ಪ್ರಧಾನಮಂತ್ರಿಯವರು ಬಂಜಾರ ಸಂಸ್ಕೃತಿ ಮತ್ತು ಅದರ ಜನರ ಬಗ್ಗೆ ತಮ್ಮ ಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು

October 05th, 06:20 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮಹಾರಾಷ್ಟ್ರದ ವಾಶಿಮ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಂಜಾರ ಸಂಸ್ಕೃತಿ ಮತ್ತು ಅದರ ಜನರ ಬಗ್ಗೆ ತಮ್ಮ ಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು.

ಪ್ರಧಾನಮಂತ್ರಿಗಳಿಂದ ವಾಶಿಮ್ ನಲ್ಲಿರುವ ಬಂಜಾರ ಸಮುದಾಯದ ಸಂತರ ಭೇಟಿ

October 05th, 05:47 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾಶಿಮ್ ನಲ್ಲಿಂದು ಬಂಜಾರ ಸಮುದಾಯದ ಗೌರವಾನ್ವಿತ ಸಂತರನ್ನು ಭೇಟಿ ಮಾಡಿದರು. ಸಮಾಜ ಸೇವೆಗೆ ಅವರ ಪರಿಶ್ರಮವನ್ನು ಶ್ಲಾಘಿಸಿದರು.

ವಾಶಿಮ್ ನ ಪೊಹರಾ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ

October 05th, 02:35 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೊಹರಾ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಬಂಜಾರ ಸಂಸ್ಕೃತಿಯ ಪ್ರಮುಖ ಸಂಗೀತ ವಾದ್ಯವಾದ ನಂಗರಾವನ್ನು ಬಾರಿಸಿದ ಪ್ರಧಾನಮಂತ್ರಿ

October 05th, 02:31 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಾಶಿಮ್ ನಗರದಲ್ಲಿ ನಂಗರಾವನ್ನು ನುಡಿಸಿ ತಮ್ಮ ಕೈಚಳಕ ತೋರಿಸಿದರು. ಶ್ರೇಷ್ಠ ಬಂಜಾರ ಸಂಸ್ಕೃತಿಯಲ್ಲಿ ನಂಗಾರಾಗೆ ವಿಶೇಷ ಸ್ಥಾನವಿದೆ ಎಂದು ಅವರು ತಿಳಿಸಿದರು.

ಮಹಾರಾಷ್ಟ್ರದ ವಾಶಿಮ್ ನಲ್ಲಿ ಕೃಷಿ ಮತ್ತು ಪಶುಸಂಗೋಪನಾ ವಲಯದ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

October 05th, 12:05 pm

ದೇಶಾದ್ಯಂತದಿಂದ ಬಂದು ಭಾಗವಹಿಸುತ್ತಿರುವವರನ್ನು ನಾನು ಅಭಿವಂದಿಸುತ್ತೇನೆ - ನಮ್ಮ ಗೌರವಾನ್ವಿತ ಸಹೋದರ ಸಹೋದರಿಯರೇ ! ಜೈ ಸೇವಾಲಾಲ್! ಜೈ ಸೇವಾಲಾಲ್!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ವಾಶಿಮ್ ನಲ್ಲಿ ಸುಮಾರು 23,300 ಕೋಟಿ ರೂಪಾಯಿ ಮೌಲ್ಯದ ಕೃಷಿ ಮತ್ತು ಪಶುಸಂಗೋಪನಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿದರು

October 05th, 12:01 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ವಾಶಿಮ್ ನಲ್ಲಿ ಸುಮಾರು 23,300 ಕೋಟಿ ರೂಪಾಯಿ ಮೌಲ್ಯದ ಕೃಷಿ ಮತ್ತು ಪಶುಸಂಗೋಪನಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿದರು. ಪಿಎಂ-ಕಿಸಾನ್ ಸಮ್ಮಾನ್ ನಿಧಿಯ 18 ನೇ ಕಂತಿನ ವಿತರಣೆ, ನಮೋ ಶೆಟ್ಕರಿ ಮಹಾಸನ್ಮಾನ್ ನಿಧಿ ಯೋಜನೆಯ 5 ನೇ ಕಂತಿನ ಪ್ರಾರಂಭ, ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) ಅಡಿಯಲ್ಲಿ 7,500 ಕ್ಕೂ ಹೆಚ್ಚು ಯೋಜನೆಗಳ ಸಮರ್ಪಣೆ, 9,200 ರೈತ ಉತ್ಪಾದಕ ಸಂಸ್ಥೆಗಳು, ಮಹಾರಾಷ್ಟ್ರದಾದ್ಯಂತ ಒಟ್ಟು 19 ಮೆಗಾವ್ಯಾಟ್ ಸಾಮರ್ಥ್ಯದ ಐದು ಸೌರ ಉದ್ಯಾನಗಳು ಮತ್ತು ಜಾನುವಾರು ಮತ್ತು ಸ್ಥಳೀಯ ಲಿಂಗ-ವಿಂಗಡಿಸಲಾದ ವೀರ್ಯ ತಂತ್ರಜ್ಞಾನಕ್ಕಾಗಿ ಏಕೀಕೃತ ಜೀನೋಮಿಕ್ ಚಿಪ್ ಅನ್ನು ಪ್ರಾರಂಭಿಸುವುದು ಈ ಉಪಕ್ರಮಗಳಲ್ಲಿ ಸೇರಿವೆ.