ಪ್ರಧಾನಮಂತ್ರಿಗಳಿಂದ ಗುಜರಾತ್ ನ ಮೆಹ್ಸಾನಾದಲ್ಲಿ ವಲಿನಾಥ ಮಹಾದೇವ ದೇಗುಲ ದರ್ಶನ ಮತ್ತು ಪೂಜೆ

February 22nd, 07:48 pm

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಗುಜರಾತ್ ನ ಮೆಹ್ಸಾನಾದಲ್ಲಿ ವಲಿನಾಥ ಮಹಾದೇವ ದೇಗುಲ ದರ್ಶನ ಮಾಡಿ ಪೂಜೆ ಸಲ್ಲಿಸಿದರು.

ಫೆಬ್ರವರಿ 22 ಮತ್ತು 23 ರಂದು ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

February 21st, 11:41 am

ಫೆಬ್ರವರಿ 22 ರ ಬೆಳಿಗ್ಗೆ 10:45ಕ್ಕೆ ಪ್ರಧಾನಮಂತ್ರಿಯವರು ಅಹ್ಮದಾಬಾದ್ ನಲ್ಲಿ ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟದ (ಜಿ.ಸಿ.ಎಂ.ಎಂ.ಎಫ್). ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ನಂತರ 12:45 ಕ್ಕೆ ಪ್ರಧಾನಮಂತ್ರಿಯವರು ಮಹೆಸನಾಗೆ ತಲುಪಲಿದ್ದು, ವಲಿನಾಥ್ ಮಹದೇವ್ ದೇವಾಲಯದಲ್ಲಿ ದರ್ಶನ ಪಡೆಯಲಿದ್ದಾರೆ ಮತ್ತು ಪೂಜೆ ಸಲ್ಲಿಸಲಿದ್ದಾರೆ. 1 ಗಂಟೆ ಸುಮಾರಿಗೆ ಮಹಸೆನಾದ ತರಭ್ ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ 13,500 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಹುಹಂತದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸಂಜೆ 4:15 ಕ್ಕೆ ಪ್ರಧಾನಮಂತ್ರಿಯವರು ನವಸಾರಿಗೆ ತೆರಳಲಿದ್ದು, ಅಲ್ಲಿ 47,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಹುಹಂತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಶಿಲಾನ್ಯಾಸ ನೆರವೇರಿಸುವರು ಮತ್ತು ದೇಶಕ್ಕೆ ಸಮರ್ಪಿಸುವರು. ಸಂಜೆ 6:15 ಕ್ಕೆ ಪ್ರಧಾನಮಂತ್ರಿಯವರು ಕಕ್ರಾಪರ್ ಪರಮಾಣು ವಿದ್ಯುತ್ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.