ಎಡಪಂಥೀಯ ಉಗ್ರವಾದ (ಎಲ್ ಡಬ್ಲು ಇ) ಪ್ರದೇಶಗಳಲ್ಲಿನ ಭದ್ರತಾ ತಾಣಗಳ 2ಜಿ ಮೊಬೈಲ್ ಸೇವೆಗಳನ್ನು 4ಜಿ ಗೆ ಮೇಲ್ದರ್ಜೆಗೇರಿಸಲು ಸಂಪುಟದ ಅನುಮೋದನೆ
April 27th, 08:49 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಎಡಪಂಥೀಯ ಉಗ್ರವಾದ (ಎಲ್ ಡಬ್ಲು ಇ) ಪ್ರದೇಶಗಳಲ್ಲಿನ ಭದ್ರತಾ ತಾಣಗಳಲ್ಲಿ 2ಜಿ ಮೊಬೈಲ್ ಸೇವೆಗಳನ್ನು 4ಜಿ ಗೆ ಮೇಲ್ದರ್ಜೆಗೇರಿಸುವ ಸಾರ್ವತ್ರಿಕ ಸೇವಾ ಹೊಣೆಗಾರಿಕೆ ನಿಧಿ (ಯು ಎಸ್ ಒ ಎಫ್) ಯೋಜನೆಗೆ ಅನುಮೋದನೆ ನೀಡಿದೆ.ದೂರಸಂಪರ್ಕ ವಲಯದಲ್ಲಿ ಪ್ರಮುಖ ಸುಧಾರಣೆಗಳಿಗೆ ಸಂಪುಟದ ಅನುಮೋದನೆ
September 15th, 09:22 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೂರಸಂಪರ್ಕ ವಲಯದಲ್ಲಿ ಹಲವಾರು ರಚನಾತ್ಮಕ ಮತ್ತು ಪ್ರಕ್ರಿಯೆಯ ಸುಧಾರಣೆಗಳಿಗೆ ತನ್ನ ಅನುಮೋದನೆ ನೀಡಿದೆ. ಈ ಸುಧಾರಣೆಗಳು ಉದ್ಯೋಗಾವಕಾಶಗಳನ್ನು ರಕ್ಷಿಸುವ ಮತ್ತು ಸೃಷ್ಟಿಸುವ, ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುವ, ಗ್ರಾಹಕರ ಹಿತವನ್ನು ರಕ್ಷಿಸುವ, ಹಣ ಪೂರಣ ಮಾಡುವ, ಹೂಡಿಕೆಯನ್ನು ಉತ್ತೇಜಿಸುತ್ತದೆ ಮತ್ತು ಇದು ದೂರಸಂಪರ್ಕ ಸೇವೆಗಳ ಪೂರೈಕೆದಾರರ (ಟಿಎಸ್.ಪಿ.ಗಳು)ಮೇಲಿನ ನಿಯಂತ್ರಣದ ಹೊರೆಯನ್ನು ತಗ್ಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.