10 ನೇ ವೈಬ್ರೆಂಟ್ ಗುಜರಾತ್ ಶೃಂಗಸಭೆ 2024 ರ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಜೆಕ್ ಗಣರಾಜ್ಯದ ಪ್ರಧಾನಮಂತ್ರಿಯನ್ನು ಭೇಟಿಯಾದರು
January 10th, 07:09 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಫಿಯಾಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ವಿಶೇಷವಾಗಿ ಜ್ಞಾನ, ತಂತ್ರಜ್ಞಾನ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಮುನ್ನಡೆಸುವ ಮಾರ್ಗಗಳ ಕುರಿತು ಚರ್ಚಿಸಿದರು. ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಹಲವಾರು ಜೆಕ್ ಕಂಪನಿಗಳು ರಕ್ಷಣಾ, ರೈಲ್ವೇ ಮತ್ತು ವಾಯುಯಾನ ಕ್ಷೇತ್ರಗಳಲ್ಲಿ ಭಾರತೀಯ ತಯಾರಕರೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವ ಬಗ್ಗೆ ಪ್ರಧಾನಮಂತ್ರಿ ವಿವರಿಸಿದರು. ಭಾರತೀಯ ಬೆಳವಣಿಗೆಯ ಕಥೆ ಮತ್ತು ಜೆಕ್ ಗಣರಾಜ್ಯದ ದೃಢವಾದ ಕೈಗಾರಿಕಾ ನೆಲೆಯು ಜಾಗತಿಕ ಪೂರೈಕೆಯಲ್ಲಿ ಸಮಾನ ಪಾಲುದಾರರರನ್ನಾಗಿ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.ರೋಮಾಂಚಕ ಗುಜರಾತ್ ಶೃಂಗಸಭೆಯು ಆರ್ಥಿಕ ಬೆಳವಣಿಗೆ, ಸುಧಾರಣೆಗಳು ಮತ್ತು ಭಾರತದ ಅಭಿವೃದ್ಧಿಯ ಪ್ರಯಾಣವನ್ನು ಬಲಪಡಿಸುವ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಿದೆ: ಪ್ರಧಾನಮಂತ್ರಿ
January 10th, 06:18 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದಿನ ರೋಮಾಂಚಕ ಗುಜರಾತ್ ಶೃಂಗಸಭೆಯ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ.ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆʼಯ 10 ನೇ ಆವೃತ್ತಿಯಲ್ಲಿ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಶ್ಲಾಘಿಸಿದ ಜಾಗತಿಕ ಉದ್ಯಮ ಮುಖಂಡರು
January 10th, 12:28 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗಾಂಧಿನಗರದ ʻಮಹಾತ್ಮಾ ಮಂದಿರʼದಲ್ಲಿ ಗುಜರಾತ್ ಜಾಗತಿಕ ಹೂಡಿಕೆದಾರರ ಸಮಾವೇಶದ 10ನೇ ಆವೃತ್ತಿಯಾದ ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ-2024ʼಕ್ಕೆ ಚಾಲನೆ ನೀಡಿದರು. ಈ ವರ್ಷದ ಶೃಂಗಸಭೆಯು 'ಭವಿಷ್ಯದ ಹೆಬ್ಬಾಗಿಲು' ವಿಷಯಾಧಾರಿತವಾಗಿ ಆಯೋಜನೆಗೊಂಡಿದ್ದು, 34 ಪಾಲುದಾರ ರಾಷ್ಟ್ರಗಳು ಮತ್ತು 16 ಪಾಲುದಾರ ಸಂಸ್ಥೆಗಳು ಭಾಗವಹಿಸಿವೆ. ಈಶಾನ್ಯ ಪ್ರದೇಶಗಳಲ್ಲಿ ಹೂಡಿಕೆಯ ಅವಕಾಶಗಳನ್ನು ಪ್ರದರ್ಶಿಸಲು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯವು ಈ ಶೃಂಗಸಭೆಯನ್ನು ವೇದಿಕೆಯಾಗಿ ಬಳಸುತ್ತಿದೆ.ಗುಜರಾತ್‌ನ ಗಾಂಧಿನಗರದಲ್ಲಿ ಸ್ಪಂದನಾಶೀಲ(ವೈಬ್ರೆಂಟ್) ಗುಜರಾತ್ ಶೃಂಗಸಭೆ 2024 ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
January 10th, 10:30 am
2024ರ ಹೊಸ ವರ್ಷಕ್ಕೆ ನಾನು ನಿಮಗೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಭಾರತವು ಇತ್ತೀಚೆಗೆ ತನ್ನ 75ನೇ ಸ್ವಾತಂತ್ರ್ಯ ಅಮೃತ ವರ್ಷವನ್ನು ಆಚರಿಸಿದೆ. ನಮ್ಮ ರಾಷ್ಟ್ರದ ಸ್ವಾತಂತ್ರ್ಯದ ಶತಮಾನೋತ್ಸವದ ಸಂಭ್ರಮಾಚರಣೆಯ ಮೂಲಕ ಅಭಿವೃದ್ಧಿ ಹೊಂದಿದ ಸ್ಥಾನಮಾನ ಸಾಧಿಸುವ ಗುರಿಯೊಂದಿಗೆ ಮುಂದಿನ 25 ವರ್ಷಗಳ ಗುರಿಗಳತ್ತ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಈ 25 ವರ್ಷಗಳ ಅಧಿಕಾರಾವಧಿಯು ಭಾರತಕ್ಕೆ 'ಅಮೃತ ಕಾಲ'ದ ಅವಧಿಯಾಗಿದೆ. ಇದು ತಾಜಾ ಆಕಾಂಕ್ಷೆಗಳು, ಹೊಸ ನಿರ್ಣಯಗಳು ಮತ್ತು ನಿರಂತರ ಸಾಧನೆಗಳ ಅವಧಿಯನ್ನು ಸೂಚಿಸುತ್ತದೆ. ಈ ಮೊದಲ ರೋಮಾಂಚಕ ಅಥವಾ ಸ್ಪಂದನಾಶೀಲ ಗುಜರಾತ್ ಜಾಗತಿಕ ಶೃಂಗಸಭೆಯು 'ಅಮೃತ ಕಾಲ'ದ ಸಮಯದಲ್ಲಿ ನಡೆದಿರುವುದು ಅಪಾರ ಮಹತ್ವ ಹೊಂದಿದೆ. ಈ ಶೃಂಗಸಭೆಯಲ್ಲಿ ನಮ್ಮೊಂದಿಗೆ ಸೇರಿಕೊಂಡಿರುವ 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾರತದ ಅಭಿವೃದ್ಧಿ ಪಯಣದಲ್ಲಿ ಅಮೂಲ್ಯ ಮಿತ್ರರಾಗಿದ್ದಾರೆ. ನಾನು ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 10ನೇ ಆವೃತ್ತಿಯ ವೈಬ್ರೆಂಟ್ ಗ್ಲೋಬಲ್ ಶೃಂಗಸಭೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ
January 10th, 09:40 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಾಂಧಿನಗರದ ಮಹಾತ್ಮಮಂದಿರದಲ್ಲಿಂದು 10ನೇ ಆವೃತ್ತಿಯ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯನ್ನು ಉದ್ಘಾಟಿಸಿದರು. ಶೃಂಗಸಭೆಯ ಈ ವರ್ಷದ ಘೋಷವಾಕ್ಯ “ಭವಿಷ್ಯಕ್ಕೆ ಹೆಬ್ಬಾಗಿಲು’’ ಎಂದಾಗಿದೆ ಮತ್ತು ಇದರಲ್ಲಿ 34 ಪಾಲುದಾರ ದೇಶಗಳು ಹಾಗೂ 16 ಪಾಲುದಾರ ಸಂಸ್ಥೆಗಳು ಭಾಗವಹಿಸಿವೆ. ಈಶಾನ್ಯ ರಾಜ್ಯಗಳಲ್ಲಿರುವ ಹೂಡಿಕೆ ಅವಕಾಶಗಳನ್ನು ಬಿಂಬಿಸಲು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ ಈ ಶೃಂಗಸಭೆಯನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದೆ.PM Modi meets CEOs of global firms in Gandhinagar, Gujarat
January 09th, 04:30 pm
Prime Minister Narendra Modi met CEOs of various global organisations and institutes in Gandhinagar, Gujarat. These included Sultan Ahmed Bin Sulayem of DP World, Mr. Sanjay Mehrotra of Micron Technology, Professor Iain Martin of Deakin University, Mr. Keith Svendsen of A.P. Moller – Maersk and Mr. Toshihiro Suzuki of Suzuki Motor Corp.10ನೇ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2024 - ಸಂದರ್ಭದಲ್ಲಿ ಮೊಜಾಂಬಿಕ್ ಗಣರಾಜ್ಯದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
January 09th, 02:03 pm
ಮೊಜಾಂಬಿಕ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಫಿಲಿಪ್ ಜೆಸಿಂಟೊ ನ್ಯೂಸಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 9 ಜನವರಿ 2024 ರಂದು ಗಾಂಧಿನಗರದಲ್ಲಿ ಭೇಟಿ ಮಾಡಿದರು.ದ್ವೀಪ ರಾಷ್ಟ್ರ ಟಿಮೋರ್-ಲೆಸ್ಟೆ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿ ಸಭೆ
January 09th, 11:16 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಹೋರ್ಟಾ ಗಾಂಧಿನಗರದಲ್ಲಿಂದು ಭೇಟಿಯಾದರು. ವೈಬ್ರಂಟ್ ಗುಜರಾತ್ ಶೃಂಗಸಭೆಗೆ ಅಧ್ಯಕ್ಷ ಹೋರ್ಟಾ ಮತ್ತು ಅವರ ನಿಯೋಗಕ್ಕೆ ಪ್ರಧಾನ ಮಂತ್ರಿ ಮೋದಿ ಅವರು ಆತ್ಮೀಯ ಸ್ವಾಗತ ನೀಡಿದರು. ಉಭಯ ದೇಶಗಳ ನಡುವಿನ ರಾಷ್ಟ್ರ ಮಟ್ಟದ ಅಥವಾ ಸರ್ಕಾರ ಮಟ್ಟದ ಮುಖ್ಯಸ್ಥರ ಮೊದಲ ಭೇಟಿ ಇದಾಗಿದೆ. ರೋಮಾಂಚಕ ದೆಹಲಿ-ದಿಲಿ ಸಂಪರ್ಕವನ್ನು ಬಲವಾಗಿ ನಿರ್ಮಿಸುವ ಭಾರತದ ಬದ್ಧತೆಯನ್ನು ಪ್ರಧಾನ ಮಂತ್ರಿ ಪುನರುಚ್ಚರಿಸಿದರು. ಟಿಮೋರ್-ಲೆಸ್ಟೆಯಲ್ಲಿ ಭಾರತೀಯ ಮಿಷನ್ ತೆರೆಯುವುದಾಗಿ 2023 ಸೆಪ್ಟೆಂಬರ್ ನಲ್ಲಿ ಪ್ರಧಾನಿ ಮೋದಿ ಘೋಷಿಸಿದ್ದರು. ಸಾಮರ್ಥ್ಯ ಬಲವರ್ಧನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಹಣಕಾಸು ತಂತ್ರಜ್ಞಾನ, ಸಾಂಪ್ರದಾಯಿಕ ಔಷಧ ಮತ್ತು ಫಾರ್ಮಾ, ಇಂಧನ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಟಿಮೋರ್-ಲೆಸ್ಟೆಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಇಂಟರ್‌ನ್ಯಾಶನಲ್ ಸೋಲಾರ್ ಅಲೈಯನ್ಸ್ (ISA) ಮತ್ತು ವಿಪತ್ತು ನಿರ್ವಹಣಾ ಮೂಲಸೌಕರ್ಯ(CDRI)ಕ್ಕೆ ಸೇರುವಂತೆ ಟಿಮೋರ್-ಲೆಸ್ಟೆಗೆ ಪ್ರಧಾನಿ ಆಹ್ವಾನ ನೀಡಿದರು.ಜನವರಿ 8-10ರವರೆಗೆ ಗುಜರಾತ್‌ಗೆ ಪ್ರಧಾನ ಮಂತ್ರಿಗಳ ಭೇಟಿ
January 07th, 03:11 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಜನವರಿ 8-10 ರವರೆಗೆ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ.ಎರಡನೇ ಇನ್ಫಿನಿಟಿ ಫೋರಂ ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಪ್ರಧಾನಮಂತ್ರಿ
December 09th, 11:09 am
ಇನ್ಪಿನಿಟಿ ಫೋರಂನ ಎರಡನೇ ಆವೃತ್ತಿಗೆ ನಿಮಗೆಲ್ಲರಿಗೂ ಸ್ವಾಗತ. 2021 ರ ಡಿಸೆಂಬರ್ ನಲ್ಲಿ ಇನ್ಪಿನಿಟಿ ಫೋರಂ ಅನ್ನು ಉದ್ಘಾಟಿಸಿದ ಸಂದರ್ಭವನ್ನು ನಾನು ಸ್ಮರಿಸಿಕೊಳ್ಳುತ್ತೇನೆ; ಆಗ ಜಗತ್ತು ಸಾಂಕ್ರಾಮಿಕದಿಂದಾಗಿ ಅನಿಶ್ಚಿತತೆಯಿಂದ ಕೂಡಿತ್ತು. ಪ್ರತಿಯೊಬ್ಬರೂ ಜಾಗತಿಕ ಆರ್ಥಿಕ ಬೆಳವಣಿಗೆ ಕುರಿತು ಕಳವಳಗೊಂಡಿದ್ದರು ಮತ್ತು ಆ ಚಿಂತೆಗಳು ಈಗಲೂ ಉಳಿದುಕೊಂಡಿವೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಸಾಲದ ಮಟ್ಟ ಮತ್ತು ಹೆಚ್ಚಿನ ಹಣದುಬ್ಬರ ಒಡ್ಡುವ ಸವಾಲಯಗಳ ಕುರಿತು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ.ʻಇನ್ಫಿನಿಟಿ ಫೋರಂ 2.0ʼ ಉದ್ದೇಶಿಸಿ ಪ್ರಧಾನಿ ಭಾಷಣ
December 09th, 10:40 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಫಿನ್‌ಟೆಕ್ʼ ಕುರಿತಾದ ಜಾಗತಿಕ ಚಿಂತನಾವೇದಿಕೆ - ʻಇನ್ಫಿನಿಟಿ ಫೋರಂʼನ ಎರಡನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ-2024ʼರ ಪೂರ್ವಭಾವಿಯಾಗಿ ಭಾರತ ಸರ್ಕಾರದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಗಳ ಪ್ರಾಧಿಕಾರ (ಐಎಫ್ಎಸ್‌ಸಿಎ) ಮತ್ತು ʻಗಿಫ್ಟ್ ಸಿಟಿʼ ಜಂಟಿಯಾಗಿ ʻಇನ್ಫಿನಿಟಿ ಫೋರಂʼನ 2ನೇ ಆವೃತ್ತಿಯನ್ನು ಆಯೋಜಿಸಿವೆ. ʻಇನ್ಫಿನಿಟಿ ಫೋರಂʼನ 2ನೇ ಆವೃತ್ತಿಯನ್ನು 'ಗಿಫ್ಟ್-ಐಎಫ್ಎಸ್‌ಸಿ: ಹೊಸ ಯುಗದ ಜಾಗತಿಕ ಹಣಕಾಸು ಸೇವಾ ಕೇಂದ್ರʼ ವಿಷಯಾಧಾರಿತವಾಗಿ ಏರ್ಪಡಿಸಲಾಗಿದೆ.Vibrant Gujarat is not just an event of branding, but it is also an event of bonding: PM Modi
September 27th, 11:00 am
PM Modi addressed the programme marking 20 years celebration of the Vibrant Gujarat Global Summit at Science City in Ahmedabad. He remarked that the seeds sown twenty years ago have taken the form of a magnificent and perse Vibrant Gujarat. Reiterating that Vibrant Gujarat is not merely a branding exercise for the state but an occasion to strengthen the bonding, PM Modi emphasized that the summit is a symbol of a solid bond associated with him and the capabilities of 7 crore people of the state.ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆʼಯ 20ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಮಂತ್ರಿಗಳ ಭಾಷಣ
September 27th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್‌ನ ʻಸೈನ್ಸ್ ಸಿಟಿʼಯಲ್ಲಿ ನಡೆದ ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆʼಯ 20ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆʼಯನ್ನು 20 ವರ್ಷಗಳ ಹಿಂದೆ 2003ರ ಸೆಪ್ಟೆಂಬರ್ 28ರಂದು ಅಂದಿನ ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಪ್ರಾರಂಭಿಸಲಾಯಿತು. ಕಾಲಾನಂತರದಲ್ಲಿ, ಇದು ನಿಜವಾದ ಜಾಗತಿಕ ಕಾರ್ಯಕ್ರಮವಾಗಿ ರೂಪಾಂತರಗೊಂಡಿದ್ದು, ಭಾರತದ ಪ್ರಮುಖ ವ್ಯಾಪಾರ ಶೃಂಗಸಭೆಗಳಲ್ಲಿ ಒಂದಾಗಿದೆ.