ವಲ್ಲಲಾರ್ ಎಂದೂ ಕರೆಯಲ್ಪಡುವ ಶ್ರೀ ರಾಮಲಿಂಗ ಸ್ವಾಮಿಯವರ 200 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಪಠ್ಯ

October 05th, 02:00 pm

ವಲ್ಲಲಾರ್ ಎಂದೂ ಕರೆಯಲ್ಪಡುವ ಮಹಾನ್ ಶ್ರೀ ರಾಮಲಿಂಗ ಸ್ವಾಮಿ ಜೀ (श्री रामलिंग स्वामी जी ) ಅವರ ಇನ್ನೂರನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ಅವಕಾಶ ದೊರಕಿರುವುದು ಬಹಳ ಗೌರವದ ವಿಷಯವಾಗಿದೆ. ವಲ್ಲಲಾರಿಗೆ ನಿಕಟ ಸಂಪರ್ಕವಿರುವ ವಡಲೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಇನ್ನಷ್ಟು ವಿಶೇಷ. ವಲ್ಲಲಾರ್ ನಮ್ಮ ಅತ್ಯಂತ ಗೌರವಾನ್ವಿತ ಸಂತರಲ್ಲಿ ಒಬ್ಬರು. ಅವರು ಈ ಭೂಮಿಯಲ್ಲಿ 19 ನೇ ಶತಮಾನದಲ್ಲಿ ಜೀವಿತದಲ್ಲಿದ್ದರೂ ಕೂಡಾ, ಅವರ ಆಧ್ಯಾತ್ಮಿಕ ಚಿಂತನೆ-ಒಳನೋಟಗಳು ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಿವೆ. ಅವರ ಪ್ರಭಾವವು ಜಾಗತಿಕವಾಗಿದೆ. ಅವರ ಚಿಂತನೆಗಳು ಮತ್ತು ಆದರ್ಶಗಳ ಮೇಲೆ ಹಲವಾರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ವಲ್ಲಲಾರ್ ಎಂದೂ ಕರೆಯಲ್ಪಡುವ ಶ್ರೀ ರಾಮಲಿಂಗ ಸ್ವಾಮಿ ಅವರ 200ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಭಾಷಣ

October 05th, 01:30 pm

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ವಲ್ಲಲಾರ್ ಗೆ ನಿಕಟ ಸಂಬಂಧ ಹೊಂದಿರುವ ವಡಲೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವಲ್ಲಲಾರ್ ಅವರು 19 ನೇ ಶತಮಾನದಲ್ಲಿ ಭೂಮಿಯ ಮೇಲೆ ನಡೆದ ಭಾರತದ ಅತ್ಯಂತ ಗೌರವಾನ್ವಿತ ಸಂತರಲ್ಲಿ ಒಬ್ಬರು ಮತ್ತು ಅವರ ಆಧ್ಯಾತ್ಮಿಕ ಒಳನೋಟಗಳು ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಿವೆ ಎಂದು ಅವರು ಹೇಳಿದರು. ವಲ್ಲಲಾರ್ ಅವರ ಪ್ರಭಾವ ಜಾಗತಿಕವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು, ಅವರ ಚಿಂತನೆಗಳು ಮತ್ತು ಆದರ್ಶಗಳ ಮೇಲೆ ಹಲವಾರು ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದು ಒತ್ತಿ ಹೇಳಿದರು.