ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ಜಿ20 ಭ್ರಷ್ಟಾಚಾರ ವಿರೋಧಿ ಸಚಿವರ ಸಭೆಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ವಿಡಿಯೊ ಸಂದೇಶದ ಕನ್ನಡ ಪಠ್ಯ

August 12th, 10:21 am

ಭೌತಿಕ ಸ್ವರೂಪದಲ್ಲಿ ನಡೆಯುತ್ತಿರುವ ಮೊದಲ ಜಿ20 ರಾಷ್ಟ್ರಗಳ ಭ್ರಷ್ಟಾಚಾರ-ವಿರೋಧಿ ಸಚಿವರ ಸಭೆಗೆ ನಾನು ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ನೊಬೆಲ್ ಪ್ರಶಸ್ತಿ ವಿಜೇತ ಗುರುದೇವ್ ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ನಗರದಲ್ಲಿ - ಅಂದರೆ ಕೋಲ್ಕತ್ತಾದಲ್ಲಿ, ನೀವು ಪರಸ್ಪರ ಭೇಟಿ ಮಾಡುತ್ತಿದ್ದೀರಿ. ಅವರ ಬರಹಗಳಲ್ಲಿ, ಅವರು ದುರಾಶೆಯ ವಿರುದ್ಧ ಎಚ್ಚರಿಸಿದ್ದಾರೆ, ಏಕೆಂದರೆ ಅದು ಸತ್ಯವನ್ನು ಅರಿತುಕೊಳ್ಳುವುದನ್ನು ತಡೆಯುತ್ತದೆ. ಪುರಾತನ ಭಾರತೀಯ ಉಪನಿಷತ್ತುಗಳು ಸಹ ‘ಮಾ ಗ್ರಿಧ’ವನ್ನು ಬಯಸುತ್ತವೆ, ಅಂದರೆ “ದುರಾಸೆ ಬೇಡ” ಎಂದೇ ಹೇಳುತ್ತವೆ.

ಜಿ-20 ಭ್ರಷ್ಟಾಚಾರ ನಿಗ್ರಹದ ಸಚಿವರ ಸಮಾವೇಶ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

August 12th, 09:00 am

ನೊಬೆಲ್ ಪ್ರಶಸ್ತಿ ವಿಜೇತ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರ ಸ್ವಂತ ನಗರವಾದ ಕೋಲ್ಕತ್ತಾಕ್ಕೆ ಗಣ್ಯರನ್ನು ಸ್ವಾಗತಿಸಿದ ಪ್ರಧಾನಿ, ಇದು ಭೌತಿಕವಾಗಿ ನಡೆಯುತ್ತಿರುವ ಮೊದಲ ಜಿ-20 ಭ್ರಷ್ಟಾಚಾರ ನಿಗ್ರಹದ ಸಚಿವರ ಸಮಾವೇಶವಾಗಿದೆ. ಟ್ಯಾಗೋರ್ ಅವರ ಬರಹಗಳನ್ನು ಉಲ್ಲೇಖಿಸಿದ ಪ್ರಧಾನಿ, ದುರಾಸೆ ಎಂಬುದು ಸತ್ಯ ಅರಿತುಕೊಳ್ಳುವುದನ್ನು ತಡೆಯುತ್ತದೆ. ಪ್ರಾಚೀನ ಭಾರತೀಯ ಉಪನಿಷತ್ತುಗಳಲ್ಲಿ ಉಲ್ಲೇಖವಾಗಿರುವ 'ಮಾ ಗ್ರಿಧಾ' ಅಂದರೆ 'ದುರಾಸೆ ಇರಬಾರದು' ಎಂಬ ಅರ್ತ ಸೂಚಿಸುತ್ತದೆ ಎಂದರು.