Our response to disaster has to be integrated not isolated: PM Modi

April 04th, 09:46 am

PM Modi addressed the 5th International Conference on Disaster Resilient Infrastructure 2023. The Prime Minister said that CDRI arose from a global vision that in a closely connected world, the impact of disasters will not just be local. Therefore, our response has to be integrated not isolated, he said.

PM addresses 5th International Conference on Disaster Resilient Infrastructure

April 04th, 09:45 am

PM Modi addressed the 5th International Conference on Disaster Resilient Infrastructure 2023. The Prime Minister said that CDRI arose from a global vision that in a closely connected world, the impact of disasters will not just be local. Therefore, our response has to be integrated not isolated, he said.

ರಾಷ್ಟ್ರೀಯ ವಿಪತ್ತು ಗಂಡಾಂತರಗಳ ನಿಯಂತ್ರಣ ವೇದಿಕೆ(ಎನ್ ಪಿಡಿಆರ್ ಆರ್) 3ನೇ ಸಭೆ ಮತ್ತು ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರ್-2023 ಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

March 10th, 09:43 pm

ಮೊದಲನೆಯದಾಗಿ, ವಿಪತ್ತು ಪುನಶ್ಚೇತನ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರನ್ನು ನಾನು ಅಭಿನಂದಿಸುತ್ತೇನೆ, ಏಕೆಂದರೆ ಇದು ಅನೇಕ ಬಾರಿ ನಿಮ್ಮ ಸ್ವಂತ ಜೀವವನ್ನು ಪಣಕ್ಕಿಟ್ಟು ಸಂತ್ರಸ್ತರ ಜೀವಗಳನ್ನು ಉಳಿಸುವ ಅದ್ಭುತ ಕೆಲಸವನ್ನು ಮಾಡುತ್ತದೆ. ಇತ್ತೀಚೆಗೆ, ಟರ್ಕಿ ಮತ್ತು ಸಿರಿಯಾದಲ್ಲಿ ಭಾರತೀಯ ತಂಡದ ಪ್ರಯತ್ನವನ್ನು ಇಡೀ ಜಗತ್ತು ಮೆಚ್ಚಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಭಾರತವು ತನ್ನ ಮಾನವ ಸಂಪನ್ಮೂಲ, ಪರಿಹಾರ ಮತ್ತು ಪಾರುಗಾಣಿಕೆಗೆ ಸಂಬಂಧಿಸಿದ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ರೀತಿಯು ದೇಶದಲ್ಲಿ ವಿವಿಧ ರೀತಿಯ ವಿಪತ್ತುಗಳ ಸಮಯದಲ್ಲಿ ಅನೇಕ ಜನರ ಜೀವಗಳನ್ನು ಉಳಿಸಲು ಸಹಾಯ ಮಾಡಿದೆ. ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ಪ್ರೋತ್ಸಾಹಿಸಬೇಕು. ದೇಶಾದ್ಯಂತ ಆರೋಗ್ಯಕರ ಸ್ಪರ್ಧೆಯ ವಾತಾವರಣ ಸೃಷ್ಟಿಸಬೇಕು. ಹಾಗಾಗಿ ಈ ಮಹತ್ತರ ಕಾರ್ಯಕ್ಕೆ ವಿಶೇಷ ಪ್ರಶಸ್ತಿಯನ್ನೂ ಘೋಷಿಸಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರವನ್ನು ಇಂದು ಇಲ್ಲಿ 2 ಸಂಸ್ಥೆಗಳಿಗೆ ನೀಡಲಾಗಿದೆ. ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಚಂಡಮಾರುತಗಳು ಮತ್ತು ಸುನಾಮಿಯಂತಹ ವಿವಿಧ ವಿಪತ್ತುಗಳ ಸಮಯದಲ್ಲಿ ಅತ್ಯುತ್ತಮವಾದ ಕೆಲಸ ಮಾಡುತ್ತಿದೆ. ಅದೇ ರೀತಿ, ಮಿಜೋರಾಂನ ಲುಂಗ್ಲೈ ಅಗ್ನಿಶಾಮಕ ಠಾಣೆಯು ಕಾಡ್ಗಿಚ್ಚು ನಂದಿಸಲು, ಇಡೀ ಪ್ರದೇಶವನ್ನು ಉಳಿಸಲು ಮತ್ತು ಬೆಂಕಿ ಹರಡುವುದನ್ನು ತಡೆಯಲು ಅವಿರತವಾಗಿ ಶ್ರಮಿಸಿತು. ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಸ್ನೇಹಿತರನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ.

ವಿಪತ್ತು ಅಪಾಯ ತಗ್ಗಿಸುವ ರಾಷ್ಟ್ರೀಯ ವೇದಿಕೆಯ 3ನೇ ಅಧಿವೇಶನವನ್ನು ಉದ್ಘಾಟಿಸಿದ ಪ್ರಧಾನಿ

March 10th, 04:40 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ `ವಿಪತ್ತು ಅಪಾಯ ತಗ್ಗಿಸುವ ರಾಷ್ಟ್ರೀಯ ವೇದಿಕೆ’ಯ (ಎನ್.ಪಿ.ಡಿ.ಆರ್.ಆರ್.) 3ನೇ ಅಧಿವೇಶನವನ್ನು ಉದ್ಘಾಟಿಸಿದರು. ಈ ವೇದಿಕೆಯ 3 ನೇ ಅಧಿವೇಶನದ ಮುಖ್ಯ ವಿಷಯವೆಂದರೆ ಬದಲಾಗುತ್ತಿರುವ ಹವಾಮಾನದಲ್ಲಿ ಸ್ಥಳೀಯ ನಿರ್ಮಾಣಗಳಲ್ಲಿ ಸುದೃಢತೆ .

ತುರ್ಕಿಯೆ ಮತ್ತು ಸಿರಿಯಾದಲ್ಲಿ 'ಆಪರೇಷನ್ ದೋಸ್ತ್' ನಲ್ಲಿ ಭಾಗಿಯಾಗಿದ್ದ ಎನ್‌ಡಿಆರ್‌ಎಫ್ ಸಿಬ್ಬಂದಿಯೊಂದಿಗೆ ಪ್ರಧಾನಮಂತ್ರಿಯವರ ಸಂವಾದ

February 20th, 06:20 pm

ಮಾನವೀಯತೆಗಾಗಿ ಮಹತ್ತರವಾದ ಕೆಲಸ ಮಾಡಿ ಹಿಂದಿರುಗಿರುವಿರಿ. ‘ಆಪರೇಷನ್ ದೋಸ್ತ್’ಗೆ ಸಂಬಂಧಿಸಿದ ಇಡೀ ತಂಡ ಎನ್‌ಡಿಆರ್‌ಎಫ್, ಸೈನ್ಯ, ವಾಯುಪಡೆ ಅಥವಾ ಇತರ ಸೇವಾ ಪಡೆಗಳು ಅದ್ಭುತ ಕೆಲಸ ಮಾಡಿದೆ. ನಮ್ಮ ಮಾತು ಬಾರದ ಸ್ನೇಹಿತರಾದ ಶ್ವಾನದಳದ ಸದಸ್ಯರು ಸಹ ಅದ್ಭುತ ಸಾಮರ್ಥ್ಯವನ್ನು ತೋರಿಸಿದ್ದಾರೆ. ನಿಮ್ಮೆಲ್ಲರ ಬಗ್ಗೆ ದೇಶವು ಬಹಳ ಹೆಮ್ಮೆಪಡುತ್ತದೆ.

​​​​​​​ಟರ್ಕಿ ಮತ್ತು ಸಿರಿಯಾದಲ್ಲಿ 'ಆಪರೇಷನ್ ದೋಸ್ತ್' ನಲ್ಲಿ ಭಾಗಿಯಾಗಿದ್ದ ಎನ್‌ ಡಿ ಆರ್‌ ಎಫ್‌ ಸಿಬ್ಬಂದಿಯೊಂದಿಗೆ ಪ್ರಧಾನಮಂತ್ರಿ ಸಂವಾದ

February 20th, 06:00 pm

ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾದಲ್ಲಿ ‘ಆಪರೇಷನ್ ದೋಸ್ತ್ʼನಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ ನಡೆಸಿದರು.

​​​​​​​ಸಿರಿಯಾದಲ್ಲಿ ಭೂಕಂಪನದಿಂದ ಉಂಟಾದ ಜೀವ ಹಾನಿಗೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ

February 06th, 03:30 pm

ಸಿರಿಯಾದಲ್ಲಿ ಭೂಕಂಪನದಿಂದ ಉಂಟಾದ ಜೀವ ಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಸಿರಿಯಾದ ಜನರ ದುಃಖವನ್ನು ನಾವು ಹಂಚಿಕೊಳ್ಳುತ್ತಿದ್ದೇವೆ ಮತ್ತು ಸಂಕಷ್ಟ ಸಮಯದಲ್ಲಿ ನೆರವು ಹಾಗೂ ಬೆಂಬಲ ನೀಡಲು ಬದ್ಧವಾಗಿದ್ದೇವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.