ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸ್ವರ್ಣವೇದ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
December 18th, 12:00 pm
ಉತ್ತರ ಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಮಹೇಂದ್ರ ನಾಥ್ ಪಾಂಡೆ ಜೀ, ಉತ್ತರ ಪ್ರದೇಶ ಸರ್ಕಾರದ ಸಚಿವ ಅನಿಲ್ ಜೀ, ಸದ್ಗುರು ಆಚಾರ್ಯ ಪೂಜ್ಯ ಶ್ರೀ ಸ್ವತಂತ್ರ ದೇವ್ ಜೀ ಮಹಾರಾಜ್, ಪೂಜ್ಯ ಶ್ರೀ ವಿಜ್ಞಾನ್ ದೇವ್ ಜೀ ಮಹಾರಾಜ್, ಇತರ ಗಣ್ಯ ವ್ಯಕ್ತಿಗಳು, ದೇಶಾದ್ಯಂತ ನೆರೆದಿರುವ ಎಲ್ಲಾ ಭಕ್ತರು ಮತ್ತು ನನ್ನ ಕುಟುಂಬ ಸದಸ್ಯರೇ!ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸ್ವರ್ವೇದ್ ಮಹಾಮಂದಿರ ಉದ್ಘಾಟಿಸಿದ ಪ್ರಧಾನ ಮಂತ್ರಿ
December 18th, 11:30 am
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಇಂದು ಕಾಶಿಗೆ ಭೇಟಿ ನೀಡುತ್ತಿರುವ ಎರಡನೇ ದಿನವಾಗಿದೆ. ಕಾಶಿಯಲ್ಲಿ ಕಳೆದ ಪ್ರತಿ ಕ್ಷಣವೂ ಅಭೂತಪೂರ್ವ ಅನುಭವಗಳಿಂದ ತುಂಬಿದೆ. 2 ವರ್ಷಗಳ ಹಿಂದೆ ಅಖಿಲ ಭಾರತೀಯ ವಿಹಂಗಮ ಯೋಗ ಸಂಸ್ಥಾನದ ವಾರ್ಷಿಕ ಆಚರಣೆ ನೆನಪಿಸಿಕೊಂಡ ಪ್ರಧಾನಿ, ಈ ವರ್ಷದ ಶತಮಾನೋತ್ಸವ ಆಚರಣೆಯ ಭಾಗವಾಗಲು ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ವಿಹಂಗಮ ಯೋಗ ಸಾಧನವು 100 ವರ್ಷಗಳ ಅವಿಸ್ಮರಣೀಯ ಪ್ರಯಾಣ ಸಾಧಿಸಿದೆ. ಹಿಂದಿನ ಶತಮಾನದಲ್ಲಿ ಜ್ಞಾನ ಮತ್ತು ಯೋಗದ ಕಡೆಗೆ ಮಹರ್ಷಿ ಸದಾಫಲ್ ದೇವ್ ಜೀ ಅವರ ಕೊಡುಗೆಗಳನ್ನು ಸ್ಮರಿಸಿದರು. ದೈವಿಕ ಬೆಳಕು ವಿಶ್ವಾದ್ಯಂತ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಿದೆ. ಈ ಸುಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು 25,000 ಕುಂಡಿಯ ಸ್ವರ್ವೇದ್ ಜ್ಞಾನ ಮಹಾಯಜ್ಞದ ಸಂಘಟನೆ ಗಮನಿಸಿ, ಮಹಾಯಜ್ಞದ ಪ್ರತಿ ಅರ್ಪಣೆಯೂ ವಿಕ್ಷಿತ್ ಭಾರತ್ ಸಂಕಲ್ಪವನ್ನು ಬಲಪಡಿಸುತ್ತದೆ. ಮಹರ್ಷಿ ಸದಾಫಲ್ ದೇವ್ ಜೀ ಅವರ ಮುಂದೆ ತಲೆಬಾಗಿ ತಮ್ಮ ದರ್ಶನ ಪಡೆದ ಎಲ್ಲಾ ಸಂತರಿಗೆ ನಮನ ಸಲ್ಲಿಸಿದರು.