ಉತ್ತರಾಖಂಡ ಸ್ಥಾಪನಾ ದಿವಸದಂದು ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ
November 09th, 11:00 am
ಇಂದು ಉತ್ತರಾಖಂಡದ ರಜತ ಮಹೋತ್ಸವ ವರ್ಷದ ಆರಂಭವನ್ನು ಸೂಚಿಸುತ್ತದೆ. ಅಂದರೆ, ಉತ್ತರಾಖಂಡವು ತನ್ನ 25ನೇ ವರ್ಷಕ್ಕೆ ಕಾಲಿಡುತ್ತಿದೆ. ನಾವು ಮುಂದೆ ನೋಡುತ್ತಿರುವಾಗ, ಉತ್ತರಾಖಂಡದ ಉಜ್ವಲ ಮತ್ತು ಸಮೃದ್ಧ ಭವಿಷ್ಯವನ್ನು ನಿರ್ಮಿಸಲು ಬದ್ಧರಾಗಿ ಮುಂದಿನ 25 ವರ್ಷಗಳ ಪ್ರಯಾಣವನ್ನು ನಾವು ಪ್ರಾರಂಭಿಸಬೇಕು. ಇದರಲ್ಲಿ ಒಂದು ಸಂತೋಷಕರ ಕಾಕತಾಳೀಯವಿದೆ: ನಮ್ಮ ಪ್ರಗತಿಯು ಭಾರತದ ಅಮೃತ ಕಾಲದೊಂದಿಗೆ ಹೊಂದಿಕೆಯಾಗುತ್ತದೆ, ಇದು ರಾಷ್ಟ್ರೀಯ ಬೆಳವಣಿಗೆಗೆ ಮೀಸಲಾಗಿರುವ ಗಮನಾರ್ಹ 25 ವರ್ಷಗಳ ಅವಧಿಯಾಗಿದೆ. ಈ ಸಂಗಮವು ಅಭಿವೃದ್ಧಿ ಹೊಂದಿದ ಭಾರತದ ಭಾಗವಾಗಿ ಅಭಿವೃದ್ಧಿ ಹೊಂದಿದ ಉತ್ತರಾಖಂಡದ ದೃಷ್ಟಿಕೋನವನ್ನು ಬಿಂಬಿಸುತ್ತದೆ, ಈ ಯುಗದಲ್ಲಿ ನಮ್ಮ ಹಂಚಿಕೆಯ ಆಕಾಂಕ್ಷೆಗಳು ಸಾಕಾರಗೊಳ್ಳುತ್ತಿವೆ. ಉತ್ತರಾಖಂಡದ ಜನರು ಮುಂಬರುವ 25 ವರ್ಷಗಳ ಗುರಿಗಳನ್ನು ಕೇಂದ್ರೀಕರಿಸಿ ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ನನಗೆ ಸಂತೋಷವಾಗಿದೆ. ಈ ಕಾರ್ಯಕ್ರಮಗಳ ಮೂಲಕ ಉತ್ತರಾಖಂಡದ ಹೆಮ್ಮೆಯನ್ನು ಆಚರಿಸಲಾಗುವುದು ಮತ್ತು ಅಭಿವೃದ್ಧಿ ಹೊಂದಿದ ಉತ್ತರಾಖಂಡದ ದೃಷ್ಟಿಕೋನವು ಪ್ರತಿಯೊಬ್ಬ ನಿವಾಸಿಯಲ್ಲೂ ಪ್ರತಿಧ್ವನಿಸುತ್ತದೆ. ಈ ಮಹತ್ವದ ಸಂದರ್ಭದಲ್ಲಿ ಮತ್ತು ಈ ನಿರ್ಣಾಯಕ ನಿರ್ಣಯಕ್ಕಾಗಿ, ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಕೇವಲ ಎರಡು ದಿನಗಳ ಹಿಂದೆ, ಪ್ರವಾಸಿ ಉತ್ತರಾಖಂಡ್ ಸಮ್ಮೇಳನವನ್ನು ಸಹ ಯಶಸ್ವಿಯಾಗಿ ನಡೆಸಲಾಯಿತು. ನಮ್ಮ ವಲಸಿಗ ಉತ್ತರಾಖಂಡಿಗಳು ರಾಜ್ಯದ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ಪಾತ್ರ ವಹಿಸುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸ ನನಗಿದೆ.ದೇವಭೂಮಿ ಉತ್ತರಾಖಂಡದ ರಜತ ಮಹೋತ್ಸವ ಸಂದರ್ಭದಲ್ಲಿ ಉತ್ತರಾಖಂಡದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ
November 09th, 10:40 am
ಉತ್ತರಾಖಂಡದ ಸಂಸ್ಥಾಪನಾ ದಿನದಂದು ಅಲ್ಲಿನ ಎಲ್ಲ ಜನತೆಗೆ ಶುಭ ಕೋರಿರುವ ಪ್ರಧಾನಮಂತ್ರಿಯವರು, ಇಂದಿನಿಂದ ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ ವರ್ಷ ಆರಂಭವಾಗುತ್ತಿರುವುದನ್ನು ಉಲ್ಲೇಖಿಸಿದರು. ಉತ್ತರಾಖಂಡವು ರಾಜ್ಯ ಸ್ಥಾಪನೆಯ 25ನೇ ವರ್ಷಕ್ಕೆ ಪ್ರವೇಶಿಸಿರುವುದನ್ನು ಉಲ್ಲೇಖಿಸಿದ ಶ್ರೀ ಮೋದಿ, ರಾಜ್ಯದ ಮುಂಬರುವ 25 ವರ್ಷಗಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುವಂತೆ ಜನರನ್ನು ಆಗ್ರಹಿಸಿದರು. ಉತ್ತರಾಖಂಡದ ಮುಂಬರುವ 25 ವರ್ಷಗಳ ಪ್ರಯಾಣವು ಭಾರತದ ಅಮೃತ್ ಕಾಲ್ ನ 25 ನೇ ವರ್ಷದ ಜೊತೆ ಸರಿಹೊಂದಿಕೆಯಾಗುವಂತಿದೆ. ಇದೊಂದು ಕಾಕತಾಳೀಯ ಎಂದ ಪ್ರಧಾನ ಮಂತ್ರಿ ಅವರು, ಇದು ವಿಕ್ಷಿತ್ ಭಾರತ್ ಗಾಗಿ ವಿಕ್ಷಿತ್ (ಅಭಿವೃದ್ಧಿ ಹೊಂದಿದ) ಉತ್ತರಾಖಂಡವನ್ನು ಸಂಕೇತಿಸುತ್ತದೆ ಎಂದರು. ಈ ಅವಧಿಯಲ್ಲಿ ವಿಕ್ಷಿತ್ ಭಾರತದ ಸಂಕಲ್ಪ ಈಡೇರುವುದಕ್ಕೆ ದೇಶ ಸಾಕ್ಷಿಯಾಗಲಿದೆ ಎಂದು ಶ್ರೀ ಮೋದಿ ಹೇಳಿದರು. ಮುಂಬರುವ 25 ವರ್ಷಗಳಲ್ಲಿ ಸಂಕಲ್ಪಗಳ ಜೊತೆಗೆ ಜನರು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಗಳ ಮೂಲಕ ಉತ್ತರಾಖಂಡದ ಹೆಮ್ಮೆಯನ್ನು ಹರಡಲಾಗುವುದು ಮತ್ತು ಅಭಿವೃದ್ಧಿ ಹೊಂದಿದ ಉತ್ತರಾಖಂಡದ ಗುರಿ ರಾಜ್ಯದ ಪ್ರತಿಯೊಬ್ಬ ನಿವಾಸಿಯನ್ನು ತಲುಪಲಿದೆ ಎಂದು ಅವರು ಹೇಳಿದರು. ಈ ಮಹತ್ವದ ಸಂದರ್ಭದಲ್ಲಿ ಮತ್ತು ಈ ಮಹತ್ವದ ನಿರ್ಣಯವನ್ನು ಅಂಗೀಕರಿಸಿದ್ದಕ್ಕಾಗಿ ಶ್ರೀ ಮೋದಿ ಅವರು ರಾಜ್ಯದ ಎಲ್ಲ ನಿವಾಸಿಗಳನ್ನು ಅಭಿನಂದಿಸಿದರು. ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾದ 'ಪ್ರವಾಸಿ ಉತ್ತರಾಖಂಡ ಸಮ್ಮೇಳನ'ದ ಬಗ್ಗೆಯೂ ಅವರು ಗಮನಸೆಳೆದರು ಮತ್ತು ಉತ್ತರಾಖಂಡದ ಅಭಿವೃದ್ಧಿಯಲ್ಲಿ ಸಾಗರೋತ್ತರ ಉತ್ತರಾಖಂಡದ ಜನರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.