ಬಿಹಾರದ ಜಮುಯಿಯಲ್ಲಿ ಆಯೋಜಿತವಾಗಿದ್ದ ಜನಜಾತಿಯ ಗೌರವ್ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

November 15th, 11:20 am

ಬಿಹಾರದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಜಿ, ಬಿಹಾರದ ಜನಪ್ರಿಯ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ಜುಯಲ್ ಓರಾಮ್ ಜಿ, ಜಿತನ್ ರಾಮ್ ಮಾಂಝಿ ಜಿ, ಗಿರಿರಾಜ್ ಸಿಂಗ್ ಜಿ, ಚಿರಾಗ್ ಪಾಸ್ವಾನ್ ಜಿ, ಮತ್ತು ಯು ಕೆ ದುರ್ಗಾದಾಸ್ ಜಿ ಮತ್ತು ಇಂದು ನಮ್ಮೆಲ್ಲರ ನಡುವೆ ಬಿರ್ಸಾ ಮುಂಡಾ ಜಿ ಅವರ ವಂಶಸ್ಥರು ಇದ್ದಾರೆ ಎಂಬುದು ನಮ್ಮೆಲ್ಲರ ಸೌಭಾಗ್ಯ. ಇಂದು ಅವರ ಮನೆಯಲ್ಲಿ ಪ್ರಮುಖ ಧಾರ್ಮಿಕ ಆಚರಣೆ ಇದ್ದರೂ. ಅವರ ಕುಟುಂಬ ಧಾರ್ಮಿಕ ವಿಧಿಗಳಲ್ಲಿ ನಿರತರಾಗಿದ್ದರೂ, ಬುಧ್ರಾಮ್ ಮುಂಡಾ ಜಿ ಅವರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ, ಸಿಧು ಕನ್ಹು ಅವರ ವಂಶಸ್ಥರಾದ ಮಂಡಲ್ ಮುರ್ಮು ಜಿ ಅವರು ನಮ್ಮೊಂದಿಗೆ ಇರುವುದು ನಮಗೆ ಸಮಾನ ಗೌರವವಾಗಿದೆ. ಇಂದು ಭಾರತೀಯ ಜನತಾ ಪಕ್ಷದಲ್ಲಿ ಅತ್ಯಂತ ಹಿರಿಯ ನಾಯಕರಿದ್ದರೆ, ಒಂದು ಕಾಲದಲ್ಲಿ ಲೋಕಸಭೆಯ ಉಪಸ್ಪೀಕರ್ ಆಗಿ ಸೇವೆ ಸಲ್ಲಿಸಿದ ನಮ್ಮ ಕರಿಯ ಮುಂಡಾಜಿ ಅವರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಎಂದು ಹೇಳಲು ನನಗೆ ಸಂತೋಷದ ವಿಷಯವಾಗಿದೆ. ಇದು ಇನ್ನೂ ನಮಗೆ ಮಾರ್ಗದರ್ಶನ ನೀಡುತ್ತಿದೆ. ಜುಯಲ್ ಓರಾಮ್ ಜಿ ಉಲ್ಲೇಖಿಸಿದಂತೆ, ಅವರು ನನಗೆ ತಂದೆಯಂತಿದ್ದಾರೆ. ಕರಿಯಾ ಮುಂಡಾ ಜಿ ಅವರು ಜಾರ್ಖಂಡ್‌ನಿಂದ ಇಲ್ಲಿಗೆ ವಿಶೇಷವಾಗಿ ಪ್ರಯಾಣಿಸಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ಮತ್ತು ನನ್ನ ಸ್ನೇಹಿತ ವಿಜಯ್ ಕುಮಾರ್ ಸಿನ್ಹಾ ಜಿ, ಸಾಮ್ರಾಟ್ ಚೌಧರಿ ಜಿ, ಬಿಹಾರ ಸರ್ಕಾರದ ಸಚಿವರು, ಸಂಸದರು, ವಿಧಾನಸಭಾ ಸದಸ್ಯರು, ಇತರೆ ಸಾರ್ವಜನಿಕ ಪ್ರತಿನಿಧಿಗಳು, ದೇಶದ ಮೂಲೆ ಮೂಲೆಗಳಿಂದ ಬಂದಿರುವ ಗಣ್ಯ ಅತಿಥಿಗಳು ಮತ್ತು ಜಮುಯಿಯ ನನ್ನ ಪ್ರೀತಿಯ ಸಹೋದರ, ಸಹೋದರಿಯರೆ.

ಜನಜಾತಿಯ ಗೌರವ್ ದಿವಸ್ ಸಂದರ್ಭದಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಚಾಲನೆ

November 15th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಜಮುಯಿಯಲ್ಲಿಂದು ಜನಜಾತಿಯ ಗೌರವ್ ದಿವಸ್ ಅಂಗವಾಗಿ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ, ಸುಮಾರು 6,640 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

18ನೇ ಪೂರ್ವ ಏಷ್ಯಾ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

September 07th, 01:28 pm

ಮತ್ತೊಮ್ಮೆ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಅಧ್ಯಕ್ಷ ವಿಡೊಡೊ ಅವರ ಅತ್ಯುತ್ತಮ ನಾಯಕತ್ವಕ್ಕಾಗಿ ನಾನು ನನ್ನ ಪ್ರಾಮಾಣಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹೆಚ್ಚುವರಿಯಾಗಿ, ನಾನು ವೀಕ್ಷಕರಾಗಿ ಆಗಮಿಸಿರುವ ಟಿಮೋರ್-ಲೆಸ್ಟೆಯ ಪ್ರಧಾನ ಮಂತ್ರಿ ಕ್ಸಾನಾನಾ ಗುಸ್ಮಾವೊ ಅವರನ್ನು ಈ ಸಭೆಯಲ್ಲಿ ಪ್ರೀತಿಯಿಂದ ಸ್ವಾಗತಿಸುತ್ತೇನೆ.

20ನೇ ಆಸಿಯಾನ್- ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಭಾಗಿ

September 07th, 11:47 am

ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರು ಆಸಿಯಾನ್-ಭಾರತದ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಅದರ ಭವಿಷ್ಯದ ದಿಕ್ಕನ್ನು ರೂಪಿಸುವ ಕುರಿತು ಆಸಿಯಾನ್ ಪಾಲುದಾರರೊಂದಿಗೆ ವಿಸ್ತೃತ ಚರ್ಚೆ ನಡೆಸಿದರು. ಪ್ರಧಾನಮಂತ್ರಿ ಅವರು, ಇಂಡೋ-ಪೆಸಿಫಿಕ್ ನಲ್ಲಿ ಆಸಿಯಾನ್ ಕೇಂದ್ರೀಯತೆಯನ್ನು ಪುನರುಚ್ಚರಿಸಿದರು ಮತ್ತು ಭಾರತ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (ಐಪಿಒಐ) ಮತ್ತು ಇಂಡೋ-ಪೆಸಿಫಿಕ್ ಕುರಿತು ಆಸಿಯಾನ್ ಆಮಾಯದ ಸಮನ್ವಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಆಸಿಯಾನ್- ಭಾರತ ಎಫ್ ಟಿಎ (ಎಐಟಿಐಜಿಎ) ಯ ಪರಿಶೀಲನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾಸಿದರು.

ಪ್ರಧಾನಮಂತ್ರಿ ಅವರು 20ನೇ ಆಸಿಯಾನ್ – ಭಾರತ ಶೃಂಗಸಭೆಯನ್ನುದ್ದೇಶಿಸಿ ಮಾಡಿದ ಆರಂಭಿಕ ಭಾಷಣದ ಆಂಗ್ಲ ಅನುವಾದ

September 07th, 10:39 am

ಆ ನಿಟ್ಟಿನಲ್ಲಿ ಭಾರತ – ಆಸಿಯಾನ್ ಶೃಂಗಸಭೆಯ ಸಹ ಅಧ್ಯಕ್ಷತೆಯನ್ನು ವಹಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ.

15 ನೇ ಬ್ರಿಕ್ಸ್ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

August 23rd, 03:30 pm

15ನೇ ಬ್ರಿಕ್ಸ್ ಶೃಂಗಸಭೆಯ ಅದ್ಧೂರಿ ಆಯೋಜನೆ ಮತ್ತು ನಮಗೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ನಾನು ಮತ್ತೊಮ್ಮೆ ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ರಾಮಾಫೋಸಾ ಅವರನ್ನು ಅಭಿನಂದಿಸುತ್ತೇನೆ ಮತ್ತು ಧನ್ಯವಾದ ಹೇಳುತ್ತೇನೆ.

ಜಿ 20 ಆರೋಗ್ಯ ಸಚಿವರ ಸಭೆಯಲ್ಲಿ ಪ್ರಧಾನಮಂತ್ರಿಯವರ ವಿಡಿಯೋ ಸಂದೇಶದ ಪಠ್ಯ

August 18th, 02:15 pm

ಭಾರತದ 1.4 ಶತಕೋಟಿ ಜನರ ಪರವಾಗಿ, ನಾನು ನಿಮಗೆ ಭಾರತಕ್ಕೆ ಮತ್ತು ನನ್ನ ತವರು ರಾಜ್ಯ ಗುಜರಾತ್ ಗೆ ಬಹಳ ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ನಿಮ್ಮನ್ನು ಸ್ವಾಗತಿಸಲು ನನ್ನೊಂದಿಗೆ 2.4 ಮಿಲಿಯನ್ ವೈದ್ಯರು, 3.5 ಮಿಲಿಯನ್ ದಾದಿಯರು, 1.3 ಮಿಲಿಯನ್ ಅರೆವೈದ್ಯಕೀಯ ಕ್ಷೇತ್ರದ ತಜ್ಞರು, 1.6 ಮಿಲಿಯನ್ ಫಾರ್ಮಾಸಿಸ್ಟ್ ಗಳು ಮತ್ತು ಭಾರತದ ಆರೋಗ್ಯ ಕ್ಷೇತ್ರದಲ್ಲಿ ತೊಡಗಿರುವ ಲಕ್ಷಾಂತರ ಇತರರು ಸೇರಿದ್ದಾರೆ.

PM addresses G20 Health Ministers’ Meeting

August 18th, 01:52 pm

PM Modi addressed the G20 Health Ministers’ Meet held in Gandhinagar, Gujarat via video message. He underlined that the Covid-19 pandemic has reminded us that health should be at the center of our decisions. He said that time also showed us the value of international cooperation, whether in medicine and vaccine deliveries or in bringing our people back home

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ತೆದ್ರೋಸ್ ಅಧಾನೋಮ್ ಗೆಬ್ರಿಯೆಸಿಸ್ ಅವರನ್ನು ಭಾರತಕ್ಕೆ ಸ್ವಾಗತಿಸಿದ ಪ್ರಧಾನಮಂತ್ರಿ

August 16th, 02:39 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ತೆದ್ರೋಸ್ ಅಧಾನೋಮ್ ಗೆಬ್ರಿಯೆಸಿಸ್ ಅವರನ್ನು ಭಾರತಕ್ಕೆ ಸ್ವಾಗತಿಸಿದರು. ಶ್ರೀ ನರೇಂದ್ರ ಮೋದಿ ಅವರು ಡಾ.ತೆದ್ರೋಸ್ ಅವರನ್ನು “ತುಳಸಿ ಭಾಯ್ ‘ ಎಂದು ಕರೆಯುತ್ತಾರೆ, ಪ್ರಧಾನಮಂತ್ರಿ ಅವರು ಕಳೆದ ಸಲ ಮಹಾನಿರ್ದೇಶಕರನ್ನು ಭೇಟಿ ಮಾಡಿದ್ದ ವೇಳೆ ಈ ಹೆಸರು ನೀಡಿದ್ದರು.

ಗೋವಾದಲ್ಲಿ ನಡೆದ 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ನ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಭಾಷಾಂತರ

December 11th, 04:15 pm

ಸುಂದರವಾದ ಗೋವಾದಲ್ಲಿ ವಿಶ್ವ ಆಯುರ್ವೇದ ಕಾಂಗ್ರೆಸ್ ಗಾಗಿ ಭಾರತ ಮತ್ತು ವಿದೇಶಗಳಿಂದ ಬಂದು ಸೇರಿದ ಎಲ್ಲಾ ಸ್ನೇಹಿತರನ್ನು ನಾನು ಸ್ವಾಗತಿಸುತ್ತೇನೆ. ವಿಶ್ವ ಆಯುರ್ವೇದ ಕಾಂಗ್ರೆಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಭಾರತವು ತನ್ನ ಸ್ವಾತಂತ್ರ್ಯದ 'ಅಮೃತ ಕಾಲ' (ಸುವರ್ಣಯುಗ) ಕ್ಕೆ ಅಡಿಯಿಡಲು ಪ್ರಾರಂಭಿಸಿದ ಸುವರ್ಣ ಸಮಯದಲ್ಲಿ ಈ ಘಟನೆ ನಡೆಯುತ್ತಿದೆ. ನಮ್ಮ ಜ್ಞಾನ, ವಿಜ್ಞಾನ ಮತ್ತು ಸಾಂಸ್ಕೃತಿಕ ಅನುಭವದ ಮೂಲಕ ವಿಶ್ವ ಕಲ್ಯಾಣದ ಸಂಕಲ್ಪವು ನಮ್ಮ 'ಅಮೃತ ಕಾಲ'ದ ಒಂದು ಮಹತ್ತರ ಗುರಿಯಾಗಿದ್ದು, ಆಯುರ್ವೇದವು ಇದಕ್ಕೆ ಬಲವಾದ ಮತ್ತು ಪರಿಣಾಮಕಾರಿ ಮಾಧ್ಯಮವಾಗಿದೆ. ಭಾರತವು ಈ ವರ್ಷ ಜಿ -20 ಶೃಂಗ ಸಭೆಯ ಆತಿಥ್ಯ ಮತ್ತು ಅಧ್ಯಕ್ಷತೆಯನ್ನು ವಹಿಸುತ್ತಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬುದು ಜಿ-20 ಶೃಂಗಸಭೆಯ ಧ್ಯೇಯವಾಕ್ಯವಾಗಿದೆ. ವಿಶ್ವ ಆಯುರ್ವೇದ ಕಾಂಗ್ರೆಸ್ ನಲ್ಲಿ ನೀವೆಲ್ಲರೂ ಇಡೀ ವಿಶ್ವದ ಆರೋಗ್ಯದ ಜೊತೆಯಲ್ಲಿ ಈ ವಿಷಯಗಳನ್ನೂ ಚರ್ಚಿಸಿದ್ದೀರಿ. ವಿಶ್ವದ 30 ಕ್ಕೂ ಹೆಚ್ಚು ದೇಶಗಳು ಆಯುರ್ವೇದವನ್ನು ಸಾಂಪ್ರದಾಯಿಕ ವೈದ್ಯ ಪದ್ಧತಿಯಾಗಿ ಗುರುತಿಸಿರುವುದು ನನಗೆ ಬಹಳ ಸಂತೋಷ ತಂದ ವಿಷಯವಾಗಿದೆ. ಆಯುರ್ವೇದದ ಮನ್ನಣೆಗಾಗಿ ನಾವು ಸಂಘಟಿತರಾಗಿ ಅದನ್ನು ಹೆಚ್ಚು ಹೆಚ್ಚು ದೇಶಗಳಿಗೆ ತಲುಪಿಸಬೇಕಾಗಿದೆ.

PM addresses valedictory function of 9th World Ayurveda Congress

December 11th, 04:00 pm

PM Modi addressed the valedictory function of the 9th World Ayurveda Congress. He also inaugurated three National Ayush Institutes. Dwelling upon the philosophical underpinnings of Ayurveda the PM said, Ayurveda goes beyond treatment and promotes wellness, as he pointed out that the world is shifting towards this ancient way of life after going through various changes in trends.

Our youth should be skilled, confident and practical, NEP is preparing the ground for this: PM Modi

July 07th, 02:46 pm

PM Modi inaugurated Akhil Bhartiya Shiksha Samagam on implementation of the National Education Policy in Varanasi. The Prime Minister said that the basic premise of the National Education Policy was to take education out of narrow thinking and connect it with the modern ideas of the 21st century.

PM inaugurates Akhil Bhartiya Shiksha Samagam on implementation of NEP

July 07th, 02:45 pm

PM Modi inaugurated Akhil Bhartiya Shiksha Samagam on implementation of the National Education Policy in Varanasi. The Prime Minister said that the basic premise of the National Education Policy was to take education out of narrow thinking and connect it with the modern ideas of the 21st century.

ಜರ್ಮನಿಯ ಜಿ-7 ಶೃಂಗಸಭೆಯಲ್ಲಿ ‘ಒಗ್ಗೂಡಿದರೆ ಬಲಿಷ್ಠ: ಆಹಾರ ಭದ್ರತೆ ಮತ್ತು ಲಿಂಗ ಸಮಾನತೆ ನಿಟ್ಟಿನಲ್ಲಿ’’ ಕುರಿತ ಗೋಷ್ಠಿಯನ್ನುದ್ದೇಶಿಸಿ ಪ್ರಧಾನಿ ಅವರು ಮಾಡಿದ ಭಾಷಣದ ಅನುವಾದ.

June 27th, 11:59 pm

ನಾವು ಜಾಗತಿಕ ಉದ್ವಿಗ್ನ ವಾತಾವರಣದ ನಡುವೆ ಭೇಟಿಯಾಗುತ್ತಿದ್ದೇವೆ. ಭಾರತ ಸದಾ ಶಾಂತಿಯ ಪರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿಯೂ ಸಹ ನಾವು ನಿರಂತರವಾಗಿ ಸಂವಾದ ಮತ್ತು ರಾಜತಾಂತ್ರಿಕತೆಯ ಹಾದಿಗೆ ನಾವು ಕರೆ ನೀಡುತ್ತೇವೆ. ಈ ಭೌಗೋಳಿಕ ರಾಜಕೀಯ ಒತ್ತಡದ ಪರಿಣಾಮವು ಕೇವಲ ಯುರೋಪಿಗೆ ಸೀಮಿತವಾಗಿಲ್ಲ. ಇಂಧನ ಮತ್ತು ಆಹಾರ ಧಾನ್ಯಗಳ ಬೆಲೆ ಏರಿಕೆಯು ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಇಂಧನ ಭದ್ರತೆ ಮತ್ತು ಸುರಕ್ಷತೆ ವಿಶೇಷವಾಗಿ ಅಪಾಯದಲ್ಲಿದೆ. ಈ ಸವಾಲಿನ ಸಮಯದಲ್ಲಿ, ಭಾರತವು ಅಗತ್ಯವಿರುವ ಅನೇಕ ದೇಶಗಳಿಗೆ ಆಹಾರ ಧಾನ್ಯಗಳನ್ನು ಪೂರೈಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ ನಾವು ಸುಮಾರು 35,000 ಟನ್‌ಗಳಷ್ಟು ಗೋಧಿಯನ್ನು ಮಾನವೀಯ ನೆರವಾಗಿ ಆಫ್ಘಾನಿಸ್ತಾನಕ್ಕೆ ರವಾನಿಸಿದ್ದೇವೆ ಮತ್ತು ಅಲ್ಲಿ ಭಾರಿ ಭೂಕಂಪದ ನಂತರವೂ ಭಾರತವು ಪರಿಹಾರ ಸಾಮಗ್ರಿಗಳನ್ನು ತಲುಪಿಸಿದ ಮೊದಲ ದೇಶವಾಗಿದೆ. ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ನಾವು ನಮ್ಮ ನೆರೆಯ ಶ್ರೀಲಂಕಾಕ್ಕೆ ಸಹಾಯ ಮಾಡುತ್ತಿದ್ದೇವೆ.

ಜರ್ಮನಿಯಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ 'ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ: ಹವಾಮಾನ, ಇಂಧನ, ಆರೋಗ್ಯ' ಕುರಿತ ಗೋಷ್ಠಿಯಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಭಾಷಾಂತರ.

June 27th, 07:47 pm

ದುರದೃಷ್ಟವಶಾತ್, ವಿಶ್ವದ ಅಭಿವೃದ್ಧಿಯ ಗುರಿಗಳು ಮತ್ತು ಪರಿಸರ ಸಂರಕ್ಷಣೆಯ ನಡುವೆ ಮೂಲಭೂತ ಘರ್ಷಣೆ ಇದೆ ಎಂದು ನಂಬಲಾಗಿದೆ. ಬಡ ದೇಶಗಳು ಮತ್ತು ಬಡ ಜನರು ಪರಿಸರಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತಾರೆ ಎಂಬ ಮತ್ತೊಂದು ತಪ್ಪು ಕಲ್ಪನೆಯೂ ಇದೆ. ಆದರೆ, ಸಾವಿರಾರು ವರ್ಷಗಳ ಭಾರತದ ಇತಿಹಾಸವು ಈ ದೃಷ್ಟಿಕೋನವನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ. ಪ್ರಾಚೀನ ಭಾರತವು ಅಪಾರ ಸಮೃದ್ಧಿಯ ಕಾಲವನ್ನು ಕಂಡಿದೆ; ಆ ನಂತರ ನಾವು ಶತಮಾನಗಳ ಗುಲಾಮಗಿರಿಯನ್ನೂ ಸಹಿಸಿಕೊಂಡಿದ್ದೇವೆ, ಮತ್ತು ಈಗ ಸ್ವತಂತ್ರ ಭಾರತವು ಇಡೀ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಅತಿದೊಡ್ಡ ಆರ್ಥಿಕತೆ ಎನಿಸಿದೆ. ಆದರೆ ಈ ಇಡೀ ಅವಧಿಯಲ್ಲಿ, ಭಾರತವು ಪರಿಸರಕ್ಕೆ ಸಂಬಂಧಿಸಿದಂತೆ ತನ್ನ ಬದ್ಧತೆಯಲ್ಲಿ ಎಳ್ಳಷ್ಟೂ ರಾಜಿಗೆ ಅವಕಾಶ ನೀಡಿಲ್ಲ. ವಿಶ್ವದ ಒಟ್ಟು ಜನಸಂಖ್ಯೆಯ ಶೇ.17ರಷ್ಟು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದರೆ, ಜಾಗತಿಕ ಇಂಗಾಲದ ಹೊರಸೂಸುವಿಕೆಯಲ್ಲಿ ನಮ್ಮ ಕೊಡುಗೆ ಕೇವಲ 5% ಮಾತ್ರ. ಇದರ ಹಿಂದಿನ ಮುಖ್ಯ ಕಾರಣವೆಂದರೆ ನಮ್ಮ ಜೀವನಶೈಲಿ. ನಮ್ಮ ಜೀವನ ಶೈಲಿಯು ಪ್ರಕೃತಿಯೊಂದಿಗೆ ಸಹಬಾಳ್ವೆಯ ಸಿದ್ಧಾಂತವನ್ನು ಆಧರಿಸಿದೆ.

Democracy is in DNA of every Indian: PM Modi

June 26th, 06:31 pm

PM Modi addressed and interacted with the Indian community in Munich. The PM highlighted India’s growth story and mentioned various initiatives undertaken by the government to achieve the country’s development agenda. He also lauded the contribution of diaspora in promoting India’s success story and acting as brand ambassadors of India’s success.

ಜರ್ಮನಿಯ ಮ್ಯೂನಿಚ್‌ ನಲ್ಲಿ ಭಾರತೀಯ ಸಮುದಾಯದೊಂದಿಗೆ ಪ್ರಧಾನ ಮಂತ್ರಿಯವರ ಸಂವಾದ.

June 26th, 06:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮ್ಯೂನಿಚ್‌ನ ಆಡಿ ಡೋಮ್ನಲ್ಲಿ ಜರ್ಮನಿಯಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮತ್ತು ಸಂವಾದ ನಡೆಸಿದರು. ಜರ್ಮನಿಯ ಅತ್ಯಂತ ಕ್ರಿಯಾಶೀಲ ಮತ್ತು ಉತ್ಸಾಹಿ ಭಾರತೀಯ ಸಮುದಾಯದ ಸಾವಿರಾರು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

14ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ಭಾಗವಹಿಸುವಿಕೆ.

June 22nd, 06:15 pm

ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಜೂನ್ 23-24 ರಂದು ವರ್ಚುವಲ್ ಮೂಲಕ ಚೀನಾ ಆತಿಥ್ಯ ವಹಿಸಲಿರುವ 14 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಜೂನ್ 24 ರಂದು ಅತಿಥಿ ರಾಷ್ಟ್ರಗಳೊಂದಿಗೆ ಜಾಗತಿಕ ಅಭಿವೃದ್ಧಿ ಕುರಿತ ಉನ್ನತ ಮಟ್ಟದ ಸಂವಾದವೂ ಸೇರಿದೆ.

Prime Minister’s participation in the 14th BRICS Summit

June 21st, 03:00 pm

At the invitation of President Xi Jinping, Prime Minister Shri Narendra Modi will be attending the 14th BRICS Summit hosted by China in virtual format on 23-24 June 2022. This includes a High Level Dialogue on Global Development with guest countries on June 24.

IN-SPACe is for space, IN-SPACe is for pace, IN-SPACe is for ace: PM Modi

June 10th, 08:51 pm

PM Modi inaugurated headquarters of the Indian National Space Promotion and Authorisation Centre (IN-SPACe) at Bopal, Ahmedabad. The Prime Minister termed the launch of IN-SPACe as a ‘watch this space’ moment for the Indian space industry as it is a precursor to many development and opportunities.