ವರ್ಲ್ಡ್ ಫುಡ್ ಇಂಡಿಯಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಸಂದೇಶ

September 19th, 12:30 pm

ವರ್ಲ್ಡ್ ಫುಡ್ ಇಂಡಿಯಾ ಕಾರ್ಯಕ್ರಮದಲ್ಲಿ ತಮ್ಮ ಸಂದೇಶದಲ್ಲಿ, ಪ್ರಧಾನಿ ಮೋದಿ ಅವರು, ಭಾರತವು ರೋಮಾಂಚಕ ಮತ್ತು ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಹೊಂದಿದೆ. ಭಾರತೀಯ ಆಹಾರ ಪರಿಸರ ವ್ಯವಸ್ಥೆಯ ಬೆನ್ನೆಲುಬು ರೈತ. ಇದು ಪಾಕಶಾಲೆಯ ಉತ್ಕೃಷ್ಟತೆಯ ಪೌಷ್ಟಿಕ ಮತ್ತು ರುಚಿಕರವಾದ ಸಂಪ್ರದಾಯಗಳ ರಚನೆಯನ್ನು ಖಾತ್ರಿಪಡಿಸಿದ ರೈತರು. ನಾವೀನ್ಯತೆ ನೀತಿಗಳು ಮತ್ತು ಕೇಂದ್ರೀಕೃತ ಅನುಷ್ಠಾನದೊಂದಿಗೆ ನಾವು ಅವರ ಕಠಿಣ ಪರಿಶ್ರಮವನ್ನು ಬೆಂಬಲಿಸುತ್ತಿದ್ದೇವೆ.

Fusion of technology and taste will pave the way for economy of future: PM Modi

November 03rd, 11:00 am

Prime Minister Narendra Modi inaugurated the second edition of the Mega food event ‘World Food India 2023’ at Bharat Mandapam, Pragati Maidan, in New Delhi. The investor-friendly policies by the government are taking the food sector to new heights”, PM Modi remarked. India stands at the 7th position with an overall export value of more than 50,000 million USD in agricultural produce”, he informed.

​​​​​​​ʻವಿಶ್ವ ಆಹಾರ ಭಾರತ-2023ʼಕ್ಕೆ ಚಾಲನೆ ನೀಡಿದ ಪ್ರಧಾನಿ

November 03rd, 10:14 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದ ʻಭಾರತ್ ಮಂಟಪಂʼನಲ್ಲಿ ಬೃಹತ್‌ ಆಹಾರ ಕಾರ್ಯಕ್ರಮದ ಎರಡನೇ ಆವೃತ್ತಿಯಾದ 'ವಿಶ್ವ ಆಹಾರ ಭಾರತ-2023'ಕ್ಕೆ ಚಾಲನೆ ನೀಡಿದರು. ಸ್ವಸಹಾಯ ಗುಂಪುಗಳನ್ನು ಬಲಪಡಿಸಲು ಒಂದು ಲಕ್ಷಕ್ಕೂ ಅಧಿಕ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ಸದಸ್ಯರಿಗೆ ಬೀಜ ಬಂಡವಾಳ ನೆರವನ್ನು ಅವರು ವಿತರಿಸಿದರು. ಈ ಸಂದರ್ಭದಲ್ಲಿ ಏರ್ಪಡಿಸಲಾದ ವಸ್ತುಪ್ರದರ್ಶನದಲ್ಲೂ ಪ್ರಧಾನಿ ಶ್ರೀ ಮೋದಿ ಅವರು ಹೆಜ್ಜೆ ಹಾಕಿದರು. ಭಾರತವನ್ನು 'ವಿಶ್ವದ ಆಹಾರ ಬುಟ್ಟಿ' ಎಂದು ಪ್ರದರ್ಶಿಸುವುದು ಮತ್ತು 2023 ಅನ್ನು ʻಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼವಾಗಿ ಆಚರಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.

​​​​​​​ನವೆಂಬರ್ 3ರಂದು ʻವಿಶ್ವ ಆಹಾರ ಭಾರತ -2023ʼಗೆ ಚಾಲನೆ ನೀಡಲಿರುವ ಪ್ರಧಾನಿ

November 02nd, 06:41 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 3ರಂದು ಬೆಳಿಗ್ಗೆ 10 ಗಂಟೆಗೆ ನವದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ 'ವಿಶ್ವ ಆಹಾರ ಭಾರತ 2023' ಮೆಗಾ ಆಹಾರ ಕಾರ್ಯಕ್ರಮದ ಎರಡನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ.