ಫೆಬ್ರವರಿ 16 ರಂದು ಟಿಇಆರ್ ಐನ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಉದ್ಘಾಟನಾ ಭಾಷಣ ಮಾಡಲಿರುವ ಪ್ರಧಾನಿ
February 15th, 11:32 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಫೆಬ್ರವರಿ 16 ರಂದು ಸಂಜೆ 6 ಗಂಟೆಗೆ ಇಂಧನ ಮತ್ತು ಸಂಪನ್ಮೂಲಗಳ ಸಂಸ್ಥೆ (TERI) ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ವೀಡಿಯೊ ಸಂದೇಶದ ಮೂಲಕ ಉದ್ಘಾಟನಾ ಭಾಷಣ ಮಾಡಲಿದ್ದಾರೆ.ಫೆಬ್ರವರಿ 10, ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ 2021 ಉದ್ಘಾಟಿಸಲಿರುವ ಪ್ರಧಾನಮಂತ್ರಿ
February 08th, 05:51 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 10ರಂದು ಸಂಜೆ 6.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ 2021 ಅನ್ನು ಉದ್ಘಾಟಿಸಲಿದ್ದಾರೆ. ಈ ಶೃಂಗಸಭೆಯ ಘೋಷ ವಾಕ್ಯ “ನಮ್ಮ ಏಕರೂಪದ ಭವಿಷ್ಯದ ಮರು ವ್ಯಾಖ್ಯಾನ: ಸರ್ವರಿಗೂ ಸುರಕ್ಷಿತ ಮತ್ತು ಸುಭದ್ರ ವಾತಾವರಣ’’ ಎಂಬುದಾಗಿದೆ. ಗಯಾನ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಡಾ.ಮೊಹಮ್ಮದ್ ಇರ್ಫಾನ್ ಆಲಿ, ಪಪುವಾ ನ್ಯೂಗಿನಿಯಾ ಅಧ್ಯಕ್ಷ ಗೌರವಾನ್ವಿತ ಜೇಮ್ಸ್ ಮರಾಪೆ, ಮಾಡ್ಲವೀಸ್ ಗಣರಾಜ್ಯದ ಮಜ್ಲಿಸ್ ಪೀಪಲ್ಸ್ ಸ್ಪೀಕರ್ ಮೊಹಮ್ಮದ್ ನಶೀದ್, ವಿಶ್ವಸಂಸ್ಥೆಯ ಡೆಪ್ಯೂಟಿ ಸೆಕ್ರೆಟರಿ ಜನರಲ್ ಶ್ರೀಮತಿ ಅಮಿನಾ ಜೆ.ಮೊಹಮ್ಮದ್ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವ ಶ್ರೀ ಪ್ರಕಾಶ್ ಜಾವ್ಡೇಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ 2018 ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿಯವರು ಮಾಡಿದ ಭಾಷಣದ ಪಠ್ಯ
February 16th, 11:30 am
ನಾನು ಇಂದು ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಇರುವುದಕ್ಕೆ ಸಂತೋಷ ಪಡುತ್ತೇನೆ. ವಿದೇಶದಿಂದ ನಮ್ಮೊಂದಿಗೆ ಸೇರಿರುವವರಿಗೆ ಭಾರತಕ್ಕೆಸ್ವಾಗತ ಬಯಸುತ್ತೇನೆ. ದೆಹಲಿಗೆ ಸ್ವಾಗತ.ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ 2018ನ್ನು ನಾಳೆ ಉದ್ಘಾಟಿಸಲಿರುವ ಪ್ರಧಾನಿ
February 15th, 03:04 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದಲ್ಲಿ ಫೆಬ್ರವರಿ 16ರಂದು ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ (ಡಬ್ಲ್ಯುಎಸ್.ಡಿ.ಎಸ್. 2018)ರ 2018ರ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಡಬ್ಲ್ಯುಎಸ್.ಡಿ.ಎಸ್. ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (ಟಿ.ಇ.ಆರ್.ಐ.)ನ ಮಹತ್ವಾಕಾಂಕ್ಷೆಯ ವೇದಿಕೆಯಾಗಿದೆ ಮತ್ತು ಸುಸ್ಥಿರ ಅಭಿವೃದ್ಧಿ, ಇಂಧನ ಮತ್ತು ಪರಿಸರ ವಲಯದ ಚಿಂತಕರು ಮತ್ತು ಜಾಗತಿಕ ನಾಯಕರನ್ನು ಸಮಾನ ವೇದಿಕೆಯನ್ನು ಒಟ್ಟಿಗೆ ತರಲು ಬಯಸುತ್ತದೆ.