ವಿಡಿಯೋ ಕಾನ್ಫರೆನ್ಸ್ ಮೂಲಕ ಉತ್ತರ ಪ್ರದೇಶದ ಬಸ್ತಿಯಲ್ಲಿ 2 ನೇ ಸಂಸದ್ ಖೇಲ್ ಮಹಾಕುಂಭ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

January 18th, 04:39 pm

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಮತ್ತು ನಮ್ಮ ಯುವ ಸ್ನೇಹಿತ ಹರೀಶ್ ದ್ವಿವೇದಿ ಜೀ, ವಿವಿಧ ಕ್ರೀಡಾಪಟುಗಳು, ರಾಜ್ಯ ಸರ್ಕಾರದ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಹಿರಿಯ ಗಣ್ಯರು ಮತ್ತು ಹೆಚ್ಚಿನ ಸಂಖ್ಯೆಯ ಯುವಕರನ್ನು ನಾನು ಎಲ್ಲೆಡೆ ನೋಡಬಹುದು. ನನ್ನ ಪ್ರೀತಿಯ ಸಹೋದರ ಸಹೋದರಿಯರೇ!

​​​​​​​ಬಸ್ತಿ ಜಿಲ್ಲೆಯಲ್ಲಿ 2022-23ನೇ ಸಾಲಿನ ಸಾನ್ಸದ್ ಖೇಲ್ ಮಹಾಕುಂಭದ ಎರಡನೇ ಹಂತವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ ಪ್ರಧಾನಿಮಂತ್ರಿಗಳು

January 18th, 01:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಾನ್ಸದ್ ಖೇಲ್ ಮಹಾಕುಂಭ 2022-23ರ ಎರಡನೇ ಹಂತವನ್ನು ಉದ್ಘಾಟಿಸಿದರು. ಸಾನ್ಸದ್ ಖೇಲ್ ಮಹಾಕುಂಭವನ್ನು 2021ರಿಂದ ಬಸ್ತಿ ಜಿಲ್ಲೆಯ ಸಂಸದ ಶ್ರೀ ಹರೀಶ್ ದ್ವಿವೇದಿಯವರು ಬಸ್ತಿ ಜಿಲ್ಲೆಯಲ್ಲಿ ಆಯೋಜಿಸುತ್ತಿದ್ದಾರೆ. ಖೇಲ್ ಮಹಾಕುಂಭವು ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಾದ ಕುಸ್ತಿ, ಕಬಡ್ಡಿ, ಖೋ ಖೋ, ಬ್ಯಾಸ್ಕೆಟ್ ಬಾಲ್, ಫುಟ್ಬಾಲ್, ಹಾಕಿ, ವಾಲಿಬಾಲ್, ಹ್ಯಾಂಡ್ ಬಾಲ್, ಚೆಸ್, ಕೇರಂ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮುಂತಾದ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಇದಲ್ಲದೆ, ಖೇಲ್ ಮಹಾಕುಂಭದಲ್ಲಿ ಪ್ರಬಂಧ ಬರೆಯುವುದು, ಚಿತ್ರಕಲೆ, ರಂಗೋಲಿ ಬಿಡಿಸುವುದು ಮುಂತಾದ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿತ್ತು.