ದುಬೈ 2024 ನಡೆದ ವಿಶ್ವ ಸರ್ಕಾರಗಳ ಶೃಂಗಸಭೆಯ ಸಂದರ್ಭದಲ್ಲಿ ಮಡಗಾಸ್ಕರ್ ಗಣರಾಜ್ಯದ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
February 14th, 02:55 pm
ದುಬೈನಲ್ಲಿ ಜರುಗಿದ ವಿಶ್ವ ಸರ್ಕಾರಗಳ ಶೃಂಗಸಭೆಯ ಸಂದರ್ಭದಲ್ಲಿ ಮಡಗಾಸ್ಕರ್ ಅಧ್ಯಕ್ಷ ಶ್ರೀ ಆಂಡ್ರಿ ರಾಜೋಲಿನಾ ಅವರನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು. ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿದೆ.ವಿಶ್ವ ಸರ್ಕಾರದ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ
February 14th, 02:30 pm
ವಿಶ್ವ ಸರ್ಕಾರದ ಶೃಂಗಸಭೆಯಲ್ಲಿ ವಿಶೇಷವಾಗಿ ಎರಡನೇ ಬಾರಿಗೆ ಮುಖ್ಯ ಭಾಷಣ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪಾಲಿಗೆ ದೊಡ್ಡ ಗೌರವವಾಗಿದೆ. ಈ ಆಮಂತ್ರಣವನ್ನು ನೀಡಿದ್ದಕ್ಕಾಗಿ ಮತ್ತು ಅಂತಹ ಆತ್ಮೀಯ ಸ್ವಾಗತವನ್ನು ನೀಡಿದ್ದಕ್ಕಾಗಿ ಘನತೆವೆತ್ತ ಶ್ರೀ ಶೇಖ್ ಮೊಹಮ್ಮದ್ ಬಿನ್ ರಶೀದ್ ಜಿ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಗೌರವಾನ್ವಿತ ಸಹೋದರ , ಘನತೆವೆತ್ತ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರಿಗೂ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇತ್ತೀಚೆಗೆ ಹಲವಾರು ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿದೆ. ಅವರು ದೂರ ದೃಷ್ಟಿಕೋನ ಹೊಂದಿರುವ ನಾಯಕ ಮಾತ್ರವಲ್ಲದೆ ನಿರ್ಣಯ ಮತ್ತು ಬದ್ಧತೆಯ ನಾಯಕರೂ ಕೂಡಾ ಹೌದು.ವಿಶ್ವ ಸರ್ಕಾರಗಳ ಶೃಂಗಸಭೆ 2024 ರಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ
February 14th, 02:09 pm
ಯು.ಎ.ಇ. ಉಪಾಧ್ಯಕ್ಷ, ಪ್ರಧಾನಮಂತ್ರಿ, ರಕ್ಷಣಾ ಸಚಿವರು ಮತ್ತು ದುಬೈ ಆಡಳಿತಗಾರರಾದ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 14 ಫೆಬ್ರವರಿ 2024 ರಂದು ದುಬೈನಲ್ಲಿ ವಿಶ್ವ ಸರ್ಕಾರಗಳ ಶೃಂಗಸಭೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದರು. ಶೃಂಗಸಭೆಯಲ್ಲಿ ಭವಿಷ್ಯದ ಸರ್ಕಾರಗಳನ್ನು ರೂಪಿಸುವುದು ವಿಷಯದ ಕುರಿತು ಅವರು ಪ್ರಧಾನ ಅಧಿವೇಶನದಲ್ಲಿ ವಿಶೇಷ ಭಾಷಣವನ್ನು ಮಾಡಿದರು. 2018 ರಲ್ಲಿ ವಿಶ್ವ ಸರ್ಕಾರಗಳ ಶೃಂಗಸಭೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಪ್ರಧಾನಮಂತ್ರಿಯವರು ಭಾಗವಹಿಸಿದ್ದರು. ಈ ಬಾರಿಯ ಶೃಂಗಸಭೆಯಲ್ಲಿ 10 ರಾಷ್ಟ್ರಾಧ್ಯಕ್ಷರು ಮತ್ತು 10 ದೇಶಗಳ ಪ್ರಧಾನಮಂತ್ರಿಗಳು ಸೇರಿದಂತೆ 20 ವಿಶ್ವ ನಾಯಕರು ಭಾಗವಹಿಸಿದ್ದಾರೆ. ಈ ಜಾಗತಿಕ ಕೂಟದಲ್ಲಿ 120 ದೇಶಗಳ ಸರ್ಕಾರಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿ ಪ್ರತಿನಿಧಿಸಿದ್ದಾರೆ.