ಗುಜರಾತ್‌ನ ಭರೂಚ್‌ನಲ್ಲಿ‘ಉತ್ಕರ್ಷ್ ಸಮಾರೋಹ್’ ನಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
May 12th, 10:31 am
ಇಂದಿನ ‘ಉತ್ಕರ್ಷ್ ಸಮಾರೋಹ್’ ನಿಜವಾಗಿಯೂ ಪ್ರಶಂಸನೀಯವಾಗಿದೆ ಮತ್ತು ಸರ್ಕಾರವು ಫಲಾನುಭವಿಯನ್ನು ನಿರ್ಣಯ ಮತ್ತು ಪ್ರಾಮಾಣಿಕತೆಯಿಂದ ತಲುಪಿದಾಗ ಅದು ಒಳ್ಳೆಯ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ನಾಲ್ಕು ಸಾಮಾಜಿಕ ಭದ್ರತಾ ಯೋಜನೆಗಳನ್ನು ಶೇಕಡ 100 ರಷ್ಟು ಪರಿಪೂರ್ಣಗೊಳಿಸಿರುವುದಕ್ಕೆ ಭರೂಚ್ ಜಿಲ್ಲಾಡಳಿತ ಮತ್ತು ಗುಜರಾತ್ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ. ನೀವೆಲ್ಲರೂ ಅನೇಕ ಅಭಿನಂದನೆಗಳಿಗೆ ಅರ್ಹರಾಗಿದ್ದೀರಿ. ಈ ಯೋಜನೆಗಳ ಫಲಾನುಭವಿಗಳೊಂದಿಗೆ ನಾನು ಸಂವಾದ ನಡೆಸುತ್ತಿದ್ದಾಗ, ಅವರಲ್ಲಿ ಸಂತೃಪ್ತಿ ಮತ್ತು ವಿಶ್ವಾಸವನ್ನು ನಾನು ಗ್ರಹಿಸಬಲ್ಲೆ. ಸವಾಲುಗಳನ್ನು ಎದುರಿಸುವಾಗ ಯಾರಾದರೂ ಸರ್ಕಾರದಿಂದ ಒಂದು ಸಣ್ಣ ಸಹಾಯವನ್ನು ಪಡೆದರೆ, ಅವರು ಧೈರ್ಯಶಾಲಿಯಾಗುತ್ತಾರೆ ಮತ್ತು ಸಮಸ್ಯೆಗಳು ನಿರ್ಬಂಧಿತವಾಗುತ್ತವೆ. ಇಂದು ನಿಮ್ಮೊಂದಿಗೆ ಮಾತನಾಡುವಾಗ ನಾನು ಇದನ್ನು ಗ್ರಹಿಸಬಲ್ಲೆ.ಭರೂಚ್ ನಲ್ಲಿ ನಡೆದ ‘ಉತ್ಕರ್ಷ್ ಸಮಾವೇಶ’ ಉದ್ದೇಶಿಸಿ ಪ್ರಧಾನಿ ಭಾಷಣ
May 12th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಭರೂಚ್‌ನಲ್ಲಿ ನಡೆದ ‘ಉತ್ಕರ್ಷ್ ಸಮಾವೇಶ’ ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು. ಈ ಕಾರ್ಯಕ್ರಮವು ಜಿಲ್ಲೆಯಲ್ಲಿ ಅಗತ್ಯವಿರುವವರಿಗೆ ಸಕಾಲಿಕ ಆರ್ಥಿಕ ನೆರವು ನೀಡಲು ಸಹಾಯ ಮಾಡುವ ರಾಜ್ಯ ಸರ್ಕಾರದ ನಾಲ್ಕು ಪ್ರಮುಖ ಯೋಜನೆಗಳು ಶೇಕಡ ನೂರಕ್ಕೆ 100ರಷ್ಟು ಜನರನ್ನು ತಲುಪಿರುವುದಾಗಿ ಈ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಮೇ 12, 2022 ರಂದು ಭರೂಚ್ ನಲ್ಲಿ ಜರುಗುವ 'ಉತ್ಕರ್ಷ್ ಸಮಾರೋಹ್' ಅನ್ನು ಉದ್ದೇಶಿಸಿ ಭಾಷಣ ಪ್ರಧಾನಮಂತ್ರಿ ಅವರು ಮಾಡಲಿದ್ದಾರೆ
May 11th, 04:37 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಭರೂಚ್ ನಲ್ಲಿ 12 ಮೇ, 2022 ರಂದು ಬೆಳಗ್ಗೆ 10:30 ಕ್ಕೆ ಜರುಗಲಿರುವ ‘ಉತ್ಕರ್ಷ್ ಸಮಾರೋಹ್’ ಅನ್ನು ಉದ್ದೇಶಿಸಿ ವಿಡಿಯೊ ಸಮಾವೇಶ ಮೂಲಕ ಭಾಷಣ ಮಾಡಲಿದ್ದಾರೆ. ಅಗತ್ಯವಿರುವವರಿಗೆ ಸಕಾಲಿಕ ಆರ್ಥಿಕ ನೆರವು ನೀಡಲು ಸಹಾಯ ಮಾಡುವ ರಾಜ್ಯ ಸರ್ಕಾರದ ನಾಲ್ಕು ಪ್ರಮುಖ ಯೋಜನೆಗಳು ಈ ಜಿಲ್ಲೆಯಲ್ಲಿ ಶೇ.100ರಷ್ಟು ಯಶಸ್ಸು ಸಾಧಿಸಿದ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.