ತಂಜಾವೂರು ನಿಜಕ್ಕೂ ಸುಂದರವಾಗಿದೆ: ಪ್ರಧಾನಮಂತ್ರಿ
December 08th, 09:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಂಜಾವೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಲಿವುಡ್ ನಟ ಮೈಕೆಲ್ ಡೌಗ್ಲಾಸ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ಗೆ ಉತ್ತರಿಸಿದ್ದಾರೆ.ಚೆನ್ನೈಯಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ/ ಹಸ್ತಾಂತರ/ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಷಣ
February 14th, 11:31 am
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, “ ಈ ಯೋಜನೆಗಳು ನಾವಿನ್ಯತೆ ಮತ್ತು ಸ್ಥಳೀಯ ಅಭಿವೃದ್ಧಿಯ ಸಂಕೇತ. ಇವುಗಳಿಂದ ತಮಿಳುನಾಡು ಮತ್ತಷ್ಟು ಪ್ರಗತಿಯಾಗಲಿದೆ” 630 ಕಿಲೋಮೀಟರ್ ಅನಿಕಟ್ ಕಾಲುವೆ ವ್ಯವಸ್ಥೆಯ ಆಧುನೀಕರಣಕ್ಕೆ ಇಂದು ಶಿಲಾನ್ಯಾಸ ನೆರವೇರಿಸಿದ್ದು, ಇದರಿಂದ ತಂಜಾವೂರು ಮತ್ತು ಪುದುಕೊಟ್ಟಾಯ್ ಭಾಗಕ್ಕೆ ಹೆಚ್ಚಿನ ರೀತಿಯಲ್ಲಿ ನೆರವು ದೊರೆಯಲಿದೆ. ಮುಂಬರುವ ದಿನಗಳಲ್ಲಿ ಇದರ ಪರಿಣಾಮ ಅತ್ಯಂತ ದೊಡ್ಡದಾಗಿರಲಿದೆ. ಇದರಿಂದ 2.27 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಲಿದೆ ಎಂದು ಹೇಳಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ತಮಿಳುನಾಡಿನಲ್ಲಿ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಹಾಗು ಉದ್ಘಾಟನೆ
February 14th, 11:30 am
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, “ ಈ ಯೋಜನೆಗಳು ನಾವಿನ್ಯತೆ ಮತ್ತು ಸ್ಥಳೀಯ ಅಭಿವೃದ್ಧಿಯ ಸಂಕೇತ. ಇವುಗಳಿಂದ ತಮಿಳುನಾಡು ಮತ್ತಷ್ಟು ಪ್ರಗತಿಯಾಗಲಿದೆ” 630 ಕಿಲೋಮೀಟರ್ ಅನಿಕಟ್ ಕಾಲುವೆ ವ್ಯವಸ್ಥೆಯ ಆಧುನೀಕರಣಕ್ಕೆ ಇಂದು ಶಿಲಾನ್ಯಾಸ ನೆರವೇರಿಸಿದ್ದು, ಇದರಿಂದ ತಂಜಾವೂರು ಮತ್ತು ಪುದುಕೊಟ್ಟಾಯ್ ಭಾಗಕ್ಕೆ ಹೆಚ್ಚಿನ ರೀತಿಯಲ್ಲಿ ನೆರವು ದೊರೆಯಲಿದೆ. ಮುಂಬರುವ ದಿನಗಳಲ್ಲಿ ಇದರ ಪರಿಣಾಮ ಅತ್ಯಂತ ದೊಡ್ಡದಾಗಿರಲಿದೆ. ಇದರಿಂದ 2.27 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಲಿದೆ ಎಂದು ಹೇಳಿದರು.ಫೆಬ್ರವರಿ 14, ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
February 12th, 06:10 pm
2021ರ ಫೆಬ್ರವರಿ 14ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ 11.15ರ ಸುಮಾರಿಗೆ ಪ್ರಧಾನಮಂತ್ರಿಯವರು ಚೆನ್ನೈನಲ್ಲಿ ಹಲವು ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಲೋಕಾರ್ಪಣೆಯನ್ನು ಮಾಡಲಿದ್ದಾರೆ ಮತ್ತು ಅರ್ಜುನ್ ಪ್ರಮುಖ ಯುದ್ಧ ಟ್ಯಾಂಕ್ (ಎಂ.ಕೆ. -1ಎ) ಅನ್ನು ಸೇನಾಪಡೆಗೆ ಹಸ್ತಾಂತರಿಸಲಿದ್ದಾರೆ. ಮಧ್ಯಾಹ್ನ 3.30ರವೇಳೆಗೆ ಪ್ರಧಾನಮಂತ್ರಿಯವರು, ಕೊಚ್ಚಿಯಲ್ಲಿ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡಿ ಕೆಲವು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಈ ರಾಜ್ಯಗಳ ಪ್ರಗತಿಯ ಪಥಕ್ಕೆ ಮಹತ್ವದ ವೇಗ ನೀಡಲಿವೆ ಮತ್ತು ಸಂಪೂರ್ಣ ಅಭಿವೃದ್ಧಿಯ ಸಾಮರ್ಥ್ಯಕ್ಕೆ ವೇಗ ನೀಡಲು ನೆರವಾಗಲಿವೆ.ಸ್ಥಳೀಯ ಆಟಿಕೆಗಳಿಗೆ ಆದ್ಯತೆಯ ಸಮಯ: ಪ್ರಧಾನಿ
August 30th, 03:43 pm
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಮನ್ ಕಿ ಬಾತ್ ನಲ್ಲಿ, ಗಾಂಧಿನಗರ ಮಕ್ಕಳ ವಿಶ್ವವಿದ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಶಿಕ್ಷಣ ಸಚಿವಾಲಯ ಮತ್ತು ಸೂಕ್ಷ್ಮ-ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯಗಳೊಂದಿಗೆ ಆಟಿಕೆಗಳ ಬಗ್ಗೆ ನಡೆದ ಸಮಾಲೋಚನೆಗಳ ಕುರಿತು ಮಾತನಾಡಿದರು. ಮಕ್ಕಳಿಗೆ ಹೊಸ ಆಟಿಕೆಗಳ ಲಭ್ಯತೆ ಮತ್ತು ಭಾರತವನ್ನು ಆಟಿಕೆ ಉತ್ಪಾದನೆಯ ದೊಡ್ಡ ಕೇಂದ್ರವನ್ನಾಗಿಸುವ ಕುರಿತು ಸಮಾಲೋಚನೆಗಳನ್ನು ನಡೆಸಲಾಯಿತು ಎಂದು ಅವರು ಹೇಳಿದರು. ಆಟಿಕೆಗಳು ಚಟುವಟಿಕೆಯನ್ನು ವೃದ್ಧಿಸುವುದಲ್ಲದೆ, ಅವು ನಮ್ಮ ಆಕಾಂಕ್ಷೆಗಳಿಗೆ ರೆಕ್ಕೆ ನೀಡುತ್ತವೆ ಎಂದು ಪ್ರಧಾನಿ ಹೇಳಿದರು. ಆಟಿಕೆಗಳು, ಮನರಂಜನೆಗೆ ಮಾತ್ರವಲ್ಲ, ಅವು ಬುದ್ಧಿಯನ್ನು ಬೆಳೆಸುತ್ತವೆ ಮತ್ತು ಉದ್ದೇಶವನ್ನು ಸಾಧಿಸುತ್ತವೆ ಎಂದು ಅವರು ಹೇಳಿದರು.