ಆರ್ಯ ಸಮಾಜದ ಸ್ಮಾರಕಕ್ಕೆ ಪ್ರಧಾನಮಂತ್ರಿಯವರಿಂದ ಗೌರವ ನಮನ
November 22nd, 03:09 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗಯಾನಾದ ಜಾರ್ಜ್ ಟೌನ್ ನಲ್ಲಿರುವ ಆರ್ಯ ಸಮಾಜದ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಗಯಾನಾದಲ್ಲಿ ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಗಯಾನಾ ಜನರ ಪ್ರಯತ್ನಗಳು ಮತ್ತು ಪಾತ್ರವನ್ನು ಶ್ರೀ ಮೋದಿಯವರು ಶ್ಲಾಘಿಸಿದರು. ಸ್ವಾಮಿ ದಯಾನಂದ ಸರಸ್ವತಿ ಅವರ 200ನೇ ಜಯಂತಿಯನ್ನು ನಾವು ಆಚರಿಸುತ್ತಿರುವುದರಿಂದ ಈ ವರ್ಷವು ಬಹಳ ವಿಶೇಷವಾಗಿದೆ ಎಂದು ಅವರು ಹೇಳಿದರು.ಸ್ವಾಮಿ ದಯಾನಂದ ಸರಸ್ವತಿ ಅವರ ಜನ್ಮದಿನ; ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ಭಾಷಣ
February 11th, 12:15 pm
ದೇಶವು ಸ್ವಾಮಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ವಾರ್ಷಿಕೋತ್ಸವ ಆಚರಿಸುತ್ತಿದೆ. ಸ್ವಾಮಿಜಿ ಅವರ ಜನ್ಮಸ್ಥಳ ಟಂಕರಾವನ್ನು ಖುದ್ದಾಗಿ ತಲುಪುವುದು ನನ್ನ ಬಯಕೆಯಾಗಿತ್ತು, ಆದರೆ ಇದು ಸಾಧ್ಯವಾಗಲಿಲ್ಲ. ಅದೇನೇ ಇದ್ದರೂ, ನಾನು ಹೃದಯ ಮತ್ತು ಆತ್ಮದಿಂದ ನಿಮ್ಮೆಲ್ಲರ ನಡುವೆ ಇದ್ದೇನೆ. ಸ್ವಾಮೀಜಿ ಅವರ ಕೊಡುಗೆಗಳನ್ನು ಸ್ಮರಿಸಲು ಮತ್ತು ಅವರ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಲು ಆರ್ಯ ಸಮಾಜವು ಈ ಹಬ್ಬವನ್ನು ಆಚರಿಸುತ್ತಿರುವುದು ನನಗೆ ಸಂತಸ ತಂದಿದೆ. ಕಳೆದ ವರ್ಷ ಈ ಉತ್ಸವದ ಉದ್ಘಾಟನೆಯಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿತ್ತು. ಅಂತಹ ಅಗಾಧವಾದ ಆಚರಣೆಯು ಅಪ್ರತಿಮ ಕೊಡುಗೆಯನ್ನು ಹೊಂದಿರುವ ಮಹಾನ್ ಆತ್ಮದೊಂದಿಗೆ ಸಂಬಂಧ ಹೊಂದುವುದು ಸಹಜ. ಈ ಘಟನೆಯು ನಮ್ಮ ಹೊಸ ಪೀಳಿಗೆಗೆ ಮಹರ್ಷಿ ದಯಾನಂದರ ಜೀವನವನ್ನು ಪರಿಚಯಿಸಲು ಪರಿಣಾಮಕಾರಿ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ನಾನು ನಂಬುತ್ತೇನೆ.ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
February 11th, 11:50 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ಮೊರ್ಬಿಯಲ್ಲಿರುವ ಸ್ವಾಮಿ ದಯಾನಂದ ಅವರ ಜನ್ಮಸ್ಥಳ ಟಂಕರದಲ್ಲಿಂದು ಆಯೋಜಿಸಲಾದ ಸ್ವಾಮಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು.