ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯತಿಥಿಯಂದು ಪ್ರಧಾನಮಂತ್ರಿಯವರಿಂದ ಗೌರವ ನಮನ
December 15th, 09:32 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಶ್ರೀ ಪಟೇಲ್ ಅವರ ವ್ಯಕ್ತಿತ್ವ ಮತ್ತು ಕೆಲಸವು ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಸಾಧನೆಗೆ ನಮಗೆ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದರು.ಮಹಾನ್ ದಿಗ್ಗಜ ರಾಜ್ ಕಪೂರ್ ಅವರ 100ನೇ ಜನ್ಮ ವಾರ್ಷಿಕೋತ್ಸವದಂದು ಪ್ರಧಾನಮಂತ್ರಿಯವರು ಅವರಿಗೆ ಗೌರವ ನಮನ ಸಲ್ಲಿಸಿದರು
December 14th, 11:17 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚಲನಚಿತ್ರ ಲೋಕದ ಮಹಾನ್ ದಿಗ್ಗಜ ಶ್ರೀ ರಾಜ್ ಕಪೂರ್ ಅವರ 100 ನೇ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಅವರನ್ನು ದೂರದೃಷ್ಟಿಯ ಚಲನಚಿತ್ರ ನಿರ್ಮಾಪಕ, ನಟ ಮತ್ತು ಚಿರ ನಿರಂತರ ಶೋಮ್ಯಾನ್ ಎಂದು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಶ್ರೀ ರಾಜ್ ಕಪೂರ್ ಅವರು ಕೇವಲ ಚಲನಚಿತ್ರ ನಿರ್ಮಾಪಕರಲ್ಲ ಬದಲಾಗಿ ಭಾರತೀಯ ಸಿನಿಮಾವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರು, ಚಲನಚಿತ್ರ ನಿರ್ಮಾಪಕರು ಮತ್ತು ನಟರ ಹಲವು ತಲೆಮಾರುಗಳು ಅವರಿಂದ ಬಹಳಷ್ಟು ಕಲಿಯಬಹುದಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದರು.2001ರ ಸಂಸತ್ ದಾಳಿಯಲ್ಲಿ ಹುತಾತ್ಮರಾದವರಿಗೆ ಪ್ರಧಾನಮಂತ್ರಿ ನಮನ
December 13th, 10:21 am
2001ರ ಸಂಸತ್ ದಾಳಿಯಲ್ಲಿ ಹುತಾತ್ಮರಾದವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಗೌರವ ನಮನ ಸಲ್ಲಿಸಿದ್ದಾರೆ.ಶ್ರೀ ಗುರು ತೇಜ್ ಬಹದ್ದೂರ್ ಅವರ ಹುತಾತ್ಮ ದಿನದಂದು ಅವರಿಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ
December 06th, 08:07 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ರೀ ಗುರು ತೇಜ್ ಬಹದ್ದೂರ್ ಅವರ ಹುತಾತ್ಮ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ನ್ಯಾಯ, ಸಮಾನತೆ ಮತ್ತು ಮಾನವೀಯತೆಯ ರಕ್ಷಣೆಯ ಮೌಲ್ಯಗಳಿಗಾಗಿ ಶ್ರೀ ಗುರು ತೇಜ್ ಬಹದ್ದೂರ್ ಜೀ ಅವರ ಸಾಟಿಯಿಲ್ಲದ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಿದರು.ದೇಶದ ಮೊದಲ ರಾಷ್ಟ್ರಪತಿ, ಭಾರತ ರತ್ನ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮ ಜಯಂತಿಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ
December 03rd, 08:59 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶದ ಮೊದಲ ರಾಷ್ಟ್ರಪತಿ, ಭಾರತ ರತ್ನ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಭಾರತೀಯ ಪ್ರಜಾಪ್ರಭುತ್ವಕ್ಕೆ ಬಲವಾದ ಅಡಿಪಾಯ ಹಾಕುವಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರ ಅಮೂಲ್ಯ ಕೊಡುಗೆಯನ್ನು ಅವರು ಶ್ಲಾಘಿಸಿದರು.ಆರ್ಯ ಸಮಾಜದ ಸ್ಮಾರಕಕ್ಕೆ ಪ್ರಧಾನಮಂತ್ರಿಯವರಿಂದ ಗೌರವ ನಮನ
November 22nd, 03:09 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗಯಾನಾದ ಜಾರ್ಜ್ ಟೌನ್ ನಲ್ಲಿರುವ ಆರ್ಯ ಸಮಾಜದ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಗಯಾನಾದಲ್ಲಿ ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಗಯಾನಾ ಜನರ ಪ್ರಯತ್ನಗಳು ಮತ್ತು ಪಾತ್ರವನ್ನು ಶ್ರೀ ಮೋದಿಯವರು ಶ್ಲಾಘಿಸಿದರು. ಸ್ವಾಮಿ ದಯಾನಂದ ಸರಸ್ವತಿ ಅವರ 200ನೇ ಜಯಂತಿಯನ್ನು ನಾವು ಆಚರಿಸುತ್ತಿರುವುದರಿಂದ ಈ ವರ್ಷವು ಬಹಳ ವಿಶೇಷವಾಗಿದೆ ಎಂದು ಅವರು ಹೇಳಿದರು.ಭಾರತೀಯ ಸ್ಮಾರಕಕ್ಕೆ ಪ್ರಧಾನಮಂತ್ರಿ ಭೇಟಿ
November 21st, 10:00 pm
ಅವರ ಜೊತೆಗೆ ಗಯಾನಾ ಪ್ರಧಾನಿ ಬ್ರಿಗೇಡಿಯರ್ (ನಿವೃತ್ತ) ಮಾರ್ಕ್ ಫಿಲಿಪ್ಸ್ ಇದ್ದರು. ಈ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಮಂತ್ರಿ ಅವರನ್ನು ಟಾಸ್ಸಾ ಡ್ರಮ್ಸ್ನ ಮೇಳ ಸ್ವಾಗತಿಸಿತು.ಶ್ರೀ ಬಾಳಾಸಾಹೇಬ್ ಠಾಕ್ರೆ ಅವರ ಪುಣ್ಯ ತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
November 17th, 01:22 pm
ಶ್ರೀ ಬಾಳಾಸಾಹೇಬ್ ಠಾಕ್ರೆ ಅವರ ಪುಣ್ಯ ತಿಥಿಯಂದು ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೌರವ ನಮನ ಸಲ್ಲಿಸಿದರು. ಶ್ರೀ ಠಾಕ್ರೆ ಅವರು ಮಹಾರಾಷ್ಟ್ರದ ಅಭಿವೃದ್ಧಿ ಮತ್ತು ಮರಾಠಿ ಜನತೆಯ ಸಬಲೀಕರಣದ ಕಾರಣಕ್ಕಾಗಿ ಹೋರಾಡಿದ, ಹಾಗೂ ದೂರದೃಷ್ಟಿ ಹೊಂದಿದ್ದ ವ್ಯಕ್ತಿಯಾಗಿದ್ದರು ಎಂದು ಶ್ರೀ ಮೋದಿ ಅವರು ಹೇಳಿದರು.ಜನಜಾತೀಯ ಗೌರವ ದಿವಸ ಎಂದು ಸ್ಮರಿಸಲಾಗುವ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಾದ ಇಂದು ಪ್ರಧಾನಮಂತ್ರಿಯವರಿಂದ ಅವರಿಗೆ ಗೌರವ ನಮನ
November 15th, 08:41 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಭಗವಾನ್ ಬಿರ್ಸಾ ಮುಂಡಾ ಜೀ ಅವರು ತಾಯ್ನಾಡಿನ ಹೆಮ್ಮೆ ಮತ್ತು ಘನತೆಯನ್ನು ರಕ್ಷಿಸಲು ಎಲ್ಲವನ್ನೂ ತ್ಯಾಗ ಮಾಡಿದರು ಎಂದು ಅವರು ಹೇಳಿದ್ದಾರೆ.ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಪಟೇಲ್ ಅವರ ಸ್ಮರಣೆ
October 31st, 07:33 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಭಾರತದ ಏಕತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಸರ್ದಾರ್ ಪಟೇಲ್ ಅವರ ಬದ್ಧತೆಯನ್ನು ಪ್ರಧಾನಿ ಶ್ಲಾಘಿಸಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ರೀ ಪಶುಂಪೊನ್ ಮುತ್ತುರಾಮಲಿಂಗ ದೇವರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ
October 30th, 03:38 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಶ್ರೀ ಪಶುಂಪೊನ್ ಮುತ್ತುರಾಮಲಿಂಗ ದೇವರ್ ಅವರ ಗುರು ಪೂಜೆಯ ಸಂದರ್ಭದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.ಬುಡಕಟ್ಟು ನಾಯಕರಾದ ಶ್ರೀ ಕಾರ್ತಿಕ್ ಒರಾನ್ ಅವರ ಜನ್ಮ ಶತಮಾನೋತ್ಸವದಂದು ಪ್ರಧಾನಮಂತ್ರಿಯವರಿಂದ ಗೌರವ ನಮನ
October 29th, 09:16 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಬುಡಕಟ್ಟು ನಾಯಕರಾದ ಶ್ರೀ ಕಾರ್ತಿಕ್ ಒರಾನ್ ಅವರ ಜನ್ಮ ಶತಮಾನೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಬುಡಕಟ್ಟು ಸಮುದಾಯದ ಹಕ್ಕುಗಳು ಮತ್ತು ಬುಡಕಟ್ಟು ಜನಾಂಗದ ಆತ್ಮಗೌರವಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಮಹಾನ್ ನಾಯಕ ಮತ್ತು ಬುಡಕಟ್ಟು ಸಂಸ್ಕೃತಿ ಹಾಗೂ ಅಸ್ಮಿತೆಯನ್ನು ರಕ್ಷಿಸಲು ಬುಡಕಟ್ಟು ಸಮಾಜದ ಧ್ವನಿಯಾಗಿದ್ದರು ಎಂದು ಶ್ರೀ ಮೋದಿಯವರು ಶ್ರೀ ಕಾರ್ತಿಕ್ ಒರಾನ್ ಅವರನ್ನು ಶ್ಲಾಘಿಸಿದ್ದಾರೆ.ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಪೊಲೀಸ್ ಸಿಬ್ಬಂದಿಗೆ ಗೌರವ ನಮನ
October 21st, 12:58 pm
ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಧೀರ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು.ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಪ್ರಧಾನಮಂತ್ರಿ ಗೌರವ ನಮನ ಸಲ್ಲಿಸಿದರು
October 15th, 10:21 am
ಖ್ಯಾತ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.ರಾಜಮಾತಾ ವಿಜಯರಾಜೆ ಸಿಂಧಿಯಾ ಅವರ ಜನ್ಮ ದಿನದ ಅಂಗವಾಗಿ ಪ್ರಧಾನಮಂತ್ರಿ ಗೌರವ ನಮನ
October 12th, 08:45 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಮಾತಾ ವಿಜಯರಾಜೇ ಸಿಂಧಿಯಾ ಅವರ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ರಾಜಮಾತಾ ವಿಜಯರಾಜೇ ಸಿಂಧಿಯಾ ಅವರು ತಮ್ಮ ಇಡೀ ಜೀವನವನ್ನು ಭಾರತದ ಸೇವೆಗಾಗಿ ಮುಡಿಪಾಗಿಟ್ಟಿದ್ದರು ಎಂಬುದಾಗಿ ಶ್ರೀ ಮೋದಿ ಅವರು ರಾಜಮಾತಾರವರ ಬದ್ಧತೆಯನ್ನು ಶ್ಲಾಘಿಸಿದ್ದಾರೆ.ಲೋಕನಾಯಕ ಜಯಪ್ರಕಾಶ್ ನಾರಾಯಣ್ ಜಯಂತಿಯಂದು ಪ್ರಧಾನಮಂತ್ರಿಯವರಿಂದ ಅವರಿಗೆ ಗೌರವ ನಮನ
October 11th, 08:50 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ದೇಶ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಶ್ಲಾಘಿಸಿದ ಶ್ರೀ ಮೋದಿ, ಶ್ರೀ ಜೆ. ಪಿ. ನಾರಾಯಣ್ ಅವರ ವ್ಯಕ್ತಿತ್ವ ಮತ್ತು ಆದರ್ಶಗಳು ಪ್ರತಿ ಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿವೆ ಎಂದು ಹೇಳಿದ್ದಾರೆ.ಭಾರತ ರತ್ನ ನಾನಾಜಿ ದೇಶಮುಖ್ ಅವರ ಜನ್ಮ ಜಯಂತಿಯಂದು ಪ್ರಧಾನಮಂತ್ರಿಯವರಿಂದ ಗೌರವ ನಮನ
October 11th, 08:47 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತ ರತ್ನ ನಾನಾಜಿ ದೇಶಮುಖ್ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಭಾರತದ ಗ್ರಾಮೀಣ ಜನರ ಸಬಲೀಕರಣಕ್ಕಾಗಿ ಶ್ರೀ ದೇಶಮುಖ್ ಅವರ ಸಮರ್ಪಣೆ ಮತ್ತು ಸೇವೆಯನ್ನು ಶ್ರೀ ಮೋದಿ ಸ್ಮರಿಸುತ್ತಾ ಶ್ಲಾಘಿಸಿದ್ದಾರೆ.ಸಂತ ಶ್ರೀ ರಾಮ್ ರಾವ್ ಬಾಪು ಮಹಾರಾಜ್ ಅವರಿಗೆ ಪ್ರಧಾನಮಂತ್ರಿ ಗೌರವ ನಮನ
October 05th, 02:51 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತ ಶ್ರೀ ರಾಮ್ ರಾವ್ ಬಾಪು ಮಹಾರಾಜರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಸಂತ ರಾಮ್ ರಾವ್ ಬಾಪು ಅವರು ಮಾನವನ ನೋವನ್ನು ಹೋಗಲಾಡಿಸಲು ಮತ್ತು ಕರುಣಾಮಯಿ ಸಮಾಜವನ್ನು ನಿರ್ಮಿಸಲು ಯಾವಾಗಲೂ ಶ್ರಮಿಸಿದ್ದರು ಎಂದು ಶ್ರೀ ಮೋದಿ ಅವರು ಸ್ಮರಿಸಿದ್ದಾರೆ.ಸಂತ ಶ್ರೀ ಸೇವಾಲಾಲ್ ಜಿ ಮಹಾರಾಜರಿಗೆ ಪ್ರಧಾನಮಂತ್ರಿ ನಮನ
October 05th, 02:41 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತ ಶ್ರೀ ಸೇವಾಲಾಲ್ ಮಹಾರಾಜರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಶ್ರೀ ಸೇವಾ ಲಾಲ್ ಅವರು ಸಮಾಜ ಸುಧಾರಣೆ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನದ ಸೆಲೆ ಎಂದು ಪ್ರಧಾನಮಂತ್ರಿ ಬಣ್ಣಿಸಿದ್ದಾರೆ.ಮಹಾರಾಷ್ಟ್ರದ ವಾಶಿಮ್ ನಲ್ಲಿ ಕೃಷಿ ಮತ್ತು ಪಶುಸಂಗೋಪನಾ ವಲಯದ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
October 05th, 12:05 pm
ದೇಶಾದ್ಯಂತದಿಂದ ಬಂದು ಭಾಗವಹಿಸುತ್ತಿರುವವರನ್ನು ನಾನು ಅಭಿವಂದಿಸುತ್ತೇನೆ - ನಮ್ಮ ಗೌರವಾನ್ವಿತ ಸಹೋದರ ಸಹೋದರಿಯರೇ ! ಜೈ ಸೇವಾಲಾಲ್! ಜೈ ಸೇವಾಲಾಲ್!