ಚಂದ್ರ ಮತ್ತು ಮಂಗಳನ ನಂತರ, ಶುಕ್ರನ ಮೇಲೆ ವೈಜ್ಞಾನಿಕ ಅನ್ವೇಷಣೆಗೆ ಲಕ್ಷ್ಯ ಇರಿಸಿದ ಭಾರತ

September 18th, 04:37 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಶುಕ್ರ ಗ್ರಹದ ಕ್ಷಕ್ಷೆಯ ಅಭಿಯಾನ[ವಿಒಎಂ]ಕ್ಕೆ ಅನುಮೋದನೆ ನೀಡಲಾಗಿದೆ. ಇದು ಚಂದ್ರ ಮತ್ತು ಮಂಗಳವನ್ನು ಮೀರಿ ಶುಕ್ರನನ್ನು ಅನ್ವೇಷಿಸುವ ಮತ್ತು ಅಧ್ಯಯನ ಮಾಡುವ ಸರ್ಕಾರದ ದೃಷ್ಟಿಯತ್ತ ಮಹತ್ವದ ಹೆಜ್ಜೆಯಾಗಿದೆ. ಶುಕ್ರ, ಭೂಮಿಗೆ ಹತ್ತಿರವಿರುವ ಗ್ರಹ ಮತ್ತು ಭೂಮಿಯಂತೆಯೇ ಪರಿಸ್ಥಿತಿಗಳಲ್ಲಿ ರೂಪುಗೊಂಡಿದೆ ಎಂದು ನಂಬಲಾಗಿದೆ, ಗ್ರಹಗಳ ಪರಿಸರವು ಹೇಗೆ ವಿಭಿನ್ನವಾಗಿ ವಿಕಸನಗೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಒಂದು ಅನನ್ಯ ಅವಕಾಶವನ್ನು ನೀಡಲಿದೆ.