The bond between India & Guyana is of soil, of sweat, of hard work: PM Modi
November 21st, 08:00 pm
Prime Minister Shri Narendra Modi addressed the National Assembly of the Parliament of Guyana today. He is the first Indian Prime Minister to do so. A special session of the Parliament was convened by Hon’ble Speaker Mr. Manzoor Nadir for the address.PM Modi addresses the Parliament of Guyana
November 21st, 07:50 pm
PM Modi addressed the National Assembly of Guyana, highlighting the historical ties and shared democratic ethos between the two nations. He thanked Guyana for its highest honor and emphasized India's 'Humanity First' approach, amplifying the Global South's voice and fostering global friendships.ಎನ್ ಡಿ ಟಿ ವಿ ವಿಶ್ವ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ
October 21st, 10:25 am
ನಾವು ಹಿಂದಿನ 4-5 ವರ್ಷಗಳ ಚರ್ಚೆಗಳನ್ನು ನೋಡಿದರೆ ಬಹುತೇಕ ಚರ್ಚೆಗಳಲ್ಲಿ ಒಂದು ಸಾಮಾನ್ಯ ವಿಷಯವಿದೆ ಎಂಬುದನ್ನು ಗಮನಿಸಬಹುದು. ಅದುವೇ ಭವಿಷ್ಯದ ಬಗ್ಗೆ ಕಾಳಜಿ/ಕಳವಳ. ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಜಾಗತಿಕ ಸಾಂಕ್ರಾಮಿಕ ರೋಗವನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆ ಇತ್ತು. ಕೋವಿಡ್ ಹರಡುತ್ತಿದ್ದಂತೆ, ಜಾಗತಿಕ ಆರ್ಥಿಕತೆಯ ಬಗ್ಗೆ ಕಳವಳಗಳು ಹೆಚ್ಚಾದವು. ಸಾಂಕ್ರಾಮಿಕ ರೋಗವು ಹಣದುಬ್ಬರ, ನಿರುದ್ಯೋಗ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಚಿಂತೆಗಳನ್ನು ಹೆಚ್ಚಿಸಿತು. ನಂತರ, ಭುಗಿಲೆದ್ದ ಯುದ್ಧಗಳು ಈ ಕುರಿತಾದ ಚರ್ಚೆಗಳು ಮತ್ತು ಆತಂಕಗಳನ್ನು ತೀವ್ರಗೊಳಿಸಿತು. ಜಾಗತಿಕ ಪೂರೈಕೆ ಸರಪಳಿಗೆ ಅಡೆತಡೆಗಳು ಮತ್ತು ಅನೇಕ ಅಮಾಯಕ ಜೀವಿಗಳು ಪ್ರಾಣ ಕಳೆದುಕೊಳ್ಳಬೇಕಾದ ಬಗ್ಗೆ ಆತಂಕ ಉಂಟಾಗಿತ್ತು. ಜಾಗತಿಕ ಶೃಂಗಸಭೆಗಳು ಮತ್ತು ಉಪನ್ಯಾಸಗಳಲ್ಲಿ ಉದ್ವಿಗ್ನತೆಗಳು, ಸಂಘರ್ಷಗಳು ಮತ್ತು ಒತ್ತಡಗಳು ಚರ್ಚಾ ವಿಷಯಗಳಾದವು. ಜಾಗತಿಕವಾಗಿ ಪ್ರಸ್ತುತದ ಚರ್ಚೆಗಳು ಈ ಕಳವಳದ ಬಗ್ಗೆ ಕೇಂದ್ರೀಕೃತವಾಗಿರುವಾಗ, ಭಾರತದಲ್ಲಿ ಯಾವ ರೀತಿಯ ಚಿಂತನೆ ನಡೆಯುತ್ತಿದೆ? ಇದು ಜಾಗತಿಕ ಚಿಂತೆಗೆ ವ್ಯತಿರಿಕ್ತವಾಗಿದೆ. ಭಾರತದಲ್ಲಿ ನಾವು ಈ ಜಾಗತಿಕ ಪ್ರಕ್ಷುಬ್ಧತೆಯ ನಡುವೆಯೂ “ಭಾರತೀಯ ಶತಮಾನ”ದ ಬಗ್ಗೆ ಮಾತನಾಡುತ್ತಿದ್ದೇವೆ. ಭಾರತ ಆಶಾಕಿರಣವಾಗಿದೆ. ಜಗತ್ತು ಚಿಂತೆಯಲ್ಲಿ ಮುಳುಗಿರುವಾಗ, ಭಾರತವು ಭರವಸೆಯನ್ನು ಹರಡುತ್ತಿದೆ. ಹಾಗೆಂದ ಮಾತ್ರಕ್ಕೆ ಜಾಗತಿಕ ಸನ್ನಿವೇಶಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದಲ್ಲ – ಅದು ಪ್ರಭಾವವನ್ನು ಖಂಡಿತವಾಗಿಯೂ ಬೀರಲಿದೆ. ಭಾರತವು ಸವಾಲುಗಳನ್ನು ಎದುರಿಸುತ್ತಿದೆ, ಆದರೆ ಇಲ್ಲಿ ಸಕಾರಾತ್ಮಕತೆಯ ಭಾವವಿದೆ, ನಾವೆಲ್ಲರೂ ಅದರ ಅನುಭೂತಿ ಪಡೆಯಬಹುದು. ಹೀಗಾಗಿ 'ದಿ ಇಂಡಿಯನ್ ಸೆಂಚುರಿ – (ಭಾರತದ ಶತಮಾನದ)' ದ ಬಗ್ಗೆ ಮಾತು ಕೇಳಿಬರುತ್ತಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಎನ್ ಡಿ ಟಿ ವಿ ವಿಶ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು
October 21st, 10:16 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಎನ್ ಡಿ ಟಿ ವಿ ವಿಶ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಎಲ್ಲಾ ಗಣ್ಯರನ್ನು ಸ್ವಾಗತಿಸಿದರು ಮತ್ತು ಶೃಂಗಸಭೆಯಲ್ಲಿ ಹಲವು ವಿಷಯಗಳನ್ನು ಕುರಿತು ಚರ್ಚೆಗಳು ನಡೆಯಲಿವೆ ಎಂದು ಹೇಳಿದರು. ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ವಿವಿಧ ವಲಯಗಳ ಜಾಗತಿಕ ನಾಯಕರ ಉಪಸ್ಥಿತಿಯನ್ನು ಅವರು ಶ್ಲಾಘಿಸಿದರು.ಫ್ಯಾಕ್ಟ್ ಶೀಟ್: ಇಂಡೋ-ಪೆಸಿಫಿಕ್ ನಲ್ಲಿ ಕ್ಯಾನ್ಸರ್ ಹೊರೆಯನ್ನು ಕಡಿಮೆ ಮಾಡಲು ಕ್ವಾಡ್ ದೇಶಗಳು ಕ್ಯಾನ್ಸರ್ ಮೂನ್ಶಾಟ್ ಉಪಕ್ರಮವನ್ನು ಪ್ರಾರಂಭಿಸಿವೆ
September 22nd, 12:03 pm
ಇಂದು, ಅಮೆರಿಕ, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ ಇಂಡೋ-ಪೆಸಿಫಿಕ್ ನಲ್ಲಿ ನಮಗೆ ತಿಳಿದಿರುವಂತೆ ಕ್ಯಾನ್ಸರ್ ಅನ್ನು ಕೊನೆಗೊಳಿಸಲು ಸಹಾಯ ಮಾಡುವ ಅದ್ಭುತ ಪ್ರಯತ್ನವನ್ನು ಪ್ರಾರಂಭಿಸುತ್ತಿವೆ, ಗರ್ಭಕಂಠದ ಕ್ಯಾನ್ಸರ್ ನಿಂದ ಪ್ರಾರಂಭಿಸಿ, ಈ ಪ್ರದೇಶದಲ್ಲಿ ಪ್ರಮುಖ ಆರೋಗ್ಯ ಬಿಕ್ಕಟ್ಟಾಗಿ ಮುಂದುವರೆದಿರುವ ಹೆಚ್ಚಾಗಿ ತಡೆಗಟ್ಟಬಹುದಾದ ಕಾಯಿಲೆಯಿಂದ ಪ್ರಾರಂಭಿಸಿ ಮತ್ತು ಇತರ ರೀತಿಯ ಕ್ಯಾನ್ಸರ್ ಅನ್ನು ಸಹ ಪರಿಹರಿಸಲು ಅಡಿಪಾಯವನ್ನು ಹಾಕುತ್ತಿವೆ. ಈ ಉಪಕ್ರಮವು ಕ್ವಾಡ್ ನಾಯಕರ ಶೃಂಗಸಭೆಯಲ್ಲಿ Quad Leaders Summit . ಮಾಡಿದ ವ್ಯಾಪಕ ಪ್ರಕಟಣೆಗಳ ಭಾಗವಾಗಿದೆ.ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕ ನಾಯಕರಿಂದ ವಿಲ್ಮಿಂಗ್ಟನ್ ಘೋಷಣೆ ಜಂಟಿ ಹೇಳಿಕೆ
September 22nd, 11:51 am
ಇಂದು, ನಾವು-ಆಸ್ಟ್ರೇಲಿಯದ ಪ್ರಧಾನಿ ಆಂಥೋನಿ ಅಲ್ಬನೀಸ್, ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ನ ಪ್ರಧಾನಿ ಕಿಶಿದಾ ಫ್ಯೂಮಿಯೊ ಮತ್ತು ಅಮೆರಿಕ ಅಧ್ಯಕ್ಷ ಜೋಸೆಫ್ ಆರ್. ಬಿಡೆನ್, ಅವರು ನಾಲ್ಕನೇ ಕ್ವಾಡ್ ನಾಯಕರ ಶೃಂಗಸಭೆ ಸಂದರ್ಭದಲ್ಲಿ ಭೇಟಿಯಾದರು. ವಿಲ್ಮಿಂಗ್ಟನ್‌ನ ಡೆಲವೇರ್‌ನಲ್ಲಿ ಅಧ್ಯಕ್ಷ ಬಿಡೆನ್ ಈ ಸಭೆಯನ್ನು ಆಯೋಜಿಸಿದ್ದರು.ಕ್ವಾಡ್ ನಾಯಕರ ಕ್ಯಾನ್ಸರ್ ಮೂನ್‌ಶಾಟ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
September 22nd, 06:25 am
ಈ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ಅಧ್ಯಕ್ಷ ಬೈಡೆನ್ ಅವರನ್ನು ಅಭಿನಂದಿಸುತ್ತೇನೆ. ಇದು ಕೈಗೆಟುಕುವ, ಸುಲಭವಾಗಿ ಲಭ್ಯವಿರುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಗೆ ನಮ್ಮ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ನಾವು ಇಂಡೋ-ಪೆಸಿಫಿಕ್‌ಗಾಗಿ ಕ್ವಾಡ್ ಲಸಿಕೆ ಉಪಕ್ರಮ ವನ್ನು ಆರಂಭಿಸಿದ್ದೇವೆ. ಮತ್ತು ಕ್ವಾಡ್ ನಲ್ಲಿ ಗರ್ಭಕಂಠದ ಕ್ಯಾನ್ಸರ್ ನಂತಹ ಸವಾಲನ್ನು ಎದುರಿಸಲು ನಾವು ಒಟ್ಟಾಗಿ ನಿರ್ಧರಿಸಿರುವುದು ನನಗೆ ಸಂತೋಷ ತಂದಿದೆ.ಕ್ವಾಡ್ ಕ್ಯಾನ್ಸರ್ ಮೂನ್ ಶಾಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ
September 22nd, 06:10 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೆಲವೇರ್ ನ ವಿಲ್ಮಿಂಗ್ಟನ್ ನಲ್ಲಿ ನಡೆದ ಕ್ವಾಡ್ ಲೀಡರ್ಸ್ ಶೃಂಗಸಭೆಯ ಸಂದರ್ಭದಲ್ಲಿ ಅದ್ಯಕ್ಷರಾದ ಶ್ರೀ ಜೋಸೆಫ್ ಆರ್ ಬೈಡನ್ ಜೂನಿಯರ್ ಅವರು ಆಯೋಜಿಸಿದ್ದ ಕ್ವಾಡ್ ಕ್ಯಾನ್ಸರ್ ಮೂನ್ ಶಾಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಮೋದಿ ಬದುಕಿರುವವರೆಗೂ ಎಸ್‌ಟಿ-ಎಸ್‌ಸಿ-ಒಬಿಸಿ ಮೀಸಲಾತಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ: ಬನಸ್ಕಾಂತದಲ್ಲಿ ಪ್ರಧಾನಿ ಮೋದಿ
May 01st, 04:30 pm
ಗುಜರಾತ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಗುಜರಾತ್‌ನ ಬನಸ್ಕಾಂತದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಪ್ರಧಾನಿ ಮೋದಿಯವರು ತಮ್ಮ ಭಾಷಣವನ್ನು ಆರಂಭಿಸಿದ್ದು, ಕೇಂದ್ರ ಸರ್ಕಾರದಲ್ಲಿ ಮೂರನೇ ಅವಧಿಗೆ ಆಶೀರ್ವಾದ ಪಡೆಯುವ ಅವಕಾಶಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸುವ ಮೂಲಕ ತಮ್ಮ ರಾಜಕೀಯ ಪ್ರಯಾಣದಲ್ಲಿ ಗುಜರಾತ್‌ನ ಮಹತ್ವವನ್ನು ಒತ್ತಿ ಹೇಳಿದರು.60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ನ ಸ್ಥಿತಿ ಚಿಂತಾಜನಕವಾಗಿದೆ: ಸಬರಕಾಂತದಲ್ಲಿ ಪ್ರಧಾನಿ ಮೋದಿ
May 01st, 04:15 pm
ಗುಜರಾತ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಗುಜರಾತ್‌ನ ಸಬರಕಾಂತದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಪ್ರಧಾನಿ ಮೋದಿಯವರು ತಮ್ಮ ಭಾಷಣವನ್ನು ಆರಂಭಿಸಿದ್ದು, ಕೇಂದ್ರ ಸರ್ಕಾರದಲ್ಲಿ ಮೂರನೇ ಅವಧಿಗೆ ಆಶೀರ್ವಾದ ಪಡೆಯುವ ಅವಕಾಶಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸುವ ಮೂಲಕ ತಮ್ಮ ರಾಜಕೀಯ ಪ್ರಯಾಣದಲ್ಲಿ ಗುಜರಾತ್‌ನ ಮಹತ್ವವನ್ನು ಒತ್ತಿ ಹೇಳಿದರು.ಪ್ರಧಾನಿ ಮೋದಿ ಅವರು ಗುಜರಾತ್‌ನ ಬನಸ್ಕಾಂತ ಮತ್ತು ಸಬರಕಾಂತದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು
May 01st, 04:00 pm
ಗುಜರಾತ್‌ನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಗುಜರಾತ್‌ನ ಬನಸ್ಕಾಂತ ಮತ್ತು ಸಬರಕಾಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿಯವರು ತಮ್ಮ ಭಾಷಣವನ್ನು ಆರಂಭಿಸಿದ್ದು, ಕೇಂದ್ರ ಸರ್ಕಾರದಲ್ಲಿ ಮೂರನೇ ಅವಧಿಗೆ ಆಶೀರ್ವಾದ ಪಡೆಯುವ ಅವಕಾಶಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸುವ ಮೂಲಕ ತಮ್ಮ ರಾಜಕೀಯ ಪ್ರಯಾಣದಲ್ಲಿ ಗುಜರಾತ್‌ನ ಮಹತ್ವವನ್ನು ಒತ್ತಿ ಹೇಳಿದರು.ನಾನು ನಿಜವಾದ ಉದ್ದೇಶದಿಂದ ಯೋಜನೆಗಳನ್ನು ರೂಪಿಸುವುದು ಮಾತ್ರವಲ್ಲ, ಭರವಸೆಯನ್ನೂ ನೀಡುತ್ತೇನೆ: ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ಮೋದಿ
April 20th, 04:00 pm
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಿ, ಚಿಕ್ಕಬಳ್ಳಾಪುರದಿಂದ ಡಾ.ಕೆ.ಸುಧಾಕರ್ ಮತ್ತು ಕೋಲಾರ ಕ್ಷೇತ್ರದಿಂದ ಮಲ್ಲೇಶ್ ಬಾಬು ಮುನಿಸ್ವಾಮಿ ಅವರನ್ನು ಬೆಂಬಲಿಸುವಂತೆ ಕೋರಿದರು.ಪ್ರಧಾನಿ ಮೋದಿ ಅವರು ಕರ್ನಾಟಕದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು
April 20th, 03:45 pm
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ರೋಮಾಂಚಕ ಗುಂಪನ್ನುದ್ದೇಶಿಸಿ ಮಾತನಾಡಿದ ಅವರು, ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಿದರು ಮತ್ತು ಭವಿಷ್ಯದ ಯೋಜನೆಗಳನ್ನು ವಿವರಿಸಿದರು.PM Modi’s Candid Conversation with Bill Gates
March 29th, 06:59 pm
Prime Minister Narendra Modi and Bill Gates came together for an engaging and insightful exchange. The conversation spanned a range of topics, including the future of Artificial Intelligence, the importance of Digital Public Infrastructure, and vaccination programs in India.ಛತ್ತೀಸ್‌ಗಢದಲ್ಲಿ ಮಹತಾರಿ ವಂದನಾ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಿದ ಭಾಷಣದ ಕನ್ನಡಾನುವಾದ
March 10th, 02:30 pm
ನಾನು ಮಾತೆ ದಂತೇಶ್ವರಿ, ಮಾತೆ ಬಮಲೇಶ್ವರಿ ಮತ್ತು ಮಾತೆ ಮಹಾಮಾಯೆಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ. ಛತ್ತೀಸ್‌ಗಢದ ತಾಯಂದಿರು ಮತ್ತು ಸಹೋದರಿಯರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಎರಡು ವಾರಗಳ ಹಿಂದೆ ಛತ್ತೀಸ್‌ಗಢದಲ್ಲಿ 35,000 ಕೋಟಿ ರೂ.ಗಳ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದ್ದೆನು. ಇಂದು ಮಹಿಳೆಯರ ಸಬಲೀಕರಣಕ್ಕಾಗಿ ಮಹತಾರಿ ವಂದನಾ ಯೋಜನೆ ಪ್ರಾರಂಭಿಸುವ ಸವಾಲು ನನಗೆ ಸಿಕ್ಕಿದೆ. ಮಹತಾರಿ ವಂದನಾ ಯೋಜನೆಡಿ, ಛತ್ತೀಸ್‌ಗಢದ 70 ಲಕ್ಷಕ್ಕೂ ಅಧಿಕ ತಾಯಂದಿರು ಮತ್ತು ಸಹೋದರಿಯರಿಗೆ ಪ್ರತಿ ತಿಂಗಳು 1,000 ರೂಪಾಯಿಗಳನ್ನು ಒದಗಿಸುವ ಪ್ರತಿಜ್ಞೆ ಸೂಚಿಸಲಾಗಿದೆ. ಈ ಭರವಸೆಯನ್ನು ಬಿಜೆಪಿ ಸರ್ಕಾರ ಈಡೇರಿಸಿದೆ. ಇಂದು ಮಹತಾರಿ ವಂದನಾ ಯೋಜನೆಯಡಿ ಮೊದಲ ಕಂತಿನ 655 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನಾನು ಪರದೆಯ ಮೇಲೆ ಹಲವು ಸಹೋದರಿಯರನ್ನು ನೋಡುತ್ತಿದ್ದೇನೆ! ನಮ್ಮೆಲ್ಲ ಸಹೋದರಿಯರೇ ವಿವಿಧ ಸ್ಥಳಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೆರೆದು, ನಿಮ್ಮ ಆಶೀರ್ವಾದವನ್ನು ಧಾರೆಯೆರೆದಿರುವುದು ನಿಜಕ್ಕೂ ನಮ್ಮ ಅದೃಷ್ಟ. ಇಂದಿನ ಕಾರ್ಯಕ್ರಮದ ಪ್ರಾಮುಖ್ಯತೆಯು ಗಮನಾರ್ಹವಾದದು ಮತ್ತು ಆದರ್ಶಪೂರ್ಣವಾದುದು. ಛತ್ತೀಸ್‌ಗಢದಲ್ಲಿ ನಾನು ನಿಮ್ಮ ಮಧ್ಯೆ ಇರಬೇಕಿತ್ತು. ಆದರೆ, ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ನಾನು ಸದ್ಯ ಉತ್ತರ ಪ್ರದೇಶದಲ್ಲಿದ್ದೇನೆ. ತಾಯಂದಿರೇ ಮತ್ತು ಸಹೋದರಿಯರೇ, ನಾನು ಈ ವೇಳೆ ಕಾಶಿಯಿಂದ ನಿಮ್ಮನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಕಳೆದ ರಾತ್ರಿ ನಾನು ಬಾಬಾ ವಿಶ್ವನಾಥರ ಪಾದಕ್ಕೆ ಶರಣಾಗಿ, ನನ್ನ ದೇಶವಾಸಿಗಳೆಲ್ಲರ ಒಳಿತಿಗಾಗಿ ಪ್ರಾರ್ಥಿಸಿ, ನಮಸ್ಕರಿಸಿದ್ದೇನೆ. ಇಂದು ಬಾಬಾ ವಿಶ್ವನಾಥರ ತಪೋ ಭೂಮಿಯಿಂದ, ಪವಿತ್ರ ಕಾಶಿ ನಗರದಿಂದ ನಿಮ್ಮೆಲ್ಲರೊಂದಿಗೆ ಮಾತನಾಡಲು ನನಗೆ ಅವಕಾಶ ದೊರೆತಿದೆ. ಆದ್ದರಿಂದ, ನಾನು ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಆದರೆ ಬಾಬಾ ವಿಶ್ವನಾಥರ ಎಲ್ಲಾ ಆಶೀರ್ವಾದಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ. ಎರಡು ದಿನಗಳ ಹಿಂದೆ ಶಿವರಾತ್ರಿ ಇತ್ತು, ಶಿವರಾತ್ರಿಯ ಕಾರಣ ಮಾರ್ಚ್ 8ರ ಮಹಿಳಾ ದಿನಾಚರಣೆಯಂದು ಈ ಕಾರ್ಯಕ್ರಮ ಆಯೋಜಿಸುವುದು ಸಾಧ್ಯವಾಗಿರಲಿಲ್ಲ. ಆದ್ದರಿಂದ, ಒಂದು ರೀತಿಯಲ್ಲಿ, ಮಾರ್ಚ್ 8 ರಂದು, ಮಹಿಳಾ ದಿನವು ಶಿವರಾತ್ರಿಯೊಂದಿಗೆ ಸರಿಯಾಗಿ ಹೊಂದಿಕೆಯಾಗಿದೆ. ಮತ್ತು ಇಂದು ನೀವು 1000 ರೂಪಾಯಿಗಳ ಆಶೀರ್ವಾದವನ್ನು ಪಡೆಯುತ್ತಿದ್ದೀರಿ ಮತ್ತು ಅದೇ ಸಮಯದಲ್ಲಿ ನೀವು ಹೆಚ್ಚು ಶಕ್ತಿಯುತವಾದದ್ದನ್ನು ಪಡೆಯುತ್ತಿದ್ದೀರಿ ಅಂದರೆ ಬಾಬಾ ನಗರದಿಂದ ಬಾಬಾ ಭೋಲೆಯವರ ಆಶೀರ್ವಾದವನ್ನು ಪಡೆಯುತ್ತೀರಿ ಎಂದರ್ಥ. ಈ ಹಣವನ್ನು ಯಾವುದೇ ಅನಾನುಕೂಲತೆ ಇಲ್ಲದೆ ಪ್ರತಿ ತಿಂಗಳು ನಿಮ್ಮ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ನಾನು ಪ್ರತಿಯೊಬ್ಬ ಮಹತಾರಿಗೆ (ತಾಯಿ) ಭರವಸೆ ನೀಡುತ್ತೇನೆ. ನಾನು ಛತ್ತೀಸ್‌ಗಢದ ಬಿಜೆಪಿ ಸರ್ಕಾರವನ್ನು ನಂಬುತ್ತೇನೆ, ಆದ್ದರಿಂದ ನಾನು ಈ ಭರವಸೆ ನೀಡುತ್ತೇನೆ.ಛತ್ತೀಸ್ ಘಡದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಹತಾರಿ ವಂದನ ಯೋಜನೆ ಉದ್ಘಾಟಿಸಿದರು.
March 10th, 01:50 pm
ನಮ್ಮ ಸರ್ಕಾರವು ಪ್ರತಿ ಕುಟುಂಬದ ಸಮಗ್ರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ, ಮತ್ತು ಇದು ಮಹಿಳೆಯರ ಆರೋಗ್ಯ ಮತ್ತು ಘನತೆಯಿಂದ ಪ್ರಾರಂಭವಾಗುತ್ತದೆIndia is the Future: PM Modi
February 26th, 08:55 pm
Prime Minister Narendra Modi addressed the News 9 Global Summit in New Delhi today. The theme of the Summit is ‘India: Poised for the Big Leap’. Addressing the gathering, the Prime Minister said TV 9’s reporting team represents the persity of India. Their multi-language news platforms made TV 9 a representative of India's vibrant democracy, the Prime Minister said. The Prime Minister threw light on the theme of the Summit - ‘India: Poised for the Big Leap’, and underlined that a big leap can be taken only when one is filled with passion and enthusiasm.ನ್ಯೂಸ್ 9 ಜಾಗತಿಕ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
February 26th, 07:50 pm
ಟಿವಿ 9 ವರದಿ ಮಾಡುವ ತಂಡವು ಭಾರತದ ವೈವಿಧ್ಯತೆಯನ್ನು ಪ್ರತಿನಿಧಿಸುತ್ತಿದೆ. ಅವರ ಬಹು-ಭಾಷಾ ಸುದ್ದಿ ವೇದಿಕೆಗಳು ಟಿವಿ 9 ಅನ್ನು ಭಾರತದ ರೋಮಾಂಚಕ ಪ್ರಜಾಪ್ರಭುತ್ವದ ಪ್ರತಿನಿಧಿಯನ್ನಾಗಿ ಮಾಡಿದೆ ಎಂದು ಪ್ರಧಾನಿ ಹೇಳಿದರು.‘Modi Ki Guarantee’ vehicle is now reaching all parts of the country: PM Modi
December 16th, 08:08 pm
PM Modi interacted and addressed the beneficiaries of the Viksit Bharat Sankalp Yatra via video conferencing. Addressing the gathering, the Prime Minister expressed gratitude for getting the opportunity to flag off the Viksit Bharat Sankalp Yatra in the five states of Rajasthan, Madhya Pradesh, Chhattisgarh, Telangana and Mizoram, and remarked that the ‘Modi Ki Guarantee’ vehicle is now reaching all parts of the countryವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳನ್ನು ಉದ್ದೇಶಿಸಿ ಪ್ರಧಾನಿಯವರ ಭಾಷಣ
December 16th, 04:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು.