ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ 'ಪಿಎಂ ವಿಶ್ವಕರ್ಮ' ವಾರ್ಷಿಕೋತ್ಸವ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 20th, 11:45 am
2 ದಿನಗಳ ಹಿಂದೆಯಷ್ಟೇ ವಿಶ್ವಕರ್ಮ ಜಯಂತಿ ಆಚರಿಸಿದ್ದೆವು. ಇಂದು ನಾವು ವಾರ್ಧಾದ ಪವಿತ್ರ ಭೂಮಿಯಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಯಶಸ್ಸನ್ನು ಆಚರಿಸುತ್ತಿದ್ದೇವೆ. 1932ರ ಇದೇ ದಿನದಂದು ಮಹಾತ್ಮ ಗಾಂಧೀಜಿ ಅವರು ಅಸ್ಪೃಶ್ಯತೆಯ ವಿರುದ್ಧ ತಮ್ಮ ಅಭಿಯಾನ ಆರಂಭಿಸಿದ್ದರು ಎಂಬುದು ಇಂದಿನ ವಿಶೇಷ. ಈ ಹಿನ್ನೆಲೆಯಲ್ಲಿ ವಿನೋಬಾ ಭಾವೆ ಅವರ ಪುಣ್ಯಭೂಮಿ, ಮಹಾತ್ಮ ಗಾಂಧಿ ಅವರ ‘ಕರ್ಮಭೂಮಿ’ ಮತ್ತು ವಾರ್ಧಾ ಭೂಮಿಯಲ್ಲಿ ವಿಶ್ವಕರ್ಮ ಯೋಜನೆಯ 1 ವರ್ಷದ ಸಂಭ್ರಮಾಚರಣೆಯು ನಮ್ಮ ‘ವಿಕಸಿತ ಭಾರತ’(ಅಭಿವೃದ್ಧಿ ಹೊಂದಿದ ಭಾರತ)ದ ಸಂಕಲ್ಪಕ್ಕೆ ಹೊಸ ಚೈತನ್ಯ ನೀಡುವ ಸಾಧನೆ ಮತ್ತು ಸ್ಫೂರ್ತಿಯ ಸಂಗಮವಾಗಿದೆ. ವಿಶ್ವಕರ್ಮ ಯೋಜನೆ ಮೂಲಕ ನಾವು ಶ್ರಮದ ಮೂಲಕ ಸಮೃದ್ಧಿ ಮತ್ತು ಕೌಶಲ್ಯದ ಮೂಲಕ ಉತ್ತಮ ಭವಿಷ್ಯದ ಬದ್ಧತೆ ಹೊಂದಿದ್ದೇವೆ. ವಾರ್ಧಾದಲ್ಲಿ ಬಾಪು ಅವರ ಸ್ಫೂರ್ತಿಗಳು ಈ ಬದ್ಧತೆಗಳನ್ನು ಪೂರೈಸಲು ನಮಗೆ ಸಹಾಯ ಮಾಡುತ್ತದೆ. ಈ ಉಪಕ್ರಮಕ್ಕೆ ಸಂಬಂಧಿಸಿದ ಎಲ್ಲರಿಗೂ ಮತ್ತು ದೇಶಾದ್ಯಂತದ ಎಲ್ಲಾ ಫಲಾನುಭವಿಗಳಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
September 20th, 11:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ‘ಆಚಾರ್ಯ ಚಾಣಕ್ಯ ಕೌಶಲ್ಯ ಅಭಿವೃದ್ಧಿ’ಯೋಜನೆ ಮತ್ತು ‘ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ಮಹಿಳಾ ಸ್ಟಾರ್ಟಪ್ ಯೋಜನೆʼಗೆ ಚಾಲನೆ ನೀಡಿದರು. ಪ್ರಧಾನಮಂತ್ರಿ ವಿಶ್ವಕರ್ಮ ಫಲಾನುಭವಿಗಳಿಗೆ ಪ್ರಮಾಣಪತ್ರಗಳು ಮತ್ತು ಸಾಲಗಳನ್ನು ಬಿಡುಗಡೆ ಮಾಡಿದರು ಮತ್ತು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಒಂದು ವರ್ಷದ ಪ್ರಗತಿಯನ್ನು ಗುರುತಿಸುವ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು. ಮಹಾರಾಷ್ಟ್ರದ ಅಮರಾವತಿಯಲ್ಲಿ ಪ್ರಧಾನಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ ಅಂಡ್ ಅಪಾರಲ್ (ಪಿಎಂ ಮಿತ್ರಾ) ಪಾರ್ಕ್ ಗೆ ಶ್ರೀ ಮೋದಿಯವರು ಶಂಕುಸ್ಥಾಪನೆ ಮಾಡಿದರು. ಈ ಸಂದರ್ಭದಲ್ಲಿ ಆಯೋಜಿಸಲಾದ ವಸ್ತುಪ್ರದರ್ಶನವನ್ನು ಪ್ರಧಾನಿಯವರು ವೀಕ್ಷಿಸಿದರು.PM Modi attends News18 Rising Bharat Summit
March 20th, 08:00 pm
Prime Minister Narendra Modi attended and addressed News 18 Rising Bharat Summit. At this time, the heat of the election is at its peak. The dates have been announced. Many people have expressed their opinions in this summit of yours. The atmosphere is set for debate. And this is the beauty of democracy. Election campaigning is in full swing in the country. The government is keeping a report card for its 10-year performance. We are charting the roadmap for the next 25 years. And planning the first 100 days of our third term, said PM Modi.ವಿಶ್ವಕರ್ಮ ಯೋಜನೆ ಮತ್ತು ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ‘ಕುಮ್ಹಾರ್’ ಸಮುದಾಯದ ಮಹಿಳಾ ಉದ್ಯಮಿ
December 27th, 02:37 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಾಸ್ತವೋಪಮದ (ವಿಡಿಯೋ ಕಾನ್ಫರೆನ್ಸಿಂಗ್) ಮೂಲಕ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.The egoistic Congress-led Alliance intends to destroy the composite culture of Santana Dharma in both Rajasthan & India: PM Modi
September 25th, 04:03 pm
PM Modi addressed the Parivartan Sankalp Mahasabha in Jaipur, Rajasthan. While addressing the event PM Modi recalled Pt. Deendayal Upadhyaya on his birth anniversary. He said, “It is his thoughts and principles that have served as an inspiration to put an end to the Congress-led misrule in Rajasthan.PM Modi addresses the Parivartan Sankalp Mahasabha in Jaipur, Rajasthan
September 25th, 04:02 pm
PM Modi addressed the Parivartan Sankalp Mahasabha in Jaipur, Rajasthan. While addressing the event PM Modi recalled Pt. Deendayal Upadhyaya on his birth anniversary. He said, “It is his thoughts and principles that have served as an inspiration to put an end to the Congress-led misrule in Rajasthan.ಜಿ20 ಸಂಸ್ಕೃತಿ ಸಚಿವರ ಸಭೆಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಪಠ್ಯ
August 26th, 10:15 am
ಕಾಶಿ ಎಂದೂ ಕರೆಯಲ್ಪಡುವ ವಾರಣಾಸಿಗೆ ಸುಸ್ವಾಗತ. ನನ್ನ ಸಂಸದೀಯ ಕ್ಷೇತ್ರವಾಗಿರುವ ವಾರಣಾಸಿಯಲ್ಲಿ ನೀವೆಲ್ಲರೂ ಭೇಟಿಯಾಗುತ್ತಿರುವುದು ನನಗೆ ಸಂತಸ ತಂದಿದೆ. ಕಾಶಿ ಕೇವಲ ವಿಶ್ವದ ಅತ್ಯಂತ ಹಳೆಯ ಜೀವಂತ ನಗರವಲ್ಲ. ಇಲ್ಲಿಂದ ಸ್ವಲ್ಪ ದೂರದಲ್ಲಿ ಬುದ್ಧನು ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ಸಾರನಾಥ ಇದೆ. ಕಾಶಿಯನ್ನು सुज्ञान, धर्म, और सत्यराशि'’ (ಸುಜ್ಞಾನ್, ಧರ್ಮ, ಔರ್ ಸತ್ಯರಾಶಿ) ಎಂದರೆ, ಜ್ಞಾನ, ಕರ್ತವ್ಯ ಮತ್ತು ಸತ್ಯದ ನಿಧಿ ನಗರ ಎಂದು ಕೂಡಾ ಹೇಳಲಾಗುತ್ತದೆ. ಇದು ನಿಜವಾಗಿಯೂ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜಧಾನಿಯಾಗಿದೆ. ಗಂಗಾ ಆರತಿಯನ್ನು ವೀಕ್ಷಿಸಲು, ಸಾರನಾಥಕ್ಕೆ ಭೇಟಿ ನೀಡಲು ಮತ್ತು ಕಾಶಿಯ ಖಾದ್ಯಭಕ್ಷ್ಯಗಳ ಸವಿರುಚಿ ಆಸ್ವಾದನೆ ಮಾಡಲು ನಿಮ್ಮ ಕಾರ್ಯಕ್ರಮಗಳ ನಡುವೆ ಸ್ವಲ್ಪ ಸಮಯವನ್ನು ಇಟ್ಟುಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ.ʻಜಿ-20 ಸಂಸ್ಕೃತಿ ಸಚಿವರ ಸಭೆʼಯನ್ನು ಉದ್ದೇಶಿಸಿ ಪ್ರಧಾನಿ ಭಾಷಣ
August 26th, 09:47 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ʻಜಿ 20 ಸಂಸ್ಕೃತಿ ಸಚಿವರ ಸಭೆʼಯನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು.ಮಧ್ಯಪ್ರದೇಶದ ರೋಜ್ ಗಾರ್ ಮೇಳದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ವಿಡಿಯೋ ಸಂದೇಶದ ಕನ್ನಡ ಅನುವಾದ
August 21st, 12:15 pm
ಇಂದು ನೀವೆಲ್ಲರೂ ಈ ಐತಿಹಾಸಿಕ ಅವಧಿಯಲ್ಲಿ ಬೋಧನೆಯ ಈ ನಿರ್ಣಾಯಕ ಜವಾಬ್ದಾರಿಯೊಂದಿಗೆ ನಿಮ್ಮನ್ನು ತೊಡಗಿಸಿಕೊಂಡಿದ್ದೀರಿ. ಈ ವರ್ಷ, ದೇಶದ ಅಭಿವೃದ್ಧಿಯಲ್ಲಿ ರಾಷ್ಟ್ರೀಯ ಪಾತ್ರವು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರ ಬಗ್ಗೆ ನಾನು ಕೆಂಪು ಕೋಟೆಯಿಂದ ವಿವರವಾಗಿ ಮಾತನಾಡಿದ್ದೇನೆ. ಭಾರತದ ಭವಿಷ್ಯದ ಪೀಳಿಗೆಯನ್ನು ರೂಪಿಸುವುದು, ಅವರನ್ನು ಆಧುನಿಕತೆಗೆ ರೂಪಿಸುವುದು ಮತ್ತು ಅವರಿಗೆ ಹೊಸ ದಿಕ್ಕನ್ನು ನೀಡುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಧ್ಯಪ್ರದೇಶದ ಪ್ರಾಥಮಿಕ ಶಾಲೆಗಳಲ್ಲಿ ನೇಮಕಗೊಂಡ 5500 ಕ್ಕೂ ಹೆಚ್ಚು ಶಿಕ್ಷಕರಿಗೆ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ಕಳೆದ 3 ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ ಸುಮಾರು 50 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಇದಕ್ಕಾಗಿ ನಾನು ರಾಜ್ಯ ಸರ್ಕಾರವನ್ನೂ ಅಭಿನಂದಿಸುತ್ತೇನೆ.ಮಧ್ಯಪ್ರದೇಶದ ʻಉದ್ಯೋಗ ಮೇಳʼ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
August 21st, 11:50 am
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ನೇಮಕಾತಿ ಪತ್ರಗಳನ್ನು ಪಡೆಯುತ್ತಿರುವ ಉದ್ಯೋಗಿಗಳು ಈ ಐತಿಹಾಸಿಕ ಅವಧಿಯಲ್ಲಿ ಬೋಧನೆಯ ಮಹತ್ವದ ಜವಾಬ್ದಾರಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು. ದೇಶದ ಅಭಿವೃದ್ಧಿಯಲ್ಲಿ ʻರಾಷ್ಟ್ರೀಯ ವ್ಯಕ್ತಿತ್ವʼವು ವಹಿಸುವ ನಿರ್ಣಾಯಕ ಪಾತ್ರವನ್ನು ವಿವರಿಸಿದ ತಮ್ಮ ಕೆಂಪು ಕೋಟೆಯ ಭಾಷಣದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇಂದು ಉದ್ಯೋಗ ಪಡೆಯುತ್ತಿರುವ ಎಲ್ಲರೂ ಭಾರತದ ಭವಿಷ್ಯದ ಪೀಳಿಗೆಯನ್ನು ರೂಪಿಸುವ, ದೇಶವನ್ನು ಆಧುನೀಕರಿಸುವ ಮತ್ತು ದೇಶಕ್ಕೆ ಹೊಸ ದಿಕ್ಕನ್ನು ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಒತ್ತಿ ಹೇಳಿದರು. ಈ ಉದ್ಯೋಗ ಮೇಳದ ಮೂಲಕ ಮಧ್ಯಪ್ರದೇಶದ ಪ್ರಾಥಮಿಕ ಶಾಲೆಗಳಿಗೆ ನೇಮಕಗೊಂಡಿರುವ ಐದೂವರೆ ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಅವರು ಶುಭ ಕೋರಿದರು. ಕಳೆದ 3 ವರ್ಷಗಳಲ್ಲಿ ಮಧ್ಯಪ್ರದೇಶ ರಾಜ್ಯದಲ್ಲಿ ಸುಮಾರು 50 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು ಮತ್ತು ಈ ಸಾಧನೆಗಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸಿದರು.ಸಾಂಪ್ರದಾಯಿಕ ಕರಕುಶಲ ಕಲೆಗಳಲ್ಲಿ ನುರಿತ ವ್ಯಕ್ತಿಗಳಿಗೆ ಅನುಕೂಲವಾಗುವಂತೆ 'ವಿಶ್ವಕರ್ಮ ಯೋಜನೆ' ಘೋಷಿಸಿದ ಪ್ರಧಾನಮಂತ್ರಿ
August 15th, 02:38 pm
77 ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬರುವ ದಿನಗಳಲ್ಲಿ 'ವಿಶ್ವಕರ್ಮ ಯೋಜನೆ'ಯನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಸಾಂಪ್ರದಾಯಿಕ ಕರಕುಶಲತೆಗಳಲ್ಲಿ ನುರಿತ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಯೋಜನೆಯನ್ನು ಯೋಜಿಸಲಾಗಿದೆ.