ಜನವರಿ 5 ರಂದು ದೆಹಲಿಯಲ್ಲಿ 12,200 ಕೋಟಿ ರೂ.ಗೂ ಅಧಿಕ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
January 04th, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 5 ರಂದು ದೆಹಲಿಯಲ್ಲಿ ಸುಮಾರು ಸುಮಾರು 12,200 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಪ್ರಧಾನಮಂತ್ರಿಯವರು ನಮೋ ಭಾರತ್ ರೈಲಿನಲ್ಲಿ ಬೆಳಗ್ಗೆ 11:15 ರ ಸುಮಾರಿಗೆ ಸಾಹಿಬಾಬಾದ್ RRTS ನಿಲ್ದಾಣದಿಂದ ನ್ಯೂ ಅಶೋಕ್ ನಗರ RRTS ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ.ಸಂವಿಧಾನವೇ ನಮ್ಮ ಮಾರ್ಗದರ್ಶಕ ಬೆಳಕು: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
December 29th, 11:30 am
ಮನ್ ಕಿ ಬಾತ್‌ನ ಈ ಸಂಚಿಕೆಯಲ್ಲಿ, ಪ್ರಧಾನಿ ಮೋದಿ ಅವರು ಸಂವಿಧಾನದ 75 ನೇ ವಾರ್ಷಿಕೋತ್ಸವ ಮತ್ತು ಪ್ರಯಾಗರಾಜ್‌ನಲ್ಲಿ ಮಹಾಕುಂಭದ ಸಿದ್ಧತೆ ಸೇರಿದಂತೆ ಭಾರತದ ಸಾಧನೆಗಳನ್ನು ಪ್ರತಿಬಿಂಬಿಸಿದರು. ಅವರು ಬಸ್ತಾರ್ ಒಲಿಂಪಿಕ್ಸ್‌ನ ಯಶಸ್ಸನ್ನು ಶ್ಲಾಘಿಸಿದರು ಮತ್ತು ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಮಲೇರಿಯಾ ನಿರ್ಮೂಲನೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ಪ್ರಗತಿಯಂತಹ ಮಹತ್ವದ ಆರೋಗ್ಯ ಪ್ರಗತಿಗಳನ್ನು ಎತ್ತಿ ತೋರಿಸಿದರು. ಹೆಚ್ಚುವರಿಯಾಗಿ, ಅವರು ಒಡಿಶಾದ ಕಲಹಂಡಿಯಲ್ಲಿನ ಕೃಷಿ ರೂಪಾಂತರವನ್ನು ಶ್ಲಾಘಿಸಿದರು.ಸ್ವಾಮಿತ್ವ ಯೋಜನೆಯಡಿ ಆಸ್ತಿ ಮಾಲೀಕರಿಗೆ 50 ಲಕ್ಷಕ್ಕೂ ಹೆಚ್ಚು ಪ್ರಾಪರ್ಟಿ ಕಾರ್ಡ್ ವಿತರಿಸಲಿರುವ ಪ್ರಧಾನಮಂತ್ರಿ
December 26th, 04:50 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 200 ಜಿಲ್ಲೆಗಳ 46,000 ಕ್ಕೂ ಹೆಚ್ಚು ಗ್ರಾಮಗಳ ಆಸ್ತಿ ಮಾಲೀಕರಿಗೆ ಸ್ವಾಮಿತ್ವ (SVAMITVA) ಯೋಜನೆಯಡಿ 50 ಲಕ್ಷ ಪ್ರಾಪರ್ಟಿ ಕಾರ್ಡ್‌ಗಳನ್ನು ಡಿಸೆಂಬರ್ 27 ರಂದು ಮಧ್ಯಾಹ್ನ 12:30 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿತರಿಸಲಿದ್ದಾರೆ.ಪ್ರಯಾಗ್ ರಾಜ್ ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಕಾರ್ಯಾರಂಭ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
December 13th, 02:10 pm
ಉತ್ತರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಜೀ, ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ, ಗೌರವಾನ್ವಿತ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಜೀ ಮತ್ತು ಬ್ರಜೇಶ್ ಪಾಠಕ್ ಜೀ, ಉತ್ತರ ಪ್ರದೇಶದ ಗೌರವಾನ್ವಿತ ಮಂತ್ರಿಗಳು, ಸಂಸತ್ತು ಮತ್ತು ವಿಧಾನಸಭೆಯ ಗೌರವಾನ್ವಿತ ಸದಸ್ಯರು, ಪ್ರಯಾಗ್ ರಾಜ್ ನ ಮೇಯರ್ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಹಾಗುಇತರ ಗೌರವಾನ್ವಿತ ಅತಿಥಿಗಳೇ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸುಮಾರು 5,500 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಚಾಲನೆಯನ್ನು ಪ್ರಧಾನಿ ನೆರವೇರಿಸಿದರು
December 13th, 02:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸುಮಾರು 5,500 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಚಾಲನೆ ನೆರವೇರಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಂಗಮದ ಪವಿತ್ರ ಭೂಮಿಯಾದ ಪ್ರಯಾಗ್‌ರಾಜ್‌ಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದರು ಮತ್ತು ಮಹಾಕುಂಭದಲ್ಲಿ ಪಾಲ್ಗೊಂಡ ಸಂತರು ಮತ್ತು ಸಾಧುಗಳಿಗೆ ಗೌರವ ನಮನ ಸಲ್ಲಿಸಿದರು. ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಮಹಾಕುಂಭವನ್ನು ಯಶಸ್ವಿಗೊಳಿಸಿದ ನೌಕರರು, ಶ್ರಮಿಕರು ಮತ್ತು ಸಫಾಯಿ ಕರ್ಮಚಾರಿಗಳಿಗೆ ಶ್ರೀ ಮೋದಿ ಕೃತಜ್ಞತೆ ಸಲ್ಲಿಸಿದರು. ಮಹಾಕುಂಭದ ಅಗಾಧತೆ ಮತ್ತು ಗಾತ್ರದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇದು ವಿಶ್ವದ ಅತಿದೊಡ್ಡ ಜನಸಂಗಮಗಳಲ್ಲಿ ಒಂದಾಗಿದೆ. 45 ದಿನಗಳ ಕಾಲ ನಡೆಯುವ ʻಮಹಾಯಜ್ಞಕ್ಕಾಗಿʼ ಪ್ರತಿದಿನ ಲಕ್ಷಾಂತರ ಭಕ್ತರನ್ನು ಸ್ವಾಗತಿಸುತ್ತದೆ ಮತ್ತು ಈ ಸಂದರ್ಭಕ್ಕಾಗಿ ಸಂಪೂರ್ಣ ಹೊಸ ನಗರವನ್ನೇ ಸ್ಥಾಪಿಸಲಾಗಿದೆ ಎಂದರು. ಪ್ರಯಾಗ್‌ರಾಜ್ ಭೂಮಿಯಲ್ಲಿ ಹೊಸ ಇತಿಹಾಸ ಬರೆಯಲಾಗುತ್ತಿದೆ, ಎಂದು ಪ್ರಧಾನಿ ಉದ್ಗರಿಸಿದರು. ಮುಂದಿನ ವರ್ಷ ನಡೆಯಲಿರುವ ಮಹಾಕುಂಭ ಮೇಳದ ಕಾರ್ಯಕ್ರಮವು ರಾಷ್ಟ್ರದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಗುರುತನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇಂತಹ ಏಕತೆಯ 'ಮಹಾಯಜ್ಞ'ದ ಬಗ್ಗೆ ವಿಶ್ವದಾದ್ಯಂತ ಚರ್ಚಿಸಲಾಗುವುದು ಎಂದು ಹೇಳಿದರು. ಮಹಾಕುಂಭ ಮೇಳದ ಯಶಸ್ವಿ ಸಂಘಟನೆಗಾಗಿ ಅವರು ಜನತೆಗೆ ಶುಭ ಕೋರಿದರು.ಡಿಸೆಂಬರ್ 13 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
December 12th, 02:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 13ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅವರು ಪ್ರಯಾಗ್‌ರಾಜ್‌ಗೆ ಪ್ರಯಾಣಿಸಲಿದ್ದು, ಮಧ್ಯಾಹ್ನ 12:15ರ ಸುಮಾರಿಗೆ ʻಸಂಗಮ್ ನೋಸ್ʼನಲ್ಲಿ ಪೂಜೆ ಮತ್ತು ದರ್ಶನ ಮಾಡಲಿದ್ದಾರೆ. ನಂತರ ಮಧ್ಯಾಹ್ನ 12:40ಕ್ಕೆ ʻಅಕ್ಷಯ್ ವಟವೃಕ್ಷʼದಲ್ಲಿ ಪೂಜೆ ನೆರವೇರಿಸಲಿದ್ದು, ನಂತರ ಹನುಮಾನ್ ಮಂದಿರ ಮತ್ತು ಸರಸ್ವತಿ ಕೂಪ್‌ನಲ್ಲಿ ದರ್ಶನ ಮತ್ತು ಪೂಜೆ ಮಾಡಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಮಹಾಕುಂಭ ವಸ್ತುಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ನಂತರ, ಮಧ್ಯಾಹ್ನ 2 ಗಂಟೆಗೆ ಅವರು ಪ್ರಯಾಗ್‌ರಾಜ್‌ನಲ್ಲಿ 5,500 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.ಜನರಿಗೆ ಉತ್ತಮ ಗುಣಮಟ್ಟದ ಮೂಲಸೌಕರ್ಯ ಖಚಿತಪಡಿಸಲು ಮತ್ತು ಸಂಪರ್ಕದ ಶಕ್ತಿಯ ಸಮರ್ಥ ಬಳಕೆ ಮೂಲಕ ಸಮೃದ್ಧಿ ವೃದ್ಧಿಗೆ ನಮ್ಮ ಸರ್ಕಾರದಿಂದ ಹಲವು ಕ್ರಮ: ಪ್ರಧಾನಮಂತ್ರಿ
December 09th, 10:08 pm
ಜನರಿಗೆ ಉತ್ತಮ ಗುಣಮಟ್ಟದ ಮೂಲಸೌಕರ್ಯಗಳನ್ನು ಖಚಿತಪಡಿಸಲು ಮತ್ತು ಸಮೃದ್ಧಿ ವೃದ್ಧಿಗೆ ಸಂಪರ್ಕದ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪುನರುಚ್ಚರಿಸಿದ್ದಾರೆ. ಶೀಘ್ರದಲ್ಲೇ ಕಾರ್ಯಾಚರಣೆ ಆರಂಭ ಮಾಡಲಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಾಷ್ಟ್ರ ರಾಜಧಾನಿ ಪ್ರದೇಶ (ಎನ್ ಸಿ ಆರ್) ಮತ್ತು ಉತ್ತರ ಪ್ರದೇಶದ ನಡುವಣ ಸಂಪರ್ಕವನ್ನು ಉತ್ತೇಜಿಸಲಿದೆ ಮತ್ತು ಜೀವನವನ್ನು ಸುಲಲಿತಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.Cabinet approves Rithala-Kundli corridor of Delhi Metro Phase-IV project
December 06th, 08:08 pm
The Union Cabinet, chaired by Prime Minister Narendra Modi, approved the Rithala - Narela -Nathupur (Kundli) corridor of Delhi Metro's Phase - IV project consisting of 26.463 kms which will further enhance connectivity between the national capital and neighbouring Haryana. The corridor is scheduled to be completed in 4 years from the date of its sanction.ಉತ್ತರ ಪ್ರದೇಶದ ಕನೌಜ್ ನಲ್ಲಿ ಬಸ್ ಅಪಘಾತ – ಮೃತರ ಕುಟುಂಬಗಳಿಗೆ ಪ್ರಧಾನಮಂತ್ರಿ ಸಂತಾಪ; ಪಿ ಎಂ ಎನ್ ಆರ್ ಎಫ್ ನಿಂದ ಪರಿಹಾರ ಘೋಷಣೆ
December 06th, 08:05 pm
ಉತ್ತರಪ್ರದೇಶದ ಕನೌಜ್ ನಲ್ಲಿ ಇಂದು ಬಸ್ ಅಪಘಾತದಲ್ಲಿ ಸಂಭವಿಸಿದ ಪ್ರಾಣ ಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (ಪಿ ಎಂ ಎನ್ ಆರ್ ಎಫ್) ನಿಂದ ಮೃತರ ವಾರಸುದಾರಿಗೆ ತಲಾ ಎರಡು ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಶ್ರೀ ಮೋದಿ ಅವರು ಪ್ರಕಟಿಸಿದ್ದಾರೆ.ಭುವನೇಶ್ವರದಲ್ಲಿ ನವೆಂಬರ್ 30ರಿಂದ ಡಿಸೆಂಬರ್ 1ರ ವರೆಗೆ ಪೊಲೀಸ್ ಡೈರೆಕ್ಟರ್ ಜನರಲ್‌ಗಳು / ಇನ್‌ಸ್ಪೆಕ್ಟರ್ ಜನರಲ್‌ಗಳ ಅಖಿಲ ಭಾರತ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ
November 29th, 09:54 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ನವೆಂಬರ್ 30ರಿಂದ ಡಿಸೆಂಬರ್ 1ರ ವರೆಗೆ ಒಡಿಶಾ ರಾಜ್ಯದ ಭುವನೇಶ್ವರದ ಲೋಕಸೇವಾ ಭವನದ ರಾಜ್ಯ ಕನ್ವೆನ್ಷನ್ ಸೆಂಟರ್ ನಲ್ಲಿ ಅಖಿಲ ಭಾರತ ಪೊಲೀಸ್ ಡೈರೆಕ್ಟರ್ ಜನರಲ್‌ಗಳು / ಇನ್‌ಸ್ಪೆಕ್ಟರ್ ಜನರಲ್‌ಗಳ 2024ರ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.Maharashtra has witnessed the triumph of development, good governance, and genuine social justice: PM Modi
November 23rd, 10:58 pm
Prime Minister Narendra Modi addressed BJP workers at the party headquarters following the BJP-Mahayuti alliance's resounding electoral triumph in Maharashtra. He hailed the victory as a decisive endorsement of good governance, social justice, and development, expressing heartfelt gratitude to the people of Maharashtra for trusting BJP's leadership for the third consecutive time.PM Modi addresses passionate BJP Karyakartas at the Party Headquarters
November 23rd, 06:30 pm
Prime Minister Narendra Modi addressed BJP workers at the party headquarters following the BJP-Mahayuti alliance's resounding electoral triumph in Maharashtra. He hailed the victory as a decisive endorsement of good governance, social justice, and development, expressing heartfelt gratitude to the people of Maharashtra for trusting BJP's leadership for the third consecutive time.ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಂಭವಿಸಿದ ಜೀವಹಾನಿಗೆ ಪ್ರಧಾನಮಂತ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ
November 16th, 08:23 am
ಉತ್ತರ ಪ್ರದೇಶದ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲಿ ಅಗ್ನಿ ಅವಘಡದಿಂದ ಉಂಟಾದ ಸಾವುನೋವಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ, ಸ್ಥಳೀಯ ಆಡಳಿತ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ನೆರವು ನೀಡಲು ಮುಂದಾಗಿದೆ ಎಂದು ಹೇಳಿದ್ದಾರೆ.ಹರ್ದೋಯಿ ರಸ್ತೆ ಅಪಘಾತದಲ್ಲಿ ಸಾವು- ಪ್ರಧಾನಮಂತ್ರಿ ಸಂತಾಪ
November 06th, 05:59 pm
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮತ್ತು ಪ್ರೀತಿಪಾತ್ರರಿಗೆ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮ @PMOIndia ದಲ್ಲಿ ತಮ್ಮ ಹೇಳಿಕೆ ಹಂಚಿಕೊಂಡಿರುವ ಅವರು, ಈ ಅಪಘಾತದಿಂದ ಬಾಧಿತರಾದ ಕುಟುಂಬಗಳಿಗೆ ತಮ್ಮ ಶೋಕವನ್ನು ವ್ಯಕ್ತಪಡಿಸಿದ್ದು ಅಪಘಾತದಲ್ಲಿ ಗಾಯಗೊಂಡವರೆಲ್ಲರೂ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.ಅಕ್ಟೋಬರ್ 29 ರಂದು ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದಂದು 12,850 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ
October 28th, 12:47 pm
ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 29 ರಂದು ಮಧ್ಯಾಹ್ನ 12:30 ಕ್ಕೆ ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ)ಯಲ್ಲಿ ಸುಮಾರು 12,850 ಕೋಟಿ ರೂಪಾಯಿಗಳ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಚಾಲನೆಯನ್ನು ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ಪ್ರಧಾನ ಮಂತ್ರಿಗಳ ಭಾಷಣದ ಇಂಗ್ಲಿಷ್ ಅವತರಿಣಿಕೆ
October 20th, 04:54 pm
ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಕಾರ್ಯಕ್ರಮಕ್ಕೆ ತಂತ್ರಜ್ಞಾನದ ನೆರವಿನಿಂದ ವರ್ಚುವಲ್ ಆಗಿ ಪಾಲ್ಗೊಂಡಿರುವ ಗೌರವಾನ್ವಿತ ರಾಜ್ಯಪಾಲರುಗಳೇ ಮತ್ತು ನಾನಾ ರಾಜ್ಯಗಳ ಮುಖ್ಯಮಂತ್ರಿಗಳೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ನಾಯ್ಡು ಅವರೇ, ವರ್ಚ್ಯುವಲ್ ಆಗಿ ಪಾಲ್ಗೊಂಡಿರುವ ಇತರೆ ಸಂಪುಟ ಸಹೋದ್ಯೋಗಿಗಳೇ, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್, ಉತ್ತರ ಪ್ರದೇಶ ಸರ್ಕಾರದ ನಾನಾ ಸಚಿವರೇ, ಸಂಸದರೇ, ಶಾಸಕರೇ ಮತ್ತು ಬನಾರಸ್‌ನ ನನ್ನ ಪ್ರೀತಿಯ ಸಹೋದರ ಸಹೋದರಿಯರೇ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು
October 20th, 04:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಇಂದಿನ ಯೋಜನೆಗಳಲ್ಲಿ 6,100 ಕೋಟಿ ರೂ. ಮೊತ್ತದ ಬಹುವಿಧದ ವಿಮಾನ ನಿಲ್ದಾಣ ಯೋಜನೆಗಳು ಮತ್ತು ವಾರಾಣಸಿಯ ಬಹು ಅಭಿವೃದ್ಧಿ ಉಪಕ್ರಮಗಳು ಸೇರಿವೆ.ವಾರಣಾಸಿಯಲ್ಲಿ ಆರ್ ಜೆ ಶಂಕರ ಕಣ್ಣಿನ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನ ಮಂತ್ರಿಗಳ ಭಾಷಣದ ಇಂಗ್ಲಿಷ್ ಅವತರಿಣಿಕೆ
October 20th, 02:21 pm
ಶ್ರೀ ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ, ಪೂಜ್ಯ ಜಗದ್ಗುರುಗಳಾದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ; ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್; ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್; ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್; ಶಂಕರ ನೇತ್ರ ಪ್ರತಿಷ್ಠಾನದ ಆರ್.ವಿ.ರಮಣಿ; ಡಾ.ಎಸ್.ವಿ. ಬಾಲಸುಬ್ರಮಣ್ಯಂ; ಶ್ರೀ ಮುರಳಿ ಕೃಷ್ಣಮೂರ್ತಿ; ರೇಖಾ ಜುಂಜುನ್‌ವಾಲಾ; ಮತ್ತು ಸಂಸ್ಥೆಯ ಎಲ್ಲಾ ಇತರ ಗೌರವಾನ್ವಿತ ಸದಸ್ಯರೇ, ಮಹಿಳೆಯರೇ ಮತ್ತು ಮಹನೀಯರೇ!ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆರ್ ಜೆ ಶಂಕರ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
October 20th, 02:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆರ್.ಜೆ.ಶಂಕರ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದರು. ಆಸ್ಪತ್ರೆಯು ವಿವಿಧ ಕಣ್ಣಿನ ಪರಿಸ್ಥಿತಿಗಳಿಗೆ ಸಮಗ್ರ ಸಮಾಲೋಚನೆಗಳು ಮತ್ತು ಚಿಕಿತ್ಸೆಗಳನ್ನು ನೀಡುತ್ತದೆ. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನವನ್ನೂ ಶ್ರೀ ಮೋದಿ ಅವರು ವೀಕ್ಷಿಸಿದರು.ಅಕ್ಟೋಬರ್ 20ರಂದು ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
October 19th, 05:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 20, 2024ರಂದು ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2:00 ಗಂಟೆಗೆ ಆರ್.ಜೆ. ಶಂಕರ ಕಣ್ಣಿನ ಆಸ್ಪತ್ರೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ನಂತರ, ಸಂಜೆ 4:15 ರ ಸುಮಾರಿಗೆ, ಅವರು ವಾರಣಾಸಿಯಲ್ಲಿ ಬಹುವಿಧದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.