ವಿನೇಶ್, ನೀವು ಚಾಂಪಿಯನ್ ಗಳಲ್ಲಿ ಚಾಂಪಿಯನ್ : ಪ್ರಧಾನಮಂತ್ರಿ
August 07th, 01:16 pm
ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅಂತಿಮ ಹಣಾಹಣಿಗೆ ಮುನ್ನ ಅನರ್ಹತೆಗೊಂಡಿರುವುದರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರದ ದುಃಖವನ್ನು ಅವರಿಗೆ ತಿಳಿಸಿದ್ದಾರೆ.ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು
September 19th, 04:47 pm
ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರುಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಭಾಗಿಯಾದ ಭಾರತೀಯ ಆಟಗಾರರೊಂದಿಗೆ ಪ್ರಧಾನಮಂತ್ರಿಯವರ ಸಂವಾದದ ಇಂಗ್ಲಿಷ್ ಅವತರಣಿಕೆ
August 13th, 11:31 am
ಎಲ್ಲರೊಂದಿಗೂ ಮಾತನಾಡುವುದು ನನಗೆ ತುಂಬಾ ಆಸಕ್ತಿದಾಯಕವಾದರೂ, ಪ್ರತಿಯೊಬ್ಬರ ಜೊತೆ ಮಾತನಾಡಲು ಸಾಧ್ಯವಾಗದು. ಆದರೆ ನಿಮ್ಮಲ್ಲಿ ಅನೇಕರೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಪರ್ಕದಲ್ಲಿರಲು ನನಗೆ ಅವಕಾಶ ದೊರೆಕಿತ್ತು ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ನಿಮ್ಮೊಂದಿಗೆ ಸಂವಾದ ನಡೆಸುವ ಅವಕಾಶವೂ ನನಗೆ ದೊರೆತಿದೆ. ಆದರೆ ಕುಟುಂಬದ ಸದಸ್ಯನಾಗಿ ನನ್ನ ನಿವಾಸಕ್ಕೆ ಬರಲು ನೀವು ಸಮಯ ಮಾಡಿಕೊಂಡುದಕ್ಕಾಗಿ ನನಗೆ ಬಹಳ ಸಂತೋಷವಾಗಿದೆ. ನಿಮ್ಮ ಸಾಧನೆಗಳ ಯಶಸ್ಸಿನ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವುದರಿಂದ, ನಾನು ಸಹ ನಿಮ್ಮೊಂದಿಗೆ ಸಂಬಂಧ ಹೊಂದಲು ಹೆಮ್ಮೆಪಡುತ್ತೇನೆ. ನಿಮಗೆಲ್ಲರಿಗೂ ಇಲ್ಲಿ ಸ್ವಾಗತ.2022ರ ಕಾಮನ್ ವೆಲ್ತ್ ಗೇಮ್ಸ್ ನ ಭಾರತೀಯ ತಂಡವನ್ನು ಸನ್ಮಾನಿಸಿದ ಪ್ರಧಾನಮಂತ್ರಿ
August 13th, 11:30 am
2022ರ ಕಾಮನ್ ವೆಲ್ತ್ ಗೇಮ್ಸ್ (ಸಿಡಬ್ಲ್ಯೂಜಿ) ನಲ್ಲಿ ಪಾಲ್ಗೊಂಡ ಭಾರತೀಯ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸದಿಲ್ಲಿಯಲ್ಲಿ ಸನ್ಮಾನಿಸಿದರು. ಈ ಸನ್ಮಾನ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು ಮತ್ತು ಅವರ ತರಬೇತುದಾರರು ಭಾಗವಹಿಸಿದ್ದರು. ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಮತ್ತು ಮಾಹಿತಿ ಹಾಗು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಸಿತ್ ಪ್ರಾಮಾಣಿಕ್ ಉಪಸ್ಥಿತರಿದ್ದರು.ಮಹಿಳೆಯರ 53 ಕೆ.ಜಿ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
August 06th, 11:25 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬರ್ಮಿಂಗ್ ಹ್ಯಾಮ್ ಸಿಡಬ್ಲ್ಯೂಜಿ 2022 ರಲ್ಲಿ ಮಹಿಳೆಯರ 53 ಕೆ.ಜಿ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅಭಿನಂದಿಸಿದ್ದಾರೆ.ವಿಶೇಷ ಚಿತ್ರಗಳು! ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ ಒಲಿಂಪಿಯನ್‌ಗಳನ್ನು ಭೇಟಿ ಮಾಡಿದ ಪ್ರಧಾನಿ ಮೋದಿ!
August 16th, 10:56 am
ಕೆಂಪು ಕೋಟೆಯ ಕೋಟೆಯಿಂದ ಅವರನ್ನು ಹೊಗಳಿದ ಮತ್ತು ಇಡೀ ರಾಷ್ಟ್ರವು ಅವರನ್ನು ಶ್ಲಾಘಿಸುವಂತೆ ಮಾಡಿದ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮತ್ತು ಭಾರತವನ್ನು ಹೆಮ್ಮೆಪಡುವ ಭಾರತೀಯ ಕ್ರೀಡಾಪಟುಗಳನ್ನು ಭೇಟಿಯಾದರು. ಈ ಘಟನೆಯ ಕೆಲವು ವಿಶೇಷ ಚಿತ್ರಗಳು ಇಲ್ಲಿವೆ!135 ಕೋಟಿ ಭಾರತೀಯರ ಶುಭಾಶಯಗಳು ನಿಮ್ಮೆಲ್ಲರಿಗೂ ದೇಶದ ಆಶೀರ್ವಾದವಿದೆ : ಟೋಕಿಯೊಗೆ ತೆರಳುವ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ
July 13th, 05:02 pm
ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಿರುವ ಭಾರತೀಯ ಕ್ರೀಡಾಪಟುಗಳ ತಂಡದೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು. ಪ್ರಧಾನಮಂತ್ರಿಯವರ ಸಂವಹನವು ಕ್ರೀಡಾಪಟುಗಳನ್ನು ಆಟಗಳಲ್ಲಿ ಭಾಗವಹಿಸುವ ಮುನ್ನ ಪ್ರೇರೇಪಿಸುವ ಪ್ರಯತ್ನವಾಗಿದೆ. ಶ್ರೀ ಅನುರಾಗ್ ಠಾಕೂರ್, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ; ಈ ಸಂದರ್ಭದಲ್ಲಿ ಯುವ ವ್ಯವಹಾರ ಮತ್ತು ಕ್ರೀಡೆಗಳ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಮತ್ತು ಕಾನೂನು ಸಚಿವ ಶ್ರೀ ಕಿರೆನ್ ರಿಜಿಜು ಉಪಸ್ಥಿತರಿದ್ದರು."ನಾವೆಲ್ಲರೂ #Cheer4India : ಪ್ರಧಾನಿ ಮೋದಿ "
July 13th, 05:01 pm
ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಿರುವ ಭಾರತೀಯ ಕ್ರೀಡಾಪಟುಗಳ ತಂಡದೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು. ಪ್ರಧಾನಮಂತ್ರಿಯವರ ಸಂವಹನವು ಕ್ರೀಡಾಪಟುಗಳನ್ನು ಆಟಗಳಲ್ಲಿ ಭಾಗವಹಿಸುವ ಮುನ್ನ ಪ್ರೇರೇಪಿಸುವ ಪ್ರಯತ್ನವಾಗಿದೆ. ಶ್ರೀ ಅನುರಾಗ್ ಠಾಕೂರ್, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ; ಈ ಸಂದರ್ಭದಲ್ಲಿ ಯುವ ವ್ಯವಹಾರ ಮತ್ತು ಕ್ರೀಡೆಗಳ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಮತ್ತು ಕಾನೂನು ಸಚಿವ ಶ್ರೀ ಕಿರೆನ್ ರಿಜಿಜು ಉಪಸ್ಥಿತರಿದ್ದರು.ಟೋಕಿಯೊ ಒಲಿಂಪಿಕ್ಸ್‌ಗೆ ತೆರಳುವ ಭಾರತೀಯ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಸಂವಾದ
July 13th, 05:00 pm
ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಲಿರುವ ಭಾರತೀಯ ಕ್ರೀಡಾಪಟುಗಳ ತಂಡದೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಪ್ರಧಾನಮಂತ್ರಿಯವರ ಸಂವಾದವು ಕ್ರೀಡಾಪಟುಗಳನ್ನು ಆಟಗಳಲ್ಲಿ ಭಾಗವಹಿಸುವ ಮುನ್ನ ಪ್ರೇರೇಪಿಸುವ ಪ್ರಯತ್ನವಾಗಿದೆ. ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್, ಯುವ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವ ಶ್ರೀ ನಿಸಿತ್ ಪ್ರಾಮಾಣಿಕ್ ಮತ್ತು ಕಾನೂನು ಸಚಿವ ಶ್ರೀ ಕಿರೆನ್ ರಿಜಿಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.