Assam has picked up a new momentum of development: PM Modi at the foundation stone laying of Ammonia-Urea Fertilizer Project in Namrup
December 21st, 04:25 pm
In a major boost to the agricultural sector, PM Modi laid the foundation stone of Ammonia-Urea Fertilizer Project at Namrup in Assam. He highlighted the start of new industries, the creation of modern infrastructure, semiconductor manufacturing, new opportunities in agriculture, the advancement of tea gardens and their workers as well as the growing potential of tourism in Assam. The PM reiterated his commitment to preserving Assam’s identity and culture.PM Modi lays foundation stone of Ammonia-Urea Fertilizer Project of Assam Valley Fertilizer and Chemical Company Limited at Namrup, Assam
December 21st, 12:00 pm
In a major boost to the agricultural sector, PM Modi laid the foundation stone of Ammonia-Urea Fertilizer Project at Namrup in Assam. He highlighted the start of new industries, the creation of modern infrastructure, semiconductor manufacturing, new opportunities in agriculture, the advancement of tea gardens and their workers as well as the growing potential of tourism in Assam. The PM reiterated his commitment to preserving Assam’s identity and culture.ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
November 25th, 10:20 am
ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯಂತ ಪೂಜ್ಯ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಜಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷರಾದ ಪೂಜ್ಯ ಮಹಂತ್ ನೃತ್ಯ ಗೋಪಾಲ್ ದಾಸ್ ಜಿ, ಇಲ್ಲಿಗೆ ಆಗಮಿಸಿರುವ ದೇಶದ ಕೋಟ್ಯಂತರ ಭಕ್ತಾದಿಗಳೆ, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವ ಇಡೀ ಜಗತ್ತು, ಮಹಿಳೆಯರು ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ಮಂದಿರ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಭಾಷಣ ಮಾಡಿದರು
November 25th, 10:13 am
ದೇಶದ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯ ಒಂದು ಮಹತ್ವದ ಸಂದರ್ಭವನ್ನು ಗುರುತಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಪವಿತ್ರ ಶ್ರೀ ರಾಮ ಜನ್ಮಭೂಮಿ ದೇವಾಲಯದ ಶಿಖರದಲ್ಲಿ ಕೇಸರಿ ಧ್ವಜವನ್ನು ವಿಧ್ಯುಕ್ತವಾಗಿ ಹಾರಿಸಿದರು. ಧ್ವಜಾರೋಹಣ ಉತ್ಸವವು ದೇವಾಲಯದ ನಿರ್ಮಾಣದ ಪೂರ್ಣಗೊಳಿಸುವಿಕೆಯನ್ನು ಸಂಕೇತಿಸುತ್ತದೆ ಮತ್ತು ಸಾಂಸ್ಕೃತಿಕ ಆಚರಣೆ ಮತ್ತು ರಾಷ್ಟ್ರೀಯ ಏಕತೆಯ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತದೆ. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ , ಇಂದು ಅಯೋಧ್ಯಾ ನಗರವು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಮತ್ತೊಂದು ಪರಾಕಾಷ್ಠೆಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಇಂದು ಇಡೀ ಭಾರತ ಮತ್ತು ಇಡೀ ಜಗತ್ತು ಭಗವಾನ್ ಶ್ರೀ ರಾಮನ ಚೈತನ್ಯದಿಂದ ತುಂಬಿದೆ ಎಂದು ಶ್ರೀ ಮೋದಿ ತಿಳಿಸಿದರು, ಪ್ರತಿಯೊಬ್ಬ ರಾಮ ಭಕ್ತನ ಹೃದಯದಲ್ಲಿ ಅನನ್ಯ ತೃಪ್ತಿ, ಅಪರಿಮಿತ ಕೃತಜ್ಞತೆ ಮತ್ತು ಅಪಾರವಾದ ಅಲೌಕಿಕ ಸಂತೋಷವಿದೆ ಎಂದು ಎತ್ತಿ ತೋರಿಸಿದರು. ಶತಮಾನಗಳಷ್ಟು ಹಳೆಯದಾದ ಗಾಯಗಳು ವಾಸಿಯಾಗುತ್ತಿವೆ, ಶತಮಾನಗಳ ನೋವು ಕೊನೆಗೊಳ್ಳುತ್ತಿದೆ ಮತ್ತು ಶತಮಾನಗಳ ಸಂಕಲ್ಪ ಇಂದು ಈಡೇರುತ್ತಿದೆ ಎಂದು ಅವರು ಹೇಳಿದರು. ಇದು 500 ವರ್ಷಗಳ ಕಾಲ ಬೆಂಕಿ ಹೊತ್ತಿಕೊಂಡ ಯಜ್ಞದ ಪರಾಕಾಷ್ಠೆಯನ್ನು ಸೂಚಿಸುತ್ತದೆ ಎಂದು ಅವರು ಘೋಷಿಸಿದರು, ನಂಬಿಕೆಯಲ್ಲಿ ಎಂದಿಗೂ ಅಲುಗಾಡದ, ಒಂದು ಕ್ಷಣವೂ ನಂಬಿಕೆಯಲ್ಲಿ ಮುರಿಯದ ಯಜ್ಞ. ಇಂದು ಭಗವಾನ್ ಶ್ರೀ ರಾಮನ ಗರ್ಭಗುಡಿಯ ಅನಂತ ಶಕ್ತಿ ಮತ್ತು ಶ್ರೀ ರಾಮನ ಕುಟುಂಬದ ದೈವಿಕ ವೈಭವವನ್ನು ಈ ಧರ್ಮ ಧ್ವಜದ ರೂಪದಲ್ಲಿ ಅತ್ಯಂತ ದೈವಿಕ ಮತ್ತು ಭವ್ಯವಾದ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು.ಗುಜರಾತ್‌ನ ದೇಡಿಯಾಪದದಲ್ಲಿ ನಡೆದ ಜನಜಾತೀಯ ಗೌರವ್ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
November 15th, 03:15 pm
ಜೈ ಜೋಹರ್! ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ ಜೀ, ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಗುಜರಾತ್ ಬಿ.ಜೆ.ಪಿ ಅಧ್ಯಕ್ಷ ಜಗದೀಶ್ ವಿಶ್ವಕರ್ಮ ಜೀ, ಗುಜರಾತ್ ಸರ್ಕಾರದ ಸಚಿವರಾದ ನರೇಶ್‌ಭಾಯಿ ಪಟೇಲ್ ಮತ್ತು ಜಯರಾಮ್‌ಭಾಯಿ ಗಮಿತ್ ಜೀ, ಸಂಸತ್ತಿನಲ್ಲಿ ನನ್ನ ಹಳೆಯ ಸಹೋದ್ಯೋಗಿ ಮನ್ಸುಖ್‌ಭಾಯಿ ವಾಸವ ಜೀ, ವೇದಿಕೆಯಲ್ಲಿ ಉಪಸ್ಥಿತರಿರುವ ಭಗವಾನ್ ಬಿರ್ಸಾ ಮುಂಡಾ ಅವರ ಕುಟುಂಬದ ಎಲ್ಲಾ ಸದಸ್ಯರೇ, ಈ ಕಾರ್ಯಕ್ರಮದ ಭಾಗವಾಗಿರುವ ದೇಶದ ಮೂಲೆ ಮೂಲೆಗಳಿಂದ ಬಂದ ನನ್ನ ಬುಡಕಟ್ಟು ಸಹೋದರ, ಸಹೋದರಿಯರೇ, ಇತರ ಎಲ್ಲಾ ಗಣ್ಯರು ಮತ್ತು ಈ ಸಮಯದಲ್ಲಿ ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ತಂತ್ರಜ್ಞಾನದ ಮೂಲಕ ನಮ್ಮೊಂದಿಗೆ ಸಂಪರ್ಕ ಹೊಂದಿದ ಅನೇಕ ಜನರು. ಜನಜಾತೀಯ ಗೌರವ್ ದಿವಸ್ ಸಂದರ್ಭದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ಅವರು, ಸಚಿವರು ಮತ್ತು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ದೇಡಿಯಾಪಾಡಾದಲ್ಲಿ ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿಯ ಅಂಗವಾಗಿ ಜನಜಾತೀಯಯ ಗೌರವ ದಿವಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
November 15th, 03:00 pm
ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿಯ ಸ್ಮರಣಾರ್ಥ ಗುಜರಾತಿನ ದೇಡಿಯಾಪಾಡಾದಲ್ಲಿ ಇಂದು ನಡೆದ ಜನಜಾತೀಯ ಗೌರವ ದಿವಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ, ಅವರು ₹9,700 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ನರ್ಮದಾ ಮಾತೆಯ ಪವಿತ್ರ ಭೂಮಿ ಇಂದು ಮತ್ತೊಂದು ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಭಾರತದ ಏಕತೆ ಮತ್ತು ವೈವಿಧ್ಯತೆಯನ್ನು ಸಂಭ್ರಮಿಸಲು ಅಕ್ಟೋಬರ್ 31 ರಂದು ಸರ್ದಾರ್ ಪಟೇಲ್ ಅವರ 150ನೇ ಜಯಂತಿಯನ್ನು ಇದೇ ಸ್ಥಳದಲ್ಲಿ ಆಚರಿಸಲಾಯಿತು ಎಂದು ನೆನಪಿಸಿಕೊಂಡರು, ಅಂದು ಭಾರತ ಪರ್ವಕ್ಕೆ ಚಾಲನೆ ನೀಡಲಾಯಿತು. ಇಂದು ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿಯ ಅದ್ಧೂರಿ ಆಚರಣೆಯೊಂದಿಗೆ, ನಾವು ಭಾರತ ಪರ್ವದ ಪರಾಕಾಷ್ಠೆಗೆ ಸಾಕ್ಷಿಯಾಗುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಭಗವಾನ್ ಬಿರ್ಸಾ ಮುಂಡಾ ಅವರಿಗೆ ಗೌರವ ಸಲ್ಲಿಸಿದರು. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಇಡೀ ಬುಡಕಟ್ಟು ಪ್ರದೇಶದಲ್ಲಿ ಸ್ವಾತಂತ್ರ್ಯದ ಮನೋಭಾವವನ್ನು ಜಾಗೃತಗೊಳಿಸಿದ ಗೋವಿಂದ ಗುರುಗಳ ಆಶೀರ್ವಾದ ಸಹ ಈ ಕಾರ್ಯಕ್ರಮಕ್ಕೆ ಇದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಅವರು ವೇದಿಕೆಯಿಂದ ಗೋವಿಂದ ಗುರುಗಳಿಗೆ ಗೌರವ ನಮನ ಸಲ್ಲಿಸಿದರು. ಸ್ವಲ್ಪ ಸಮಯದ ಹಿಂದೆ ದೇವಮೋಗ್ರ ಮಾತೆಯ ದೇಗುಲಕ್ಕೆ ಭೇಟಿ ನೀಡುವ ಸೌಭಾಗ್ಯ ಸಿಕ್ಕಿತು ಮತ್ತು ಮತ್ತೊಮ್ಮೆ ಅವರ ಪಾದಗಳಿಗೆ ನಮಸ್ಕರಿಸಿದೆ ಎಂದು ಅವರು ಹೇಳಿದರು.ಜನಜಾತೀಯ ಗೌರವ್ ದಿವಸ್ ಸಂದರ್ಭದಲ್ಲಿ ನವೆಂಬರ್ 15ರಂದು ಗುಜರಾತ್ ನ ನರ್ಮದಾ ಜಿಲ್ಲೆಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
November 14th, 11:41 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 15ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12:45ರ ಸುಮಾರಿಗೆ ಅವರು ನರ್ಮದಾ ಜಿಲ್ಲೆಯ ದೇವಮೊಗ್ರಾ ದೇವಾಲಯದಲ್ಲಿ ಪೂಜೆ ಮತ್ತು ದರ್ಶನ ನೆರವೇರಿಸಲಿದ್ದಾರೆ. ನಂತರ, ಮಧ್ಯಾಹ್ನ 2:45ರ ಸುಮಾರಿಗೆ, ಪ್ರಧಾನಮಂತ್ರಿ ಅವರು ನರ್ಮದಾ ಜಿಲ್ಲೆಯ ದೇಡಿಯಾಪಾಡಾಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವದ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು 9,700 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.Congress and RJD only do politics of insult and abuse: PM Modi in Bhabua, Bihar
November 07th, 07:49 pm
In his massive public rally at Bhabua, PM Modi warned everyone about the RJD’s dangerous plan and listed reasons for voters to reject them. He said these Jungle Raj appeasers have gone a step further, becoming a security cover for infiltrators. He reminded people how the Congress’s ‘royal family’ called Chhath Puja a drama and even mocked the Mahakumbh, adding that the NDA is heading towards its biggest victory yet.PM Modi campaigns in Bihar’s Aurangabad and Bhabua
November 07th, 01:45 pm
Continuing his high-voltage election campaign, PM Modi today addressed two massive public meetings in Aurangabad and Bhabua. He said that Bihar has created history in the very first phase of voting. The PM noted that yesterday’s polling recorded the highest turnout ever in the state, with nearly 65% voter participation. He remarked that this clearly shows that the people of Bihar have themselves taken the lead in ensuring the return of the NDA government.RJD and Congress are putting Bihar’s security and the future of its children at risk: PM Modi in Katihar, Bihar
November 03rd, 02:30 pm
In a massive public rally in Katihar, Bihar, PM Modi began with the clarion call, “Phir ek baar - NDA Sarkar, Phir ek baar - Susashan Sarkar.” He accused the RJD and Congress of risking Bihar’s security for votes and questioned whether benefits meant for the poor should be taken away by infiltrators. He remarked that under Nitish Ji’s leadership, NDA brought governance and growth, emphasizing that every single vote will play a role in building a Viksit Bihar.Be it Congress or RJD, their love is only for infiltrators: PM Modi in Saharsa, Bihar
November 03rd, 02:15 pm
Amidst the ongoing election campaigning in Bihar, PM Modi's rally spree continued as he addressed a public meeting in Saharsa. He said that only two days are left for the first phase of voting in Bihar. Many young voters here will be voting for the first time. He urged all first-time voters in Bihar, “Do not let your first vote go to waste. The NDA is forming the government in Bihar and your vote should go to the alliance that is actually winning. Your vote should be for a Viksit Bihar.”Massive public turnout as PM Modi campaigns in Saharsa and Katihar, Bihar
November 03rd, 02:00 pm
Amid the ongoing election campaign in Bihar, PM Modi continued his rally spree, addressing large public meetings in Saharsa and Katihar. He reminded people that only two days remain for the first phase of voting, noting that many young voters will be casting their vote for the first time. Urging them not to waste their first vote, he said, “The NDA is forming the government in Bihar. Your vote should go to the alliance that is actually winning - your vote should be for a Viksit Bihar.”ನವ ರಾಯ್ ಪುರದಲ್ಲಿ ನಡೆದ ಛತ್ತೀಸ್ ಗಢ ರಾಜ್ಯ ರೂಪಿಕರಣದ ರಜತ ಮಹೋತ್ಸವದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ
November 01st, 03:30 pm
ಛತ್ತೀಸ್ ಗಢದ ಗೌರವಾನ್ವಿತ ರಾಜ್ಯಪಾಲ ಶ್ರೀ ರಾಮೆನ್ ಡೇಕಾ ಜಿ, ರಾಜ್ಯದ ಜನಪ್ರಿಯ ಮತ್ತು ಕ್ರಿಯಾಶೀಲ ಮುಖ್ಯಮಂತ್ರಿ ಶ್ರೀ ವಿಷ್ಣು ದೇವ್ ಸಾಯಿ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಹಿರಿಯ ಸಹೋದ್ಯೋಗಿಗಳು, ಶ್ರೀ ಜುವಾಲ್ ಓರಾಮ್ ಜಿ, ಶ್ರೀ ದುರ್ಗಾ ದಾಸ್ ಉಯಿಕೆ ಜಿ ಮತ್ತು ಶ್ರೀ ತೋಖಾನ್ ಸಾಹು ಜಿ, ರಾಜ್ಯ ವಿಧಾನಸಭೆಯ ಸ್ಪೀಕರ್ ಶ್ರೀ ರಮಣ್ ಸಿಂಗ್ ಜಿ, ಉಪಮುಖ್ಯಮಂತ್ರಿ ಶ್ರೀ ಅರುಣ್ ಸಾವೋ ಜಿ ಮತ್ತು ಶ್ರೀ ವಿಜಯ್ ಶರ್ಮಾ ಜಿ, ಸಚಿವರುಗಳೇ, ಸಾರ್ವಜನಿಕ ಪ್ರತಿನಿಧಿಗಳೇ ಮತ್ತು ಛತ್ತೀಸ್ ಗಢದ ಮೂಲೆ ಮೂಲೆಗಳಿಂದ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೇ,ಛತ್ತೀಸ್ ಗಢ ರಜತ ಮಹೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
November 01st, 03:26 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವ ರಾಯ್ ಪುರದಲ್ಲಿ ಛತ್ತೀಸ್ ಗಢ ರಾಜ್ಯ ರಚನೆಯ 25ನೇ ವರ್ಷಾಚರಣೆಯ ಅಂಗವಾಗಿ ಛತ್ತೀಸ್ ಗಢ ರಜತ ಮಹೋತ್ಸವವನ್ನುದ್ದೇಶಿಸಿ ಭಾಷಣ ಮಾಡಿದರು. ರಸ್ತೆಗಳು, ಕೈಗಾರಿಕೆ, ಆರೋಗ್ಯ ರಕ್ಷಣೆ ಮತ್ತು ಇಂಧನದಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡ 14,260 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಮತ್ತು ಪರಿವರ್ತಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಛತ್ತೀಸ್ ಗಢದ ಜನತೆಗೆ ಶುಭಾಶಯ ಕೋರಿದರು, ಇಂದು ಛತ್ತೀಸ್ ಗಢ ರಾಜ್ಯ ರಚನೆಯಾಗಿ 25 ವರ್ಷಗಳನ್ನು ಪೂರೈಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಛತ್ತೀಸ್ ಗಢದ ಎಲ್ಲಾ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದರು.ನವೆಂಬರ್ 1ರಂದು ಛತ್ತೀಸ್ ಗಢಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
October 31st, 12:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 1ರಂದು ಛತ್ತೀಸ್ ಗಢಕ್ಕೆ ಭೇಟಿ ನೀಡಲಿದ್ದಾರೆ.'ವಂದೇ ಮಾತರಂ' ನ ಚೈತನ್ಯವು ಭಾರತದ ಅಮರ ಪ್ರಜ್ಞೆಗೆ ಸಂಬಂಧಿಸಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
October 26th, 11:30 am
ಈ ತಿಂಗಳ ಮನ್ ಕಿ ಬಾತ್ ಭಾಷಣದಲ್ಲಿ, ಅಕ್ಟೋಬರ್ 31 ರಂದು ನಡೆದ ಸರ್ದಾರ್ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯಂದು ಪ್ರಧಾನಿ ಮೋದಿ ಅವರಿಗೆ ಗೌರವ ಸಲ್ಲಿಸಿದರು. ಛಠ್ ಪೂಜಾ ಉತ್ಸವ, ಪರಿಸರ ಸಂರಕ್ಷಣೆ, ಭಾರತೀಯ ನಾಯಿ ತಳಿಗಳು, ಭಾರತೀಯ ಕಾಫಿ, ಬುಡಕಟ್ಟು ಸಮುದಾಯದ ನಾಯಕರು ಮತ್ತು ಸಂಸ್ಕೃತ ಭಾಷೆಯ ಪ್ರಾಮುಖ್ಯತೆಯಂತಹ ಆಸಕ್ತಿದಾಯಕ ವಿಷಯಗಳನ್ನು ಅವರು ಸ್ಪರ್ಶಿಸಿದರು. 'ವಂದೇ ಮಾತರಂ' ಹಾಡಿನ 150 ನೇ ವರ್ಷದ ಬಗ್ಗೆ ಪ್ರಧಾನಿಯವರು ವಿಶೇಷವಾಗಿ ಉಲ್ಲೇಖಿಸಿದರು.ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 01st, 10:45 am
ವೇದಿಕೆಯಲ್ಲಿ ಉಪಸ್ಥಿತರಿರುವ ಗೌರವಾನ್ವಿತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ(ಸರ್ಕಾರ್ಯವ್ಹ) ಶ್ರೀ ದತ್ತಾತ್ರೇಯ ಹೊಸಬಾಳೆ ಜಿ, ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಶೇಖಾವತ್ ಜಿ, ದೆಹಲಿಯ ಜನಪ್ರಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಎಲ್ಲಾ ಸ್ವಯಂಸೇವಕರೆ, ಇತರ ಗಣ್ಯರೆ, ಮಹನೀಯರೆ ಮತ್ತು ಮಹಿಳೆಯರೆ!ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು
October 01st, 10:30 am
ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮೋದಿ ಅವರು, ಎಲ್ಲಾ ನಾಗರಿಕರಿಗೆ ನವರಾತ್ರಿ ಶುಭಾಶಯಗಳನ್ನು ತಿಳಿಸಿದರು, ಇಂದು ಮಹಾ ನವಮಿ ಮತ್ತು ಸಿದ್ಧಿದಾತ್ರಿ ದೇವಿಯ ದಿನವಾಗಿದೆ ಎಂದು ಹೇಳಿದರು. ನಾಳಿನ ವಿಜಯದಶಮಿಯು ಭವ್ಯ ಹಬ್ಬವಾಗಿದ್ದು, ಇದು ಭಾರತೀಯ ಸಂಸ್ಕೃತಿಯ ಅನ್ಯಾಯದ ವಿರುದ್ಧ ನ್ಯಾಯದ ವಿಜಯ, ಸುಳ್ಳಿನ ವಿರುದ್ದ ಸತ್ಯದ ವಿಜಯ ಮತ್ತು ಕತ್ತಲೆಯ ವಿರುದ್ಧ ಬೆಳಕಿನ ವಿಜಯವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನೂರು ವರ್ಷಗಳ ಹಿಂದೆ ಇಂತಹ ಪವಿತ್ರ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದು, ಇದು ಕಾಕತಾಳೀಯವಲ್ಲ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ಪರಂಪರೆಯ ಪುನರುಜ್ಜೀವನ ಇದಾಗಿದ್ದು, ಇದರಲ್ಲಿ ರಾಷ್ಟ್ರೀಯ ಪ್ರಜ್ಞೆಯು ಪ್ರತಿ ಯುಗದ ಸವಾಲುಗಳನ್ನು ಎದುರಿಸಲು ಹೊಸ ರೂಪಗಳಲ್ಲಿ ಪ್ರಕಟವಾಗುತ್ತದೆ ಎಂದು ಅವರು ಹೇಳಿದರು. ಈ ಯುಗದಲ್ಲಿ, ಸಂಘವು ಆ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯ ಸಾಕಾರವಾಗಿದೆ ಎಂದು ಅವರು ಹೇಳಿದರು.ಸ್ವದೇಶಿ ಉತ್ಪನ್ನಗಳು, ವೋಕಲ್ ಫಾರ್ ಲೋಕಲ್ : ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿಯವರ ಹಬ್ಬದ ಕರೆ.
September 28th, 11:00 am
ಈ ತಿಂಗಳ ಮನ್ ಕಿ ಬಾತ್ ಭಾಷಣದಲ್ಲಿ, ಪ್ರಧಾನಿ ಮೋದಿ ಭಗತ್ ಸಿಂಗ್ ಮತ್ತು ಲತಾ ಮಂಗೇಶ್ಕರ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿದರು. ಭಾರತೀಯ ಸಂಸ್ಕೃತಿ, ಮಹಿಳಾ ಸಬಲೀಕರಣ, ದೇಶಾದ್ಯಂತ ಆಚರಿಸಲಾಗುವ ವಿವಿಧ ಹಬ್ಬಗಳು, ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣ, ಸ್ವಚ್ಛತೆ ಮತ್ತು ಖಾದಿ ಮಾರಾಟದಲ್ಲಿನ ಏರಿಕೆಯಂತಹ ಪ್ರಮುಖ ವಿಷಯಗಳ ಬಗ್ಗೆಯೂ ಅವರು ಮಾತನಾಡಿದರು. ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಮಾರ್ಗವು ಸ್ವದೇಶಿತ್ವವನ್ನು ಅಳವಡಿಸಿಕೊಳ್ಳುವುದರಲ್ಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.ಒಡಿಶಾದ ಜಾರ್ಸುಗುಡದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
September 27th, 11:45 am
ಇಲ್ಲಿ ಕೆಲವು ಯುವ ಸ್ನೇಹಿತರು ಅನೇಕ ಕಲಾಕೃತಿಗಳನ್ನು ತಂದಿದ್ದಾರೆ. ಒಡಿಶಾದ ಕಲೆಯ ಮೇಲಿನ ಪ್ರೀತಿ ವಿಶ್ವಪ್ರಸಿದ್ಧವಾಗಿದೆ. ನಾನು ನಿಮ್ಮೆಲ್ಲರಿಂದ ಈ ಉಡುಗೊರೆಗಳನ್ನು ಸ್ವೀಕರಿಸುತ್ತೇನೆ, ನನ್ನ ಎಸ್‌ಪಿಜಿ ಸಹೋದ್ಯೋಗಿಗಳನ್ನು ಈ ಎಲ್ಲಾ ವಸ್ತುಗಳನ್ನು ನಿಮ್ಮಿಂದ ಸಂಗ್ರಹಿಸಲು ವಿನಂತಿಸುತ್ತೇನೆ. ನೀವು ನಿಮ್ಮ ಹೆಸರು ಮತ್ತು ವಿಳಾಸವನ್ನು ಹಿಂಭಾಗದಲ್ಲಿ ಬರೆದರೆ, ಖಂಡಿತವಾಗಿಯೂ ನನ್ನಿಂದ ನಿಮಗೆ ಪತ್ರ ಬರುತ್ತದೆ. ಅಲ್ಲಿ ಹಿಂಭಾಗದಲ್ಲಿ, ಆ ಮಗು ಬಹಳ ಹೊತ್ತಿನಿಂದ ಏನನ್ನೋ ಕೈಯಲ್ಲಿ ಹಿಡಿದಿರುವುದನ್ನು ನಾನು ನೋಡುತ್ತಿದ್ದೇನೆ. ಅವನ ಕೈಗಳು ನೋಯುತ್ತಿರಬೇಕು. ದಯವಿಟ್ಟು ಅವನಿಗೆ ಸಹಾಯ ಮಾಡಿ ಮತ್ತು ಅದನ್ನೂ ಪಡೆಯಿರಿ. ನೀವು ನಿಮ್ಮ ಹೆಸರನ್ನು ಹಿಂಭಾಗದಲ್ಲಿ ಬರೆದಿದ್ದರೆ, ನಾನು ಖಂಡಿತವಾಗಿಯೂ ನಿಮಗೆ ಪತ್ರ ಬರೆಯುತ್ತೇನೆ. ಈ ಕಲಾಕೃತಿಗಳನ್ನು ಸಿದ್ಧಪಡಿಸಿದ್ದಕ್ಕಾಗಿ ನಿಮ್ಮ ಈ ಪ್ರೀತಿಗಾಗಿ ಎಲ್ಲಾ ಯುವಕರು, ಯುವತಿಯರು ಮತ್ತು ಪುಟ್ಟ ಮಕ್ಕಳಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.