ಚಂದ್ರಯಾನ -3 ಮಿಷನ್ ಯಶಸ್ಸಿನ ಕುರಿತು ಇಸ್ರೊ ತಂಡವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

August 26th, 08:15 am

ಇಂದು, ನಿಮ್ಮೆಲ್ಲರ ನಡುವೆ ನಾನು ಹೊಸ ರೀತಿಯ ಸಂತೋಷವನ್ನು ಅನುಭವಿಸುತ್ತಿದ್ದೇನೆ. ಬಹುಶಃ ಬಹಳ ಅಪರೂಪದ ಸಂದರ್ಭಗಳಲ್ಲಿ ಒಬ್ಬರು ಅಂತಹ ಸಂತೋಷವನ್ನು ಅನುಭವಿಸುತ್ತಾರೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಒಬ್ಬರ ಮನಸ್ಸು ಸಂಪೂರ್ಣವಾಗಿ ಸಂತೋಷದಿಂದ ತುಂಬಿದಾಗ ಮತ್ತು ಅದರ ಪರಿಣಾಮವಾಗಿ ಅವನು ಪ್ರಕ್ಷುಬ್ಧನಾಗುವಾಗ ಇಂತಹ ಘಟನೆಗಳು ಸಂಭವಿಸುತ್ತವೆ. ಈ ಬಾರಿ ನನಗೂ ಅದೇ ರೀತಿಯದ್ದೊಂದು ಸಂಭವಿಸಿತು, ಮತ್ತು ನಾನು ತುಂಬಾ ಪ್ರಕ್ಷುಬ್ಧನಾಗಿದ್ದೆ. ನಾನು ದಕ್ಷಿಣ ಆಫ್ರಿಕಾದಲ್ಲಿದ್ದೆ, ಮತ್ತು ನಂತರ ಗ್ರೀಸ್ ನಲ್ಲಿ ಒಂದು ಕಾರ್ಯಕ್ರಮವಿತ್ತು. ಆದ್ದರಿಂದ ನಾನು ಅಲ್ಲಿರಬೇಕಾಗಿತ್ತು ಆದರೆ ನನ್ನ ಮನಸ್ಸು ಸಂಪೂರ್ಣವಾಗಿ ನಿಮ್ಮ ಮೇಲೆ ಕೇಂದ್ರೀಕೃತವಾಗಿತ್ತು. ಆದರೆ ಕೆಲವೊಮ್ಮೆ ನಾನು ನಿಮ್ಮೆಲ್ಲರಿಗೂ ಅನ್ಯಾಯ ಮಾಡುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ. ನನ್ನ ಚಡಪಡಿಕೆ ನಿಮಗೆ ಸಮಸ್ಯೆಯನ್ನು ಸೃಷ್ಟಿಸುತ್ತದೆ. ನೀವು ಮುಂಜಾನೆ ಇಲ್ಲಿಗೆ ಬರಬೇಕಾಯಿತು ಆದರೆ ನಾನು ಬಂದು ನಿಮಗೆ ನಮಸ್ಕರಿಸಲು ಬಯಸುತ್ತೇನೆ. ಇದು ನಿಮಗೆ ಅನಾನುಕೂಲವಾಗಿರಬೇಕು, ಆದರೆ ನಾನು ಭಾರತಕ್ಕೆ ಬಂದಿಳಿದ ಕೂಡಲೇ ನಿಮ್ಮನ್ನು ನೋಡಲು ಬಯಸುತ್ತೇನೆ. ನಾನು ನಿಮ್ಮೆಲ್ಲರಿಗೂ ನಮಸ್ಕರಿಸಲು, ನಿಮ್ಮ ಕಠಿಣ ಪರಿಶ್ರಮಕ್ಕೆ ನಮಸ್ಕರಿಸಲು, ನಿಮ್ಮ ತಾಳ್ಮೆಗೆ ನಮಸ್ಕರಿಸಲು, ನಿಮ್ಮ ಉತ್ಸಾಹಕ್ಕೆ ವಂದಿಸಲು, ನಿಮ್ಮ ಚೈತನ್ಯಕ್ಕೆ ವಂದಿಸಲು ಮತ್ತು ನಿಮ್ಮ ಸ್ಫೂರ್ತಿಗೆ ವಂದಿಸಲು ಬಯಸುತ್ತೇನೆ. ನೀವು ದೇಶವನ್ನು ಯಾವ ಎತ್ತರಕ್ಕೆ ಕೊಂಡೊಯ್ದಿದ್ದೀರಿ ಎಂಬುದು ಸಾಮಾನ್ಯ ಯಶಸ್ಸಲ್ಲ. ಇದು ಅನಂತ ಬಾಹ್ಯಾಕಾಶದಲ್ಲಿ ಭಾರತದ ವೈಜ್ಞಾನಿಕ ಸಾಮರ್ಥ್ಯದ ಘೋಷಣೆಯಾಗಿದೆ.

ಚಂದ್ರಯಾನ-3ರ ಯಶಸ್ಸಿನ ಕುರಿತು ಇಸ್ರೋ ತಂಡವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ

August 26th, 07:49 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ರೀಸ್ ನಿಂದ ಆಗಮಿಸಿದ ನಂತರ ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ (ISTRAC) ಗೆ ಭೇಟಿ ನೀಡಿದರು ಮತ್ತು ಚಂದ್ರಯಾನ-3 ರ ಯಶಸ್ಸಿನ ಕುರಿತು ಇಸ್ರೋ ತಂಡವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನ ಮಂತ್ರಿಯವರು ಚಂದ್ರಯಾನ-3 ಮಿಷನ್ ನಲ್ಲಿ ಭಾಗಿಯಾಗಿರುವ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿದರು ಮತ್ತು ಅವರೊಂದಿಗೆ ಸಂವಾದ ನಡೆಸಿದರು, ಅಲ್ಲಿ ಅವರಿಗೆ ಚಂದ್ರಯಾನ-3 ಮಿಷನ್ ನಲ್ಲಿನ ಸಂಶೋಧನೆಗಳು ಮತ್ತು ಪ್ರಗತಿಯ ಬಗ್ಗೆ ವಿವರಿಸಲಾಯಿತು.

ಭಾರತದ ಚೊಚ್ಚಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ನ ಯಶಸ್ವಿ ಉಡಾವಣೆಗಾಗಿ ಇಸ್ರೋ ಮತ್ತು ಇನ್-ಸ್ಪೇಸ್ ಸಂಸ್ಥೆಗಳಿಗೆ ಪ್ರಧಾನಮಂತ್ರಿಯವರಿಂದ ಅಭಿನಂದನೆ

November 18th, 05:33 pm

ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ಭಾರತದ ಚೊಚ್ಚಲ ಖಾಸಗಿ ರಾಕೆಟ್ ವಿಕ್ರಮ್-ಸಬ್ ಆರ್ಬಿಟಲ್‌ನ ಯಶಸ್ವಿ ಉಡಾವಣೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಇನ್-ಸ್ಪೇಸ್ ಅನ್ನು ಅಭಿನಂದಿಸಿದ್ದಾರೆ.