ರಾಜಸ್ಥಾನದ ಜೈಪುರದಲ್ಲಿ “ರೈಸಿಂಗ್ ರಾಜಸ್ಥಾನ್ ಗ್ಲೋಬಲ್ ಇನ್ವೆಸ್ಟ್ ಮೆಂಟ್ ಸಮ್ಮಿಟ್ 2024”ರ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
December 09th, 11:00 am
ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಹರಿಭಾವು ಬಗಡೆ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಜಿ ಶರ್ಮಾ, ರಾಜಸ್ಥಾನ ಸರ್ಕಾರದ ಸಚಿವರೆ, ಸಂಸದರೆ, ವಿಧಾನಸಭೆ ಸದಸ್ಯರೆ, ಉದ್ಯಮ ಸಹೋದ್ಯೋಗಿಗಳೆ, ವಿವಿಧ ರಾಯಭಾರಿಗಳೆ, ರಾಯಭಾರಿ ಪ್ರತಿನಿಧಿಗಳೆ, ಇತರೆ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ,ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 09th, 10:34 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಜೈಪುರದ ಜೈಪುರ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ (ಜೆಇಸಿಸಿ) ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆ 2024 ಮತ್ತು ರಾಜಸ್ಥಾನ ಗ್ಲೋಬಲ್ ಬಿಸಿನೆಸ್ ಎಕ್ಸ್ ಪೋವನ್ನು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಜಸ್ಥಾನದ ಯಶಸ್ಸಿನ ಪಯಣದಲ್ಲಿ ಇಂದು ಮತ್ತೊಂದು ವಿಶೇಷ ದಿನವಾಗಿದೆ ಎಂದರು. ಪಿಂಕ್ ಸಿಟಿ ಜೈಪುರದಲ್ಲಿ ನಡೆಯುತ್ತಿರುವ ರೈಸಿಂಗ್ ರಾಜಸ್ಥಾನ್ ಗ್ಲೋಬಲ್ ಇನ್ವೆಸ್ಟ್ಮೆಂಟ್ ಶೃಂಗಸಭೆ 2024ಕ್ಕೆ ಆಗಮಿಸಿರುವ ಎಲ್ಲ ಉದ್ಯಮ ಮತ್ತು ವಾಣಿಜ್ಯ ಮುಖಂಡರು, ಹೂಡಿಕೆದಾರರು, ಪ್ರತಿನಿಧಿಗಳನ್ನು ಅವರು ಅಭಿನಂದಿಸಿದರು. ಈ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅವರು ರಾಜಸ್ಥಾನ ಸರ್ಕಾರವನ್ನೂ ಅಭಿನಂದಿಸಿದರು.ಗಿರ್ ಮತ್ತು ಏಷ್ಯಾಟಿಕ್ ಸಿಂಹಗಳ ಕುರಿತಾದ ಪರಿಮಲ್ ನಾಥ್ವಾನಿ ಅವರ ಪುಸ್ತಕವನ್ನು ಪ್ರಧಾನಮಂತ್ರಿ ಸ್ವೀಕರಿಸಿದರು
July 31st, 08:10 pm
ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಏಷ್ಯಾಟಿಕ್ ಸಿಂಹಗಳ ಕುರಿತು ರಾಜ್ಯಸಭಾ ಸದಸ್ಯರಾದ ಪರಿಮಲ್ ನಾಥ್ವಾನಿ ಅವರು ಬರೆದಿರುವ ಕಾಫಿ ಟೇಬಲ್ ಪುಸ್ತಕ ಕಾಲ್ ಆಫ್ ದಿ ಗಿರ್ ನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದರು.ಭಾರತದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ
February 29th, 09:35 pm
ಭಾರತದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಚಿರತೆಗಳ ಸಂಖ್ಯೆಯಲ್ಲಿನ ಈ ಗಮನಾರ್ಹ ಹೆಚ್ಚಳವು ಜೀವವೈವಿಧ್ಯತೆಯ ಬಗ್ಗೆ ಭಾರತದ ಅಚಲವಾದ ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.PM responds to citizens' tweets on wild life
April 10th, 09:33 am
The Prime Minister, Shri Narendra Modi engaged with citizens regarding people's enthusiasm for wildlife.No dearth of political will to take action against corruption in the country: PM Modi
April 03rd, 03:50 pm
PM Modi inaugurated Diamond Jubilee Celebrations of CBI in Delhi. The PM made it clear that today there was no dearth of political will to take action against corruption in the country and asked officers to take action without hesitation against the corrupt, however powerful. He asked them not to be deterred by the history of the power of the corrupt and the ecosystem created by them to tarnish the investigative agencies.PM inaugurates Diamond Jubilee Celebrations of Central Bureau of Investigation in New Delhi
April 03rd, 12:00 pm
PM Modi inaugurated Diamond Jubilee Celebrations of CBI in Delhi. The PM made it clear that today there was no dearth of political will to take action against corruption in the country and asked officers to take action without hesitation against the corrupt, however powerful. He asked them not to be deterred by the history of the power of the corrupt and the ecosystem created by them to tarnish the investigative agencies.ಕುನೋ ನ್ಯಾಷನಲ್ ಪಾರ್ಕ್ ಗೆ 12 ಚೀತಾಗಳ ಹೊಸ ಗುಂಪಿಗೆ ಸ್ವಾಗತ ಕೋರಿದ ಪ್ರಧಾನಮಂತ್ರಿ
February 19th, 09:21 am
ಕುನೋ ನ್ಯಾಷನಲ್ ಪಾರ್ಕ್ ಗೆ ಹೊಸ ಗುಂಪಿನ 12 ಚೀತಾಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ವಾಗತ ಕೋರಿದ್ದಾರೆ.ಸೆಪ್ಟೆಂಬರ್ 23ರಂದು ಎಲ್ಲಾ ರಾಜ್ಯಗಳ ಪರಿಸರ ಸಚಿವರ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿರುವ ಪ್ರಧಾನಿ
September 21st, 04:29 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಸೆಪ್ಟೆಂಬರ್ 23ರಂದು ಬೆಳಗ್ಗೆ 10.30ಕ್ಕೆ ಗುಜರಾತ್‌ನ ಏಕ್ತಾ ನಗರದಲ್ಲಿ ಪರಿಸರ ಸಚಿವರ ರಾಷ್ಟ್ರೀಯ ಸಮ್ಮೇಳನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶಕ್ಕೆ ಪ್ರಧಾನಮಂತ್ರಿಯವರ ಭೇಟಿ
September 15th, 02:11 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10:45ರ ಸುಮಾರಿಗೆ ಪ್ರಧಾನಮಂತ್ರಿಯವರು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳನ್ನು ಅರಣ್ಯಕ್ಕೆ ಬಿಡುಗಡೆ ಮಾಡುವ ಕಾರ್ಯಕ್ರಮ ನಡೆಸಿಕೊಡುವರು. ಅದರ ನಂತರ, ಮಧ್ಯಾಹ್ನ 12 ಗಂಟೆಯ ಸುಮಾರಿಗೆ, ಅವರು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು/ಸಮುದಾಯ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಕರಹಾಲ್, ಶಿಯೋಪುರದಲ್ಲಿ ಸ್ವಸಹಾಯ ಸಂಘ ಸಮ್ಮೇಳನದಲ್ಲಿ ಭಾಗವಹಿಸುವರು.ನವದೆಹಲಿಯ ವಿಜ್ಞಾನ ಭವನದಲ್ಲಿ ಇಶಾ ಫೌಂಡೇಶನ್ ಆಯೋಜಿಸಿದ್ದ 'ಮಣ್ಣನ್ನು ಉಳಿಸಿ' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡಾನುವಾದ
June 05th, 02:47 pm
ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು! ಈ ಸಂದರ್ಭದಲ್ಲಿ ಸದ್ಗುರು ಮತ್ತು ಇಶಾ ಫೌಂಡೇಶನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮಾರ್ಚ್‌ನಲ್ಲಿ ಅವರ ಸಂಸ್ಥೆಯು ಮಣ್ಣನ್ನು ಉಳಿಸಿ ಅಭಿಯಾನವನ್ನು ಆರಂಭಿಸಿತು. 27 ದೇಶಗಳ ಮೂಲಕ ಅವರ ಪಯಣ ಇಂದು 75ನೇ ದಿನಕ್ಕೆ ಕಾಲಿಟ್ಟಿದೆ. ದೇಶವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ ಮತ್ತು ಈ 'ಅಮೃತಕಾಲ'ದಲ್ಲಿ ಹೊಸ ಸಂಕಲ್ಪಗಳನ್ನು ಮಾಡುತ್ತಿರುವಾಗ, ಇಂತಹ ಜನಾಂದೋಲನಗಳು ಪ್ರಮುಖವಾಗುತ್ತವೆ.PM Addresses 'Save Soil' Programme Organised by Isha Foundation
June 05th, 11:00 am
PM Modi addressed 'Save Soil' programme organised by Isha Foundation. He said that to save the soil, we have focused on five main aspects. First- How to make the soil chemical free. Second- How to save the organisms that live in the soil. Third- How to maintain soil moisture. Fourth- How to remove the damage that is happening to the soil due to less groundwater. Fifth, how to stop the continuous erosion of soil due to the reduction of forests.ದಕ್ಷಿಣ ಏಷ್ಯಾದ ಅತಿದೊಡ್ಡ ರಾಮ್ ಸರ್ ಸ್ಥಳದ ಜಾಲವನ್ನು ಭಾರತ ಹೊಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ
February 03rd, 10:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಮ್ ಸರ್ ಸ್ಥಳಗಳ ಪಟ್ಟಿಗೆ ಗುಜರಾತ್ ನ ಖಿಜಾದಿಯ ವನ್ಯಜೀವಿಧಾಮ ಮತ್ತು ಉತ್ತರ ಪ್ರದೇಶದ ಬಖೀರಾ ವನ್ಯಜೀವಿಧಾಮ ಎರಡು ತೇವದ ಪ್ರದೇಶಗಳು ಸೇರ್ಪಡೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.ಹಿಮಾಚಲ ಪ್ರದೇಶದ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಲಸಿಕಾ ಫಲಾನುಭವಿಗಳ ಜೊತೆ ಪ್ರಧಾನ ಮಂತ್ರಿಗಳ ಸಂವಾದ
September 06th, 11:01 am
ಹಿಮಾಚಲ ಪ್ರದೇಶವು ಇಂದು ಪ್ರಧಾನ ಸೇವಕನಾಗಿ ಮಾತ್ರವಲ್ಲ ಕುಟುಂಬದ ಸದಸ್ಯನಾಗಿ ನನಗೆ ಹೆಮ್ಮೆಯ ಅವಕಾಶವನ್ನು ಒದಗಿಸಿಕೊಟ್ಟಿದೆ. ಹಿಮಾಚಲವು ಸಣ್ಣ ಸೌಲಭ್ಯಗಳಿಗಾಗಿ, ಅವಕಾಶಗಳಿಗಾಗಿ ಹೋರಾಟ ಮಾಡುತ್ತಿದ್ದುದನ್ನು ನಾನು ನೋಡಿದ್ದೆ, ಮತ್ತು ಇಂದು ಹಿಮಾಚಲ ಪ್ರದೇಶವು ಅಭಿವೃದ್ಧಿಯ ಕಥೆ ಬರೆಯುತ್ತಿರುವುದನ್ನೂ ನೋಡುತ್ತಿದ್ದೇನೆ. ಇದೆಲ್ಲ ಸಾಧ್ಯವಾಗಿರುವುದು ದೇವತೆಗಳ ಆಶೀರ್ವಾದದಿಂದ, ಹಿಮಾಚಲ ಪ್ರದೇಶ ಸರಕಾರದ ಪರಿಶ್ರಮದಿಂದ ಮತ್ತು ಹಿಮಾಚಲದ ಜನತೆಯ ಜಾಗೃತಿಯಿಂದ. ನನಗೆ ಸಂವಹನ ನಡೆಸಲು ಅವಕಾಶ ಮಾಡಿಕೊಟ್ಟಂತಹ ಎಲ್ಲರಿಗೂ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಮತ್ತು ಇಡೀ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ಶುಭವಾಗಲಿ!!ಹಿಮಾಚಲ ಪ್ರದೇಶದ ಕೋವಿಡ್ ಲಸಿಕೆ ಕಾರ್ಯಕ್ರಮದ ಫಲಾನುಭವಿಗಳು ಮತ್ತು ಆರೋಗ್ಯ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಪ್ರಧಾನಿ
September 06th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಿಮಾಚಲ ಪ್ರದೇಶದ ಕೋವಿಡ್ ಲಸಿಕೆ ಕಾರ್ಯಕ್ರಮದ ಆರೋಗ್ಯ ಕಾರ್ಯಕರ್ತರು ಮತ್ತು ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಶ್ರೀ ಜೆ.ಪಿ. ನಡ್ಡಾ, ಶ್ರೀ ಅನುರಾಗ್ ಸಿಂಗ್ ಠಾಕೂರ್; ಸಂಸದರು, ಶಾಸಕರು, ಪಂಚಾಯತ್ ನಾಯಕರು ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.ಅಂತಾರಾಷ್ಟ್ರೀಯ ಹುಲಿ ದಿನದಂದು ವನ್ಯಜೀವಿ ಪ್ರೇಮಿಗಳಿಗೆ ಶುಭ ಕೋರಿದ ಪ್ರಧಾನಿ
July 29th, 10:37 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವನ್ಯಜೀವಿ ಪ್ರೇಮಿಗಳಿಗೆ, ವಿಶೇಷವಾಗಿ ಹುಲಿ ಸಂರಕ್ಷಣೆಯ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಅಂತಾರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಶುಭ ಕೋರಿದ್ದಾರೆ.NDA Govt has ensured peace and stability in Assam: PM Modi in Bokakhat
March 21st, 12:11 pm
Continuing his election campaigning spree, PM Modi addressed a public meeting in Bokakhat, Assam. He said, “It is now decided that Assam will get 'double engine ki sarkar', 'doosri baar, BJP sarkar’, ‘doosri baar, NDA sarkar’. “Today I can respectfully say to all our mothers, sisters and daughters sitting here that we have worked hard to fulfill the responsibility and expectations with which you elected the BJP government,” he added.PM Modi addresses public meeting at Bokakhat, Assam
March 21st, 12:10 pm
Continuing his election campaigning spree, PM Modi addressed a public meeting in Bokakhat, Assam. He said, “It is now decided that Assam will get 'double engine ki sarkar', 'doosri baar, BJP sarkar’, ‘doosri baar, NDA sarkar’. “Today I can respectfully say to all our mothers, sisters and daughters sitting here that we have worked hard to fulfill the responsibility and expectations with which you elected the BJP government,” he added.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸ್ವೀಡನ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಸ್ಟೀಫನ್ ಲೋಫ್ವೆನ್ ನಡುವೆ ವರ್ಚುವಲ್ ಶೃಂಗಸಭೆ
March 03rd, 09:59 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವೀಡನ್ ಸಂಸ್ಥಾನದ ಪ್ರಧಾನಮಂತ್ರಿ ಘನತೆವೆತ್ತ ಸ್ಟೀಫನ್ ಲೋಫ್ವೆನ್ ಅವರೊಂದಿಗೆ 2021ರ ಮಾರ್ಚ್ 5ರಂದು ವರ್ಚುವಲ್ ಶೃಂಗಸಭೆ ನಡೆಸಲಿದ್ದಾರೆ.ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್ 2.0’ – 19 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ
December 27th, 11:30 am
ಸ್ನೇಹಿತರೆ, ದೇಶದ ಸಾಮಾನ್ಯ ಜನರು ಕೂಡ ಈ ಬದಲಾವಣೆಯನ್ನು ಅನುಭವಿಸಿದ್ದಾರೆ. ನಾನು ದೇಶದಲ್ಲಿ ಒಂದು ಸದಾಶಯದ ಪ್ರವಾಹವನ್ನೂ ಕಂಡಿದ್ದೇನೆ. ಹಲವಾರು ಸವಾಲುಗಳು ಎದುರಾದವು. ಹಲವಾರು ಸಂಕಷ್ಟಗಳು ಎದುರಾದವು. ಅನೇಕ ತೊಂದರೆಗಳು ಎದುರಾದವು. ಕೊರೊನದಿಂದಾಗಿ ವಿಶ್ವದಲ್ಲಿ ಸರಬರಾಜು ಸರಪಳಿಯಲ್ಲಿ ಅನೇಕ ತೊಂದರೆಗಳು ಎದುರಾದವು. ಆದರೆ ನಾವು ಪ್ರತಿಯೊಂದು ಸಂಕಷ್ಟದಿಂದಲೂ ಹೊಸತೊಂದು ಪಾಠವನ್ನು ಕಲಿತೆವು. ದೇಶದಲ್ಲಿ ಹೊಸ ಸಾಮರ್ಥ್ಯವೂ ಸೃಷ್ಟಿಯಾಯಿತು. ಶಬ್ದಗಳಲ್ಲಿ ಹೇಳಬೇಕೆಂದರೆ ಈ ಸಾಮರ್ಥ್ಯದ ಹೆಸರು ಸ್ವಾವಲಂಬನೆ.