ಭಾರತವು ತನ್ನ ಪರಂಪರೆಯ ಆಧಾರದ ಮೇಲೆ ಕೃಷಿ ಶಿಕ್ಷಣ ಮತ್ತು ಸಂಶೋಧನೆಯ ದೃಢವಾದ ವ್ಯವಸ್ಥೆಯನ್ನು ಹೊಂದಿದೆ: ಪ್ರಧಾನಿ ಮೋದಿ

August 03rd, 09:35 am

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ, ಕೃಷಿಯಲ್ಲಿ ಜಾಗತಿಕ ಸಹಕಾರದ ಅಗತ್ಯತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಮಹತ್ವವನ್ನು ಒತ್ತಿ ಹೇಳಿದರು. ಡಿಜಿಟಲ್ ಕೃಷಿ, ನೀರಿನ ಸಂರಕ್ಷಣೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆಯಲ್ಲಿ ಭಾರತದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು.

ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ

August 03rd, 09:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ(ಎನ್ಎಎಸ್ಸಿ)ದ ಸಂಕೀರ್ಣದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನ(ಐಸಿಎಇ) ಉದ್ಘಾಟಿಸಿದರು. ಈ ವರ್ಷದ ಸಮ್ಮೇಳನದ ನಿರೂಪಣಾ ವಿಷಯ(ಥೀಮ್) ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಗಳ ಕಡೆಗೆ ಪರಿವರ್ತನೆ ಎಂಬುದಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಅವನತಿ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ಸಂಘರ್ಷಗಳಂತಹ ಜಾಗತಿಕ ಸವಾಲುಗಳ ಮುಖಾಂತರ ಸುಸ್ಥಿರ ಕೃಷಿಯ ಅಗತ್ಯವನ್ನು ನಿಭಾಯಿಸುವ ಗುರಿಯನ್ನು ಈ ಸಮ್ಮೇಳನ ಹೊಂದಿದೆ. ಸಮ್ಮೇಳನದಲ್ಲಿ ಸುಮಾರು 75 ದೇಶಗಳ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸಿದ್ದರು.

ಅಸ್ಸಾಂನ ಚಹಾ ತೋಟದ ಗಾರ್ಡನ್ ಸಮುದಾಯವನ್ನು ಅವರ ಕಠಿಣ ಪರಿಶ್ರಮಕ್ಕಾಗಿ ಶ್ಲಾಘಿಸಿದ ಪ್ರಧಾನಮಂತ್ರಿ

March 09th, 02:15 pm

ಅಸ್ಸಾಂ ಚಹಾವು ಪ್ರಪಂಚದಾದ್ಯಂತ ತನ್ನ ಮಾರುಕಟ್ಟೆ ಕ್ಷೇತ್ರ ಹಿಡಿದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದರು. ಅಸ್ಸಾಂನ ಚಹಾ ತೋಟದ ಗಾರ್ಡನ್ ಸಮುದಾಯವನ್ನು ಅವರ ಕಠಿಣ ಪರಿಶ್ರಮಕ್ಕಾಗಿ ಪ್ರಧಾನಮಂತ್ರಿಯವರು ಶ್ಲಾಘಿಸಿದರು