‘ಮರುಭೂಮಿಯಾಗುವಿಕೆ, ಭೂ ಸವಕಳಿ ಮತ್ತು ಬರ ಕುರಿತಂತೆ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಂವಾದ’ ಉದ್ದೇಶಿಸಿ ಪ್ರಧಾನಮಂತ್ರಿ ಅವರಿಂದ ಪ್ರಧಾನ ಭಾಷಣ
June 14th, 07:36 pm
ಭೂಮಿ ಎಲ್ಲರ ಜೀವನ ಮತ್ತು ಜೀವನೋಪಾಯ ಬೆಂಬಲಿಸುವ ಮೂಲ ಆಧಾರಸ್ತಂಭವಾಗಿದೆ ಮತ್ತು ನಾವೆಲ್ಲರೂ ಅರ್ಥಮಾಡಿಕೊಂಡಿರುವಂತೆ ಜೀವ ಜಾಲ ಒಂದಕ್ಕೊಂದು ಸಂಬಂಧ ಹೊಂದಿರುವ ವ್ಯವಸ್ಥೆಯಾಗಿದೆ. ದುಃಖಕರವೆಂದರೆ, ಭೂಸವಕಳಿ ಇಂದು ವಿಶ್ವದ ಮೂರನೇ ಎರಡರಷ್ಟು ಪ್ರದೇಶವನ್ನು ಬಾಧಿಸುತ್ತಿದೆ. ಯಾರೂ ಅದನ್ನು ಪರೀಕ್ಷಸದೆ ಬಿಟ್ಟರೆ, ನಮ್ಮ ಸಮಾಜಗಳು, ಆರ್ಥಿಕತೆ, ಆಹಾರಭದ್ರತೆ, ಆರೋಗ್ಯ, ಸುರಕ್ಷತೆ ಮತ್ತು ಗುಣಮಟ್ಟದ ಜೀವನದ ಮೂಲ ತಳಹದಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ನಾವು ಭೂಮಿಯ ಮೇಲಿನ ಮತ್ತು ಅದರ ಸಂಪನ್ಮೂಲಗಳ ಮೇಲಿನ ಒತ್ತಡವನ್ನು ತಗ್ಗಿಸಬೇಕಾಗಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ ನಮ್ಮ ಮುಂದೆ ಸಾಕಷ್ಟು ಕಾರ್ಯಗಳು ಇವೆ. ಆದರೆ ನಾವು ಅವೆಲ್ಲವನ್ನೂ ಮಾಡಬೇಕಿದೆ. ನಾವೆಲ್ಲರೂ ಒಗ್ಗೂಡಿ ಆ ಕೆಲಸ ಮಾಡಬೇಕಿದೆ.‘ಮರುಭೂಮಿಕರಣ, ಭೂ ಸವಕಳಿ ಮತ್ತು ಬರ ಕುರಿತಂತೆ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಂವಾದ’ ಉದ್ದೇಶಿಸಿ ಪ್ರಧಾನಮಂತ್ರಿ ಅವರಿಂದ ಪ್ರಧಾನ ಭಾಷಣ
June 14th, 07:32 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ “ಮರುಭೂಮಿಕರಣ, ಭೂಸವಕಳಿ ಮತ್ತು ಬರ ಕುರಿತಂತೆ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಂವಾದ’ ಉದ್ದೇಶಿಸಿ ಪ್ರಧಾನ ಭಾಷಣ ಮಾಡಿದರು. ಮರುಭೂಮಿಕರಣ ನಿಗ್ರಹ ಕುರಿತ ವಿಶ್ವ ಸಂಸ್ಥೆಯ ಸದಸ್ಯರಾಷ್ಟ್ರಗಳ ಸಮಾವೇಶ (ಯುಎನ್ ಸಿಸಿಡಿ) 14ನೇ ಅಧಿವೇಶನದ ಅಧ್ಯಕ್ಷರಾಗಿ ತಮ್ಮ ಸಾಮರ್ಥ್ಯದಲ್ಲಿ ಅವರು ಆರಂಭಿಕ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಸೆಂಟ್ ವಿನ್ಸೆಂಟ್ ಮತ್ತು ಗ್ರೆನಡಿನ್ಸ್ ಪ್ರಧಾನಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
September 10th, 01:36 pm
ಸೆಂಟ್ ವಿನ್ಸೆಂಟ್ ಮತ್ತು ಗ್ರೆನಡಿನ್ಸ್ ಪ್ರಧಾನಮಂತ್ರಿ ಡಾ.ಗೌರವಾನಿತ್ವ ರಾಲ್ಫ್ ಎವರೆರ್ಡ್ ಗೋನ್ಸಾಲ್ವೇಸ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಪ್ರಧಾನಮಂತ್ರಿ ಗೋನ್ಸಾಲ್ವೇಸ್ ಅವರು, ಸೆಂಟ್ ವಿನ್ಸೆಂಟ್ ಮತ್ತು ಗ್ರೆನಡಿನ್ಸ್ ಪ್ರಧಾನಮಂತ್ರಿಯಾದ ಬಳಿಕ ಇದೇ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡುತ್ತಿದ್ದು, ಅವರು ನವದೆಹಲಿಯಲ್ಲಿ ನಿನ್ನೆ ನಡೆದ ಭೂಮಿ ಮರಳುಗಾಡುತ್ತಿರುವುದನ್ನು ನಿಯಂತ್ರಿಸುವ ಕುರಿತಂತೆ ವಿಶ್ವಸಂಸ್ಥೆ ಆಯೋಜಿಸಿದ್ದ ಉನ್ನತ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.ಭೂಮಿ ಮರಳುಗಾಡು ಆಗುವಿಕೆ ತಡೆಯುವ ಕುರಿತಂತೆ ವಿಶ್ವಸಂಸ್ಥೆಯ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರಗಳ 14ನೇ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿಗಳು ಮಾಡಿದ ಭಾಷಣದ ಪಠ್ಯ
September 09th, 10:35 am
ಭೂಮಿ ಮರಳುಗಾಡು ಆಗುವಿಕೆ ತಡೆಯುವ ಕುರಿತಂತೆ ವಿಶ್ವಸಂಸ್ಥೆಯ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರಗಳ 14ನೇ ಸಿಒಪಿ ಶೃಂಗಸಭೆಗೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ. ಭಾರತಕ್ಕೆ ಈ ಸಮ್ಮೇಳನವನ್ನು ತಂದ ಕಾರ್ಯಕಾರಿ ಕಾರ್ಯದರ್ಶಿ ಶ್ರೀ ಇಬ್ರಾಹಿಂ ಜಿಯೋ ಅವರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಈ ಶೃಂಗಸಭೆಗೆ ದಾಖಲೆಯ ಪ್ರತಿನಿಧಿಗಳ ನೋಂದಣಿ ಆಗಿರುವುದು ಭೂ ಸವಕಳಿಯನ್ನು ತಡೆಯುವ ಅಥವಾ ಅದನ್ನು ಪೂರ್ವ ಸ್ಥಿತಿಗೆ ಮರಳಿಸುವ ಜಾಗತಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.ಮರುಭೂಮೀಕರಣವನ್ನು ತಡೆಗಟ್ಟುವ ವಿಶ್ವಸಂಸ್ಥೆ ಸಮಾವೇಶದ ಪಕ್ಷಗಳ 14 ನೇ ಸಮ್ಮೇಳನದ (ಸಿಒಪಿ 14) ಉನ್ನತಮಟ್ಟದ ವಿಭಾಗವನ್ನು ಉದ್ದೇಶಿಸಿ ಪ್ರಧಾನಿಯವರ ಭಾಷಣ
September 09th, 10:30 am
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಇಂದು ಮರುಭೂಮೀಕರಣವನ್ನು ತಡೆಗಟ್ಟುವವಿಶ್ವಸಂಸ್ಥೆ ಸಮಾವೇಶದ ಪಕ್ಷಗಳ 14 ನೇ ಸಮ್ಮೇಳನದ (ಸಿಒಪಿ 14) ಉನ್ನತ ಮಟ್ಟದ ವಿಭಾಗವನ್ನು ಉದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರಮೋದಿ ಅವರು ಮಾತನಾಡಿದರು.