ಮನ್ ಕಿ ಬಾತ್‌ಗಾಗಿ ಜನರು ತೋರಿದ ಪ್ರೀತಿ ಅಭೂತಪೂರ್ವ: ಪ್ರಧಾನಿ ಮೋದಿ
May 28th, 11:30 am
ನನ್ನ ಪ್ರೀತಿಯ ದೇಶಬಾಂಧವರೆ ನಮಸ್ಕಾರ. ಮತ್ತೊಮ್ಮೆ, 'ಮನದ ಮಾತಿಗೆ' ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಈ ಬಾರಿಯ 'ಮನದ ಮಾತಿನ' ಸಂಚಿಕೆ 2ನೇ ಶತಕದ ಆರಂಭವಾಗಿದೆ. ಕಳೆದ ತಿಂಗಳು ನಾವೆಲ್ಲರೂ ಶತಕದ ಸಂಭ್ರಮವನ್ನು ವಿಶೇಷವಾಗಿ ಆಚರಿಸಿದ್ದೇವೆ. ನಿಮ್ಮ ಭಾಗವಹಿಸುವಿಕೆ ಈ ಕಾರ್ಯಕ್ರಮದ ಬಹು ದೊಡ್ಡ ಶಕ್ತಿಯಾಗಿದೆ. 100ನೇ ಸಂಚಿಕೆ ಪ್ರಸಾರವಾಗುವ ಸಮಯದಲ್ಲಿ ಸಂಪೂರ್ಣ ದೇಶ ಒಂದು ಸೂತ್ರದಲ್ಲಿ ಬಂಧಿಸಿದಂತಾಗಿತ್ತು. ನಮ್ಮ ಸ್ವಚ್ಛತಾ ಕರ್ಮಚಾರಿ ಸಹೋದರ ಮತ್ತು ಸಹೋದರಿಯರು ಅಥವಾ ವಿವಿಧ ಕ್ಷೇತ್ರಗಳ ಅನುಭವಿಗಳಾಗಿರಲಿ, 'ಮನದ ಮಾತು' ಎಲ್ಲರನ್ನೂ ಒಟ್ಟಿಗೆ ಸೇರಿಸುವ ಕೆಲಸ ಮಾಡಿದೆ. 'ಮನದ ಮಾತಿಗೆ' ನೀವೆಲ್ಲರೂ ತೋರಿದ ಆತ್ಮೀಯತೆ ಮತ್ತು ಪ್ರೀತಿ ಅಭೂತಪೂರ್ವವಾಗಿದೆ, ಅದು ಭಾವುಕರನ್ನಾಗಿಸುವಂತಿದೆ. 'ಮನದ ಮಾತು' ಪ್ರಸಾರವಾದಾಗ, ಪ್ರಪಂಚದ ವಿವಿಧ ದೇಶಗಳಲ್ಲಿ, ಬೇರೆ ಬೇರೆ ಸಮಯಕ್ಕೆ ಅಂದರೆ, ಎಲ್ಲೋ ಸಂಜೆ ಮತ್ತು ಎಲ್ಲೋ ತಡರಾತ್ರಿಯಾಗಿತ್ತು, ಇದನ್ನು ಲೆಕ್ಕಿಸದೆ, 100 ನೇ ಸಂಚಿಕೆಯನ್ನು ಹೆಚ್ಚಿನ ಸಂಖ್ಯೆಯ ಜನರು ಆಲಿಸಲು ಸಮಯ ಮೀಸಲಿಟ್ಟರು. ನಾನು ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ನ್ಯೂಜಿಲೆಂಡ್‌ನ ಆ ವೀಡಿಯೊವನ್ನು ಕೂಡ ನೋಡಿದೆ, ಅದರಲ್ಲಿ 100 ವರ್ಷದ ತಾಯಿಯೊಬ್ಬರು ಆಶೀರ್ವಾದ ನೀಡುತ್ತಿದ್ದರು. ದೇಶ ವಿದೇಶದ ಜನರು 'ಮನದ ಮಾತಿನ' ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಜನರು ರಚನಾತ್ಮಕ ವಿಶ್ಲೇಷಣೆಯನ್ನು ಸಹ ಮಾಡಿದ್ದಾರೆ. ‘ಮನದ ಮಾತಿನಲ್ಲಿ’ ದೇಶ ಮತ್ತು ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತ್ರ ಚರ್ಚೆಯಾಗಿರುವುದನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಆಶೀರ್ವಾದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಗೌರವಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ.ನವದೆಹಲಿಯಲ್ಲಿ ಕರ್ತವ್ಯ ಪಥ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ
September 08th, 10:41 pm
ಇಡೀ ದೇಶವೇ ಇಂದಿನ ಈ ಐತಿಹಾಸಿಕ ಕಾರ್ಯಕ್ರಮವನ್ನು ನೋಡುತ್ತಿದೆ, ದೇಶವಾಸಿಗಳೆಲ್ಲ ಈ ಕಾರ್ಯಕ್ರಮದಲ್ಲಿ ಸೇರಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿರುವ ಎಲ್ಲಾ ದೇಶವಾಸಿಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ. ಈ ಐತಿಹಾಸಿಕ ಕ್ಷಣದಲ್ಲಿ, ನನ್ನ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಹರ್ದೀಪ್ ಪುರಿ, ಶ್ರೀ ಜಿ ಕಿಶನ್ ರೆಡ್ಡಿ, ಶ್ರೀ ಅರ್ಜುನ್ ರಾಮ್ ಮೇಘವಾಲ್, ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಶ್ರೀ ಕೌಶಲ್ ಕಿಶೋರ್ ಕೂಡ ಇಂದು ನನ್ನೊಂದಿಗೆ ವೇದಿಕೆಯಲ್ಲಿದ್ದಾರೆ. ನಾಡಿನ ಹಲವು ಗಣ್ಯರು ಕೂಡ ಇಲ್ಲಿದ್ದಾರೆ.PM inaugurates 'Kartavya Path' and unveils the statue of Netaji Subhas Chandra Bose at India Gate
September 08th, 07:00 pm
PM Modi inaugurated Kartavya Path and unveiled the statue of Netaji Subhas Chandra Bose. Kingsway i.e. Rajpath, the symbol of colonialism, has become a matter of history from today and has been erased forever. Today a new history has been created in the form of Kartavya Path, he said.ನೀರನ್ನು ಉಳಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಬೇಕು: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
March 27th, 11:00 am
ನನ್ನ ಪ್ರಿಯ ದೇಶಬಾಂಧವರೆ, ಕಳೆದ ವಾರ ನಾವು ಮಾಡಿದ ಸಾಧನೆ ನಮ್ಮನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಭಾರತ ಕಳೆದ ವಾರ 400 ಶತಕೋಟಿ ಡಾಲರ್ ಅಂದರೆ 30 ಲಕ್ಷಕೋಟಿ ರೂಪಾಯಿಗಳ ರಫ್ತಿನ ಗುರಿಯನ್ನು ಸಾಧಿಸಿದೆ ಎಂದು ನೀವು ಕೇಳಿರಬಹುದು. ಮೊದಲ ಬಾರಿಗೆ ಕೇಳಿದಾಗ ಅರ್ಥವ್ಯವಸ್ಥೆಗೆ ಸಂಬಂಧಿಸಿದ ವಿಷಯ ಅನ್ನಿಸಬಹುದು. ಆದರೆ ಇದು ಅರ್ಥವ್ಯವಸ್ಥೆಗೂ ಮೀರಿ ಭಾರತದ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಒಂದು ಕಾಲದಲ್ಲಿ ಭಾರತದ ರಫ್ತಿನ ಅಂಕಿ ಸಂಖ್ಯೆ ಕೆಲವೊಮ್ಮೆ 100 ಶತಕೋಟಿ ಇನ್ನು ಕೆಲವೊಮ್ಮೆ 150 ಶತಕೋಟಿ 200 ಶತಕೋಟಿವರೆಗೂ ತಲುಪುತ್ತಿತ್ತು. ಈಗ ಭಾರತ 400 ಶತಕೋಟಿ ಡಾಲರ್ ತಲುಪಿದೆ. ಇದರರ್ಥ ವಿಶ್ವಾದ್ಯಂತ ಭಾರತದಲ್ಲಿ ತಯಾರಿಸಲಾದ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮತ್ತೊಂದು ಅರ್ಥ ಸರಬರಾಜು ಸರಪಳಿ ದಿನೇ ದಿನೇ ಸಶಕ್ತಗೊಳ್ಳುತ್ತಿದೆ. ಇದರ ಹಿಂದೆ ಒಂದು ಪ್ರಮುಖ ಸಂದೇಶವೂ ನೀಡುತ್ತಿದೆ. ಕನಸುಗಳಿಗಿಂತ ಹಿರಿದಾದ ಸಂಕಲ್ಪವಿದ್ದಾಗ ದೇಶ ಬೃಹತ್ ಹೆಜ್ಜೆಯನ್ನು ಇಡುತ್ತದೆ. ಸಂಕಲ್ಪಗಳ ಪೂರೈಕೆಗೆ ಹಗಲಿರುಳು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಆ ಸಂಕಲ್ಪಗಳನ್ನು ಸಾಧಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜೀವನದಲ್ಲೂ ಹೀಗೆಯೇ ಆಗುವುದನ್ನು ನೀವು ಕಾಣಬಹುದು. ಯಾರದೇ ಸಂಕಲ್ಪ, ಪ್ರಯತ್ನಗಳು ಅವರ ಕನಸುಗಳನ್ನು ಮೀರಿ ಬೆಳೆಯುತ್ತವೆಯೋ ಆಗ ಸಫಲತೆ ಆತನ ಬಳಿ ತಾನಾಗೇ ಅರಸಿ ಬರುತ್ತದೆ.ಕೋಲ್ಕೋತ್ತಾದ ವಿಕ್ಟೋರಿಯಾ ಸ್ಮಾರಕ ಸಭಾಂಗಣದಲ್ಲಿ ಬಿಪ್ಲೋಬಿ ಭಾರತ್ ಗ್ಯಾಲರಿ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ.
March 23rd, 06:05 pm
ಪಶ್ಚಿಮ ಬಂಗಾಳದ ರಾಜ್ಯಪಾಲ ಶ್ರೀ ಜಗದೀಪ ಧನ್ಕಾರ್ ಜೀ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಕಿಶನ್ ರೆಡ್ಡಿ ಜೀ, ವಿಕ್ಟೋರಿಯಾ ಸ್ಮಾರಕ ಸಭಾಂಗಣಕ್ಕೆ ಸಂಬಂಧಿಸಿದ ಎಲ್ಲಾ ಗಣ್ಯರೇ, ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳೇ, ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ದಿಗ್ಗಜಗಳೇ, ಮಹಿಳೆಯರೇ ಮತ್ತು ಮಹನೀಯರೇ!.ʻಶಾಹೀದ್ ದಿವಸʼದಂದು ಕೋಲ್ಕತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ ʻಬಿಪ್ಲೋಬಿ ಭಾರತ್ ಗ್ಯಾಲರಿʼ ಉದ್ಘಾಟಿಸಿದ ಪ್ರಧಾನಿ
March 23rd, 06:00 pm
ಶಹೀದ್ ದಿವಸ್ ಆಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೋಲ್ಕತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ ʻಬಿಪ್ಲೋಬಿ ಭಾರತ್ ಗ್ಯಾಲʼರಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಪಶ್ಚಿಮ ಬಂಗಾಳದ ರಾಜ್ಯಪಾಲ ಶ್ರೀ ಜಗದೀಪ್ ಧನಕರ್ ಮತ್ತು ಕೇಂದ್ರ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಶಹೀದ್ ದಿನದಂದು ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ನಲ್ಲಿ ಬಿಪ್ಲೋಬಿ ಭಾರತ್ ಗ್ಯಾಲರಿ ಉದ್ಘಾಟಿಸಲಿರುವ ಪ್ರಧಾನಮಂತ್ರಿ
March 22nd, 11:45 am
ಶಹೀದ್ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೇ ಮಾರ್ಚ್ 23 ರಂದು ಸಂಜೆ 6 ಗಂಟೆಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ ಬಿಪ್ಲೋಬಿ ಭಾರತ್ ಗ್ಯಾಲರಿಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ದೇಶದಲ್ಲಿ ಸಕಾರಾತ್ಮಕ ಬದಲಾವಣೆ - ಪ್ರಗತಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಫೂರ್ತಿ: ಪ್ರಧಾನಮಂತ್ರಿ ನರೇಂದ್ರ ಮೋದಿ
January 23rd, 11:01 pm
ಧೈರ್ಯದಿಂದ ಆಡಳಿತ ನಡೆಸಲು ನಮಗೆ ಪ್ರೇರಣೆ ನೀಡುವಂತಹ ಗುರಿ ಮತ್ತು ಶಕ್ತಿಯನ್ನು ನಾವು ಹೊಂದಿರಬೇಕು ಎಂಬ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೇಳಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಮರಿಸಿಕೊಂಡಿದ್ದಾರೆ.ಜನವರಿ 23, ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
January 21st, 02:01 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ 125ನೇ ಜಯಂತಿ ವರ್ಷದ ಅಂಗವಾಗಿ 2021ರ ಜನವರಿ 23ರಂದು ನಡೆಯಲಿರುವ “ಪರಿಕ್ರಮ ದಿವಸ’ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲು ಕೋಲ್ಕತ್ತಾಕ್ಕೆ ಆಗಮಿಸಲಿದ್ದಾರೆ. ಪ್ರಧಾನಮಂತ್ರಿಯವರು ಅಸ್ಸಾಂನ ಶಿವಸಾಗರ್ ನ ಜರೇಂಗಾ ಪತ್ಹಾರ್ ಗೂ ಭೇಟಿ ನೀಡಲಿದ್ದು, 1.06 ಲಕ್ಷ ಭೂಮಿ ಪಟ್ಟಾ/ಹಂಚಿಕೆ ಪತ್ರ ವಿತರಣೆ ಮಾಡಲಿದ್ದಾರೆ.We want to make India a hub of heritage tourism: PM Modi
January 11th, 05:31 pm
PM Modi today visited the Old Currency Building in Kolkata. Addressing a gathering there, PM Modi emphasized on heritage tourism across the country. He said that five iconic museums of the country will be made of international standards. The PM also recalled the invaluable contributions made by Rabindranath Tagore, Subhas Chandra Bose, Swami Vivekananda and several other greats.ಕೋಲ್ಕತ್ತಾದಲ್ಲಿ ನಾಲ್ಕು ನವೀಕೃತ ಪಾರಂಪರಿಕ ಕಟ್ಟಡಗಳನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ
January 11th, 05:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋಲ್ಕತ್ತಾದಲ್ಲಿಂದು ನಾಲ್ಕು ನವೀಕೃತ ಪಾರಂಪರಿಕ ಕಟ್ಟಡಗಳನ್ನು ದೇಶಕ್ಕೆ ಸಮರ್ಪಿಸಿದರು. ಇವು ಓಲ್ಡ್ ಕರೆನ್ಸಿ ಬಿಲ್ಡಿಂಗ್, ಬೆಲ್ವೆಡೆರೆ ಹೌಸ್, ಮೆಟ್‌ಕಾಲ್ಫ್ ಹೌಸ್ ಮತ್ತು ವಿಕ್ಟೋರಿಯಾ ಮೆಮೋರಿಯಲ್ ಹಾಲ್ ಗಳಾಗಿವೆ.