ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಜುಲೈ, 2024 ರಿಂದ ಡಿಸೆಂಬರ್, 2028 ರವರೆಗೆ ಉಚಿತ ಪೋಷಕಾಂಶ ವರ್ಧಿತ ಅಕ್ಕಿ ಪೂರೈಕೆಯನ್ನು ಮುಂದುವರಿಸಲು ಸಂಪುಟ ಅನುಮೋದಿಸಿದೆ
October 09th, 03:07 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಜುಲೈ, 2024 ರಿಂದ ಡಿಸೆಂಬರ್, 2028 ರವರೆಗೆ ಉಚಿತ ಪೋಷಕಾಂಶ ವರ್ಧಿತ ಅಕ್ಕಿಯ ಸಾರ್ವತ್ರಿಕ ಪೂರೈಕೆಯನ್ನು ಪ್ರಸ್ತುತ ರೂಪದಲ್ಲಿಯೇ ಮುಂದುವರಿಸಲು ಅನುಮೋದನೆ ನೀಡಿದೆ.ಆಗಸ್ಟ್ 7 ರಂದು ನಡೆಯಲಿರುವ ನೀತಿ ಆಯೋಗದ ಆಡಳಿತ ಮಂಡಳಿ ಅಧ್ಯಕ್ಷತೆ ವಹಿಸಲಿರುವ ಪ್ರಧಾನಮಂತ್ರಿ
August 05th, 01:52 pm
ಭಾರತ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ರಾಜ್ಯಗಳು ಚುರುಕುಗೊಳ್ಳುತ್ತಿವೆ, ಚೇತರಿಸಿಕೊಳ್ಳುವ ಮತ್ತು ಸ್ವಾವಲಂಬಿಯಾಗುವ ಹಾಗೂ ಸಹಕಾರ ಒಕ್ಕೂಟದ ಸ್ಫೂರ್ತಿಯೊಂದಿಗೆ ಸ್ವಾವಲಂಬಿ ಭಾರತದತ್ತ ಸಾಗುತ್ತಿವೆ. ಈ ನಿಟ್ಟಿನಲ್ಲಿ ಸ್ಥಿರ, ಸುಸ್ಥಿರ ಮತ್ತು ಎಲ್ಲವನ್ನೊಳಗೊಂಡ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ 7 ನೇ ನೀತಿ ಆಯೋಗದ ಆಡಳಿತ ಮಂಡಳಿ ಸಭೆ 2022 ರ ಆಗಸ್ಟ್ 7 ರಂದು ನಡೆಯಲಿದೆ ಮತ್ತು ಕೇಂದ್ರ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವಿನ ಸಹಯೋಗದತ್ತ ಸಂಯೋಜನೆಗೊಳ್ಳಲು ಈ ಸಭೆ ಸಹಕಾರಿಯಾಗಲಿದೆ.ಸರ್ಕಾರದ ಎಲ್ಲಾ ಯೋಜನೆಗಳಲ್ಲಿ ಸಾರವರ್ಧಿತ ಅಕ್ಕಿ ವಿತರಣೆಗೆ ಸಂಪುಟ ಅನುಮೋದನೆ
April 08th, 03:58 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ (ICDS), ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ-PM POSHAN [ಹಿಂದಿನ ಮಧ್ಯಾಹ್ನದ ಬಿಸಿಊಟದ ಯೋಜನೆ (MDM)] ಮತ್ತು ಭಾರತ ಸರ್ಕಾರದ ಇತರ ಕಲ್ಯಾಣ ಯೋಜನೆಗಳ (OWS) ಮೂಲಕ 2024 ರ ವೇಳೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (UTs) ಹಂತ ಹಂತವಾಗಿ 'ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ' (ಟಿಪಿಡಿಎಸ್) ವ್ಯಾಪ್ತಿಯುದ್ದಕ್ಕೂ ಸಾರವರ್ಧಿತ ಅಕ್ಕಿಯನ್ನು ಪೂರೈಸಲು ತನ್ನ ಅನುಮೋದನೆಯನ್ನು ನೀಡಿದೆ.