ಶ್ರೀಲ ಪ್ರಭುಪಾದ ಜೀ ಅವರ 150ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

February 08th, 01:00 pm

ಈ ಪವಿತ್ರ ಸಂದರ್ಭದಲ್ಲಿ ನೆರೆದಿದ್ದ ಎಲ್ಲ ಪೂಜ್ಯ ಸಾಧುಗಳು, ಆಚಾರ್ಯ ಗೌಡಿಯಾ ಮಿಷನ್ ನ ಪೂಜ್ಯ ಭಕ್ತಿ ಸುಂದರ್ ಸನ್ಯಾಸಿ ಜೀ, ನನ್ನ ಸಂಪುಟ ಸಹೋದ್ಯೋಗಿಗಳಾದ ಅರ್ಜುನ್ ರಾಮ್ ಮೇಘವಾಲ್ ಜೀ, ಮೀನಾಕ್ಷಿ ಲೇಖಿ ಜೀ, ರಾಷ್ಟ್ರ ಮತ್ತು ಪ್ರಪಂಚದಾದ್ಯಂತದ ಶ್ರೀಕೃಷ್ಣನ ಭಕ್ತರು, ಗೌರವಾನ್ವಿತ ಅತಿಥಿಗಳು, ಮಹಿಳೆಯರೇ ಮತ್ತು ಮಹನೀಯರೇ!

ಶ್ರೀಲ ಪ್ರಭುಪಾದ ಜೀ ಅವರ 150 ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾತನಾಡಿದರು

February 08th, 12:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಶ್ರೀಲ ಪ್ರಭುಪಾದ ಜೀ ಅವರ 150 ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಆಚಾರ್ಯ ಶ್ರೀಲ ಪ್ರಭುಪಾದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು ಮತ್ತು ಅವರ ಗೌರವಾರ್ಥವಾಗಿ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ಗೌಡಿಯ ಮಿಷನ್‌ ಸಂಸ್ಥಾಪಕರಾದ ಆಚಾರ್ಯ ಶ್ರೀಲ ಪ್ರಭುಪಾದರು ವೈಷ್ಣವ ಪಂಥದ ಮೂಲಭೂತ ತತ್ವಗಳನ್ನು ಸಂರಕ್ಷಿಸುವಲ್ಲಿ ಮತ್ತು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

ಮಥುರಾದಲ್ಲಿ ಸಂತ ಮೀರಾಬಾಯಿ ಅವರ 525 ನೇ ಜನ್ಮ ದಿನಾಚರಣೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ

November 23rd, 07:00 pm

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬ್ರಜ್ ನ ಗೌರವಾನ್ವಿತ ಸಂತರು, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ, ನಮ್ಮ ಇಬ್ಬರು ಉಪಮುಖ್ಯಮಂತ್ರಿಗಳು, ಸಂಪುಟದ ಹಲವಾರು ಸದಸ್ಯರು, ಮಥುರಾದ ಸಂಸತ್ ಸದಸ್ಯರು, ಸಹೋದರಿ ಹೇಮಾ ಮಾಲಿನಿ ಜೀ ಮತ್ತು ಬ್ರಜ್ ನ ನನ್ನ ಪ್ರೀತಿಯ ನಿವಾಸಿಗಳೇ!

​​​​​​​ಉತ್ತರ ಪ್ರದೇಶದ ಮಥುರಾದಲ್ಲಿ ಸಂತ ಮೀರಾಬಾಯಿ ಜನ್ಮೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ

November 23rd, 06:27 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಮಥುರಾದಲ್ಲಿ ಸಂತ ಮೀರಾಬಾಯಿ ಅವರ 525ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಸಂತ ಮೀರಾಬಾಯಿ ಜನ್ಮೋತ್ಸವದಲ್ಲಿ ಭಾಗವಹಿಸಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತ ಮೀರಾ ಬಾಯಿ ಅವರ ಗೌರವಾರ್ಥ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ವಸ್ತುಪ್ರದರ್ಶನದಲ್ಲಿ ಹೆಜ್ಜೆ ಹಾಕಿದ ಅವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಸಾಕ್ಷಿಯಾದರು. ಈ ಸಂದರ್ಭವು ಸಂತ ಮೀರಾಬಾಯಿ ಅವರ ಸ್ಮರಣಾರ್ಥ ವರ್ಷವಿಡೀ ಕಾರ್ಯಕ್ರಮಗಳ ಸರಣಿಯ ಚಾಲನೆಗೂ ನಾಂದಿ ಹಾಡಿತು.

​​​​​​​ ಮಕ್ಕಳೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದ ಪ್ರಧಾನಮಂತ್ರಿಯವರು

August 30th, 04:39 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು 7, ಲೋಕ ಕಲ್ಯಾಣ ಮಾರ್ಗದಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದರು.

ಇದು ಭಾರತದ ಬೆಳವಣಿಗೆಯ ಕಥೆಯ ತಿರುವು: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

November 28th, 11:30 am

ಇಂದು ಮತ್ತೊಮ್ಮೆ ನಾವು ಮನದ ಮಾತಿನಲ್ಲಿ ಒಗ್ಗೂಡುತ್ತಿದ್ದೇವೆ. 2 ದಿನಗಳ ನಂತರ ಡಿಸೆಂಬರ್ ತಿಂಗಳು ಆರಂಭವಾಗುತ್ತಿದೆ. ಡಿಸೆಂಬರ್ ಬರುತ್ತಿದ್ದಂತೆ ಮಾನಸಿಕವಾಗಿ ನಮಗೆ ಅಂತೂ ವರ್ಷ ಮುಗಿಯಿತು ಎಂದೆನ್ನಿಸುತ್ತದೆ. ಇದು ವರ್ಷದ ಕೊನೆಯ ಮಾಸವಾಗಿದೆ. ನವ ವರ್ಷಕ್ಕೆ ಹೊಸ ಯೋಜನೆಗಳನ್ನು ಹೆಣೆಯಲಾರಂಭಿಸುತ್ತೇವೆ. ಇದೇ ತಿಂಗಳು ನೌಕಾಪಡೆ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನೂ ದೇಶ ಆಚರಿಸುತ್ತದೆ. ಡಿಸೆಂಬರ್ 16 ರಂದು 1971 ನೇ ವರ್ಷದಲ್ಲಿ ನಡೆದ ಯುದ್ಧದ ಸ್ವರ್ಣ ಜಯಂತಿಯನ್ನು ದೇಶ ಆಚರಿಸುತ್ತಿದೆ ಎಂದು ನಮಗೆಲ್ಲ ತಿಳಿದಿದೆ. ನಾನು ಈ ಎಲ್ಲ ಸಂದರ್ಭಗಳಲ್ಲಿ ದೇಶದ ಸುರಕ್ಷತಾ ಬಲವನ್ನು ಸ್ಮರಿಸುತ್ತೇನೆ. ನಮ್ಮ ಯೋಧರನ್ನು ಸ್ಮರಿಸುತ್ತೇನೆ ಹಾಗೂ ವಿಶೇಷವಾಗಿ ಇಂಥ ಯೋಧರಿಗೆ ಜನ್ಮ ನೀಡಿದ ವೀರ ಮಾತೆಯರನ್ನು ಸ್ಮರಿಸುತ್ತೇನೆ. ಎಂದಿನಂತೆ ಈ ಬಾರಿಯೂ ನನಗೆ ನಮೋ ಆಪ್ ನಲ್ಲಿ ಮತ್ತು ಮೈ ಗೌ ನಲ್ಲಿ ನಿಮ್ಮ ಹಲವಾರು ಸಲಹೆ ಸೂಚನೆಗಳು ದೊರೆತಿವೆ. ನೀವು ನನ್ನನ್ನು ನಿಮ್ಮ ಕುಟುಂಬ ಸದಸ್ಯನಂತೆ ಪರಿಗಣಿಸಿ ಸುಖ ದುಖಃಗಳನ್ನು ಹಂಚಿಕೊಂಡಿದ್ದೀರಿ. ಇದರಲ್ಲಿ ಬಹಳಷ್ಟು ಯುವಜನತೆ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಇದ್ದಾರೆ. ಮನದ ಮಾತಿನ ನಮ್ಮ ಈ ಕುಟುಂಬ ನಿರಂತರವಾಗಿ ವೃದ್ಧಿಸುತ್ತಿದೆ ಮತ್ತು ಮನಸ್ಸುಗಳು ಬೆರೆಯುತ್ತಿವೆ ಗುರಿಯೊಂದಿಗೂ ಬೆಸೆಯುತ್ತಿವೆ ಎಂದು ನನಗೆ ಬಹಳ ಸಂತೋಷವೆನಿಸುತ್ತದೆ. ಗಾಢವಾಗಿ ಬೇರೂರುತ್ತಿರುವ ನಮ್ಮ ಸಂಬಂಧಗಳು ನಮ್ಮ ನಡುವೆ ನಿರಂತರವಾಗಿ ಸಕಾರಾತ್ಮಕತೆಯನ್ನು ಪ್ರವಹಿಸುತ್ತಿವೆ.

ಪ್ರಧಾನಮಂತ್ರಿ ಅವರಿಂದ ಕೇದಾರನಾಥದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಲೋಕಾರ್ಪಣೆ

November 05th, 10:20 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇದಾರನಾಥದಲ್ಲಿಂದು ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು ಮತ್ತು ಪೂರ್ಣಗೊಂಡಿರುವ ಹಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅವರು ಶ್ರೀ ಆದಿ ಶಂಕರಾಚಾರ್ಯರ ಸಮಾಧಿಯನ್ನು ಉದ್ಘಾಟಿಸಿದರು ಮತ್ತು ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಅಲ್ಲದೆ, ಅವರು ಹಾಲಿ ನಡೆಯುತ್ತಿರುವ ಹಾಗೂ ಪೂರ್ಣಗೊಂಡಿರುವ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿದರು.

ಅಲಿಘರ್ ನಲ್ಲಿ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ರಾಜ್ಯ ವಿಶ್ವವಿದ್ಯಾನಿಲಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ

September 14th, 12:01 pm

ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಜೀ, ಉತ್ತರ ಪ್ರದೇಶದ ಜನಪ್ರಿಯ ಮತ್ತು ಉತ್ಸಾಹೀ, ಸಿಡಿಗುಂಡಿನಂತಹ ಮಾತಿನ ಮುಖ್ಯಮಂತ್ರಿ, ಯೋಗಿ ಆದಿತ್ಯನಾಥ ಜೀ, ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಜೀ, ಉತ್ತರ ಪ್ರದೇಶ ಸರಕಾರದ ಸಚಿವರೇ, ಇತರ ಸಂಸತ್ ಸದಸ್ಯರೇ, ಶಾಸಕರೇ ಮತ್ತು ಅಲಿಘರ್ ನ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ,

ಅಲಿಗಢದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ರಾಜ್ಯ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ

September 14th, 11:45 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಲಿಗಢದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ರಾಜ್ಯ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನ ಅಲಿಗಢ ನೋಡ್‌ ಮತ್ತು ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ರಾಜ್ಯ ವಿಶ್ವವಿದ್ಯಾಲಯದ ಪ್ರದರ್ಶನ ಮಾದರಿಗಳನ್ನೂ ಅವರು ವೀಕ್ಷಿಸಿದರು.

ಭಾರತದ ಯುವಜನತೆ ಈಗ ಏನಾದರೂ ದೊಡ್ಡಪ್ರಮಾಣದಲ್ಲಿ ಹೊಸ ಪ್ರಯತ್ನವನ್ನು ಮಾಡಲು ಬಯಸುತ್ತಾರೆ: ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.

August 29th, 11:30 am

ಮನ್ ಕಿ ಬಾತ್ ಸಮಯದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೇಜರ್ ಧ್ಯಾನಚಂದ್ ಅವರಿಗೆ ಗೌರವ ಸಲ್ಲಿಸಿದರು ಮತ್ತು ವಿಶ್ವ ವೇದಿಕೆಯಲ್ಲಿ ದೇಶವನ್ನು ಹೆಮ್ಮೆಪಡುವಂತೆ ಮಾಡಿದ ನಮ್ಮ ಒಲಿಂಪಿಯನ್ ಗಳ ಬಗ್ಗೆ ಮಾತನಾಡಿದರು. ದೇಶದ ಯುವಕರು ಅಪಾಯಗಳನ್ನು ತೆಗೆದುಕೊಂಡು ಮುಂದೆ ಸಾಗುವ ಸಾಮರ್ಥ್ಯಕ್ಕಾಗಿ ಅವರು ಶ್ಲಾಘಿಸಿದರು. ಪ್ರಧಾನಮಂತ್ರಿಯವರು ನಮ್ಮ ನುರಿತ ಮಾನವಶಕ್ತಿಯ ಪ್ರಯತ್ನಗಳನ್ನು ಎತ್ತಿ ತೋರಿಸಿದರು ಮತ್ತು ಭಗವಾನ್ ವಿಶ್ವಕರ್ಮರಿಗೆ ಗೌರವ ಸಲ್ಲಿಸಿದರು.

Through the Swachh Bharat Abhiyan, we are ensuring cleaner and healthier environment for our children: PM Modi

February 11th, 12:45 pm

PM Modi took part in the 3 billionth meal of Akshaya Patra mid-day meal programme in Vrindavan today where he served food to children. Addressing a gathering at the event, PM Modi spoke at length about Centre's flagship initiatives like Mission Indradhanush and National Nutrition Mission. Stressing on cleanliness, the PM said, Swachhata is an important aspect of any child's health. Through the Swachh Bharat Abhiyan, we are ensuring cleaner and healthier environment fo rour children.

3 ನೇ ಶತ ಕೋಟಿ ಸೌಲಭ್ಯ ವಂಚಿತ ಮಕ್ಕಳ ಊಟದ ವ್ಯವಸ್ಥೆಗೆ ಬೃಂದಾವನದಲ್ಲಿ ಪ್ರಧಾನ ಮಂತ್ರಿಗಳಿಂದ ಸಾಂಕೇತಿಕ ಚಾಲನೆ

February 11th, 12:44 pm

ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀ ರಾಮ್ ನಾಯಕ್, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಅಕ್ಷಯ ಪಾತ್ರಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮಧು ಪಂಡಿತ್ ದಾಸ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಾಳೆ ಬೃಂದಾವನದಲ್ಲಿ ಮಕ್ಕಳಿಗೆ 3 ಶತಕೋಟಿಯ ಊಟ ಬಡಿಸಲಿರುವ ಪಿ.ಎಂ.

February 10th, 12:27 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರ ಫೆಬ್ರವರಿ 11ರಂದು ಉತ್ತರ ಪ್ರದೇಶದ ಬೃಂದಾವನಕ್ಕೆ ಭೇಟಿ ನೀಡಲಿದ್ದಾರೆ.