ಸ್ಥಳೀಯ ಆಟಿಕೆಗಳ ಪ್ರಚಾರಕರಾಗಬೇಕು : ಪ್ರಧಾನಿ
June 24th, 11:21 am
ಟಾಯ್‌ಕಾಥಾನ್ -2021 ರಲ್ಲಿ ಪಾಲ್ಗೊಂಡವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ಪ್ರಧಾನಿ ಮೋದಿ ಆಟಿಕೆಗಳು ಮತ್ತು ಗೇಮಿಂಗ್‌ನ ಆರ್ಥಿಕ ಅಂಶಗಳನ್ನು ಒತ್ತಿ ಹೇಳಿದರು, ಅವರು ಅದನ್ನು ‘ಟಾಯ್‌ಕಾನಮಿ’ ಎಂದು ಕರೆದರು. ಜಾಗತಿಕ ಆಟಿಕೆ ಮಾರುಕಟ್ಟೆ ಸುಮಾರು 100 ಬಿಲಿಯನ್ ಡಾಲರ್ ಮತ್ತು ಭಾರತವು ಈ ಮಾರುಕಟ್ಟೆಯ 1.5% ನಷ್ಟಿದೆ ಎಂದು ಪ್ರಧಾನಿ ಹೇಳಿದರು. ಭಾರತ ತನ್ನ ಆಟಿಕೆಗಳಲ್ಲಿ ಸುಮಾರು 80% ಆಮದು ಮಾಡಿಕೊಳ್ಳುತ್ತದೆ. ಅಂದರೆ ಕೋಟ್ಯಂತರ ರೂಪಾಯಿಗಳನ್ನು ದೇಶದಿಂದ ಹೊರಹಾಕಲಾಗುತ್ತಿದೆ.ಟಾಯ್ಕಥಾನ್-2021ರ ಸ್ಪರ್ಧಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
June 24th, 11:16 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟಾಯ್ಕಥಾನ್ -2021ರ ಸ್ಪರ್ಧಿಗಳೊಂದಿಗೆ ಇಂದು ವಿಡಿಯೋ ಸಂವಾದದ ಮೂಲಕ ಸಂವಾದ ನಡೆಸಿದರು. ಕೇಂದ್ರ ಸಚಿವ ಶ್ರೀ ಪೀಯೂಷ್ ಗೋಯೆಲ್ ಮತ್ತು ಶ್ರೀ ಸಂಜಯ್ ಧೋತ್ರೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಜೂನ್ 24 ರಂದು ಟಾಯ್ಕಥಾನ್ 2021 ರಲ್ಲಿ ಪಾಲ್ಗೊಂಡಿರುವವರೊಂದಿಗೆ ಪ್ರಧಾನಮಂತ್ರಿ ಸಂವಾದ
June 22nd, 12:25 pm
ಜೂನ್ 24 ರ ಬೆಳಗ್ಗೆ 11 ಗಂಟೆಗೆ ಟಾಯ್ಕಥಾನ್ -2021 ರಲ್ಲಿ ಪಾಲ್ಗೊಂಡಿರುವವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ.