಲ್ಗೊಂಡಿದ್ದ ಪ್ರಪ್ರಥಮ ಶೃಂಗಸಭೆಗೆ ಆತಿಥ್ಯ ನೀಡಿದ್ದರು. ನಾಯಕರು 21ನೇ ಶತಮಾನದ ಸವಾಲುಗಳ ಮೇಲೆ ಪ್ರಾಯೋಗಿಕ ಸಹಕಾರ ಮುಂದುವರಿಸುವ; ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಅವುಗಳು ಲಭ್ಯವಾಗುವಂತೆ ಮಾಡುವುದೂ ಸೇರಿದಂತೆ ಕೋವಿಡ್-19 ಸಾಂಕ್ರಾಮಿಕವನ್ನು ಕೊನೆಗಾಣಿಸುವ; ಅತ್ಯುನ್ನತ ಗುಣಮಟ್ಟದ ಮೂಲಸೌಕರ್ಯವನ್ನು ಉತ್ತೇಜಿಸುವ; ಹವಾಮಾನ ಬಿಕ್ಕಟ್ಟನ್ನು ನಿಗ್ರಹಿಸುವ; ಹೊರಹೊಮ್ಮುವ ತಂತ್ರಜ್ಞಾನಗಳು, ಬಾಹ್ಯಾಕಾಶ ಮತ್ತು ಸೈಬರ್ ಭದ್ರತೆಯಲ್ಲಿ ಸಹಯೋಗ; ಮತ್ತು ನಮ್ಮ ಎಲ್ಲಾ ದೇಶಗಳಲ್ಲಿ ಮುಂದಿನ ಪೀಳಿಗೆಯ ಪ್ರತಿಭೆಗಳನ್ನು ಬೆಳೆಸಲು ನಮ್ಮ ಬಾಂಧವ್ಯಗಳನ್ನು ಬಲಗೊಳಿಸುವ ಮಹತ್ವಾಕಾಂಕ್ಷೆಯ ಉಪಕ್ರಮಗಳನ್ನು ಮುಂದಿಟ್ಟರು.ಕ್ವಾಡ್ ನಾಯಕರ ಜಂಟಿ ಹೇಳಿಕೆ
September 25th, 11:41 am
ಕ್ವಾಡ್ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕದ ನಾಯಕರಾದ ನಾವು ಇದೇ ಮೊದಲ ಬಾರಿಗೆ ಮುಖಾಮುಖಿ ಭೇಟಿಯಾಗಿದ್ದೇವೆ. ಈ ಐತಿಹಾಸಿಕ ಸಂದರ್ಭದಲ್ಲಿ ಪಾಲುದಾರಿಕೆಗೆ ನಾವು ಬದ್ಧವೆಂದು ಘೋಷಿಸುತ್ತಿದ್ದೇವೆ ಮತ್ತು ಮುಕ್ತ ಮತ್ತು ಸ್ವತಂತ್ರ ಇಂಡೋ-ಪೆಸಿಫಿಕ್ ನ ಎಲ್ಲರನ್ನೊಳಗೊಂಡ ಸ್ಥಿತಿ ಸ್ಥಾಪಕತ್ವ, ಸುರಕ್ಷತೆ ಮತ್ತು ಸಮೃದ್ಧಿಗೆ ಸಮಾನ ಆದ್ಯತೆ ನೀಡುತ್ತಿದ್ದೇವೆ. ಆರು ತಿಂಗಳ ಹಿಂದೆಯಷ್ಟೇ ನಮ್ಮ ಹಿಂದಿನ ಸಭೆ ನಡೆದಿತ್ತು. ಮಾರ್ಚ್ ನಿಂದೀಚೆಗೆ ಕೋವಿಡ್-19 ಸಾಂಕ್ರಾಮಿಕ ಸಾಕಷ್ಟು ಜಾಗತಿಕ ಸಂಕಷ್ಟವನ್ನು ಮುಂದುವರಿಸಿದೆ. ಹವಾಮಾನ ಬಿಕ್ಕಟ್ಟು ವೃದ್ಧಿಯಾಗಿದೆ ಮತ್ತು ಪ್ರಾದೇಶಿಕ ಸುರಕ್ಷತೆ ಮತ್ತಷ್ಟು ಸಂಕೀರ್ಣವಾಗಿದೆ. ವೈಯಕ್ತಿಕವಾಗಿ ನಮ್ಮೆಲ್ಲಾ ರಾಷ್ಟ್ರಗಳು ಪರೀಕ್ಷೆಗಳನ್ನು ಎದುರಿಸುತ್ತಿವೆ ಮತ್ತು ಒಟ್ಟಾಗಿ ಹೋರಾಡುತ್ತಿವೆ. ಆದರೆ ನಮ್ಮ ಸಹಕಾರದಲ್ಲಿ ಕಿಂಚಿತ್ತೂ ಬದಲಾಗಿಲ್ಲ.ಭಾರತ-ಅಮೇರಿಕಾ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ಮಾತುಗಳು
September 24th, 11:48 pm
ಮಾನ್ಯ ಅಧ್ಯಕ್ಷರೇ, 2016 ರಲ್ಲಿ ಮತ್ತು ಅದಕ್ಕೂ ಮುನ್ನ 2014 ರಲ್ಲಿ ನಾವು ವಿವರವಾಗಿ ಚರ್ಚೆ ನಡೆಸುವ ಅವಕಾಶ ಪಡೆದಿದ್ದೆವು. ಆ ಸಮಯದಲ್ಲಿ ನೀವು ಭಾರತ ಮತ್ತು ಅಮೇರಿಕಾ ನಡುವಿನ ಸಂಬಂಧಗಳ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ರೂಪಿಸಿದ್ದಿರಿ. ನೀವು ಅದನ್ನು ಬಹಳ ವಿವರವಾಗಿ ಸ್ಪಷ್ಟಪಡಿಸಿದ್ದಿರಿ ಮತ್ತು ನಿಜವಾಗಿಯೂ ಅದೊಂದು ಸ್ಫೂರ್ತಿದಾಯಕ ದೂರದೃಷ್ಟಿಯಾಗಿತ್ತು. ಇಂದು ಅಧ್ಯಕ್ಷರಾಗಿ ಆ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು, ನೀವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೀರಿ ಮತ್ತು ಆ ಕುರಿತು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ಅದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.ಜಪಾನ್‌ನ ಪ್ರಧಾನಮಂತ್ರಿ ಯೋಶಿಹಿದೇ ಸುಗ ಅವರೊಂದಿಗೆ ಪ್ರಧಾನಿ ಮೋದಿ ಫಲಪ್ರದ ಮಾತುಕತೆ ನಡೆಸಿದರು
September 24th, 03:45 am
ಜಪಾನ್‌ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪಿಎಂ ಯೋಶಿಹಿದೇ ಸುಗಾ ಅವರು ವಾಷಿಂಗ್ಟನ್ ಡಿಸಿಯಲ್ಲಿ ಫಲಪ್ರದ ಸಭೆ ನಡೆಸಿದರು. ವ್ಯಾಪಾರ ಮತ್ತು ಸಾಂಸ್ಕೃತಿಕ ಬಾಂಧವ್ಯಕ್ಕೆ ಮತ್ತಷ್ಟು ಉತ್ತೇಜನ ನೀಡುವ ಮಾರ್ಗಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಇಬ್ಬರೂ ನಾಯಕರು ಚರ್ಚೆ ನಡೆಸಿದರು.ಅಮೆರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಪ್ರಧಾನಮಂತ್ರಿಯವರ ನಿರ್ಗಮನ ಹೇಳಿಕೆ
September 22nd, 10:37 am
ಅಮೆರಿಕಾದ ಅಧ್ಯಕ್ಷ ಗೌರವಾನ್ವಿತ ಜೋ ಬೈಡೆನ್ ಅವರ ಆಹ್ವಾನದ ಮೇರೆಗೆ 2021ರ ಸೆಪ್ಟಂಬರ್ 22ರಿಂದ 25ರವರೆಗೆ ಅಮೆರಿಕಾಕ್ಕೆ ಭೇಟಿ ನೀಡುತ್ತಿದ್ದೇನೆ.ಟೋಕಿಯೊ ಒಲಿಂಪಿಕ್ಸ್ ಆಯೋಜಿಸಿರುವ ಜಪಾನ್ ಪ್ರಧಾನ ಮಂತ್ರಿ ಮತ್ತು ಅಲ್ಲಿನ ಜನತೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಶುಭಾಶಯ
July 23rd, 01:17 pm
ಜಪಾನ್ ರಾಜಧಾನಿ ಟೋಕಿಯೊದ ನೂತನ ಸುಸಜ್ಜಿತ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಿರುವ ಜಪಾನ್ ಪ್ರಧಾನ ಮಂತ್ರಿ ಯೊಶಿಹಿದೆ ಸುಗಾ ಅವರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.ಜೆನ್ ಗಾರ್ಡನ್ ಮತ್ತು ಕೈಜೆನ್ ಅಕಾಡೆಮಿ ಭಾರತ-ಜಪಾನ್ ಸಂಬಂಧದ ಸುಲಭ ಮತ್ತು ಆಧುನಿಕತೆಯ ಸಂಕೇತವಾಗಿದೆ: ಪ್ರಧಾನಿ
June 27th, 12:21 pm
ಪಿಎಂ ನರೇಂದ್ರ ಮೋದಿ ಅವರು ಅಹಮದಾಬಾದ್‌ನ ಎಎಂಎದಲ್ಲಿ ಜೆನ್ ಗಾರ್ಡನ್ ಮತ್ತು ಕೈಜೆನ್ ಅಕಾಡೆಮಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ‘ಜೆನ್’ ಮತ್ತು ಭಾರತೀಯ ‘ಧ್ಯಾನ್’ ನಡುವಿನ ಸಾಮ್ಯತೆಯನ್ನು ಸೂಚಿಸಿದ ಪ್ರಧಾನಿ, ಹೊರಗಿನ ಪ್ರಗತಿ ಮತ್ತು ಎರಡು ಸಂಸ್ಕೃತಿಗಳಲ್ಲಿನ ಬೆಳವಣಿಗೆಯೊಂದಿಗೆ ಆಂತರಿಕ ಶಾಂತಿಗೆ ಒತ್ತು ನೀಡಿದರು.ಅಹಮದಾಬಾದ್ ನ ಎಎಂಎ ನಲ್ಲಿನ ಝೆನ್ ಗಾರ್ಡನ್ ಮತ್ತು ಕೈಝೆನ್ ಅಕಾಡೆಮಿ ಉದ್ಘಾಟಿಸಿದ ಪ್ರಧಾನಮಂತ್ರಿ
June 27th, 12:20 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಹಮದಾಬಾದ್ ನ ಎಎಂಎ ನಲ್ಲಿನ ಝೆನ್ ಗಾರ್ಡನ್ ಮತ್ತು ಕೈಝೆನ್ ಅಕಾಡೆಮಿಯನ್ನು ಉದ್ಘಾಟಿಸಿದರು.ಕ್ವಾಡ್ ರಾಷ್ಟ್ರಗಳ ನಾಯಕರ ಮೊದಲ ವರ್ಚುವಲ್ ಶೃಂಗಸಭೆ
March 11th, 11:23 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೊಶಿಹಿದೆ ಸುಗಾ ಮತ್ತು ಅಮೆರಿಕಾ ಅಧ್ಯಕ್ಷ ಜೊಸೆಫ್ ಆರ್. ಸ್ಟಾಲಿನ್ ಅವರೊಂದಿಗೆ 2021ರ ಮಾರ್ಚ್ 12ರಂದು ವರ್ಚುವಲ್ ರೂಪದಲ್ಲಿ ಕ್ವಾಡ್ರಿಲ್ಯಾಟರಲ್ ಚೌಕಟ್ಟಿನಲ್ಲಿ ನಡೆಯಲಿರುವ ನಾಯಕರ ಮೊದಲ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಗೌರವಾನ್ವಿತ ಸುಗಾ ಯೋಶಿಹಿದೆ ನಡುವೆ ದೂರವಾಣಿ ಸಮಾಲೋಚನೆ
March 09th, 08:13 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಗೌರವಾನ್ವಿತ ಸುಗಾ ಯೋಶಿಹಿದೆ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಮಂತ್ರಿ ಘನತೆವೆತ್ತ ಸುಗಾ ಯೋಶಿಹಿಡೆ ನಡುವೆ ದೂರವಾಣಿ ಸಂಭಾಷಣೆ
September 25th, 02:40 pm
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಪಾನ್ ಪ್ರಧಾನಮಂತ್ರಿ ಘನತೆವೆತ್ತ ಸುಗಾ ಯೊಶೋಹಿಡೆ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.ಜಪಾನ್ ಪ್ರಧಾನ ಮಂತ್ರಿಯಾಗಿ ನೇಮಕಗೊಂಡ ಯೋಶಿಹಿದೆ ಸುಗಾ ಅವರಿಗೆ ಪ್ರಧಾನಿ ಅಭಿನಂದನೆ
September 16th, 11:45 am
ಜಪಾನ್ ಪ್ರಧಾನ ಮಂತ್ರಿಯಾಗಿ ನೇಮಕಗೊಂಡ ಯೋಶಿಹಿದೆ ಸುಗಾ ಅವರಿಗೆ ಪ್ರಧಾನಿ ಅಭಿನಂದನೆ