Chandrayaan Mission and PM Modi’s Penchant Towards Space Tech
September 03rd, 02:25 pm
Prime Minister Narendra Modi always had a keen interest in technology and an inclination towards space-tech long before he became the PM. In 2006, when Shri Modi was the Chief Minister of Gujarat, he accompanied the then President APJ Abdul Kalam to the Space Applications Centre (SAC), ISRO, Ahmedabad.ಬೆಂಗಳೂರಿನ ಇಸ್ರೋ ಕೇಂದ್ರದಿಂದ ಮರಳಿದ ನಂತರ ದೆಹಲಿಯಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಆಂಗ್ಲ ಅನುವಾದ
August 26th, 01:18 pm
ಇಂದು ಬೆಳಿಗ್ಗೆ ನಾವು ಬೆಂಗಳೂರಿಗೆ ಭೇಟಿ ನೀಡಿದ್ದೆ. ನಾನು ಬೆಳಿಗ್ಗೆಯೇ ಇಲ್ಲಿಗೆ ಆಗಮಿಸಿದೆ ಮತ್ತು ದೇಶಕ್ಕಾಗಿ ಅದ್ಭುತ ಸಾದನೆಯನ್ನು ಮಾಡಿದ ವಿಜ್ಞಾನಿಗಳನ್ನು ಭೇಟಿ ಮಾಡಲು ನಿರ್ಧರಿಸಿದೆ. ಹಾಗಾಗಿ ನಾನು ಇಂದು ಬೆಳಗಿನ ಜಾವವೇ ಬೆಂಗಳೂರಿಗೆ ಹೋಗಿದ್ದೆ. ಆದರೆ ಸುರ್ಯೋದಯಕ್ಕೂ ಮುನ್ನವೇ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಜನರು ಚಂದ್ರಯಾನದ ಯಶಸ್ಸುನ್ನು ಸಂಭ್ರಮಿಸಿದ ರೀತಿ ನಂಬಲಾಗದಷ್ಟು ಸ್ಪೂರ್ತಿದಾಯಕವಾಗಿತ್ತು. ಮತ್ತು ಈಗ ಸೂರ್ಯನು ತೀವ್ರವಾದ ಬಿಸಿಲಿನಲ್ಲಿ ಸುಡುತ್ತಿದ್ದಾನೆ, ಅದು ಚರ್ಮವನ್ನೂ ಸಹ ಸುಡುತ್ತದೆ.ಇಲ್ಲಿಗೆ ಬಂದಿರುವ ನಿಮ್ಮೊಂದಿಗೆ ಈ ತೀವ್ರವಾದ ಬಿಸಿಲಿನಲ್ಲಿ ಚಂದ್ರಯಾನದ ಯಶಸ್ಸಿನ ಸಂತೋಷದಲ್ಲಿ ಪಾಲ್ಗೊಳ್ಳಲು ಮತ್ತು ಆಚರಣೆಯ ಆನಂದ ಹಂಚಿಕೊಳ್ಳುವ ಸೌಭಾಗ್ಯ ನನಗೆ ದೊರೆತಿದೆ. ಅದಕ್ಕಾಗಿ ನಾನು ಎಲ್ಲರನ್ನೂ ಅಭಿನಂದಿಸುತ್ತೇನೆ.ದೆಹಲಿಗೆ ಆಗಮಿಸಿದ ಪ್ರಧಾನಮಂತ್ರಿಯವರಿಗೆ ನಾಗರಿಕರಿಂದ ಭವ್ಯ ಸ್ವಾಗತ
August 26th, 12:33 pm
ದೆಹಲಿಗೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ʻಚಂದ್ರಯಾನ -3ʼ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿದ ಹಿನ್ನೆಲೆಯಲ್ಲಿ ಇಸ್ರೋ ತಂಡದೊಂದಿಗೆ ಸಂವಹನ ನಡೆಸಿದ ನಂತರ ಪ್ರಧಾನಿ ಮೋದಿ ಇಂದು ಬೆಂಗಳೂರಿನಿಂದ ದೆಹಲಿಗೆ ಬಂದಿಳಿದರು. ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ನ 4 ದಿನಗಳ ಪ್ರವಾಸದ ನಂತರ ಪ್ರಧಾನಿ ಮೋದಿ ನೇರವಾಗಿ ಬೆಂಗಳೂರಿಗೆ ತೆರಳಿದ್ದರು. ಶ್ರೀ ಜೆ.ಪಿ. ನಡ್ಡಾ ಅವರು ಪ್ರಧಾನಮಂತ್ರಿಯವರನ್ನು ಸ್ವಾಗತಿಸಿದರು. ಪ್ರಧಾನಿಯವರ ವಿದೇಶಿ ಭೇಟಿಯ ಯಶಸ್ಸಿಗಾಗಿ ಹಾಗೂ ಭಾರತೀಯ ವಿಜ್ಞಾನಿಗಳ ಮಹತ್ವದ ಸಾಧನೆಗಾಗಿ ಪ್ರಧಾನ ಮಂತ್ರಿಗಳನ್ನು ನಡ್ಡಾ ಅವರು ಸನ್ಮಾನಿಸಿದರು.ಚಂದ್ರಯಾನ -3 ಮಿಷನ್ ಯಶಸ್ಸಿನ ಕುರಿತು ಇಸ್ರೊ ತಂಡವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
August 26th, 08:15 am
ಇಂದು, ನಿಮ್ಮೆಲ್ಲರ ನಡುವೆ ನಾನು ಹೊಸ ರೀತಿಯ ಸಂತೋಷವನ್ನು ಅನುಭವಿಸುತ್ತಿದ್ದೇನೆ. ಬಹುಶಃ ಬಹಳ ಅಪರೂಪದ ಸಂದರ್ಭಗಳಲ್ಲಿ ಒಬ್ಬರು ಅಂತಹ ಸಂತೋಷವನ್ನು ಅನುಭವಿಸುತ್ತಾರೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಒಬ್ಬರ ಮನಸ್ಸು ಸಂಪೂರ್ಣವಾಗಿ ಸಂತೋಷದಿಂದ ತುಂಬಿದಾಗ ಮತ್ತು ಅದರ ಪರಿಣಾಮವಾಗಿ ಅವನು ಪ್ರಕ್ಷುಬ್ಧನಾಗುವಾಗ ಇಂತಹ ಘಟನೆಗಳು ಸಂಭವಿಸುತ್ತವೆ. ಈ ಬಾರಿ ನನಗೂ ಅದೇ ರೀತಿಯದ್ದೊಂದು ಸಂಭವಿಸಿತು, ಮತ್ತು ನಾನು ತುಂಬಾ ಪ್ರಕ್ಷುಬ್ಧನಾಗಿದ್ದೆ. ನಾನು ದಕ್ಷಿಣ ಆಫ್ರಿಕಾದಲ್ಲಿದ್ದೆ, ಮತ್ತು ನಂತರ ಗ್ರೀಸ್ ನಲ್ಲಿ ಒಂದು ಕಾರ್ಯಕ್ರಮವಿತ್ತು. ಆದ್ದರಿಂದ ನಾನು ಅಲ್ಲಿರಬೇಕಾಗಿತ್ತು ಆದರೆ ನನ್ನ ಮನಸ್ಸು ಸಂಪೂರ್ಣವಾಗಿ ನಿಮ್ಮ ಮೇಲೆ ಕೇಂದ್ರೀಕೃತವಾಗಿತ್ತು. ಆದರೆ ಕೆಲವೊಮ್ಮೆ ನಾನು ನಿಮ್ಮೆಲ್ಲರಿಗೂ ಅನ್ಯಾಯ ಮಾಡುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ. ನನ್ನ ಚಡಪಡಿಕೆ ನಿಮಗೆ ಸಮಸ್ಯೆಯನ್ನು ಸೃಷ್ಟಿಸುತ್ತದೆ. ನೀವು ಮುಂಜಾನೆ ಇಲ್ಲಿಗೆ ಬರಬೇಕಾಯಿತು ಆದರೆ ನಾನು ಬಂದು ನಿಮಗೆ ನಮಸ್ಕರಿಸಲು ಬಯಸುತ್ತೇನೆ. ಇದು ನಿಮಗೆ ಅನಾನುಕೂಲವಾಗಿರಬೇಕು, ಆದರೆ ನಾನು ಭಾರತಕ್ಕೆ ಬಂದಿಳಿದ ಕೂಡಲೇ ನಿಮ್ಮನ್ನು ನೋಡಲು ಬಯಸುತ್ತೇನೆ. ನಾನು ನಿಮ್ಮೆಲ್ಲರಿಗೂ ನಮಸ್ಕರಿಸಲು, ನಿಮ್ಮ ಕಠಿಣ ಪರಿಶ್ರಮಕ್ಕೆ ನಮಸ್ಕರಿಸಲು, ನಿಮ್ಮ ತಾಳ್ಮೆಗೆ ನಮಸ್ಕರಿಸಲು, ನಿಮ್ಮ ಉತ್ಸಾಹಕ್ಕೆ ವಂದಿಸಲು, ನಿಮ್ಮ ಚೈತನ್ಯಕ್ಕೆ ವಂದಿಸಲು ಮತ್ತು ನಿಮ್ಮ ಸ್ಫೂರ್ತಿಗೆ ವಂದಿಸಲು ಬಯಸುತ್ತೇನೆ. ನೀವು ದೇಶವನ್ನು ಯಾವ ಎತ್ತರಕ್ಕೆ ಕೊಂಡೊಯ್ದಿದ್ದೀರಿ ಎಂಬುದು ಸಾಮಾನ್ಯ ಯಶಸ್ಸಲ್ಲ. ಇದು ಅನಂತ ಬಾಹ್ಯಾಕಾಶದಲ್ಲಿ ಭಾರತದ ವೈಜ್ಞಾನಿಕ ಸಾಮರ್ಥ್ಯದ ಘೋಷಣೆಯಾಗಿದೆ.ಚಂದ್ರಯಾನ-3ರ ಯಶಸ್ಸಿನ ಕುರಿತು ಇಸ್ರೋ ತಂಡವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ
August 26th, 07:49 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ರೀಸ್ ನಿಂದ ಆಗಮಿಸಿದ ನಂತರ ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ (ISTRAC) ಗೆ ಭೇಟಿ ನೀಡಿದರು ಮತ್ತು ಚಂದ್ರಯಾನ-3 ರ ಯಶಸ್ಸಿನ ಕುರಿತು ಇಸ್ರೋ ತಂಡವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನ ಮಂತ್ರಿಯವರು ಚಂದ್ರಯಾನ-3 ಮಿಷನ್ ನಲ್ಲಿ ಭಾಗಿಯಾಗಿರುವ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿದರು ಮತ್ತು ಅವರೊಂದಿಗೆ ಸಂವಾದ ನಡೆಸಿದರು, ಅಲ್ಲಿ ಅವರಿಗೆ ಚಂದ್ರಯಾನ-3 ಮಿಷನ್ ನಲ್ಲಿನ ಸಂಶೋಧನೆಗಳು ಮತ್ತು ಪ್ರಗತಿಯ ಬಗ್ಗೆ ವಿವರಿಸಲಾಯಿತು.