ಹವಾಮಾನ ಹಣಕಾಸು ವರ್ಗಾವಣೆ ಕುರಿತ ಕಾಪ್-28ರ ಅಧ್ಯಕ್ಷೀಯ ಗೋಷ್ಠಿಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ
December 01st, 08:39 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಡಿಸೆಂಬರ್ 1ರಂದು ಯುಎಇನ ದುಬೈನಲ್ಲಿ ಹವಾಮಾನ ಹಣಕಾಸು ವರ್ಗಾವಣೆ ಕುರಿತ ಕಾಪ್-28 ಅಧ್ಯಕ್ಷೀಯ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಇದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೆಚ್ಚು ಹವಾಮಾನ ಹಣಕಾಸು ಲಭ್ಯತೆ, ಸುಲಭವಾಗಿ ಹಾಗೂ ಕೈಗೆಟುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಕರಿಸುತ್ತದೆ.