ಜಿ-20 ಶಿಕ್ಷಣ ಸಚಿವರ ಸಭೆಯಲ್ಲಿ ಪ್ರಧಾನ ಮಂತ್ರಿ ವೀಡಿಯೊ ಸಂದೇಶ

June 22nd, 11:00 am

Pf-20 ಶಿಕ್ಷಣ ಸಚಿವರ ಸಮಾವೇಶ (ಸಮ್ಮೇಳನ)ಕ್ಕಾಗಿ ಭಾರತಕ್ಕೆ ಆಗಮಿಸಿರುವ ನಿಮ್ಮೆಲ್ಲರನ್ನು ನಾನು ಸ್ವಾಗತಿಸುತ್ತೇನೆ. ಶಿಕ್ಷಣವು ನಮ್ಮ ನಾಗರಿಕತೆಯನ್ನು ನಿರ್ಮಿಸಿದ ಭದ್ರ ಅಡಿಪಾಯ ಮಾತ್ರವಲ್ಲ, ಅದು ಮನುಕುಲದ ಭವಿಷ್ಯದ ವಾಸ್ತುಶಿಲ್ಪಿಯೂ ಆಗಿದೆ. ಶಿಕ್ಷಣ ಸಚಿವರಾಗಿ ನೀವು ಎಲ್ಲರ ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಗಾಗಿ ನಮ್ಮೆಲ್ಲರ ನಿರಂತರ ಪ್ರಯತ್ನಗಳಲ್ಲಿ ಮನುಕುಲವನ್ನು ಮುನ್ನಡೆಸುತ್ತಿರುವ ಶೆರ್ಪಾಗಳಾಗಿದ್ದೀರಿ. ಭಾರತೀಯ ಗ್ರಂಥಗಳಲ್ಲಿ ಶಿಕ್ಷಣದ ಪಾತ್ರವು ಸಂತೋಷ ತರುವ ಪ್ರಮುಖ ಸಾಧನವಾಗಿದೆ ಎಂದು ವಿವರಿಸಲಾಗಿದೆ. ವಿದ್ಯಾ ದದಾತಿ ವಿನಯಂ ವಿನಯಾದ್ ಯಾತಿ ಪಾತ್ರತಾಮ್ । ಪಾತ್ರತ್ವಾತ್ ಧನಮಾಪ್ನೋತಿ ಧನಧರ್ಮಂ ತತಃ ಸುಖಮ್ ॥

`ಜಿ 20’ ಶಿಕ್ಷಣ ಸಚಿವರ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಭಾಷಣ

June 22nd, 10:36 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪುಣೆಯಲ್ಲಿ ನಡೆದ ʻಜಿ 20ʼ ಶಿಕ್ಷಣ ಸಚಿವರ ಸಭೆಯನ್ನುದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಭಾಷಣ ಮಾಡಿದರು.

ಶಿಕ್ಷಕ್ ಪರ್ವ್ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

September 07th, 10:31 am

ಶಿಕ್ಷಕ ಪರ್ವದ ಈ ಪ್ರಮುಖ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಸೇರಿರುವ, ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಧರ್ಮೇಂದ್ರ ಪ್ರಧಾನ್ ಜೀ, ಶ್ರೀಮತಿ ಅನ್ನಪೂರ್ಣ ದೇವಿ ಜೀ, ಡಾ. ಸುಭಾಷ್ ಸರ್ಕಾರ್ ಜೀ, ಡಾ. ರಾಜಕುಮಾರ್ ರಂಜನ್ ಸಿಂಗ್ ಜೀ, ದೇಶದ ವಿವಿಧ ರಾಜ್ಯಗಳ ಗೌರವಾನ್ವಿತ ಶಿಕ್ಷಣ ಸಚಿವರೇ, ಕರಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಯಾರಿಸಿದ ಸಮಿತಿಯ ಅಧ್ಯಕ್ಷರಾಗಿರುವ ಡಾ. ಕಸ್ತೂರಿ ರಂಗನ್ ಜೀ ಅವರೇ, ಅವರ ತಂಡದ ಎಲ್ಲಾ ಗೌರವಾನ್ವಿತ ಸದಸ್ಯರೇ, ಎಲ್ಲಾ ಪ್ರಾಂಶುಪಾಲರೇ, ಶಿಕ್ಷಕರೇ ಮತ್ತು ದೇಶದ ವಿವಿಧೆಡೆಯ ವಿದ್ಯಾರ್ಥಿಗಳೇ!.

`ಶಿಕ್ಷಕ್ ಪರ್ವ’ದ ಉದ್ಘಾಟನಾ ಸಮಾವೇಶ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

September 07th, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಡೆದ ʻಶಿಕ್ಷಕ್ ಪರ್ವ್ʼ ಉದ್ಘಾಟನಾ ಸಮಾವೇಶವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಭಾರತೀಯ ಸಂಜ್ಞೆ ಭಾಷಾ ನಿಘಂಟು (ಶ್ರವಣ ದೋಷವುಳ್ಳವರಿಗೆ ಸಾರ್ವತ್ರಿಕ ಕಲಿಕಾ ವಿನ್ಯಾಸಕ್ಕೆ ಅನುಗುಣವಾಗಿ ಆಡಿಯೋ ಮತ್ತು ಪಠ್ಯ ಸಂಯೋಜಿತ ಸಂಜ್ಞೆ ಭಾಷೆಯ ವೀಡಿಯೊ), ಟಾಕಿಂಗ್ ಬುಕ್ಸ್ (ದೃಷ್ಟಿಹೀನರಿಗೆ ಆಡಿಯೋಬುಕ್‌ಗಳು) ಅನ್ನು ಪ್ರಧಾನಿ ಬಿಡುಗಡೆ ಮಾಡಿದರು. ಇದೇ ವೇಳೆ ʻಸಿಬಿಎಸ್‌ಇʼಯ ಶಾಲಾ ಗುಣಮಟ್ಟ ಭರವಸೆ ಮತ್ತು ಮೌಲ್ಯಮಾಪನ ಚೌಕಟ್ಟು, ʻನಿಪುಣ್‌ ಭಾರತ್ʼ ಮತ್ತು ʻವಿದ್ಯಾಂಜಲಿʼ ಪೋರ್ಟಲ್‌ಗಾಗಿ ʻನಿಷ್ಠಾʼ ಶಿಕ್ಷಕರ ತರಬೇತಿ ಕಾರ್ಯಕ್ರಮಕ್ಕೂ (ಶಾಲಾ ಅಭಿವೃದ್ಧಿಗಾಗಿ ಶಿಕ್ಷಣ ಸ್ವಯಂಸೇವಕರು / ದಾನಿಗಳು / ಸಿಎಸ್ಆರ್ ಕೊಡುಗೆದಾರರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ) ಚಾಲನೆ ನೀಡಿದರು.