For the BJP, the aspirations and pride of tribal communities have always been paramount: PM Modi in Chaibasa

November 04th, 12:00 pm

PM Modi addressed a massive election rally in Chaibasa, Jharkhand. Addressing the gathering, the PM said, This election in Jharkhand is taking place at a time when the entire country is moving forward with a resolution to become developed by 2047. The coming 25 years are very important for both the nation and Jharkhand. Today, there is a resounding call across Jharkhand... ‘Roti, Beti, Maati Ki Pukar, Jharkhand Mein…Bhajpa, NDA Sarkar’.”

PM Modi campaigns in Jharkhand’s Garhwa and Chaibasa

November 04th, 11:30 am

Prime Minister Narendra Modi today addressed massive election rallies in Garhwa and Chaibasa, Jharkhand. Addressing the gathering, the PM said, This election in Jharkhand is taking place at a time when the entire country is moving forward with a resolution to become developed by 2047. The coming 25 years are very important for both the nation and Jharkhand. Today, there is a resounding call across Jharkhand... ‘Roti, Beti, Maati Ki Pukar, Jharkhand Mein…Bhajpa, NDA Sarkar’.”

ಗುಜರಾತ್ ನ ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

October 31st, 07:31 am

ಸರ್ದಾರ್ ಸಾಹೇಬರ ಸ್ಫೂರ್ತಿದಾಯಕ ಮಾತುಗಳು... ಏಕತಾ ಪ್ರತಿಮೆಯ ಬಳಿ ಈ ಭವ್ಯ ಕಾರ್ಯಕ್ರಮ... ಏಕ್ತಾ ನಗರದ ಬೆರಗುಗೊಳಿಸುವ ನೋಟ, ಮತ್ತು ಇಲ್ಲಿನ ಭವ್ಯವಾದ ಪ್ರದರ್ಶನಗಳು ... ಮಿನಿ ಇಂಡಿಯಾದ ಒಂದು ನೋಟ... ಎಲ್ಲವೂ ತುಂಬಾ ನಂಬಲಾಗದು, ತುಂಬಾ ಸ್ಫೂರ್ತಿದಾಯಕವಾಗಿದೆ. ಆಗಸ್ಟ್ 15 ಮತ್ತು ಜನವರಿ 26 ರಂತೆ... ಅಕ್ಟೋಬರ್ 31 ರಂದು ನಡೆಯುವ ಈ ಕಾರ್ಯಕ್ರಮವು ಇಡೀ ರಾಷ್ಟ್ರವನ್ನು ಹೊಸ ಶಕ್ತಿಯಿಂದ ತುಂಬುತ್ತದೆ. ರಾಷ್ಟ್ರೀಯ ಏಕತಾ ದಿವಸ್ (ರಾಷ್ಟ್ರೀಯ ಏಕತಾ ದಿನ) ದಂದು ನಾನು ದೇಶದ ಎಲ್ಲ ನಾಗರಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಿದರು, ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಪಾಲ್ಗೊಂಡರು

October 31st, 07:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಯಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಪಾಲ್ಗೊಂಡರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ಜಯಂತಿಯಂದು ಪ್ರಧಾನಮಂತ್ರಿ ಅವರು ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ಪ್ರತಿವರ್ಷ ಅಕ್ಟೋಬರ್ 31 ರಂದು ಆಚರಿಸಲಾಗುವ ರಾಷ್ಟ್ರೀಯ ಏಕತಾ ದಿವಸ್ ಸಂದರ್ಭದಲ್ಲಿ ಶ್ರೀ ನರೇಂದ್ರ ಮೋದಿ ಅವರು ಏಕತಾ ದಿವಸ್ ಪ್ರತಿಜ್ಞೆಯನ್ನು ಬೋಧಿಸಿದರು ಮತ್ತು ಏಕತಾ ದಿವಸ್ ಮೆರವಣಿಗೆಗೆ ಸಾಕ್ಷಿಯಾದರು.

3ನೇ ಕೌಟಿಲ್ಯ ಅರ್ಥಶಾಸ್ತ್ರ ಸಮ್ಮೇಳನ-2024 ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

October 04th, 07:45 pm

ಜಗತ್ತಿನ 2 ಪ್ರಮುಖ ಪ್ರದೇಶಗಳು ಯುದ್ಧದ ಸ್ಥಿತಿಯಲ್ಲಿ ಇರುವ ಸಮಯದಲ್ಲೇ ಈ ಸಮ್ಮೇಳನ ಆಯೋಜಿಸಲಾಗಿದೆ. ಈ ಪ್ರದೇಶಗಳು ಜಾಗತಿಕ ಆರ್ಥಿಕತೆಗೆ ನಿರ್ಣಾಯಕವಾಗಿವೆ, ವಿಶೇಷವಾಗಿ ಇಂಧನ ಭದ್ರತೆಯ ವಿಷಯದಲ್ಲಿ. ಇಂತಹ ಮಹತ್ವದ ಜಾಗತಿಕ ಅನಿಶ್ಚಿಯದ ನಡುವೆ, ನಾವು ‘ಭಾರತದ ಯುಗ’ವನ್ನು ಚರ್ಚಿಸಲು ಇಲ್ಲಿ ಸೇರಿದ್ದೇವೆ. ಇಂದು ಭಾರತದಲ್ಲಿರುವ ನಂಬಿಕೆ ಅನನ್ಯವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಭಾರತದ ಆತ್ಮವಿಶ್ವಾಸವು ಅಸಾಧಾರಣವಾಗಿದೆ ಎಂಬುದನ್ನು ಸಹ ಇದು ತೋರಿಸುತ್ತದೆ.

ನವದೆಹಲಿಯಲ್ಲಿ 3ನೇ ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶ(ಸಮ್ಮೇಳನ) ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

October 04th, 07:44 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶ(ಸಮ್ಮೇಳನ) ಉದ್ದೇಶಿಸಿ ಭಾಷಣ ಮಾಡಿದರು. ಹಣಕಾಸು ಸಚಿವಾಲಯದ ಸಹಭಾಗಿತ್ವದಲ್ಲಿ “ದಿ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್” ಆಯೋಜಿಸಿರುವ ಕೌಟಿಲ್ಯ ಆರ್ಥಶಾಸ್ತ್ರ(ಆರ್ಥಿಕ) ಸಮ್ಮೇಳನವು ಹಸಿರು ಪರಿವರ್ತನೆ ಯೋಜನೆಗಳಿಗೆ ಹಣಕಾಸು ಒದಗಿಸುವುದು, ಭೂ-ಆರ್ಥಿಕ ಬೇರ್ಪಡಿಕೆ(ವಿಭಾಗೀಕರಣ) ಮತ್ತು ಬೆಳವಣಿಗೆಯ ಪರಿಣಾಮಗಳು, ಹೊಂದಾಣಿಕೆ ಕಾಪಾಡುವ ನೀತಿ ಕ್ರಮದ ತತ್ವಗಳು ಮತ್ತು ಇತರೆ ವಸ್ತು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.

ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರೊಂದಿಗೆ ಪ್ರಧಾನಮಂತ್ರಿಯವರ ಸಂವಾದ

September 06th, 04:15 pm

ಸರ್, ಸಂಸ್ಕೃತ ಶಿಕ್ಷಕಿನಾಗಿ, ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ನನ್ನ ಕನಸಾಗಿತ್ತು. ಈ ಸಂಸ್ಕೃತಿಯು ನಮ್ಮ ಪುರಾತನ ಬೋಧನೆಗಳು ಅಥವಾ ಸಂಸ್ಕಾರಗಳ ಮೂಲಕ ಜೀವನದ ಮೌಲ್ಯಗಳು ಮತ್ತು ಆದರ್ಶಗಳನ್ನು ನೀಡುತ್ತದೆ. ಈ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಾನು ನನ್ನ ವಿದ್ಯಾರ್ಥಿಗಳಲ್ಲಿ ಸಂಸ್ಕೃತದ ಬಗ್ಗೆ ಆಸಕ್ತಿಯನ್ನು ಬೆಳೆಸಿದ್ದೇನೆ ಮತ್ತು ಅದನ್ನು ನೈತಿಕ ಶಿಕ್ಷಣದ ಅಡಿಪಾಯವನ್ನಾಗಿ ಮಾಡಿದ್ದೇನೆ. ವಿವಿಧ ಶ್ಲೋಕಗಳ ಮೂಲಕ, ಅವರಿಗೆ ಜೀವನದ ಮೌಲ್ಯಗಳನ್ನು ಕಲಿಸಲು ನಾನು ಪ್ರಯತ್ನಿಸಿದ್ದೇನೆ.

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪಡೆದ ಶಿಕ್ಷಕರೊಂದಿಗೆ ಪ್ರಧಾನ ಮಂತ್ರಿ ಸಂವಾದ

September 06th, 04:04 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 7, ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.

ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳಿಂದ ದೇಶದ ಯುವಕರು ಪ್ರಯೋಜನ ಪಡೆದಿದ್ದಾರೆ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

August 25th, 11:30 am

ನನ್ನ ಪ್ರಿಯ ದೇಶವಾಸಿಗಳೆ ನಮಸ್ಕಾರ. ಮತ್ತೊಮ್ಮೆ, 'ಮನದ ಮಾತಿಗೆ' ನನ್ನ ಕುಟುಂಬದ ಎಲ್ಲಾ ಸದಸ್ಯರಿಗೆ ಸ್ವಾಗತ. ಇಂದು ಮತ್ತೊಮ್ಮೆ ನಾವು ದೇಶದ ಸಾಧನೆಗಳು ಮತ್ತು ದೇಶದ ಜನತೆಯ ಸಾಮೂಹಿಕ ಪ್ರಯತ್ನಗಳ ಬಗ್ಗೆ ಮಾತನಾಡಲಿದ್ದೇವೆ. 21 ನೇ ಶತಮಾನದ ಭಾರತದಲ್ಲಿ ವಿಕಸಿತ ಭಾರತದ ಅಡಿಪಾಯವನ್ನು ಬಲಪಡಿಸುವ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಉದಾಹರಣೆಗೆ, ಇದೇ ಆಗಸ್ಟ್ 23 ರಂದು, ನಾವೆಲ್ಲರೂ ಪ್ರಥಮ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಿದೆವು. ನೀವೆಲ್ಲರೂ ಈ ದಿನವನ್ನು ಆಚರಿಸಿರಬಹುದು ಎಂದು ನಾನು ಭಾವಿಸುತ್ತೇನೆ, ಮತ್ತೊಮ್ಮೆ ಚಂದ್ರಯಾನ-3 ರ ಯಶಸ್ಸನ್ನು ಆಚರಿಸಿರಬಹುದು. ಕಳೆದ ವರ್ಷ, ಇದೇ ದಿನದಂದು, ಚಂದ್ರಯಾನ-3 ಚಂದ್ರನ ದಕ್ಷಿಣ ಭಾಗದಲ್ಲಿರುವ ಶಿವ-ಶಕ್ತಿ ಪಾಯಿಂಟ್‌ನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿತ್ತು. ಭಾರತ ಈ ಅಮೋಘ ಸಾಧನೆ ಮಾಡಿದ ವಿಶ್ವದ ಮೊದಲ ದೇಶವಾಯಿತು.

78 ನೇ ಸ್ವಾತಂತ್ರ್ಯೋತ್ಸವದಂದು ಕೆಂಪು ಕೋಟೆ ಆವರಣದಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

August 15th, 03:04 pm

ಭಾಷಣದ ಮುಖ್ಯಾಂಶಗಳು ಈ ಕೆಳಕಂಡಂತಿವೆ

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

August 15th, 01:09 pm

ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಅಸಂಖ್ಯಾತ ಪೂಜನೀಯ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸುವ ಶುಭ ದಿನ, ಶುಭ ಕ್ಷಣ ಇದಾಗಿದೆ. ಅವರು ತಮ್ಮ ಜೀವನದುದ್ದಕ್ಕೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳೊಂದಿಗೆ ಧೈರ್ಯದಿಂದ ನೇಣುಗಂಬವನ್ನು ಅಪ್ಪಿಕೊಂಡರು. ಇದು ಅವರ ಧೈರ್ಯ, ಸಂಕಲ್ಪ ಮತ್ತು ದೇಶಭಕ್ತಿ ಸದ್ಗುಣಗಳನ್ನು ಸ್ಮರಿಸುವ ಹಬ್ಬವಾಗಿದೆ. ಈ ವೀರಕಲಿಗಳಿಂದಾಗಿಯೇ ಈ ಸ್ವಾತಂತ್ರ್ಯದ ಹಬ್ಬದಂದು ಮುಕ್ತವಾಗಿ ಉಸಿರಾಡುವ ಸೌಭಾಗ್ಯ ನಮಗೆ ದಕ್ಕದೆ. ದೇಶವು ಅವರಿಗೆ ಬಹಳ ಋಣಿಯಾಗಿದೆ. ಅಂತಹ ಪ್ರತಿಯೊಬ್ಬ ಮಹಾನ್ ವ್ಯಕ್ತಿಯ ಬಗ್ಗೆ ನಮ್ಮ ಗೌರವ ವನ್ನು ವ್ಯಕ್ತಪಡಿಸೋಣ.

ಭಾರತವು 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ

August 15th, 07:30 am

78 ನೇ ಸ್ವಾತಂತ್ರ್ಯ ದಿನದಂದು, ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಭಾರತದ ಭವಿಷ್ಯದ ದೃಷ್ಟಿಕೋನವನ್ನು ವಿವರಿಸಿದರು. 2036 ರ ಒಲಂಪಿಕ್ಸ್‌ನ ಆತಿಥ್ಯದಿಂದ ಸೆಕ್ಯುಲರ್ ಸಿವಿಲ್ ಕೋಡ್ ಅನ್ನು ಚಾಂಪಿಯನ್ ಮಾಡುವವರೆಗೆ, ಪಿಎಂ ಮೋದಿ ಅವರು ಭಾರತದ ಸಾಮೂಹಿಕ ಪ್ರಗತಿ ಮತ್ತು ಪ್ರತಿಯೊಬ್ಬ ನಾಗರಿಕನ ಸಬಲೀಕರಣಕ್ಕೆ ಒತ್ತು ನೀಡಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಹೊಸ ಹುರುಪಿನೊಂದಿಗೆ ಮುಂದುವರಿಸುವ ಕುರಿತು ಮಾತನಾಡಿದರು. ನಾವೀನ್ಯತೆ, ಶಿಕ್ಷಣ ಮತ್ತು ಜಾಗತಿಕ ನಾಯಕತ್ವದ ಮೇಲೆ ಕೇಂದ್ರೀಕರಿಸಿದ ಅವರು 2047 ರ ವೇಳೆಗೆ ಭಾರತವು ವಿಕಸಿತ ಭಾರತವಾಗುವುದನ್ನು ತಡೆಯಲು ಯಾವುದೂ ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದರು.

ಮುಂಬೈ ಭಾರತದ ಆರ್ಥಿಕ ಶಕ್ತಿ ಕೇಂದ್ರವಾಗಿದೆ: ಮಹಾರಾಷ್ಟ್ರದ ಮುಂಬೈನಲ್ಲಿ ಪ್ರಧಾನಿ ಮೋದಿ

May 17th, 07:30 pm

ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಭವಿಷ್ಯದ ಬಗ್ಗೆ ಬಲವಾದ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದರು ಮತ್ತು ಭಾರತದ ಅಭಿವೃದ್ಧಿಯಲ್ಲಿ ಮುಂಬೈ ವಹಿಸುವ ಮಹತ್ವದ ಪಾತ್ರವನ್ನು ಎತ್ತಿ ತೋರಿಸಿದರು. ಪ್ರಗತಿಪರ ನೀತಿಗಳ ಮುಂದುವರಿಕೆ ಮತ್ತು ದೃಢವಾದ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ನಾಗರಿಕರಿಗೆ ಕರೆ ನೀಡಿದರು.

ಮಹಾರಾಷ್ಟ್ರದ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು

May 17th, 07:13 pm

ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಭವಿಷ್ಯದ ಬಗ್ಗೆ ಬಲವಾದ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದರು ಮತ್ತು ಭಾರತದ ಅಭಿವೃದ್ಧಿಯಲ್ಲಿ ಮುಂಬೈ ವಹಿಸುವ ಮಹತ್ವದ ಪಾತ್ರವನ್ನು ಎತ್ತಿ ತೋರಿಸಿದರು. ಪ್ರಗತಿಪರ ನೀತಿಗಳ ಮುಂದುವರಿಕೆ ಮತ್ತು ದೃಢವಾದ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ನಾಗರಿಕರಿಗೆ ಕರೆ ನೀಡಿದರು.

ಜಮ್ಮುವಿನಲ್ಲಿ ಹಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

February 20th, 12:00 pm

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜೀ, ಸಂಪುಟದಲ್ಲಿ ನನ್ನ ಸಹೋದ್ಯೋಗಿ ಜಿತೇಂದ್ರ ಸಿಂಗ್ ಜೀ, ಸಂಸತ್ತಿನಲ್ಲಿ ನನ್ನ ಸಹಚರರಾದ ಜುಗಲ್ ಕಿಶೋರ್ ಜೀ ಮತ್ತು ಗುಲಾಮ್ ಅಲಿ ಜೀ ಮತ್ತು ಜಮ್ಮು ಮತ್ತು ಕಾಶ್ಮೀರದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಜೈ ಹಿಂದ್! ಡೋಗ್ರಾಗಳು ತುಂಬಾ ಸಿಹಿ ಎಂದು ಎಲ್ಲರೂ ಹೇಳುತ್ತಾರೆ ಮತ್ತು ಅವರ ಭಾಷೆಯೂ ಸಹ. ಡೋಗ್ರಿ ಕವಯಿತ್ರಿ ಪದ್ಮಾ ಸಚ್ದೇವ್ ಹೇಳುತ್ತಾರೆ - ಡೋಗ್ರಾಗಳ ಭಾಷೆ ಸಿಹಿಯಾಗಿದೆ, ಮತ್ತು ಡೋಗ್ರಾಗಳು ಸಕ್ಕರೆಯಷ್ಟೇ ಸಿಹಿಯಾಗಿರುತ್ತಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 32,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿಯವರು ಉದ್ಘಾಟನೆ, ರಾಷ್ಟ್ರ ಸಮರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದರು

February 20th, 11:45 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಮ್ಮುವಿನಲ್ಲಿ 32,000 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಯೋಜನೆಗಳು ಆರೋಗ್ಯ, ಶಿಕ್ಷಣ, ರೈಲು, ರಸ್ತೆ, ವಾಯುಯಾನ, ಪೆಟ್ರೋಲಿಯಂ ಮತ್ತು ನಾಗರಿಕ ಮೂಲಸೌಕರ್ಯ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿವೆ. ಜಮ್ಮು ಮತ್ತು ಕಾಶ್ಮೀರದ ಸುಮಾರು 1500 ಹೊಸ ಸರ್ಕಾರಿ ಉದ್ಯೋಗಗಳಿಗೆ ಪ್ರಧಾನಿ ನೇಮಕಾತಿ ಆದೇಶಗಳನ್ನು ವಿತರಿಸಿದರು. ‘ವಿಕಸಿತ ಭಾರತ ವಿಕಸಿತ ಜಮ್ಮು’ಕಾರ್ಯಕ್ರಮದ ಅಂಗವಾಗಿ ಅವರು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

Veer Bal Diwas symbolizes the resolve to do anything to protect Bhartiyata: PM Modi

December 26th, 12:03 pm

Prime Minister Narendra Modi addressed the program marking ‘Veer Bal Diwas’ at Bharat Mandapam in New Delhi. Addressing the gathering, the Prime Minister remarked that the nation is remembering the immortal sacrifices of Veer Sahibzade and deriving inspiration from them as a new chapter of Veer Bal Diwas unfolds for India in the Azadi Ka Amrit Kaal. PM Modi emphasized, “This day reminds us that age does not matter when it comes to heights of bravery.

​​​​​​​'ವೀರ ಬಾಲ ದಿವಸ್' ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ

December 26th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ `ಭಾರತ್ ಮಂಟಪ’ದಲ್ಲಿ ನಡೆದ 'ವೀರ ಬಾಲ ದಿವಸ್' ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಶ್ರೀ ಮೋದಿ ಅವರು ಮಕ್ಕಳಿಂದ ಗಾಯನ ಹಾಗೂ ಮೂರು ಸಮರ ಕಲೆಗಳ ಪ್ರದರ್ಶನಗಳಿಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದೆಹಲಿಯಲ್ಲಿ ಯುವಜನರ ಜಾಥಾಕ್ಕೆ ಹಸಿರು ನಿಶಾನೆ ತೋರಿದರು.

ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಸಂಗ್ರಹಿತ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

December 25th, 04:31 pm

ಮೊದಲನೆಯದಾಗಿ, ನಿಮ್ಮೆಲ್ಲರಿಗೂ ಮೆರ್ರಿ ಕ್ರಿಸ್ಮಸ್! ಇಂದು ಭಾರತ ಮತ್ತು ಭಾರತೀಯತೆಯಲ್ಲಿ ನಂಬಿಕೆ ಹೊಂದಿರುವ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುವ ದಿನ. ಇಂದು ಮಹಾಮನ ಮದನ್ ಮೋಹನ್ ಮಾಳವೀಯ ಅವರ ಜನ್ಮದಿನ. ಇಂದು ಅಟಲ್ ಜಿ ಅವರ ಜನ್ಮದಿನವೂ ಆಗಿದೆ. ಈ ಪವಿತ್ರ ಸಂದರ್ಭದಲ್ಲಿ ನಾನು ಮಹಾಮನ ಮಾಳವೀಯ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ ಮತ್ತು ಅಟಲ್ ಜೀ ಅವರಿಗೆ ಗೌರವಪೂರ್ವಕ ನಮನ ಸಲ್ಲಿಸುತ್ತೇನೆ. ಅಟಲ್ ಜೀ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ದೇಶವು ಉತ್ತಮ ಆಡಳಿತ ದಿನವನ್ನು ಆಚರಿಸುತ್ತಿದೆ. ಉತ್ತಮ ಆಡಳಿತ ದಿನದಂದು ನಾನು ಎಲ್ಲಾ ನಾಗರಿಕರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

​​​​​​​ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ 162ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ʻಪಂಡಿತ್‌ ಮಾಳವೀಯ ಅವರ ಸಮಗ್ರ ಕೃತಿ ಸಂಕಲನʼ ಪುಸ್ತಕವನ್ನು ಲೋಕಾರ್ಪಣೆ ಮಾಡಿದ ಪ್ರಧಾನಮಂತ್ರಿಗಳು

December 25th, 04:30 pm

ಮಹಾಮಾನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ 162ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ʻಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಸಮಗ್ರ ಕೃತಿ ಸಂಕಲನʼದ 11 ಸಂಪುಟಗಳ ಸರಣಿಯ ಪೈಕಿ ಮೊದಲ ಸಂಪುಟವನ್ನು ಲೋಕಾರ್ಪಣೆ ಮಾಡಿದರು. ಶ್ರೀ ಮೋದಿ ಅವರು ಪಂಡಿತ್ ಮದನ್ ಮೋಹನ್ ಮಾಳವೀಯ ಅವರಿಗೆ ಪುಷ್ಪ ನಮನವನ್ನೂ ಸಲ್ಲಿಸಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಖ್ಯಾತ ಸ್ಥಾಪಕ ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ಜನರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಅವಿರತವಾಗಿ ಶ್ರಮಿಸಿದ ಶ್ರೇಷ್ಠ ವಿದ್ವಾಂಸ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿ ಮಾಳವೀಯ ಅವರನ್ನು ಸ್ಮರಿಸಲಾಗುತ್ತದೆ.