ʻಪ್ರಜಾಪ್ರಭುತ್ವಕ್ಕಾಗಿ ಶೃಂಗಸಭೆʼಯ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿಯವರ ಭಾಷಣದ ಪಠ್ಯಾಂತರ
March 20th, 10:55 pm
ಇನ್ನು ಕೆಲವೇ ವಾರಗಳಲ್ಲಿ ವಿಶ್ವವು ಭಾರತದ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ಸಾಕ್ಷಿಯಾಗಲಿದೆ. ಸುಮಾರು ಒಂದು ಶತಕೋಟಿ ಮತದಾರರು ಮತ ಚಲಾಯಿಸುವ ನಿರೀಕ್ಷೆಯಿದ್ದು, ಇದು ಮಾನವಕುಲದ ಇತಿಹಾಸದಲ್ಲಿ ಅತಿದೊಡ್ಡ ಚುನಾವಣಾ ಪ್ರಕ್ರಿಯೆಯಾಗಿದೆ. ಭಾರತದ ಜನರು ಮತ್ತೊಮ್ಮೆ ಪ್ರಜಾಪ್ರಭುತ್ವದಲ್ಲಿ ತಮ್ಮ ನಂಬಿಕೆಯನ್ನು ದೃಢಪಡಿಸುತ್ತಾರೆ. ಭಾರತವು ಪ್ರಾಚೀನ ಮತ್ತು ಅವಿಚ್ಛಿನ್ನ ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ಹೊಂದಿದೆ. ಇದು ಭಾರತೀಯ ನಾಗರಿಕತೆಯ ಜೀವನಾಡಿಯಾಗಿದೆ. ಒಮ್ಮತ ಸೃಷ್ಟಿ, ಮುಕ್ತ ಸಂವಾದ ಮತ್ತು ಮುಕ್ತ ಚರ್ಚೆ ಭಾರತದ ಇತಿಹಾಸದುದ್ದಕ್ಕೂ ಪ್ರತಿಧ್ವನಿಸಿದೆ. ಅದಕ್ಕಾಗಿಯೇ ನನ್ನ ಸಹ ನಾಗರಿಕರು ಭಾರತವನ್ನು ʻಪ್ರಜಾಪ್ರಭುತ್ವದ ತಾಯಿʼ ಎಂದು ಪರಿಗಣಿಸುತ್ತಾರೆ.ʻಪ್ರಜಾಪ್ರಭುತ್ವಕ್ಕಾಗಿ ಶೃಂಗಸಭೆʼ ಉದ್ದೇಶಿಸಿ ಪ್ರಧಾನಿಮಂತ್ರಿಗಳ ಭಾಷಣ
March 20th, 10:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻಪ್ರಜಾಪ್ರಭುತ್ವಕ್ಕಾಗಿ ಶೃಂಗಸಭೆʼಯನ್ನು ಉದ್ದೇಶಿಸಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ʻಪ್ರಜಾಪ್ರಭುತ್ವಕ್ಕಾಗಿ ಶೃಂಗಸಭೆʼಯನ್ನು ವಿಶ್ವಾದ್ಯಂತ ಪ್ರಜಾಪ್ರಭುತ್ವಗಳಿಗೆ ತಮ್ಮ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಪರಸ್ಪರ ಕಲಿಯಲು ನಿರ್ಣಾಯಕ ವೇದಿಕೆ ಎಂದು ಬಣ್ಣಿಸಿದ ಪ್ರಧಾನಿ, ಪ್ರಜಾಪ್ರಭುತ್ವಕ್ಕೆ ಭಾರತದ ಆಳವಾದ ಬದ್ಧತೆಯನ್ನು ಪುನರುಚ್ಚರಿಸಿದರು. ಭಾರತವು ಪ್ರಾಚೀನ ಮತ್ತು ಅವಿಚ್ಛಿನ್ನ ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ಹೊಂದಿದೆ. ಇದು ಭಾರತೀಯ ನಾಗರಿಕತೆಯ ಜೀವನಾಡಿಯಾಗಿದೆ,ʼʼ ಎಂದು ಹೇಳಿದರು. ಒಮ್ಮತದ ನಿರ್ಮಾಣ, ಮುಕ್ತ ಸಂವಾದ ಮತ್ತು ಮುಕ್ತ ಚರ್ಚೆ ಭಾರತದ ಇತಿಹಾಸದುದ್ದಕ್ಕೂ ಪ್ರತಿಧ್ವನಿಸಿದೆ. ಅದಕ್ಕಾಗಿಯೇ ನನ್ನ ಸಹ ನಾಗರಿಕರು ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಪರಿಗಣಿಸುತ್ತಾರೆ,ʼʼ ಎಂದು ಪ್ರಧಾನಿ ಮೋದಿ ವಿವರಿಸಿದರು.ಭಾರತ ಮತ್ತು ಕೊರಿಯಾ ಗಣರಾಜ್ಯದ ನಡುವಿನ ರಾಜತಾಂತ್ರಿಕ ಸಂಬಂಧಗಳ 50 ವರ್ಷ ತುಂಬಿದ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ
December 10th, 12:23 pm
ಭಾರತ ಮತ್ತು ಕೊರಿಯಾ ಗಣರಾಜ್ಯದ ನಡುವಿನ ರಾಜತಾಂತ್ರಿಕ ಬಾಂಧವ್ಯವನ್ನು ಸ್ಥಾಪಿಸಿ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕೊರಿಯಾ ಗಣರಾಜ್ಯದ ಅಧ್ಯಕ್ಷ ಶ್ರೀ ಯೂನ್ ಸುಕ್ ಯೆಯೋಲ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಪರಸ್ಪರ ಗೌರವ, ಹಂಚಿಕೆಯ ಮೌಲ್ಯಗಳು ಮತ್ತು ಬೆಳೆಯುತ್ತಿರುವ ಪಾಲುದಾರಿಕೆಗಳ ಸಯೋಗದ ಪ್ರಯಾಣವನ್ನು ಒತ್ತಿಹೇಳುತ್ತಾ, ವಿಶೇಷ ಕಾರ್ಯತಂತ್ರದ ಸಹಭಾಗಿತ್ವವನ್ನು ಆಳಗೊಳಿಸಲು ಮತ್ತು ವಿಸ್ತರಿಸಲು ಶ್ರೀ ಯೂನ್ ಸುಕ್ ಯೋಲ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಅವಕಾಶವನ್ನು ಪ್ರಧಾನಮಂತ್ರಿಯವರು ಎದುರು ನೋಡುತ್ತಿದ್ದಾರೆ.ಕೊರಿಯಾ ಗಣರಾಜ್ಯದ ಅಧ್ಯಕ್ಷರ ಜತೆ ಪ್ರಧಾನಮಂತ್ರಿ ಮಾತುಕತೆ
September 10th, 06:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 10 ಸೆಪ್ಟೆಂಬರ್ 2023 ರಂದು ನವದೆಹಲಿಯಲ್ಲಿ ನಡೆದ G20 ಶೃಂಗಸಭೆಯ ನೇಪಥ್ಯದಲ್ಲಿ ಕೊರಿಯಾ ಗಣರಾಜ್ಯದ ಅಧ್ಯಕ್ಷರಾದ ಶ್ರೀ ಯೂನ್ ಸುಕ್ ಯೆಯೋಲ್ ಅವರೊಂದಿಗೆ ಮಾತುಕತೆ ನಡೆಸಿದರು.ಕೊರಿಯಾ ಗಣರಾಜ್ಯದ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ
May 20th, 12:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊರಿಯಾ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಶ್ರೀ ಯೂನ್ ಸುಕ್ ಯೆಲ್ ಅವರನ್ನು 20 ಮೇ 2023 ರಂದು ಹಿರೋಷಿಮಾದಲ್ಲಿ ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಭೇಟಿಯಾದರು.ಕೊರಿಯಾ ಗಣರಾಜ್ಯದ ಅಧ್ಯಕ್ಷರಾಗಿ ಚುನಾಯಿತರಾದ ಘನತೆವೆತ್ತ ಯುನ್ ಸುಕ್-ಯೋಲ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಸಂಭಾಷಿಸಿದರು
March 17th, 02:50 pm
ಕೊರಿಯಾ ಗಣರಾಜ್ಯದ ಅಧ್ಯಕ್ಷರಾಗಿ ಚುನಾಯಿತರಾದ ಘನತೆವೆತ್ತ ಯುನ್ ಸುಕ್-ಯೋಲ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ದೂರವಾಣಿ ಮೂಲಕ ಸಂಭಾಷಿಸಿದರು.