ಸಂಪರ್ಕ ಒದಗಿಸಲು, ಪ್ರಯಾಣ ಸುಗಮವಾಗಿಸಲು, ಸಾಗಣೆ ವೆಚ್ಚ ಕಡಿಮೆ ಮಾಡಲು, ತೈಲ ಆಮದುಗಳನ್ನು ಕಡಿತಗೊಳಿಸಲು ಮತ್ತು ಇಂಗಾಲಾಮ್ಲ ಹೊರಸೂಸುವಿಕೆ ತಗ್ಗಿಸಲು ಭಾರತೀಯ ರೈಲ್ವೆಯ ಮೂರು ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೆ ಸಂಪುಟದ ಅನುಮೋದನೆ
November 25th, 08:52 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಇಂದು ರೈಲ್ವೆ ಸಚಿವಾಲಯದ ಒಟ್ಟು ರೂ.7,927 ಕೋಟಿ (ಅಂದಾಜು) ವೆಚ್ಚದ ಮೂರು ಯೋಜನೆಗಳಿಗೆ ಅನುಮೋದನೆ ನೀಡಿದೆ.ಗುಜರಾತಿನ ಕಚ್ನಲ್ಲಿ ದೀಪಾವಳಿಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗೆ ಪ್ರಧಾನಮಂತ್ರಿಯವರ ಭಾಷಣದ ಪಠ್ಯ
October 31st, 07:05 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ನ ಕಚ್ನ ಕ್ರೀಕ್ ಏರಿಯಾದಲ್ಲಿರುವ ಲಕ್ಕಿ ನಾಲಾದಲ್ಲಿ ಬಿಎಸ್ಎಫ್, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ವೀರ ಸಿಬ್ಬಂದಿಗಳೊಂದಿಗೆ ದೀಪಾವಳಿಯನ್ನು ಆಚರಿಸಿದರು."ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಕಚ್ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸಿದರು "
October 31st, 07:00 pm
ಗುಜರಾತ್ ನ ಕಚ್ ನ ಕ್ರೀಕ್ ಏರಿಯಾದಲ್ಲಿರುವ ಲಕ್ಕಿ ನಾಲಾದಲ್ಲಿ ಬಿ.ಎಸ್.ಎಫ್, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ವೀರ ಸಿಬ್ಬಂದಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೀಪಾವಳಿಯನ್ನು ಆಚರಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರು ಲಾವೊ ಪಿಡಿಆರ್ ಪ್ರಧಾನಿ ಅವರನ್ನು ಭೇಟಿ ಮಾಡಿದರು
October 11th, 12:32 pm
ಪ್ರಧಾನಿ ನರೇಂದ್ರ ಮೋದಿ ಅವರು ಲಾವೊ ಪಿಡಿಆರ್ನ ಪ್ರಧಾನ ಮಂತ್ರಿ ಎಚ್ಇ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ವಿಯೆಂಟಿಯಾನ್ನಲ್ಲಿರುವ ಶ್ರೀ ಸೋನೆಕ್ಸೇ ಸಿಫಾಂಡೋನ್. ಅಭಿವೃದ್ಧಿ ಪಾಲುದಾರಿಕೆ, ಸಾಮರ್ಥ್ಯ ನಿರ್ಮಾಣ, ವಿಪತ್ತು ನಿರ್ವಹಣೆ, ನವೀಕರಿಸಬಹುದಾದ ಇಂಧನ, ಪರಂಪರೆಯ ಮರುಸ್ಥಾಪನೆ, ಆರ್ಥಿಕ ಸಂಬಂಧಗಳು, ರಕ್ಷಣಾ ಸಹಯೋಗ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳಂತಹ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳನ್ನು ಅವರು ಚರ್ಚಿಸಿದರು.ತ್ರಿವರ್ಣ ಧ್ವಜದ ವೈಭವವನ್ನು ಎತ್ತಿ ಹಿಡಿಯುವಲ್ಲಿ 'ಹರ್ ಘರ್ ತಿರಂಗ ಅಭಿಯಾನ' ಒಂದು ವಿಶಿಷ್ಟ ಹಬ್ಬವಾಗಿದೆ: ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ
July 28th, 11:30 am
ನನ್ನ ಪ್ರೀತಿಯ ದೇಶವಾಸಿಗಳೆ, 'ಮನ್ ಕಿ ಬಾತ್' ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸ್ವಾಗತ, ಆತ್ಮೀಯ ಶುಭಾಶಯಗಳು. ಈ ಕ್ಷಣದಲ್ಲಿ ಜರುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಇಡೀ ವಿಶ್ವದ ಗಮನ ಸೆಳೆದಿದೆ, ಈ ಋತುವಿನ ಫ್ಲೇವರ್ ಆಗಿದೆ. ಒಲಿಂಪಿಕ್ಸ್ ನಮ್ಮ ಆಟಗಾರರಿಗೆ ವಿಶ್ವ ವೇದಿಕೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಅವಕಾಶ ಮಾಡಿಕೊಟ್ಟಿದೆ. ದೇಶಕ್ಕಾಗಿ ಏನನ್ನಾದರೂ ಮಾಡಲು ಅವರಿಗೆ ಅವಕಾಶ ನೀಡಿದೆ. ನಮ್ಮ ಆಟಗಾರರನ್ನು ಪ್ರೋತ್ಸಾಹಿಸೋಣ... ಭಾರತ ತಂಡಕ್ಕೆ ಚಿಯರ್!!ಅಸ್ಸಾಂನ ಚರೈಡಿಯೊ ಮೈದಾನಂ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಗೊಂಡಿರುವುದಕ್ಕೆ ಸಂತಸ ಮತ್ತು ಹೆಮ್ಮೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ
July 26th, 02:50 pm
ಅಸ್ಸಾಂನ ಚರೈಡಿಯೋ ಮೊಯಿದಮ್ಗಳು ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಗೆ ಸೇರ್ಪಡೆಗೊಡಿರುವುದು ತೀವ್ರ ಸಂತಸ ಮತ್ತು ಹೆಮ್ಮೆಯನ್ನು ತಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ. ಇದು ಭಾರತಕ್ಕೆ ಅಪಾರ ಸಂತೋಷ ಮತ್ತು ಹೆಮ್ಮೆಯ ವಿಷಯ ಎಂದು ಶ್ರೀ ಮೋದಿ ಹೇಳಿದರು.ಭಾರತದ ಪರಂಪರೆ ಕೇವಲ ಇತಿಹಾಸವಲ್ಲ. ಭಾರತದ ಪರಂಪರೆಯೂ ಒಂದು ವಿಜ್ಞಾನ: ಪ್ರಧಾನಿ ಮೋದಿ
July 21st, 07:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಭಾರತ ಮಂಟಪದಲ್ಲಿ ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನವನ್ನು ಉದ್ಘಾಟಿಸಿದರು. ವಿಶ್ವ ಪರಂಪರೆ ಸಮಿತಿಯು ವಾರ್ಷಿಕವಾಗಿ ಸಭೆ ಸೇರುತ್ತದೆ ಮತ್ತು ವಿಶ್ವ ಪರಂಪರೆಯ ಎಲ್ಲಾ ವಿಷಯಗಳನ್ನು ನಿರ್ವಹಿಸುವ ಹಾಗು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಮೂಡಿಸಬೇಕಾದ/ಸೇರಿಸಬೇಕಾದ ಸ್ಥಳಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಹೊಂದಿದೆ. ಭಾರತವು ಮೊದಲ ಬಾರಿಗೆ ವಿಶ್ವ ಪರಂಪರೆ ಸಮಿತಿ ಸಭೆಯನ್ನು ಆಯೋಜಿಸುತ್ತಿದೆ. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಿವಿಧ ವಸ್ತುಪ್ರದರ್ಶನಗಳನ್ನು ಪ್ರಧಾನಮಂತ್ರಿಯವರು ವೀಕ್ಷಿಸಿದರು.ಹೊಸದಿಲ್ಲಿಯ ಭಾರತ ಮಂಟಪದಲ್ಲಿ ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನ ಉದ್ಘಾಟಿಸಿದ ಪ್ರಧಾನಮಂತ್ರಿ
July 21st, 07:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಭಾರತ ಮಂಟಪದಲ್ಲಿ ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನವನ್ನು ಉದ್ಘಾಟಿಸಿದರು. ವಿಶ್ವ ಪರಂಪರೆ ಸಮಿತಿಯು ವಾರ್ಷಿಕವಾಗಿ ಸಭೆ ಸೇರುತ್ತದೆ ಮತ್ತು ವಿಶ್ವ ಪರಂಪರೆಯ ಎಲ್ಲಾ ವಿಷಯಗಳನ್ನು ನಿರ್ವಹಿಸುವ ಹಾಗು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಮೂಡಿಸಬೇಕಾದ/ಸೇರಿಸಬೇಕಾದ ಸ್ಥಳಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಹೊಂದಿದೆ. ಭಾರತವು ಮೊದಲ ಬಾರಿಗೆ ವಿಶ್ವ ಪರಂಪರೆ ಸಮಿತಿ ಸಭೆಯನ್ನು ಆಯೋಜಿಸುತ್ತಿದೆ. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಿವಿಧ ವಸ್ತುಪ್ರದರ್ಶನಗಳನ್ನು ಪ್ರಧಾನಮಂತ್ರಿಯವರು ವೀಕ್ಷಿಸಿದರು.ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲವಾದ ನಂಬಿಕೆಯನ್ನು ಪುನರುಚ್ಚರಿಸಿದ ದೇಶವಾಸಿಗಳಿಗೆ ಕೃತಜ್ಞತೆಗಳು: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ
June 30th, 11:00 am
'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮಕ್ಕೆ ಕೆಲವು ತಿಂಗಳ ತನಕ ವಿರಾಮ ನೀಡಿರಬಹುದು. ಆದರೆ ದೇಶ ಮತ್ತು ಸಮಾಜದಲ್ಲಿ 'ಮನ್ ಕಿ ಬಾತ್' ಮನೋಭಾವ, ಪ್ರತಿದಿನ ಮಾಡುವ ಒಳ್ಳೆಯ ಕೆಲಸ, ನಿಸ್ವಾರ್ಥ ಮನೋಭಾವದಿಂದ ಮಾಡುವ ಕೆಲಸ, ಕೆಲಸದಿಂದ ಸಮಾಜದ ಮೇಲಾಗುವ ಸಕಾರಾತ್ಮಕ ಪರಿಣಾಮ – ಇವೆಲ್ಲವನ್ನೂ ಪಟ್ಟುಬಿಡದೆ ನಡೆಸಿತು. ಚುನಾವಣೆಯ ಸುದ್ದಿಗಳ ನಡುವೆ, ಹೃದಯ ಸ್ಪರ್ಶಿಸುವ ಇಂತಹ ಸುದ್ದಿಗಳನ್ನು ನೀವು ಖಂಡಿತವಾಗಿಯೂ ಗಮನಿಸಿದ್ದೀರಿ ಎಂದು ನಾನು ಭಾವಿಸುವೆ.Development of Northeast is imperative for a Viksit Bharat: PM Modi
March 09th, 01:50 pm
PM Modi inaugurated, dedicated to the nation and laid the foundation stone for multiple development projects worth more than Rs 17,500 crores in Jorhat, Assam. He said, “Veer Lachit Borphukan is the symbol of Assam’s valor and determination and said Vikas bhi, Virasat bhi is our development model.ಅಸ್ಸಾಂನ ಜೋರ್ಹತ್ ನಲ್ಲಿ 17,500 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
March 09th, 01:14 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಜೋರ್ಹತ್ ನಲ್ಲಿ 17,500 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ಆರೋಗ್ಯ, ತೈಲ ಮತ್ತು ಅನಿಲ, ರೈಲು ಮತ್ತು ವಸತಿ ಕ್ಷೇತ್ರಗಳನ್ನು ಒಳಗೊಂಡಿವೆ.ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಮಂತ್ರಿ ಭೇಟಿ
March 09th, 10:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಅಸ್ಸಾಂನ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದರು. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಅದರ ಭೂದೃಶ್ಯಗಳ ಸಾಟಿಯಿಲ್ಲದ ಸೌಂದರ್ಯವನ್ನು ಅನುಭವಿಸುವಂತೆ ಶ್ರೀ ನರೇಂದ್ರ ಮೋದಿ ಅವರು ನಾಗರಿಕರನ್ನು ಒತ್ತಾಯಿಸಿದರು. ಸಂರಕ್ಷಣಾ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳಾ ಅರಣ್ಯ ರಕ್ಷಕರ ತಂಡವಾದ ವನದುರ್ಗಾ ಅವರೊಂದಿಗೆ ಅವರು ಸಂವಾದ ನಡೆಸಿದರು ಮತ್ತು ನೈಸರ್ಗಿಕ ಪರಂಪರೆಯನ್ನು ರಕ್ಷಿಸುವಲ್ಲಿ ಅವರ ಸಮರ್ಪಣೆ ಮತ್ತು ಧೈರ್ಯವನ್ನು ಶ್ಲಾಘಿಸಿದರು. ಲಖಿಮೈ, ಪ್ರದ್ಯುಮ್ನ ಮತ್ತು ಫೂಲ್ಮೈ ಆನೆಗಳಿಗೆ ಕಬ್ಬನ್ನು ತಿನ್ನಿಸುವ ದೃಶ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.Prime Minister Narendra Modi to visit Assam, Arunachal Pradesh, West Bengal and Uttar Pradesh
March 08th, 04:12 pm
Prime Minister will visit Assam, Arunachal Pradesh, West Bengal and Uttar Pradesh on 8th-10th March, 2024ಯುನೆಸ್ಕೋದ ಅಮೂರ್ತ ಪಟ್ಟಿಯಲ್ಲಿ ಗರ್ಬಾ ನೃತ್ಯವನ್ನು ಸೇರ್ಪಡೆ ಮಾಡಿರುವುದನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು
December 06th, 08:27 pm
ಗುಜರಾತಿನ ಗರ್ಬಾ ನೃತ್ಯದ ಹೆಸರನ್ನು ಯುನೆಸ್ಕೋದ ಅಮೂರ್ತ ಪರಂಪರಾ ಪಟ್ಟಿಯಲ್ಲಿ ಸೇರಿಸಿದ್ದರ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.Armed forces have taken India’s pride to new heights: PM Modi in Lepcha
November 12th, 03:00 pm
PM Modi addressed brave jawans at Lepcha, Himachal Pradesh on the occasion of Diwali. Addressing the jawans he said, Country is grateful and indebted to you for this. That is why one ‘Diya’ is lit for your safety in every household”, he said. “The place where jawans are posted is not less than any temple for me. Wherever you are, my festival is there. This is going on for perhaps 30-35 years”, he added.ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ವೀರ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸಿದ ಪ್ರಧಾನಮಂತ್ರಿ
November 12th, 02:31 pm
ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೀಪಾವಳಿ ಹಬ್ಬ ಮತ್ತು ಯೋಧರ ಧೈರ್ಯದ ಪ್ರತಿಧ್ವನಿಯ ಸಮ್ಮಿಲನ ದೇಶದ ಪ್ರತಿಯೊಬ್ಬ ಪ್ರಜೆಗೂ ಜ್ಞಾನೋದಯದ ಕ್ಷಣವಾಗಿದೆ ಎಂದು ಅವರು ಹೇಳಿದರು. ಈಗ ಮೊದಲ ಗ್ರಾಮವೆಂದು ಪರಿಗಣಿಸಲ್ಪಟ್ಟಿರುವ ದೇಶದ ಕೊನೆಯ ಗ್ರಾಮದಿಂದ ಭಾರತದ ಗಡಿ ಪ್ರದೇಶಗಳ ಯೋಧರೊಂದಿಗೆ ಅವರು ದೀಪಾವಳಿಯ ಶುಭಾಶಯಗಳನ್ನು ತಿಳಿಸಿದರು.ಮುಂಬೈನಲ್ಲಿ ನಡೆದ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
October 14th, 10:34 pm
ಐಒಸಿ ಅಧ್ಯಕ್ಷ ಶ್ರೀ ಥಾಮಸ್ ಬಾಕ್, ಐಒಸಿಯ ಗೌರವಾನ್ವಿತ ಸದಸ್ಯರು, ಎಲ್ಲಾ ಅಂತಾರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳು ಮತ್ತು ಭಾರತದಲ್ಲಿನ ರಾಷ್ಟ್ರೀಯ ಒಕ್ಕೂಟಗಳ ಪ್ರತಿನಿಧಿಗಳು. ಮಹಿಳೆಯರೇ ಮತ್ತು ಮಹನೀಯರೇ! ಈ ವಿಶೇಷ ಸಂದರ್ಭದಲ್ಲಿ ನಾನು ನಿಮ್ಮೆಲ್ಲರಿಗೂ 1.4 ಶತಕೋಟಿ ಭಾರತೀಯರ ಪರವಾಗಿ ಆತ್ಮೀಯ ಸ್ವಾಗತ ಮತ್ತು ಶುಭಾಶಯಗಳನ್ನು ಕೋರುತ್ತೇನೆ. ಭಾರತದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ 141 ನೇ ಅಧಿವೇಶನವು ನಿಜವಾಗಿಯೂ ಮಹತ್ವದ್ದಾಗಿದೆ. 40 ವರ್ಷಗಳ ನಂತರ ಭಾರತದಲ್ಲಿ ಐಒಸಿ ಅಧಿವೇಶನ ನಡೆಯುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.ಮುಂಬೈನಲ್ಲಿ 141ನೇ ʻಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧಿವೇಶನʼ ಉದ್ಘಾಟಿಸಿದ ಪ್ರಧಾನಿ
October 14th, 06:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈನಲ್ಲಿ 141ನೇ ʻಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿʼ(ಐಒಸಿ) ಅಧಿವೇಶನವನ್ನು ಉದ್ಘಾಟಿಸಿದರು. ಕ್ರೀಡೆಗೆ ಸಂಬಂಧಿಸಿದ ವಿವಿಧ ಮಧ್ಯಸ್ಥಗಾರರ ನಡುವೆ ಸಂವಾದ ಮತ್ತು ಜ್ಞಾನ ಹಂಚಿಕೆಗೆ ಅವಕಾಶವನ್ನು ಒದಗಿಸುವುದು ಈ ಅಧಿವೇಶನದ ಉದ್ದೇಶವಾಗಿದೆ.24.09.2023 ರಂದು 'ಮನ್ ಕಿ ಬಾತ್' ನ 105 ನೇ ಸಂಚಿಕೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಕನ್ನಡ ಅನುವಾದ
September 24th, 11:30 am
ನನ್ನ ಪ್ರೀತಿಯ ಪರಿವಾರ ಸದಸ್ಯರಿಗೆ ನಮಸ್ಕಾರ. ‘ಮನದ ಮಾತಿನ’ ಮತ್ತೊಂದು ಸಂಚಿಕೆಯಲ್ಲಿ, ದೇಶದ ಯಶಸ್ಸು, ದೇಶದ ಜನತೆಯ ಯಶಸ್ಸು, ಅವರ ಸ್ಪೂರ್ತಿದಾಯಕ ಜೀವನ ಪಯಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಅವಕಾಶ ದೊರೆತಿದೆ. ಇತ್ತೀಚೆಗೆ, ನನಗೆ ಲಭಿಸಿದ ಹೆಚ್ಚಿನ ಪತ್ರಗಳು ಮತ್ತು ಸಂದೇಶಗಳು ಎರಡು ವಿಷಯಗಳ ಮೇಲೆ ಕೇಂದ್ರೀಕೃತವಾಗಿವೆ. ಮೊದಲನೆಯದ್ದು ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್ ಮತ್ತು ಎರಡನೇ ವಿಷಯವೆಂದರೆ ದೆಹಲಿಯಲ್ಲಿ ಜಿ-20 ರ ಯಶಸ್ವಿ ಆಯೋಜನೆ. ದೇಶದ ಪ್ರತಿಯೊಂದು ಭಾಗದಿಂದ, ಸಮಾಜದ ಪ್ರತಿಯೊಂದು ವರ್ಗದಿಂದ, ಎಲ್ಲಾ ವಯೋಮಾನದ ಜನರಿಂದ ನನಗೆ ಅಸಂಖ್ಯ ಪತ್ರಗಳು ಬಂದಿವೆ. ಚಂದ್ರಯಾನ-3 ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತಿದ್ದಾಗ, ವಿವಿಧ ಮಾಧ್ಯಮಗಳ ಮೂಲಕ ಕೋಟ್ಯಾಂತರ ಜನರು ಏಕಕಾಲದಲ್ಲಿ ಈ ಘಟನೆಯ ಪ್ರತಿ ಕ್ಷಣವನ್ನು ಸಾಕ್ಷೀಕರಿಸಿದ್ದಾರೆ. ಇಸ್ರೋದ ಯೂಟ್ಯೂಬ್ ಲೈವ್ ಚಾನೆಲ್ನಲ್ಲಿ 80 ಲಕ್ಷಕ್ಕೂ ಹೆಚ್ಚು ಜನರು ಘಟನೆಯನ್ನು ವೀಕ್ಷಿಸಿದ್ದು ಸ್ವತಃ ಒಂದು ದಾಖಲೆಯಾಗಿದೆ. ಇದರಿಂದ ಚಂದ್ರಯಾನ-3 ರ ಕುರಿತು ಕೋಟ್ಯಾಂತರ ಭಾರತೀಯರ ಬಾಂಧವ್ಯ ಎಷ್ಟು ಗಾಢವಾಗಿದೆ ಎಂಬುದರ ಅರಿವಾಗುತ್ತದೆ. ಇತ್ತೀಚೆಗೆ ದೇಶದಲ್ಲಿ ಚಂದ್ರಯಾನದ ಈ ಯಶಸ್ಸಿನ ಕುರಿತು, ಅದ್ಭುತವಾದ ಒಂದು ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಮತ್ತು ಅದನ್ನು 'ಚಂದ್ರಯಾನ-3 ಮಹಾಕ್ವಿಜ್' ಎಂದು ಹೆಸರಿಸಲಾಗಿದೆ. MyGov ಪೋರ್ಟಲ್ನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಇದುವರೆಗೆ 15 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. MyGov ವೇದಿಕೆ ಆರಂಭಿಸಿದಂದಿನಿಂದ ಒಂದು ರಸಪ್ರಶ್ನೆಯಲ್ಲಿ ಜನರ ಅತಿ ದೊಡ್ಡ ಭಾಗವಹಿಸುವಿಕೆ ಇದಾಗಿದೆ. ನೀವು ಇನ್ನೂ ಇದರಲ್ಲಿ ಭಾಗವಹಿಸಿಲ್ಲವೆಂದಾದರೆ, ತಡ ಮಾಡಬೇಡಿ, ಇನ್ನೂ ಆರು ದಿನಗಳು ಬಾಕಿ ಇವೆ ಎಂದು ನಿಮಗೆ ಹೇಳಬಯಸುತ್ತೇನೆ. ಈ ರಸಪ್ರಶ್ನೆಯಲ್ಲಿ ಖಂಡಿತ ಭಾಗವಹಿಸಿ.ಹೊಯ್ಸಳರ ಪವಿತ್ರ ವಾಸ್ತುಶಿಲ್ಪಗಳ ಸಮೂಹ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆ: ಪ್ರಧಾನಿ ಮೋದಿ ಶ್ಲಾಘನೆ
September 18th, 09:54 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೊಯ್ಸಳರ ಪವಿತ್ರ ವಾಸ್ತುಶಿಲ್ಪಗಳ ಸಮೂಹ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.