ಜಾಗತಿಕ ಹೂಡಿಕೆದಾರರ ವರ್ಚುವಲ್ ದುಂಡುಮೇಜಿನ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಮಾಡಿದ ಭಾಷಣದ ಪಠ್ಯ
November 05th, 07:10 pm
ನಿಮ್ಮನ್ನು ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ. ನಮ್ಮೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುವ ನಿಮ್ಮ ಉತ್ಸುಕತೆಯನ್ನು ಕಂಡು ನನಗೆ ಸಂತಸವಾಗುತ್ತಿದೆ. ಇಬ್ಬರು ಪರಸ್ಪರ ನಮ್ಮ ದೃಷ್ಟಿಕೋನಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ ಎಂಬ ಭರವಸೆ ನನಗಿದ್ದು, ಅದರ ಪರಿಣಾಮ ನಿಮ್ಮ ಯೋಜನೆಗಳು ಮತ್ತು ನಮ್ಮ ಕನಸುಗಳು ಉತ್ತಮ ರೀತಿಯಲ್ಲಿ ಸಂಯೋಜನೆಗೊಂಡು ಒಳ್ಳೆಯ ಫಲಿತಾಂಶವನ್ನು ನೀಡಲಿವೆ.ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಜಾಗತಿಕ ಹೂಡಿಕೆದಾರರ ದುಂಡು ಮೇಜಿನ ಸಭೆ
November 05th, 07:01 pm
ವೈರಸ್ ವಿರುದ್ಧ ಹೋರಾಡುವುದರ ಜೊತೆಗೆ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವ ಮೂಲಕ ಭಾರತವು ಈ ಸಾಂಕ್ರಾಮಿಕ ರೋಗದಲ್ಲಿ ಗಮನಾರ್ಹ ಸ್ಥಿತಿಸ್ಥಾಪಕತ್ವವನ್ನು ತೋರಿಸಿದೆ ಎಂದು ಪ್ರಧಾನಿ ತಿಳಿಸಿದರು. ಈ ಸ್ಥಿತಿಸ್ಥಾಪಕತ್ವಕ್ಕೆ ಭಾರತದಲ್ಲಿನ ವ್ಯವಸ್ಥೆಯ ಬಲ, ಜನರ ಬೆಂಬಲ ಮತ್ತು ಸರ್ಕಾರದ ನೀತಿಗಳ ಸ್ಥಿರತೆ ಕಾರಣ ಎಂದು ಅವರು ಹೇಳಿದರು.ನವೆಂಬರ್ 5 ರಂದು ವರ್ಚುವಲ್ ಜಾಗತಿಕ ಹೂಡಿಕೆದಾರರ ಸಭೆಯ ಅಧ್ಯಕ್ಷತೆ ವಹಿಸಲಿರುವ ಪ್ರಧಾನಮಂತ್ರಿ
November 03rd, 06:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020ರ ನವೆಂಬರ್ 5ರಂದು ಜಾಗತಿಕ ಹೂಡಿಕೆದಾರರ ವರ್ಚುವಲ್ ದುಂಡು ಮೇಜಿನ (ವಿಜಿಐಆರ್) ಸಭೆ ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಿಐಆರ್ ಅನ್ನು ಭಾರತ ಸರ್ಕಾರದ ಹಣಕಾಸು ಸಚಿವಾಲಯ ಮತ್ತು ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ ಆಯೋಜಿಸಿದೆ. ಇದು ಪ್ರಮುಖ ಜಾಗತಿಕ ಸಾಂಸ್ಥಿಕ ಹೂಡಿಕೆದಾರರು, ಭಾರತೀಯ ವಾಣಿಜ್ಯ ಮುಖಂಡರು ಹಾಗೂ ಹಣಕಾಸು ಮಾರುಕಟ್ಟೆ ನಿಯಂತ್ರಕರು ಮತ್ತು ಭಾರತ ಸರ್ಕಾರದ ಉನ್ನತ ನಿರ್ಧಾರ ತೆಗೆದುಕೊಳ್ಳುವವರ ನಡುವಿನ ವಿಶೇಷ ಸಂವಾದವಾಗಲಿದೆ. ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವರು, ಕೇಂದ್ರ ಹಣಕಾಸು ರಾಜ್ಯ ಸಚಿವರು, ಆರ್.ಬಿಐ ಗೌರ್ನರ್ ಮತ್ತು ಇತರ ಗಣ್ಯರು ಭಾಗಿಯಾಗಲಿದ್ದಾರೆ.