ಮಧ್ಯಪ್ರದೇಶದ ಶಹದೋಲ್‌ನಲ್ಲಿ ʻಕುಡಗೋಲು ಕೋಶ ರಕ್ತಹೀನತೆ ನಿರ್ಮೂಲನೆ ಅಭಿಯಾನʼಕ್ಕೆ ಚಾಲನೆ ನೀಡಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ
July 01st, 10:56 pm
ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಪಟೇಲ್ ಅವರೇ, ಮುಖ್ಯಮಂತ್ರಿ ಶ್ರೀ ಶಿವರಾಜ್ ಅವರೇ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಮನ್ಸುಖ್ ಮಾಂಡವೀಯ ಅವರೇ, ಶ್ರೀ ಫಗ್ಗನ್ ಸಿಂಗ್ ಕುಲಸ್ತೆ ಅವರೇ, ಪ್ರೊಫೆಸರ್ ಎಸ್.ಪಿ.ಸಿಂಗ್ ಬಘೇಲ್ ಅವರೇ, ಶ್ರೀಮತಿ ರೇಣುಕಾ ಸಿಂಗ್ ಸರುತಾ ಅವರೇ, ಡಾ. ಭಾರತಿ ಪವಾರ್ ಅವರೇ, ಶ್ರೀ ಬಿಶ್ವೇಶ್ವರ್ ತುಡು ಅವರೇ, ಸಂಸತ್ ಸದಸ್ಯ ಶ್ರೀ ವಿ.ಡಿ. ಶರ್ಮಾ ಅವರೇ, ಮಧ್ಯಪ್ರದೇಶ ಸರ್ಕಾರದ ಮಂತ್ರಿಗಳು, ಎಲ್ಲಾ ಶಾಸಕರು, ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ನಮ್ಮೊಂದಿಗೆ ಇರುವ ಇತರ ಗೌರವಾನ್ವಿತ ಅತಿಥಿಗಳು ಹಾಗೂ ನಮ್ಮೆಲ್ಲರನ್ನೂ ಆಶೀರ್ವದಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ನೆರೆದಿರುವ ನನ್ನ ಪ್ರೀತಿಯ ಸಹೋದರ-ಸಹೋದರಿಯರೇ!ಪ್ರಧಾನಮಂತ್ರಿ ಅವರು ಮಧ್ಯಪ್ರದೇಶದ ಶಾಹದೋಲ್ನಲ್ಲಿ ರಾಷ್ಟ್ರೀಯ ಸಿಕಲ್ ಸೆಲ್ ರಕ್ತಹೀನತೆ ನಿವಾರಣೆ ಮಿಷನ್ ಗೆ ಚಾಲನೆ ನೀಡಿದರು
July 01st, 03:29 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಶಾಹದೋಲ್ನಲ್ಲಿ ರಾಷ್ಟ್ರೀಯ ಸಿಕಲ್ ಸೆಲ್ ರಕ್ತಹೀನತೆ ನಿವಾರಣೆ ಮಿಷನ್ ಗೆ ಚಾಲನೆ ನೀಡಿದರು ಮತ್ತು ಫಲಾನುಭವಿಗಳಿಗೆ ಸಿಕಲ್ ಸೆಲ್ ಜೆನೆಟಿಕ್ ಸ್ಥಿತಿ ಕಾರ್ಡ್ ಗಳನ್ನು ವಿತರಿಸಿದರು. ಪ್ರಧಾನಮಂತ್ರಿಯವರು ಮಧ್ಯಪ್ರದೇಶದಲ್ಲಿ ಸುಮಾರು 3.57 ಕೋಟಿ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿ ಎಂ ಜೆ ಎ ವೈ) ಕಾರ್ಡ್ ಗಳ ವಿತರಣೆಗೂ ಚಾಲನೆ ನೀಡಿದರು. ಕಾರ್ಯಕ್ರಮದ ಸಂದರ್ಭದಲ್ಲಿ, 16 ನೇ ಶತಮಾನದ ಮಧ್ಯಭಾಗದಲ್ಲಿ ಗೊಂಡ್ವಾನಾವನ್ನು ಆಳಿದ ರಾಣಿ ದುರ್ಗಾವತಿ ಅವರಿಗೆ ಪ್ರಧಾನಿ ಗೌರವ ಸಲ್ಲಿಸಿದರು.ನೀರಿನ ಕುರಿತು ಅಖಿಲ ಭಾರತ ವಾರ್ಷಿಕ ರಾಜ್ಯ ಸಚಿವರ ವಾರ್ಷಿಕ ಸಮ್ಮೇಳನದಲ್ಲಿ ಪ್ರಧಾನಮಂತ್ರಿಯವರ ವೀಡಿಯೊ ಸಂದೇಶದ ಭಾಷಾಂತರ
January 05th, 09:55 am
ನೀರಿನ ಕುರಿತ ಮೊದಲ `ಅಖಿಲ ಭಾರತ ರಾಜ್ಯ ಸಚಿವರ ವಾರ್ಷಿಕ ಸಮ್ಮೇಳನ’ವು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಇಂದು, ಭಾರತವು ನೀರಿನ ಭದ್ರತೆಗೆ ಸಂಬಂಧಿಸಿದಂತೆ ಸರಿಸಾಟಿಯಿಲ್ಲದ ಕೆಲಸಗಳಲ್ಲಿ ತೊಡಗಿದೆ; ಜೊತೆಗೆ, ಹಿಂದೆ ಕಂಡು-ಕೇಳಿರದಷ್ಟು ಮಟ್ಟದಲ್ಲಿ ಹೂಡಿಕೆಗಳನ್ನು ಸಹ ಮಾಡುತ್ತಿದೆ. ನಮ್ಮ ಸಾಂವಿಧಾನಿಕ ವ್ಯವಸ್ಥೆಯಲ್ಲಿ, ನೀರಿನ ವಿಷಯವು ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ. ಜಲಸಂರಕ್ಷಣೆ ವಿಚಾರದಲ್ಲಿ ರಾಜ್ಯ ಸರಕಾರಗಳ ಪ್ರಯತ್ನಗಳು, ದೇಶದ ಸಾಮೂಹಿಕ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವಪೂರ್ಣವಾಗಿವೆ. ಆದ್ದರಿಂದ, ಮುಂದಿನ 25 ವರ್ಷಗಳ 'ಅಮೃತಕಾಲ'ದ ಪ್ರಯಾಣದಲ್ಲಿ 'ವಾಟರ್ ವಿಷನ್@2047'(ಜಲ ದೂರದೃಷ್ಟಿ @2047') ಪ್ರಮುಖ ಆಯಾಮವಾಗಿದೆ.ಪ್ರಧಾನಮಂತ್ರಿಯವರು ವಿಡಿಯೋ ಸಂದೇಶದ ಮೂಲಕ ನೀರಿನ ಪ್ರಥಮ ಅಖಿಲ ಭಾರತ ವಾರ್ಷಿಕ ರಾಜ್ಯ ಸಚಿವರ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಿದರು.
January 05th, 09:45 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಸಂದೇಶದ ಮೂಲಕ ನೀರಿನ ಪ್ರಥಮ ಅಖಿಲ ಭಾರತ ವಾರ್ಷಿಕ ರಾಜ್ಯ ಸಚಿವರ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಈ ಸಮ್ಮೇಳನದ ಧ್ಯೇಯವಾಕ್ಯ 'ವಾಟರ್ ವಿಷನ್ @ 2047' ಎಂಬುದಾಗಿದೆ. ಸುಸ್ಥಿರ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿಗಾಗಿ ಜಲಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮಾರ್ಗಗಳ ಬಗ್ಗೆ ಚರ್ಚಿಸಲು ಪ್ರಮುಖ ನೀತಿ ನಿರೂಪಕರನ್ನು ಒಟ್ಟುಗೂಡಿಸುವುದು ವೇದಿಕೆಯ ಉದ್ದೇಶವಾಗಿದೆ.