The Food Security Saturation Campaign launched in Surat will be an inspiration for other districts of the country as well: PM Modi
March 07th, 05:34 pm
PM Modi launched the Surat Food Security Saturation Campaign Programme in Limbayat, Surat and distributed the benefits under the National Food Security Act to over 2.3 lakh beneficiaries. PM stated that the government's goal is to provide adequate nutrition to every family in the country. He recognized Surat as a hub for entrepreneurship with a significant number of MSMEs. He urged women across the country to share their inspiring stories on the NaMo app.PM Modi launches the Surat Food Security Saturation Campaign Programme
March 07th, 05:30 pm
PM Modi launched the Surat Food Security Saturation Campaign Programme in Limbayat, Surat and distributed the benefits under the National Food Security Act to over 2.3 lakh beneficiaries. PM stated that the government's goal is to provide adequate nutrition to every family in the country. He recognized Surat as a hub for entrepreneurship with a significant number of MSMEs. He urged women across the country to share their inspiring stories on the NaMo app.ಬಿಹಾರದ ಭಾಗಲ್ಪುರದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
February 24th, 02:35 pm
ವೇದಿಕೆಯಲ್ಲಿರುವ ನಮ್ಮ ಪ್ರೀತಿಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಿ ಅವರೊಂದಿಗೆ ಗೌರವಾನ್ವಿತ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಜಿ ಇದ್ದಾರೆ, ಅವರು ಬಿಹಾರದ ಅಭಿವೃದ್ಧಿಗೆ ತಮ್ಮ ಸಮರ್ಪಣೆ ಮೂಲಕ ವ್ಯಾಪಕ ಮೆಚ್ಚುಗೆ ಪಡೆದಿದ್ದಾರೆ. ನನ್ನ ಗೌರವಾನ್ವಿತ ಸಂಪುಟ ಸಹೋದ್ಯೋಗಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಜಿ, ಜಿತನ್ ರಾಮ್ ಮಾಂಝಿ ಜಿ, ಲಲ್ಲನ್ ಸಿಂಗ್ ಜಿ, ಗಿರಿರಾಜ್ ಸಿಂಗ್ ಜಿ, ಚಿರಾಗ್ ಪಾಸ್ವಾನ್ ಜಿ - ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಜಿ, ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಜಿ, ವಿಜಯ್ ಸಿನ್ಹಾ ಜಿ, ರಾಜ್ಯದ ಇತರೆ ಸಚಿವರೆ, ಸಾರ್ವಜನಿಕ ಪ್ರತಿನಿಧಿಗಳೆ, ಗಣ್ಯರೆ ಮತ್ತು ಬಿಹಾರದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,ಪಿಎಂ ಕಿಸಾನ್ ನ 19ನೇ ಕಂತನ್ನು ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಬಿಹಾರದ ಭಾಗಲ್ ಪುರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
February 24th, 02:30 pm
ರೈತರ ಕಲ್ಯಾಣವನ್ನು ಖಾತ್ರಿಪಡಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಭಾಗಲ್ ಪುರದಲ್ಲಿ ಪಿಎಂ ಕಿಸಾನ್ ನ 19ನೇ ಕಂತನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಭಾಗವಹಿಸಿದ ಎಲ್ಲ ಗಣ್ಯರು ಮತ್ತು ಜನರನ್ನು ಶ್ರೀ ಮೋದಿ ಸ್ವಾಗತಿಸಿದರು. ಮಹಾಕುಂಭದ ಪವಿತ್ರ ಅವಧಿಯಲ್ಲಿ ಮಂದಾರಾಚಲದ ಭೂಮಿಯಲ್ಲಿ ಹೆಜ್ಜೆ ಹಾಕುವುದು ಒಂದು ದೊಡ್ಡ ಸೌಭಾಗ್ಯ ಎಂದು ಅವರು ಹೇಳಿದರು. ಈ ಸ್ಥಳವು ಆಧ್ಯಾತ್ಮಿಕತೆ, ಪರಂಪರೆ ಮತ್ತು ವಿಕ್ಷಿತ್ ಭಾರತದ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಇದು ಹುತಾತ್ಮ ತಿಲ್ಕಾ ಮಾಂಝಿ ಅವರ ಭೂಮಿ ಮತ್ತು ಸಿಲ್ಕ್ ಸಿಟಿ ಎಂದು ಕೂಡಾ ಪ್ರಸಿದ್ಧವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಬಾಬಾ ಅಜ್ಜೈಬಿನಾಥ್ ಅವರ ಪವಿತ್ರ ಭೂಮಿಯಲ್ಲಿ ಮುಂಬರುವ ಮಹಾ ಶಿವರಾತ್ರಿಗೆ ಸಿದ್ಧತೆಗಳು ನಡೆದಿವೆ ಎಂದು ಅವರು ಉಲ್ಲೇಖಿಸಿದರು. ಇಂತಹ ಪವಿತ್ರ ಸಮಯದಲ್ಲಿ ಪಿಎಂ ಕಿಸಾನ್ ನ 19 ನೇ ಕಂತನ್ನು ಬಿಡುಗಡೆ ಮಾಡುವ ಅದೃಷ್ಟ ನನ್ನದಾಗಿದೆ ಮತ್ತು ಸುಮಾರು 22,000 ಕೋಟಿ ರೂ.ಗಳನ್ನು ನೇರ ಲಾಭ/ನಗದು ವರ್ಗಾವಣೆಯ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅವರು ಹೇಳಿದರು.ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆ 2025ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಷಣ
February 24th, 10:35 am
ಮೊದಲನೆಯದಾಗಿ, ನಾನು ಇಲ್ಲಿಗೆ ಬರುವುದರಲ್ಲಿ ವಿಳಂಬವಾದದ್ದಕ್ಕೆ ಕ್ಷಮೆಯಿರಲಿ. ನಿನ್ನೆ ನಾನು ಇಲ್ಲಿಗೆ ಬಂದಾಗ, ಇಂದು 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿವೆ ಎಂದು ತಿಳಿಯಿತು. ರಾಜಭವನದಿಂದ ನಾನು ಹೊರಡುವ ಸಮಯ ಮತ್ತು ಅವರ ಪರೀಕ್ಷೆಯ ಸಮಯ ಒಂದೇ ಆಗುತ್ತಿತ್ತು. ಭದ್ರತಾ ಕಾರಣಗಳಿಂದ ರಸ್ತೆಗಳನ್ನು ಮುಚ್ಚಿದರೆ, ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ತಲುಪಲು ತೊಂದರೆಯಾಗುವ ಸಾಧ್ಯತೆ ಇತ್ತು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದೆಂದು, ಎಲ್ಲಾ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ತಲುಪಿದ ನಂತರವೇ ರಾಜಭವನದಿಂದ ಹೊರಡಲು ನಿರ್ಧರಿಸಿದೆ. ಆದ್ದರಿಂದ, ನಾನು ಉದ್ದೇಶಪೂರ್ವಕವಾಗಿ 15-20 ನಿಮಿಷಗಳ ಕಾಲ ನನ್ನ ಹೊರಡುವಿಕೆಯನ್ನು ವಿಳಂಬ ಮಾಡಿದೆ. ಇದರಿಂದ ನಿಮಗೆಲ್ಲರಿಗೂ ಸ್ವಲ್ಪ ಅನಾನುಕೂಲವಾಯಿತು. ಮತ್ತೊಮ್ಮೆ ನಿಮ್ಮೆಲ್ಲರಿಗೂ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ 2025 ಅನ್ನು ಉದ್ಘಾಟಿಸಿದರು
February 24th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ (ಜಿಐಎಸ್) 2025 ಅನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ಇದ್ದುದರಿಂದ ಮತ್ತು ಕಾರ್ಯಕ್ರಮಕ್ಕೆ ಬರುವ ದಾರಿಯಲ್ಲಿ ತಮ್ಮ ಭದ್ರತಾ ಕ್ರಮಗಳು ವಿದ್ಯಾರ್ಥಿಗಳಿಗೆ ಅನಾನುಕೂಲತೆಯನ್ನುಂಟುಮಾಡಬಹುದಾಗಿದ್ದರಿಂದ ಕಾರ್ಯಕ್ರಮಕ್ಕೆ ಬರುವುದು ವಿಳಂಬವಾಗಿದ್ದಕ್ಕಾಗಿ ಕ್ಷಮೆಯಾಚಿಸಿದರು. ರಾಜ ಭೋಜ ಭೂಮಿಗೆ ಹೂಡಿಕೆದಾರರು ಮತ್ತು ವ್ಯಾಪಾರ ನಾಯಕರನ್ನು ಸ್ವಾಗತಿಸುವುದು ನನಗೆ ಅತ್ಯಂತ ಹೆಮ್ಮೆಯ ವಿಷಯ ಎಂದು ಶ್ರೀ ಮೋದಿ ದು ಹೇಳಿದರು. ವಿಕಸಿತ ಮಧ್ಯಪ್ರದೇಶ ಅಥವಾ ಅಭಿವೃದ್ಧಿ ಹೊಂದಿದ ಮಧ್ಯಪ್ರದೇಶವು ವಿಕಸಿತ ಭಾರತದತ್ತ ಪ್ರಯಾಣದಲ್ಲಿ ಅಗತ್ಯವಾಗಿರುವುದರಿಂದ ಇಂದಿನ ಕಾರ್ಯಕ್ರಮವು ಮುಖ್ಯವಾಗಿದೆ ಎಂದು ಅವರು ಹೇಳಿದರು. ಶೃಂಗಸಭೆಯ ಅದ್ಭುತ ಸಂಘಟನೆಗಾಗಿ ಅವರು ಮಧ್ಯಪ್ರದೇಶ ಸರ್ಕಾರವನ್ನು ಅಭಿನಂದಿಸಿದರು.ಫೆಬ್ರವರಿ 23 ರಿಂದ 25 ರವರೆಗೆ ಮಧ್ಯಪ್ರದೇಶ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
February 22nd, 02:05 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 23 ರಿಂದ 25, 2025 ರವರೆಗೆ ಮಧ್ಯಪ್ರದೇಶ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 23, 2025 ರಂದು, ಅವರು ಮಧ್ಯಪ್ರದೇಶದ ಛತ್ತರ್ ಪುರ ಜಿಲ್ಲೆಯಲ್ಲಿ ಪ್ರಯಾಣಿಸಲಿದ್ದಾರೆ ಮತ್ತು ಅಂದು ಮಧ್ಯಾಹ್ನ 2 ಗಂಟೆಗೆ, ಪ್ರಧಾನಮಂತ್ರಿಯವರು ಬಾಗೇಶ್ವರ್ ಧಾಮ್ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಫೆಬ್ರವರಿ 24 ,2025 ರಂದು, ಸುಮಾರು 10 ಗಂಟೆಗೆ, ಪ್ರಧಾನಮಂತ್ರಿಯವರು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ 2025 ಅನ್ನು ಉದ್ಘಾಟಿಸಲಿದ್ದಾರೆ. ನಂತರ, ಅವರು ಬಿಹಾರದ ಭಾಗಲ್ಪುರಕ್ಕೆ ಪ್ರಯಾಣಿಸಲಿದ್ದಾರೆ ಮತ್ತು ಮಧ್ಯಾಹ್ನ 2:15 ರ ಸುಮಾರಿಗೆ, ಪ್ರಧಾನಮಂತ್ರಿಯವರು ಪಿಎಂ ಕಿಸಾನ್ ಯೋಜನೆಯ 19 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ ಮತ್ತು ಬಿಹಾರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಹಾಗೂ ಆನಂತರ ಅವರು ಅಸ್ಸಾಂನ ಗುವಾಹಟಿಗೆ ಪ್ರಯಾಣಿಸಲಿದ್ದಾರೆ ಮತ್ತು ಸಂಜೆ 6 ಗಂಟೆಗೆ ಅವರು ಜುಮೋಯಿರ್ ಬಿನಂದಿನಿ (ಮೆಗಾ ಜುಮೋಯಿರ್) 2025 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 25 ರಂದು, ಬೆಳಗ್ಗೆ ಸುಮಾರು 10:45 ಗಂಟೆಗೆ, ಪ್ರಧಾನಮಂತ್ರಿಯವರು ಗುವಾಹಟಿಯಲ್ಲಿ ಅಡ್ವಾಂಟೇಜ್ ಅಸ್ಸಾಂ 2.0 ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025 ಅನ್ನು ಉದ್ಘಾಟಿಸಲಿದ್ದಾರೆ.ಭಾರತ್ ಟೆಕ್ಸ್ 2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣದ ಕನ್ನಡ ಅನುವಾದ
February 16th, 04:15 pm
ಭಾರತ್ ಮಂಟಪ್ ಇಂದು 2ನೇ ಆವೃತ್ತಿಯ ಭಾರತ್ ಟೆಕ್ಸ್ ಗೆ ಆತಿಥ್ಯವಹಿಸುತ್ತಿದೆ. ಈ ಕಾರ್ಯಕ್ರಮವು ನಮ್ಮ ಪರಂಪರೆಯ ಸಂಭ್ರಮಾಚರಣೆ ಮಾತ್ರವಲ್ಲ, ವಿಕಸಿತ ಭಾರತ(ಅಭಿವೃದ್ಧಿ ಹೊಂದಿದ ಭಾರತ)ದ ವಿಪುಲ ಸಾದ್ಯತೆಗಳನ್ನು ಪ್ರತಿಬಿಂಬಿಸುತ್ತದೆ. ನಾವು ನೆಟ್ಟ ಬೀಜವು ಈಗ ವೇಗವಾಗಿ ಬೃಹತ್ ಆಲದ ಮರವಾಗಿ ಬೆಳೆಯುತ್ತಿರುವುದು ರಾಷ್ಟ್ರಕ್ಕೆ ಅಪಾರ ಸಂತೋಷದ ವಿಷಯ. ಭಾರತ್ ಟೆಕ್ಸ್ ಪ್ರಮುಖ ಜಾಗತಿಕ ಜವಳಿ ಕಾರ್ಯಕ್ರಮವಾಗಿ ವಿಕಸನಗೊಳ್ಳುತ್ತಿದೆ. ಈ ಬಾರಿ, ಮೌಲ್ಯ ಚಿತ್ರಪಟಲವನ್ನು ಸಂಪೂರ್ಣವಾಗಿ ಪ್ರತಿನಿಧಿಸಲಾಗುತ್ತದೆ, ಇದರಲ್ಲಿ 12 ಸಂಬಂಧಿತ ಗುಂಪುಗಳು ಒಟ್ಟಾಗಿ ಭಾಗವಹಿಸುತ್ತವೆ. ಹೆಚ್ಚುವರಿಯಾಗಿ, ಪರಿಕರಗಳು, ಉಡುಪುಗಳು, ಯಂತ್ರೋಪಕರಣಗಳು, ರಾಸಾಯನಿಕಗಳು ಮತ್ತು ಬಣ್ಣಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ. ಪ್ರಪಂಚದಾದ್ಯಂತದ ನೀತಿ ನಿರೂಪಕರು, ಸಿಇಒಗಳು ಮತ್ತು ಉದ್ಯಮ ನಾಯಕರ ನಡುವಿನ ಒಳಗೊಳ್ಳುವಿಕೆ, ಸಹಯೋಗ ಮತ್ತು ಪಾಲುದಾರಿಕೆಗೆ ಭಾರತ್ ಟೆಕ್ಸ್ ಒಂದು ಪ್ರಬಲ ವೇದಿಕೆಯಾಗಿ ಹೊರಹೊಮ್ಮುತ್ತಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಎಲ್ಲಾ ಪಾಲುದಾರರ ಬದ್ಧತೆಯ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ ಮತ್ತು ಇದರಲ್ಲಿ ಭಾಗಿಯಾಗಿರುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆಭಾರತ್ ಟೆಕ್ಸ್ 2025 ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
February 16th, 04:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಭಾರತ್ ಮಂಟಪದಲ್ಲಿ ಭಾರತ್ ಟೆಕ್ಸ್ 2025 ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಮಳಿಗೆಗಳನ್ನು ವೀಕ್ಷಿಸಿದರು. ನಂತರ ನೆರದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎಲ್ಲರನ್ನೂ ಭಾರತ್ ಟೆಕ್ಸ್ 2025ಗೆ ಸ್ವಾಗತಿಸಿದರು ಮತ್ತು ಭಾರತ್ ಮಂಟಪ್ 2ನೇ ಆವೃತ್ತಿಯ ಭಾರತ್ ಟೆಕ್ಸ್ ಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಈ ಕಾರ್ಯಕ್ರಮವು ನಮ್ಮ ಪರಂಪರೆಯ ಬಗ್ಗೆ ಮತ್ತು ಭಾರತಕ್ಕೆ ಹೆಮ್ಮೆಯ ವಿಷಯವಾಗಿದ್ದ ವಿಕಸಿತ ಭಾರತದ ಭವಿಷ್ಯದ ಬಗ್ಗೆ ಒಂದು ಒಳನೋಟವನ್ನು ನೀಡಿತು ಎಂದು ಅವರು ಹೇಳಿದರು. ಭಾರತ್ ಟೆಕ್ಸ್ ಈಗ ಬೃಹತ್ ಜಾಗತಿಕ ಜವಳಿ ಕಾರ್ಯಕ್ರಮವಾಗುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಮೌಲ್ಯ ಸರಣಿಯ ಚಿತ್ರಪಟಲಕ್ಕೆ ಸಂಬಂಧಿಸಿದ ಎಲ್ಲಾ ಹನ್ನೆರಡು ಸಮುದಾಯಗಳು ಈ ಬಾರಿ ಕಾರ್ಯಕ್ರಮದ ಭಾಗವಾಗಿವೆ ಎಂದು ಅವರು ಹೇಳಿದರು. ಪರಿಕರಗಳು, ಉಡುಪುಗಳು, ಯಂತ್ರೋಪಕರಣಗಳು, ರಾಸಾಯನಿಕಗಳು ಮತ್ತು ಬಣ್ಣಗಳ ಪ್ರದರ್ಶನಗಳು ಸಹ ಇದ್ದವು ಎಂದು ಅವರು ಹೇಳಿದರು. ನೀತಿ ನಿರೂಪಕರು, ಸಿಇಒಗಳು ಮತ್ತು ಉದ್ಯಮದ ನಾಯಕರಿಗೆ ಭಾರತ್ ಟೆಕ್ಸ್ ತೊಡಗಿಸಿಕೊಳ್ಳುವಿಕೆ, ಸಹಯೋಗ ಮತ್ತು ಪಾಲುದಾರಿಕೆಗೆ ಬಲವಾದ ವೇದಿಕೆಯಾಗುತ್ತಿದೆ ಎಂದು ಪ್ರಧಾನಿ ಬಲವಾಗಿ ಪ್ರತಿಪಾದಿಸಿದರು.ಫೆಬ್ರವರಿ 16 ರಂದು ದೆಹಲಿಯಲ್ಲಿ ನಡೆಯಲಿರುವ “ಭಾರತ್ ಟೆಕ್ಸ್ 2025”ರಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ
February 15th, 01:56 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 16, 2025 ರಂದು ಸಂಜೆ 4 ಗಂಟೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುವ “ಭಾರತ್ ಟೆಕ್ಸ್ 2025”ರಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಪ್ಯಾರೀಸ್ ನಲ್ಲಿ ಭಾರತ-ಫ್ರಾನ್ಸ್ ಸಿಇಒ ಫೋರಂ ಉದ್ದೇಶಿಸಿ ಪ್ರಧಾನಮಂತ್ರಿ ಮಾಡಿದ ಭಾಷಣದ ಅನುವಾದ
February 12th, 12:45 am
ಇಲ್ಲಿ ಉಪಸ್ಥಿತರಿರುವ ಭಾರತ ಮತ್ತು ಫ್ರಾನ್ಸ್ ನ ಕೈಗಾರಿಕಾ ನಾಯಕರೇ,14ನೇ ಭಾರತ-ಫ್ರಾನ್ಸ್ ಸಿಇಒ ಫೋರಂ ಉದ್ದೇಶಿಸಿ ಪ್ರಧಾನಮಂತ್ರಿ ಯವರಿಂದ ಭಾಷಣ
February 12th, 12:25 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಘನತೆವೆತ್ತ ಶ್ರೀ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಪ್ಯಾರಿಸ್ ನಲ್ಲಿ 14ನೇ ಭಾರತ-ಫ್ರಾನ್ಸ್ ಸಿಇಒ ಫೋರಂ ಅನ್ನು ಉದ್ದೇಶಿಸಿ ಜಂಟಿಯಾಗಿ ಮಾತನಾಡಿದರು. ರಕ್ಷಣೆ, ಏರೋಸ್ಪೇಸ್, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಮೂಲಸೌಕರ್ಯ, ಸುಧಾರಿತ ಉತ್ಪಾದನೆ, ಕೃತಕ ಬುದ್ಧಿಮತ್ತೆ, ಜೀವನ-ವಿಜ್ಞಾನ, ಕ್ಷೇಮ ಮತ್ತು ಜೀವನಶೈಲಿ ಮತ್ತು ಆಹಾರ ಮತ್ತು ಆತಿಥ್ಯ ಮುಂತಾದ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ, ಎರಡೂ ಕಡೆಯ ಕಂಪನಿಗಳ ವೈವಿಧ್ಯಮಯ ಗುಂಪಿನ ಸಿಇಒಗಳನ್ನು ಫೋರಂ ಒಟ್ಟುಗೂಡಿಸಿತು.ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದ ಕುರಿತು ಪ್ರಧಾನಮಂತ್ರಿಯವರ ಉತ್ತರ
February 04th, 07:00 pm
ಗೌರವಾನ್ವಿತ ರಾಷ್ಟ್ರಪತಿಯವರ ಭಾಷಣಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಇಲ್ಲಿ ಹಾಜರಿದ್ದೇನೆ. ನಿನ್ನೆ ಮತ್ತು ಇಂದು ತಡರಾತ್ರಿಯವರೆಗೆ, ಎಲ್ಲಾ ಗೌರವಾನ್ವಿತ ಸಂಸದರು ಈ ಕೃತಜ್ಞತಾ ನಿರ್ಣಯವನ್ನು ತಮ್ಮ ಅಭಿಪ್ರಾಯಗಳಿಂದ ಶ್ರೀಮಂತಗೊಳಿಸಿದರು. ಅನೇಕ ಗೌರವಾನ್ವಿತ ಅನುಭವಿ ಸಂಸದರು ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದ ಸಂಪ್ರದಾಯದಂತೆ, ಅಗತ್ಯವಿದ್ದಲ್ಲಿ ಪ್ರಶಂಸೆ ವ್ಯಕ್ತವಾಯಿತು, ಸಮಸ್ಯೆಗಳಿದ್ದಲ್ಲಿ ಕೆಲವು ಟೀಕೆಗಳೂ ಕೇಳಿಬಂದವು. ಇದು ಸಹಜ. ಸಭಾಧ್ಯಕ್ಷರೇ, ದೇಶದ ಜನತೆ ನನಗೆ ಹದಿನಾಲ್ಕು ಬಾರಿ ಈ ಸ್ಥಾನದಲ್ಲಿ ಕುಳಿತು ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುವ ಅವಕಾಶವನ್ನು ಕರುಣಿಸಿರುವುದು ನನ್ನ ಸೌಭಾಗ್ಯ. ಆದ್ದರಿಂದ, ಇಂದು ನಾನು ಜನತೆಗೆ ಅತ್ಯಂತ ಗೌರವದಿಂದ ಕೃತಜ್ಞತೆ ಸಲ್ಲಿಸುತ್ತೇನೆ. ಹಾಗೆಯೇ, ಈ ಚರ್ಚೆಯಲ್ಲಿ ಪಾಲ್ಗೊಂಡು ಅದನ್ನು ಶ್ರೀಮಂತಗೊಳಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು.ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉತ್ತರ
February 04th, 06:55 pm
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ನಿನ್ನೆ ಮತ್ತು ಇಂದು ಚರ್ಚೆಗಳಲ್ಲಿ ಭಾಗವಹಿಸಿದ ಎಲ್ಲಾ ಗೌರವಾನ್ವಿತ ಸಂಸದರ ಕೊಡುಗೆಯನ್ನು ಶ್ಲಾಘಿಸಿದರು ಮತ್ತು ಪ್ರಜಾಪ್ರಭುತ್ವದ ಸಂಪ್ರದಾಯವು ಅಗತ್ಯವಿರುವಲ್ಲಿ ಹೊಗಳಿಕೆ ಮತ್ತು ಅಗತ್ಯವಿರುವಲ್ಲಿ ಕೆಲವು ನಕಾರಾತ್ಮಕ ಟೀಕೆಗಳನ್ನು ಒಳಗೊಂಡಿರುತ್ತದೆ, ಇದು ಸಹಜ ಎಂದು ಹೇಳಿದರು. ರಾಷ್ಟ್ರಪತಿಯವರ ಭಾಷಣಕ್ಕೆ 14 ನೇ ಬಾರಿಗೆ ಕೃತಜ್ಞತೆ ಸಲ್ಲಿಸುವ ಅವಕಾಶವನ್ನು ಜನರಿಂದ ಪಡೆಯುವ ಮಹಾನ್ ಸವಲತ್ತು ದೊರೆತಿದೆ ಎಂದು ಹೇಳಿದ ಅವರು, ನಾಗರಿಕರಿಗೆ ತಮ್ಮ ಗೌರವಪೂರ್ವಕ ವಂದನೆಗಳನ್ನು ಸಲ್ಲಿಸಿದರು ಮತ್ತು ಪ್ರಸ್ತಾಪವನ್ನು ತಮ್ಮ ಆಲೋಚನೆಗಳೊಂದಿಗೆ ಶ್ರೀಮಂತಗೊಳಿಸಿದ್ದಕ್ಕಾಗಿ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.Eastern India is a growth engine in the development of the country, Odisha plays a key role in this: PM
January 28th, 11:30 am
PM Modi inaugurated the Utkarsh Odisha – Make in Odisha Conclave 2025 in Bhubaneswar, highlighting Eastern India's role in national growth. He emphasized Odisha's historical trade significance, growing opportunities, and its potential to lead in various industries. The PM encouraged investors to seize the moment for Odisha’s development and praised the state’s contributions to New India’s progress.PM Modi inaugurates the 'Utkarsh Odisha' - Make in Odisha Conclave 2025 in Bhubaneswar
January 28th, 11:00 am
PM Modi inaugurated the Utkarsh Odisha – Make in Odisha Conclave 2025 in Bhubaneswar, highlighting Eastern India's role in national growth. He emphasized Odisha's historical trade significance, growing opportunities, and its potential to lead in various industries. The PM encouraged investors to seize the moment for Odisha’s development and praised the state’s contributions to New India’s progress.ರಾಜಸ್ಥಾನದ ಜೈಪುರದಲ್ಲಿ “ರೈಸಿಂಗ್ ರಾಜಸ್ಥಾನ್ ಗ್ಲೋಬಲ್ ಇನ್ವೆಸ್ಟ್ ಮೆಂಟ್ ಸಮ್ಮಿಟ್ 2024”ರ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
December 09th, 11:00 am
ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಹರಿಭಾವು ಬಗಡೆ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಜಿ ಶರ್ಮಾ, ರಾಜಸ್ಥಾನ ಸರ್ಕಾರದ ಸಚಿವರೆ, ಸಂಸದರೆ, ವಿಧಾನಸಭೆ ಸದಸ್ಯರೆ, ಉದ್ಯಮ ಸಹೋದ್ಯೋಗಿಗಳೆ, ವಿವಿಧ ರಾಯಭಾರಿಗಳೆ, ರಾಯಭಾರಿ ಪ್ರತಿನಿಧಿಗಳೆ, ಇತರೆ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ,ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 09th, 10:34 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಜೈಪುರದ ಜೈಪುರ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ (ಜೆಇಸಿಸಿ) ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆ 2024 ಮತ್ತು ರಾಜಸ್ಥಾನ ಗ್ಲೋಬಲ್ ಬಿಸಿನೆಸ್ ಎಕ್ಸ್ ಪೋವನ್ನು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಜಸ್ಥಾನದ ಯಶಸ್ಸಿನ ಪಯಣದಲ್ಲಿ ಇಂದು ಮತ್ತೊಂದು ವಿಶೇಷ ದಿನವಾಗಿದೆ ಎಂದರು. ಪಿಂಕ್ ಸಿಟಿ ಜೈಪುರದಲ್ಲಿ ನಡೆಯುತ್ತಿರುವ ರೈಸಿಂಗ್ ರಾಜಸ್ಥಾನ್ ಗ್ಲೋಬಲ್ ಇನ್ವೆಸ್ಟ್ಮೆಂಟ್ ಶೃಂಗಸಭೆ 2024ಕ್ಕೆ ಆಗಮಿಸಿರುವ ಎಲ್ಲ ಉದ್ಯಮ ಮತ್ತು ವಾಣಿಜ್ಯ ಮುಖಂಡರು, ಹೂಡಿಕೆದಾರರು, ಪ್ರತಿನಿಧಿಗಳನ್ನು ಅವರು ಅಭಿನಂದಿಸಿದರು. ಈ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅವರು ರಾಜಸ್ಥಾನ ಸರ್ಕಾರವನ್ನೂ ಅಭಿನಂದಿಸಿದರು.ನವದೆಹಲಿಯಲ್ಲಿ ಆಯೋಜಿತವಾಗಿದ್ದ ಅಷ್ಟಲಕ್ಷ್ಮೀ ಮಹೋತ್ಸವದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
December 06th, 02:10 pm
ಅಸ್ಸಾಂ ಮುಖ್ಯಮಂತ್ರಿ, ಶ್ರೀ ಹಿಮಂತ ಬಿಸ್ವಾ ಶರ್ಮಾ ಜಿ, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಜಿ, ತ್ರಿಪುರಾ ಮುಖ್ಯಮಂತ್ರಿ ಶ್ರೀ ಮಾಣಿಕ್ ಸಹಾ ಜಿ, ಸಿಕ್ಕಿಂ ಮುಖ್ಯಮಂತ್ರಿ, ಶ್ರೀ ಪ್ರೇಮ್ ಸಿಂಗ್ ತಮಾಂಗ್ ಜಿ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಜಿ ಮತ್ತು ಶ್ರೀ ಸುಕಾಂತ ಮಜುಂದಾರ್ ಜಿ, ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿ, ಮಿಜೋರಾಂ ಮತ್ತು ನಾಗಾಲ್ಯಾಂಡ್ ಸರ್ಕಾರಗಳ ಸಚಿವರೆ, ಇಲ್ಲಿರುವ ಇತರೆ ಜನಪ್ರತಿನಿಧಿಗಳೆ, ಈಶಾನ್ಯ ಭಾಗದ ಸಹೋದರ, ಸಹೋದರಿಯರೆ, ಮಹಿಳೆಯರೆ ಮತ್ತು ಮಹನೀಯರೇ!ಅಷ್ಟಲಕ್ಷ್ಮಿ ಮಹೋತ್ಸವ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 06th, 02:08 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ ಮಂಟಪದಲ್ಲಿಂದು ಅಷ್ಟಲಕ್ಷ್ಮಿ ಮಹೋತ್ಸವ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಎಲ್ಲ ಗಣ್ಯರನ್ನು ಸ್ವಾಗತಿಸಿದ ಶ್ರೀ ಮೋದಿ, ಇದು ಬಾಬಾಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿವಸವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು 75 ವರ್ಷಗಳನ್ನು ಪೂರೈಸಿದ್ದು, ಎಲ್ಲಾ ನಾಗರಿಕರಿಗೂ ಸ್ಫೂರ್ತಿಯಾಗಿದೆ. ಭಾರತದ ಎಲ್ಲಾ ನಾಗರಿಕರ ಪರವಾಗಿ ಶ್ರೀ ಮೋದಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿದರು.